For Quick Alerts
ALLOW NOTIFICATIONS  
For Daily Alerts

ಮಟನ್ ಗ್ರೇವಿ ಜೊತೆ ಸವಿಯಲು ಮಟನ್ ದೋಸೆ

|

ದೋಸೆಯನ್ನು ನಾವ್ ವೆಜ್ ಹಾಕಿಯೂ ಮಾಡಬಹುದು, ಅದರಲ್ಲಿ ಚಿಕನ್ ದೋಸೆ ಮತ್ತು ಮಟನ್ ದೋಸೆಯನ್ನು ಹೆಚ್ಚಾಗಿ ಮಾಡಲಾಗುವುದು. ನಾನ್ ವೆಜ್ ದೋಸೆ ತಯಾರಿಸಿ, ನಾನ್ ವೆಜ್ ಗ್ರೇವಿ ಜೊತೆ ಸವಿಯಲು ಸ್ವಾದಿಷ್ಟಕರವಾಗಿರುತ್ತದೆ. ಇಲ್ಲಿ ನಾವು ಮಟನ್ ದೋಸೆ ಮಾಡುವ ವಿಧಾನ ಹೇಳಿದ್ದೇವೆ.

ಈ ದೋಸೆಯನ್ನು ಮಾಡಲು ಇತರ ದೋಸೆಗಿಂತ ಸ್ವಲ್ಪ ಸಮಯ ಅಧಿಕ ತೆಗೆದುಕೊಂಡರೂ ಮಾಡುವ ವಿಧಾನ ಕಷ್ಟವಲ್ಲ, ಹಾಗೂ ರುಚಿಗೂ ಮೋಸವಿಲ್ಲ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Mutton Dosa Recipe

ಬೇಕಾಗುವ ಸಾಮಾಗ್ರಿಗಳು
ಅಕ್ಕಿ 1 ಕಪ್
ಉದ್ದಿನ ಬೇಳೆ 1/4 ಕಪ್
ಮಟನ್ ಖೀಮಾ ಅರ್ಧ ಕಪ್
ಬಟಾಣಿ ಅರ್ಧ ಕಪ್
ಹಸಿ ಮೆಣಸಿನಕಾಯಿ 2
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ, ಗರಂ ಮಸಾಲ ಅರ್ಧ ಚಮಚ
ಕರಿಮೆಣಸಿನ ಪುಡಿ 1 ಚಮಚ
ಕರಿಬೇವಿನ ಎಲೆ
ಚಕ್ಕೆ 1
ಲವಂಗ 2
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 5-6 ಗಂಟೆಗಳ ನೀರಿನಲ್ಲಿ ನೆನೆ ಹಾಕಿ.

* ನಂತರ ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ದೋಸೆಯ ಹದಕ್ಕೆ ರುಬ್ಬಿ.

* ನಂತರ ಒಂದು ರಾತ್ರಿ ಹುದುಗು ಬರಲು ಇಡಿ.

* ಬೆಳಗ್ಗೆ ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ ಹಾಕಿ, ನಂತರ ಹಸಿ ಮೆಣಸಿನ ಕಾಯಿ, ಕರಿ ಬೇವಿನ ಎಲೆ ಹಾಕಿ 2 ನಿಮಿಷ ಫ್ರೈ ಮಾಡಿ, ಮಟನ್ ಖೀಮಾ, ಕರಿ ಮೆಣಸಿನ ಪುಡಿ, ಖಾರದ ಪುಡಿ, ಗರಂ ಮಸಾಲ ಹಾಕಿ, ಸ್ವಲ್ಪ ನೀರು ಹಾಕಿ , ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ.

* ಮಟನ್ ಅರ್ಧ ಬೆಂದಾಗ ಬಟಾಣಿ ಹಾಕಿ ಸೌಟ್ ನಿಂದ ಆಡಿಸಿ ಪುನಃ ಬೇಯಿಸಿ, ಮಟನ್ ಬೆಂದು ಅದರಲ್ಲಿರುವ ನೀರಿನಂಶ ಆವಿಯಾಗಿ ಸಂಪೂರ್ಣ ಡ್ರೈಯಾಗುವವರೆಗೆ ಬೇಯಿಸಿ.

* ನಂತರ ಈ ಮಿಶ್ರಣವನ್ನು ದೋಸೆ ಹಿಟ್ಟಿನ ಜೊತೆ ಹಾಕಿ ಮಿಕ್ಸ್ ಮಾಡಿ.

* ಈಗ ದೋಸಾ ತವಾವನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಸವರಿ, ದೋಸೆ ಹುಯ್ಯಿರಿ. ನಂತರ ಪಾತ್ರೆಯ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿ.

* ರೆಡಿಯಾದ ದೋಸೆಯನ್ನು ಮಟನ್ ಗ್ರೇವಿ ಜೊತೆ ಸವಿಯಲು ರುಚಿಯಾಗಿರುತ್ತದೆ.

English summary

Mutton Dosa Recipe

The mutton dosa recipe for breakfast will give you an energetic start for the day and will also improve your appetite in order for you to have a healthy body.
X
Desktop Bottom Promotion