For Quick Alerts
ALLOW NOTIFICATIONS  
For Daily Alerts

ಹೆಸರುಕಾಳು ಹಾಗೂ ದಂಟಿನ ಸೊಪ್ಪಿನ ಪಲ್ಯ

|
Dantina soppu, greengram
* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :

* ಹೆಸರುಕಾಳು - 1/2 ಕಪ್
* ದಂಟಿನಸೊಪ್ಪು - 2 ಕಟ್ಟು
* ಈರುಳ್ಳಿ - 2
* ಬೆಳ್ಳುಳ್ಳಿ - 4 ಎಸಳು (ನಿಮ್ಮಿಷ್ಟ)
* ಗರಂ ಮಸಾಲ - ೧/೪ ಚಮಚ
* ಹಸಿಮೆಣಸಿನಕಾಯಿ - 4
* ಅರಿಶಿಣ ಸ್ವಲ್ಪ
* ರುಚಿಗೆ ತಕ್ಕ ಉಪ್ಪು
* ಒಗ್ಗರೆಣೆಗೆ - ಸಾಸಿವೆ, ಜೀರಿಗೆ, ಕರಿಬೇವು.

ಮಾಡುವ ವಿಧಾನ :

ಮೊದಲಿಗೆ ಹೆಸರುಕಾಳನ್ನು ಉಪ್ಪು ಹಾಕಿ ಉದುರಾಗಿ ಬೇಯಿಸಿಟ್ಟುಕೊಳ್ಳಿ. ದಂಟಿನಸೊಪ್ಪು ಹಾಗೂ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.

ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕರಿಬೇವು ಹಾಗು ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ. ಆಮೇಲೆ ಹೆಚ್ಚಿದ ದಂಟಿನ ಸೊಪ್ಪು ಹಾಗೂ ಬೆಳ್ಳುಳ್ಳಿ ಹಾಕಿ ಬೆಂದ ನಂತರ, ಅರಿಶಿಣ, ಗರಂ ಮಸಾಲ, ಹಾಗೂ ಹೆಸರುಕಾಳಿಗೆ ಮೊದಲೇ ಉಪ್ಪು ಹಾಕಿರುವುದರಿಂದ ನೋಡಿ ಹಾಕಿ. ಬೇಯಿಸಿದ ಹೆಸರುಕಾಳಿನ ನೀರನ್ನು ಬಸಿದು ಬರೀ ಹೆಸರುಕಾಳನ್ನು ಹಾಕಿ ಮಿಕ್ಸ್ ಮಾಡಿ ದರೆ ಪಲ್ಯ ರೆಡಿ.

ಇದೇ ತರಹ ಹೆಸರುಕಾಳು ಬದಲು ಮಡಿಕೆಕಾಳು ಸಹ ಹಾಕಿ ಮಾಡಬಹುಧು. ಇದು ಕೂಡ ಅನ್ನ, ಚಪಾತಿ, ರೊಟ್ಟಿ, ಎಲ್ಲದಕ್ಕೂ ಚೆನ್ನಾಗಿರುತ್ತದೆ.

Story first published: Tuesday, October 27, 2009, 15:32 [IST]
X
Desktop Bottom Promotion