For Quick Alerts
ALLOW NOTIFICATIONS  
For Daily Alerts

ಕಡಲೆಕಾಳು ಮತ್ತು ಬದನೆಕಾಯಿ ಪಲ್ಯ

|
Kadalekalu Brinjal palya
* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ನೆನೆಸಿದ ಕಡಲೆಕಾಳು - 1/2 ಕಪ್
* ಬದನೆಕಾಯಿ - 2
* ಈರುಳ್ಳಿ - 2
* ಅಚ್ಚ ಕಾರದಪುಡಿ - 1/2 ಚಮಚ
* ಗರಂ ಮಸಾಲ - 1/4 ಚಮಚ
* ದನಿಯ ಪುಡಿ - 1/2 ಚಮಚ
* ಹುಚ್ಚೆಳ್ಳು ಪುಡಿ - 1/2 ಚಮಚ
* ಅರಿಶಿಣ ಪುಡಿ ಸ್ವಲ್ಪ
* ರುಚಿಗೆ ತಕ್ಕ ಉಪ್ಪು
* ಒಗ್ಗರೆಣೆಗೆ - ಸಾಸಿವೆ, ಜೀರಿಗೆ, ಕರಿಬೇವು
* ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ :

ಮೊದಲಿಗೆ ನೆನೆಸಿದ ಕಡಲೆಕಾಳನ್ನು ಉಪ್ಪು ಹಾಕಿ ಬೇಯಿಸಿಟ್ಟುಕೊಳ್ಳಿ. ಹಾಗೂ ಬದನೆಕಾಯಿಯನ್ನು ಸ್ವಲ್ಪ ದಪ್ಪನಾಗಿ ಹೆಚ್ಚಿಕೊಳ್ಳಿ. ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು ಕರಿಬೇವು ಹಾಗು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ಆಮೇಲೆ ಹೆಚ್ಚಿಟ್ಟುಕೊಂಡ ಬದನೆಕಾಯಿ ಹೋಳುಗಳನ್ನು ಹಾಕಿ ಸ್ವಲ್ಪ ನೀರು ಹಾಕಿ. ಬೆಂದ ನಂತರ, ಅರಿಶಿಣ, ಗರಂ ಮಸಾಲ, ಅಚ್ಚ ಕಾರದಪುಡಿ, ದನಿಯ ಪುಡಿ, ಹುಚ್ಚೆಳ್ಳು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೇಯಿಸಿದ ಕಡಲೆಕಾಳನ್ನು ಹಾಕಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ.

ನಿಮಗೆ ಕಾರ ಬೇಕೆನಿಸಿದರೆ ಹಾಕಿಕೊಳ್ಳಬಹುದು. ಈ ಪಲ್ಯಗಳು ಕಾರ, ಕಾರವಾಗಿದ್ದರೆ ತುಂಬಾ ಚೆನ್ನಾಗಿರುತ್ತದೆ. ಈ ಎಲ್ಲಾ ಪಲ್ಯಗಳು ಚಪಾತಿ, ರೊಟ್ಟಿ, ಅನ್ನ ಎಲ್ಲದಕ್ಕೂ ಸೈ. ಟ್ರೈ ಮಾಡಿ ನೋಡಿ.

Story first published: Tuesday, November 3, 2009, 17:02 [IST]
X
Desktop Bottom Promotion