For Quick Alerts
ALLOW NOTIFICATIONS  
For Daily Alerts

ಚಳಿಯಲ್ಲಿ ಮೆಲ್ಲಿರಿ ಬಿಸಿ ಬಿಸಿ ಬೇಳೆ ರಸಂ

|
Lentil Tomato Rasam Dish
ದಕ್ಷಿಣ ಭಾರತದಲ್ಲಿ ಬೇಳೆ ರಸಂ ತುಂಬಾ ಪ್ರಸಿದ್ಧ. ಉತ್ತರ ಭಾರತದಲ್ಲೂ ಇದು ದಾಲ್ ಸೂಪ್ ರೂಪ ಪಡೆದುಕೊಂಡಿದೆ. ಬೇಳೆ ರಸಂ ಚಳಿಗಾಲಕ್ಕಂತೂ ಹೇಳಿ ಮಾಡಿಸಿದ್ದು. ಆದರೆ ಮಾಮೂಲಿ ರೀತಿ ರಸ ಮಾಡುವುದಕ್ಕಿಂತ ವಿಶೇಷವಾಗಿ ತಯಾರಿಸಿ ನೋಡಿ. ಆ ರುಚಿಯ ಗಮ್ಮತ್ತೇ ಬೇರೆ ಇರುತ್ತದೆ.

ಈ ರಸಂನಲ್ಲಿ ಪೋಷಕಾಂಶವೂ ಹೆಚ್ಚಿದೆ. ಟೊಮೆಟೊ ಬೇಳೆ ಜೊತೆ ಒಂದಿಷ್ಟು ಸಾಂಬಾರು ಪದಾರ್ಥ ಬೆರೆಸಿ ಮಾಡುವ ಈ ರಸಂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟೊಮೆಟೊ ಬೇಳೆ ರಸಂ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥ:
* 1 ಕಪ್ ತೊಗರಿ ಬೇಳೆ
* 6 ಕಪ್ ನೀರು
* ಕೊತ್ತಂಬರಿ
* 2 ಟೊಮೆಟೊ
* 1 ಈರುಳ್ಳಿ
* 1 ಕಪ್ ಪಾಲಾಕ್
* ಉಪ್ಪು, 1 ಚಮಚ ಜೀರಿಗೆ
* 1/2 ಚಮಚ ಅರಿಶಿಣ
* 1 ಚಮಚ ಶುಂಠಿ ಪೇಸ್ಟ್
* 2-3 ಬೆಳ್ಳುಳ್ಳಿ ಎಸಳು
* 2-3 ಚಮಚ ನಿಂಬೆರಸ

ಟೊಮೆಟೊ ಬೇಳೆ ರಸ ತಯಾರಿಸುವ ವಿಧಾನ:
* ಟೊಮೆಟೊ ಮತ್ತು ಬೇಳೆಯನ್ನು ಅರಿಶಿಣ ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಬೇಯಿಸಬೇಕು. ನಂತರ ಚೆನ್ನಾಗಿ ಮಸೆಯಬೇಕು.

* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದರಲ್ಲಿ ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ ಎಸಳು, ಶುಂಠಿ ಪೇಸ್ಟ್, ಕತ್ತರಿಸಿದ ಪಾಲಾಕ್, ಕೊತ್ತಂಬರಿ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಬೆರೆಸಿ ಬೇಯಲು ಬಿಡಬೇಕು.

* ಈ ಮಿಶ್ರಣ ಕುದಿಯಲು ಆರಂಭಿಸಿದಾಗ ಅದಕ್ಕೆ ಬೇಯಿಸಿದ ಟೊಮೆಟೊ ಬೇಳೆ ಮಿಶ್ರಣವನ್ನು ಬೆರೆಸಬೇಕು. ರುಚಿಗೆ ಅವಶ್ಯಕವಿದ್ದಷ್ಟು ಉಪ್ಪನ್ನು ಹಾಕಬೇಕು.

* 10 ನಿಮಿಷದ ನಂತರ ಉರಿಯನ್ನು ಆರಿಸಿ ತಿನ್ನುವಾಗ ನಿಂಬೆರಸ ಬೆರೆಸಿ ತಿಂದರೆ ಟೊಮೆಟೊ ಬೇಳೆ ರಸಂ ರುಚಿಕರವಾಗಿರುತ್ತೆ.

English summary

Lentil Tomato Rasam Dish | Lentil Rasam | ಟೊಮೆಟೊ ಬೇಳೆ ರಸ | ಬೇಳೆ ರಸಂ

This Lentil Tomato Rasam is very nutritious and yummy for lunch and supper. The tomato lentil is prepared with added spices and herbs. The lentil dishes are healthy and are even advised when not keeping well. Take a look to know how to prepare this rasam in easier way.
Story first published: Wednesday, January 4, 2012, 11:07 [IST]
X
Desktop Bottom Promotion