For Quick Alerts
ALLOW NOTIFICATIONS  
For Daily Alerts

ಮಿಶ್ರ ವೆಜ್ ಪಲ್ಯದ ರೆಸಿಪಿ

|

ಪಲ್ಯ ಮಾಡಲು ಈರುಳ್ಳಿ ಬೇಕೇ ಬೇಕೆಂಬ ರೂಲ್ಸ್ ಏನೂ ಇಲ್ಲ. ಈರುಳ್ಳಿ ಹಾಕದೆಯೂ ಅನೇಕ ರುಚಿಕರವಾದ ಪಲ್ಯ ತಯಾರಿಸಬಹುದು. ಇಲ್ಲಿ ನಾವು ನೀಡಿರುವ ಮಿಶ್ರ ವೆಜ್ ಪಲ್ಯದ ರೆಸಿಪಿಯನ್ನು ಈರುಳ್ಳಿ ಹಾಕಿಯೂ ಮಾಡಬಹುದು, ಹಾಕದೆಯೂ ರುಚಿಕರವಾಗಿ ಮಾಡಬಹುದು.

ಬನ್ನಿ ಈ ರುಚಿಯಾದ ಈ ಮಿಶ್ರ ವೆಜ್ ಪಲ್ಯವನ್ನು ಮಾಡುವುದು ಹೇಗೆ ಎಂದು ನೋಡೋಣ:

Mixed Veg Palya Recipe

ಬೇಕಾಗುವ ಸಾಮಾಗ್ರಿಗಳು
ಸಾಧಾರಣ ಗಾತ್ರದ ಕ್ಯಾಬೇಜ್ (1/4 ಭಾಗದಷ್ಟು ಸಾಕು)
ಸ್ವಲ್ಪ ಹೂ ಕೋಸು
ಕಡಲೆ 1/4 ಕಪ್
ಈರುಳ್ಳಿ 1 (ಬೇಕಿದ್ದರೆ ಬಳಸಬಹುದು)
ಹಸಿ ಮೆಣಸು 3
ಬೀಟ್ ರೂಟ್ 1
ಕ್ಯಾರೆಟ್ 1
ತೆಂಗಿನ ತುರಿ1/4 ಕಪ್
ಸಾಸಿವೆ ಅರ್ಧ ಚಮಚ
ಒಣ ಮೆಣಸು 2
ಸ್ವಲ್ಪ ಕರಿಬೇವಿನ ಎಲೆ
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ತೆಂಗಿನ ಎಣ್ಣೆ(ತೆಂಗಿನೆಣ್ಣೆ ಇಷ್ಟವಿಲ್ಲದಿದ್ದರೆ ಮಾಮೂಲಿ ಅಡುಗೆಗೆ ಬಳಸುವ ಎಣ್ಣೆ ಬಳಸಬಹುದು)
ನುಗ್ಗೆಕಾಯಿ (ಬೇಕಿದ್ದರೆ ಹಾಕಬಹುದು)

ತಯಾರಿಸುವ ವಿಧಾನ:

* ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ನಂತರ ಸಾಸಿವೆ ಹಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಕರಿ ಬೇವಿನ ಎಲೆ ಮತ್ತು ಒಣ ಮೆಣಸು ಹಾಕಿ, ನಂತರ ಈರುಳ್ಳಿ, ಹಸಿ ಮೆಣಸು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಕ್ಯಾರೆಟ್ ಮತ್ತು ಕಡಲೆ ಹಾಕಿ ಫ್ರೈ 2 ನಿಮಿಷ ಫ್ರೈ ಮಾಡಿ ನಂತರ ಉಳಿದೆಲ್ಲಾ ತರಕಾರಿ ಹಾಕಿ ರುಚಿಗೆ ತಕ್ಕ ಉಪ್ಪು ಹ ಸೇರಿಸಿ, ಸ್ವಲ್ಪ ಅರಿಶಿಣ ಪುಡಿ ಹಾಕಿ 5 ನಿಮಿಷ ಫ್ರೈ ಮಾಡಿ, ನಂತರ 1 ಕಪ್ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.

* ನಂತರ ಪಾತ್ರೆಯ ಮುಚ್ಚಳ ತೆಗೆದು ತರಕಾರಿಯಲ್ಲಿರುವ ನೀರಿನಂಶ ಆವಿಯಾಗುವವರೆಗೆ ಫ್ರೈ ಮಾಡಿ. ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ.

* ನಂತರ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಫ್ರೈ ಮಾಡಿದರೆ ಮಿಶ್ರ ವೆಜ್ ಪಲ್ಯ ರೆಡಿ.

ಸಲಹೆ: ತೆಂಗಿನಕಾಯಿಯನ್ನು ತರಿತರಿಯಾಗಿ ರುಬ್ಬಿ ಬೇಕಾದರೆ ಹಾಕಬಹುದು.

English summary

Mixed Veg Palya Recipe

There is no hard and fast rule, we will prepare palya with onions and lots of zesty South Indian spices. Here we haven given mixed veg palya recipe, that one you can prepare with or without onion.
Story first published: Wednesday, September 11, 2013, 17:21 [IST]
X
Desktop Bottom Promotion