For Quick Alerts
ALLOW NOTIFICATIONS  
For Daily Alerts

ಡಾಬಾ ಶೈಲಿಯಲ್ಲಿ ಮಟನ್ ಸಾರು

|

ಉತ್ತರ ಭಾರತದ ಅಡುಗೆ ರುಚಿ ಮಾಡ ಬಯಸುವುದಾದರೆ ಡಾಬಾಗಳಿಗೆ ಹೋಗಬೇಕು. ಅಲ್ಲಿ ತಯಾರಿಸುವ ಪ್ರತಿಯೊಂದು ಅಡುಗೆಯೂ ರುಚಿಯಾಗಿರುತ್ತವೆ. ಈ ಡಾಬಾ ಶೈಲಿಯ ಅಡುಗೆಯನ್ನೂ ಅಷ್ಟೇ ರುಚಿಕರವಾಗಿ ನೀವು ಕೂಡ ತಯಾರಿಸಬಹುದು.

ಇಲ್ಲಿ ನಾವು ಡಾಬಾ ಶೈಲಿಯ ಮಟನ್ ಸಾರು ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ.

Dhaba Style Mutton Curry Recipe

ಬೇಕಾಗುವ ಸಾಮಾಗ್ರಿಗಳು
ಮಟನ್ ಅರ್ಧ ಕೆಜಿ
ಈರುಳ್ಳಿ 2
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಟೊಮೆಟೊ ಪೇಸ್ಟ್ 1 ಕಪ್
ಬೆಳ್ಳುಳ್ಳಿ ಎಸಳು 5-6
ಹಸಿ ಮೆಣಸಿನ ಕಾಯಿ 2
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ 1 ಚಮಚ
ಕೊತ್ತಂಬರಿ ಪುಡಿ 11/2 ಚಮಚ
ಸಕ್ಕರೆ ಅರ್ಧ ಚಮಚ
ಜೀರಿಗೆ 1 ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಲವಂಗ 2-3
ಏಲಕ್ಕಿ 2
ಪಲಾವ್ ಎಲೆ1
ರುಚಿಗೆ ತಕ್ಕ ಉಪ್ಪು
ತುಪ್ಪ
ನೀರು 2 ಕಪ್

ತಯಾರಿಸುವ ವಿಧಾನ:

* 4 ಚಮಚ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಮಟನ್ ಹಾಕಿ ಸಾಧಾರಣ ಉರಿಯಲ್ಲಿ ಮಟನ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ನೀರು ಹಾಕಿ ಸ್ವಲ್ಪ ಗಟ್ಟಿ ಪೇಸ್ಟ್ ರೀತಿ ಮಾಡಿಡಿ.

* ಈಗ ಮತ್ತೊಂದು ಪಾತ್ರೆಯನ್ನು ತೆಗದು ಅದರಲ್ಲಿ 2 ಚಮಚ ತುಪ್ಪ ಹಾಕಿ ಅದಕ್ಕೆ ಪಲಾವ್ ಎಲೆ, ಏಲಕ್ಕಿ, ಚಕ್ಕೆ ಲವಂಗ ಹಾಕಿ 2 ಸೆಕೆಂಡ್ ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ಟೊಮೆಟೊ ಪೇಸ್ಟ್ ಮತ್ತು ಕಲೆಸಿದ ಮಸಾಲೆ ಪೇಸ್ಟ್ ಹಾಕಿ ಕುದಿಸಿ. ನಂತರ ಮಟನ್ ತುಂಡುಗಳನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಸಾರು ಕುದಿ ಬರುವಾಗ ಸ್ವಲ್ಪ ಸಕ್ಕರೆ ಹಾಕಿ.

* ಮಟನ್ ಬೆಂದ ಮೇಲೆ ಉರಿಯಿಂದ ಇಳಿಸಿದರೆ ರುಚಿಕರವಾದ ಡಾಬಾ ಮಟನ್ ಕರಿ ರೆಡಿ.

English summary

Dhaba Style Mutton Curry Recipe | Variety Of Mutton Curry | ಡಾಬಾ ಶೈಲಿಯಲ್ಲಿ ಮಟನ್ ಸಾರು | ಅನೇಕ ಬಗೆಯ ಮಟನ್ ಅಡುಗೆ

Mutton curry is a favourite side dish that is served with boiled rice or rotis. You can try some different method to cook mutton curry. The dhaba style mutton curry is spicy, rich in flavours and lip smacking too. Check out the dhaba style mutton curry recipe.
X
Desktop Bottom Promotion