For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಮುಂಬೈ ಶೈಲಿ ಎಗ್ ಭುರ್ಜಿ ರೆಸಿಪಿ

|

ಭಾರತೀಯರೆಲ್ಲರಿಗೂ ಎಗ್ ಭುರ್ಜಿ ತಿಳಿಯದೇ ಇರಲಿಕ್ಕಿಲ್ಲ. ಧಾಬಾ ಹಾಗೂ ರಸ್ತೆ ಬದಿಯ ಸ್ಟಾಲ್‌ಗಳಲ್ಲಿ ಬಿಸಿ ಬಿಸಿಯಾಗಿ ದೊರೆಯುವ ಎಗ್ ಭುರ್ಜಿಯನ್ನು ಸವಿಯದವರು ಯಾರೂ ಇಲ್ಲ. ಈ ರುಚಿಯಾದ ಎಗ್ ಭರ್ಜಿ ರೆಸಿಪಿಯನ್ನು ನಿಮಗೆ ಸರಳವಾಗಿ ಮನೆಯಲ್ಲೇ ತಯಾರಿಬಹುದು.

ಮನೆಯಲ್ಲೇ ತಯಾರಿಸಬಹುದಾದ ಎಗ್ ಭುರ್ಜಿ ರೆಸಿಪಿ ವಿಶೇಷ ಸ್ವಾದವನ್ನು ಹೊಂದಿರುತ್ತದೆ. ಅದರಲ್ಲೂ ಮುಂಬೈ ಸ್ಟೈಲ್ ಎಗ್ ಭರ್ಜಿಗಿರುವ ವಿಶೇಷತೆಯೆಂದರೆ ಅದನ್ನು ಪಾವ್ ಭಾಜಿ ಮಸಾಲೆ ಸೇರಿಸಿ ತಯಾರಿಸುವುದಾಗಿದೆ. ಇದರ ರುಚಿ ವಿಭಿನ್ನವಾಗಿದ್ದು ನಿಮಗೆ 5-6 ನಿಮಿಷಗಳಲ್ಲೇ ತಯಾರಿಸಬಹುದಾಗಿದೆ.

ಪಂಜಾಬಿ ಮೊಟ್ಟೆ ಮಸಾಲ ರೆಸಿಪಿ

Mumbai Style Egg Bhurji Recipe

ಸರಳವಾಗಿ ಎಗ್ ಭುರ್ಜಿ ತಯಾರಿಸಬಹುದಾದ ವಿಧಾನವನ್ನು ಬೋಲ್ಡ್ ಸ್ಕೈ ನಿಮಗಾಗಿ ಇಲ್ಲಿ ನೀಡಿದ್ದು, ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾಗಿದೆ. ಹಾಗಿದ್ದರೆ ಈ ಡಿಶ್ ಅನ್ನು ತಯಾರಿಸುವ ವಿಧಾನವನ್ನು ನೋಡಿ

ಪ್ರಮಾಣ: 2
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
1. ಶುಂಠಿ - (ತುರಿದದ್ದು) 1 ಸ್ಪೂನ್
2. ಈರುಳ್ಳಿ- 1 (ಕತ್ತರಿಸಿದ್ದು)
3. ಗ್ರೀನ್ ಬೆಲ್ ಪೆಪ್ಪರ್ - (ಸಣ್ಣದಾಗಿ ಹೆಚ್ಚಿದ್ದು)
4. ಹಸಿಮೆಣಸು - 1 (ಕತ್ತರಿಸಿದ್ದು)
5. ಟೊಮೇಟೊ - 1 (ಕತ್ತರಿಸಿದ್ದು)
6. ಮೊಟ್ಟೆಗಳು - 4
7. ಅರಶಿನ - ಸ್ವಲ್ಪ
8. ಪಾವ್ ಭಾಜಿ ಮಸಾಲಾ - 1 + 1ಸ್ಪೂನ್
9. ಎಣ್ಣೆ - 2 ಸ್ಪೂನ್
10. ಉಪ್ಪು - ರುಚಿಗೆ ತಕ್ಕಷ್ಟು
11. ಬೆಣ್ಣೆ - 1 ಸ್ಪೂನ್
12. ಕೊತ್ತಂಬರಿ ಸೊಪ್ಪು - 2 ಎಸಳು (ಕತ್ತರಿಸಿದ್ದು)

ಬೆಳಗ್ಗಿನ ಉಪಹಾರಕ್ಕಾಗಿ ರುಚಿಕರವಾದ ಆಮ್ಲೇಟ್ ರೆಸಿಪಿ!

ಮಾಡುವ ವಿಧಾನ:
1. ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ತುರಿದ ಶುಂಠಿಯನ್ನು ಮೊದಲು ಹಾಕಿ. ನಂತರ ಇದಕ್ಕೆ ಈರುಳ್ಳಿ ಸೇರಿಸಿ.
2. 2-3 ನಿಮಿಷಗಳ ಕಾಲ ಮಂದ ಉರಿಯಲ್ಲಿ ಅವನ್ನು ಹುರಿಯಿರಿ.
3. ಕ್ಯಾಪ್ಸಿಕಂ ಮತ್ತು ಹಸಿಮೆಣಸನ್ನು ಸೇರಿಸಿ; ಸಣ್ಣ ಉರಿಯಲ್ಲಿ ಅವನ್ನು ಫ್ರೈ ಮಾಡಿ
4. ಕೊನೆಗೆ ಟೊಮೇಟೊ ಹಾಕಿ ಅದನ್ನು ಫ್ರೈ ಮಾಡಿಕೊಳ್ಳಿ
5. ಪಾತ್ರಗೆ ಮೊಟ್ಟೆಯನ್ನು ಒಡೆದು ಹಾಕಿ ಇದಕ್ಕೆ ಅರಶಿನ, ಉಪ್ಪು ಮತ್ತು ಪಾವ್ ಭಾಜಿ ಮಸಾಲೆಯನ್ನು ಹಾಕಿ. ಈ ಮೊಟ್ಟೆ ಮಿಶ್ರಣವನ್ನು ಚೆನ್ನಾಗಿ ಕಲೆಸಿ.
6. ಇನ್ನು ಮೊಟ್ಟೆಯನ್ನು ಒಡೆದು ಪ್ಯಾನ್‌ಗೆ ಹಾಕಿ ಹಾಗೂ ಮೊಟ್ಟೆಯನ್ನು ಚೆನ್ನಾಗಿ ತರಕಾರಿಯೊಂದಿಗೆ ಮಿಶ್ರ ಮಾಡಿ ಮತ್ತು 3-4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
7. ಮೊಟ್ಟೆ ಭುರ್ಜಿ ಸಿದ್ಧವಾದೊಡನೆ ಪಾವ್ ಭಾಜಿ ಮಸಾಲೆಯನ್ನು ಅದರ ಮೇಲೆ ಉದುರಿಸಿ.
8. ಸ್ವಲ್ಪ ಬೆಣ್ಣೆಯನ್ನು ಅದರ ಮೇಲೆ ಸುರುಯಿರಿ
9. ಕೊತ್ತಂಬರಿ ಸೊಪ್ಪಿನಿಂದ ಕೊನೆಗೆ ಅಲಂಕರಿಸಿ.

ಈ ಎಗ್ ಭುರ್ಜಿ ರೆಸಿಪಿಯನ್ನು ಪಾವ್ ಅಥವಾ ಬ್ರೆಡ್‌ ಮೂಲಕ ಸವಿಯಲು ನೀಡಿ.

English summary

Mumbai Style Egg Bhurji Recipe

Egg bhurji is a recipe that is well known by every Indian cook. However, there are many versions of this recipe. Egg bhurji or scrambled eggs is an Indian recipe of street food. You can usually get this dish at dhabas and street stalls.
Story first published: Friday, May 16, 2014, 11:17 [IST]
X
Desktop Bottom Promotion