Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ

ಉತ್ತರ ಕರ್ನಾಟಕದಲ್ಲಿ ತಯಾರಿಸುವ ವಿವಿಧಮಯ ಪಲ್ಯಗಳ ಸರಣಿಯ ಭಾಗವಾಗಿ ಕಳೆದವಾರ ಈರುಳ್ಳಿ ಮತ್ತು ಹೆಸರುಬೇಳೆ ಪಲ್ಯ ವನ್ನು ಪ್ರಕಟಿಸಲಾಗಿತ್ತು. ಎರಡನೆಯದು ಹೆಸರುಬೇಳೆ ಹಾಗು ಮೆಂತೆ ಸೊಪ್ಪಿನ ಪಲ್ಯ. ಇದನ್ನು ಜೋಳದ ರೊಟ್ಟಿ, ಚಪಾತಿಯ ಜೊತೆ ತಿನ್ನಬಹುದು.
* ಸುನಂದ ಅರುಣಕುಮಾರ್ ಗೋಸಿ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು :
* ಹೆಸರುಬೇಳೆ - 1/2 ಕಪ್
* ಮೆಂತೆ ಸೊಪ್ಪು - 2 ಕಟ್ಟು
* ಈರುಳ್ಳಿ - 1
* ಗರಂ ಮಸಾಲ - 1/4 ಚಮಚ
* ಅಚ್ಹ ಕಾರಧಪುಡಿ - 1/2 ಚಮಚ
* ಹುಚೆಳ್ಳು ಪುಡಿ - 1/2 ಚಮಚ
* ಅರಿಶಿಣ ಸ್ವಲ್ಪ
* ರುಚಿಗೆ ತಕ್ಕ ಉಪ್ಪು.
* ಒಗ್ಗರೆಣೆಗೆ;- ಸಾಸಿವೆ, ಜೀರಿಗೆ, ಕರಿಬೇವು.
ಮಾಡುವ ವಿಧಾನ :
ಮೊದಲಿಗೆ ಹೆಸರುಬೇಳೆಯನ್ನು ಹದವಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಮೆಂತೆ ಸೊಪ್ಪು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ 2 ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕರಿಬೇವು ಹಾಗು ಸಣ್ಣಗೆ ಹೆಚ್ಹಿದ ಈರುಳ್ಳಿ ಹಾಕಿ. ಆಮೇಲೆ ಹುರಿದ ಹೆಸರುಬೇಳೆ ಹಾಗು ಹೆಚ್ಹಿದ ಮೆಂತೆ ಸೊಪ್ಪು ನಂತರ ಅರಿಶಿಣ, ಗರಂ ಮಸಾಲ, ಹುಚ್ಚೆಳ್ಳು ಪುಡಿ, ಕಾರದಪುಡಿ, ರುಚಿಗೆ ತಕ್ಕ ಹಾಗೇ ಉಪ್ಪು ಹಾಕಿ ಮಿಕ್ಸ್ ಮಾಡಿ .
ಹೆಸರುಬೇಳೆ ಬೇಯುವಷ್ಟು ನೀರು ಹಾಕಿ. ಬೇಳೆ ಬೇಯುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿಡಿ. ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಇದು ಚಪಾತಿ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ ಹಾಗು ಅನ್ನಕ್ಕೂ ಸಹ ಚೆನ್ನಾಗಿರುತ್ತದೆ. (ಮೆಂತೆ ಸೊಪ್ಪಿನ ಬದಲು ದಂಟು, ಕೆಂಪು ದಂಟು ಮತ್ತು ಹರಿವೆ ಸೊಪ್ಪು ಬೇರೆ ತರಹ ಸೊಪ್ಪುಗಳನ್ನು ಕೂಡ ಹಾಕಿ ಮಾಡಿಕೊಳ್ಳಬಹುದು.



Click it and Unblock the Notifications
