For Quick Alerts
ALLOW NOTIFICATIONS  
For Daily Alerts

ಹಬ್ಬದ ಅಡುಗೆಯ ರುಚಿ ಹೆಚ್ಚಿಸುತ್ತೆ ನವರತ್ನ ಕೂರ್ಮ

|
Navaratna Koorma
ಯುಗಾದಿಯ ಸ್ಪೆಷಲ್ ಅಡುಗೆಯಲ್ಲಿ ಪಾಯಸ, ತಿಳಿಸಾರು, ಕೋಸಂಬರಿ, ಒಬ್ಬಟ್ಟು, ಪಚಡಿ ಜೊತೆ ಕೂರ್ಮ ಇದ್ದರೆ ಹಬ್ಬದ ಅಡುಗೆಯ ಘಮ್ಮತ್ತೆ ಬೇರೆ. ಅದರಲ್ಲೂ ನವರತ್ನ ಕೂರ್ಮ ಅಂತೂ ತುಂಬಾ ರುಚಿಯಾಗಿರುತ್ತದೆ. ಈ ಯುಗಾದಿಗೆ ಅನೇಕ ವಿಶೇಷ ತಿಂಡಿಗಳ ಜೊತೆಗೆ ಈ ರುಚಿಕರವಾದ ಅಡುಗೆ ಕೂಡ ಜೊತೆಗಿರಬೇಕೆಂದು ಬಯಸುವವರಿಗಾಗಿ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ಪನ್ನೀರ್ 100 ಗ್ರಾಂ
* ಕ್ಯಾರೆಟ್, ಹೂಕೋಸು, ಆಲೂಗೆಡ್ಡೆ, ಬೀನ್ಸ್ 3 ಕಪ್ (ಬೇಯಿಸಿದ್ದು)
* ಟೊಮೆಟೊ 2
* ಹಸಿಮೆಣಸಿನ ಕಾಯಿ 3-4
* ಮೊಸರು 3 ಚಮಚ
* ಹಾಲು ಒಂದು ಕಪ್
* ನಿಂಬೆಹಣ್ಣು 1
* ಶುಂಠಿ ಒಂದು ಚಿಕ್ಕ ತುಂಡು
* ಬೆಳ್ಳುಳ್ಳಿ 6 ಎಸಳು
* ಅರಿಶಿಣ ಪುಡಿ 1/4 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1/2 ಚಮಚ
* ತುಪ್ಪ 3 ಚಮಚ
* ರುಚಿಗೆ ತಕ್ಕ ಉಪ್ಪು
* ಗೋಡಂಬಿ 10 (ಎಣ್ಣೆಯಲ್ಲಿ ಸ್ವಲ್ಪ ಹುರಿದಿರಬೇಕು)
* ಬಾದಾಮಿ 10
* ಸ್ವಲ್ಪಕೊತ್ತಂಬರಿ ಸೊಪ್ಪು
* ಚಿಟಿಕೆಯಷ್ಟು ಕೇಸರಿಯನ್ನು ಒಂದು ಬಿಸಿ ಹಾಲು ಅಥವಾ ನೀರಿನಲ್ಲಿ ಹಾಕಿದ್ದು

ತಯಾರಿಸುವ ವಿಧಾನ:

1. ಪನ್ನೀರ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಎಣ್ಣೆಯಲ್ಲಿ ಹುರಿದು ಪಕ್ಕಕ್ಕಿಡಬೇಕು.

2. ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ರೀತಿ ಅರೆಯಬೇಕು.

3. ಟೊಮೆಟೊವನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿ, ನಂತರ ಸಿಪ್ಪೆ ಸುಲಿಯಬೇಕು, ನಂತರ ಟೊಮೆಟೊವನ್ನು ಸೌಟಿನಿಂದ ಹಿಸುಕಿ ಪೇಸ್ಟ್ ರೀತಿ ಮಾಡಬೇಕು.

4. ಈಗ ಬಾಣಲೆಯನ್ನು ಇಟ್ಟು ತುಪ್ಪವನ್ನು ಬಿಸಿ ಮಾಡಬೇಕು. ತುಪ್ಪ ಬಿಸಿಯಾದಾಗ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಬೇಕು. ಮಿಶ್ರಣ ತುಂಬಾ ಗಟ್ಟಿಯಾಗದಂತೆ ಹಾಲನ್ನು ಆಗಾಗ ಚಿಮುಕಿಸುತ್ತಾ ಇರಬೇಕು.

5. ಈಗ ಪೇಸ್ಟ್ ರೀತಿ ಮಾಡಿದ ಟೊಮೆಟೊ, ಅರಿಶಿಣ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ ಪುಡಿ, ಕೊತ್ತಂಬರಿ ಪುಡಿ ಗರಂ ಮಸಾಲ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಬೇಕು.

6. ಈಗ ಬೇಯಿಸಿದ ತರಕಾರಿಯನ್ನು ಸೇರಿಸಬೇಕು, ಅದಕ್ಕೆ ಮೊಸರು ಸೇರಿಸಿ ಸ್ವಲ್ಪ ಹೊತ್ತು ಬಿಸಿಮಾಡಬೇಕು.

7. ಗ್ರೇವಿ ಗಟ್ಟಿಯಾದಾಗ ಹಾಲನ್ನು ಸೇರಿಸಿ ಕುದಿಸಬೇಕು.

8. ಈಗ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಪನ್ನೀರ್, ಬಾದಾಮಿ, ಗೋಡಂಬಿಯನ್ನು ಸೇರಿಸಬೇಕು. ಮಿಶ್ರಣವನ್ನು ಆಗಾಗ ತಿರುಗಿಸುತ್ತಾ ಇರಬೇಕು. ಕೊನೆಗೆ ಕೇಸರಿಯನ್ನು ಹಾಕಿ, ನಿಂಬೆರಸ ಸ್ವಲ್ಪ ಹಾಕಿದರೆ ರುಚಿಕರವಾದ ನವರತ್ನ ಕೂರ್ಮ ರೆಡಿ.

English summary

Navaratna Koorma Recipe | Ugadi Special Recipe | ನವರತ್ನ ಕೂರ್ಮ ರೆಸಿಪಿ | ಯುಗಾದಿ ಸ್ಪೆಷಲ್ ರೆಸಿಪಿ

Navaratna Koorma thick and tasty gravy. If it is there this recipe it will add more taste to the festival cookery. Here is easy recipe tips of Navaratna Koorma.
Story first published: Wednesday, March 21, 2012, 12:30 [IST]
X
Desktop Bottom Promotion