For Quick Alerts
ALLOW NOTIFICATIONS  
For Daily Alerts

ಡಾಬಾ ಶೈಲಿಯಲ್ಲಿ ಖಾರವಾದ ಮೊಟ್ಟೆ ಕರಿ ರೆಸಿಪಿ

|

ಡಾಬಾ ಆಹಾರದ ರುಚಿಯನ್ನು ಹೋಲುವಂತಹ ಆಹಾರವು ಬೇರೆ ಯಾವುದಿಲ್ಲ. ತಂದೂರ್ ಶೈಲಿಯಲ್ಲಿರುವ ಖಾರವಾಗಿರುವ ದಾಲ್ ತಡ್ಕಾ, ಬಗೆ ಬಗೆಯ ಪನ್ನೀರ್ ಕರಿಗಳು ಮತ್ತು ಬಿಸಿಯಾದ ರೋಟಿಗಳು ನಿಸ್ಸಂಶಯವಾಗಿ ನಿಮ್ಮ ಬಾಯಿಯಲ್ಲಿ ನೀರೂರಿಸುತ್ತವೆ. ಮನೆಯಲ್ಲಿಯೂ ಸಹ ನೀವು ಡಾಬಾ ಶೈಲಿಯ ಆಹಾರವನ್ನು ತಯಾರಿಸಬಹುದು. ತಮ್ಮ ರುಚಿ ಮತ್ತು ಪರಿಮಳದಿಂದ ಡಾಬಾ ರೆಸಿಪಿಗಳು ಭಾರತದಾದ್ಯಂತ ಅತ್ಯಂತ ಜನಪ್ರಿಯವಾಗಿವೆ.

ಆದರೆ ಆಹಾರ ಪ್ರಿಯರಿಗೆ ಸಮಸ್ಯೆಯಾಗುವುದು ಈ ಬಗೆಯ ಡಾಬಾ ಆಹಾರವನ್ನು ಮನೆಯಲ್ಲಿ ತಯಾರಿಸುವಾಗ ಅದಕ್ಕೆ ಅಗತ್ಯವಾದ ಮಸಾಲೆಗಳನ್ನು ಮತ್ತು ಮಾಡುವ ವಿಧಾನಗಳನ್ನು ತಿಳಿದುಕೊಳ್ಳುವುದು ಸಮಸ್ಯೆಯಾಗಿರುತ್ತದೆ. ಹಾಗಾದರೆ ಇಂದು ನಾವು ಡಾಬಾದಲ್ಲಿ ತಯಾರಿಸುವಂತಹ ಮೊಟ್ಟೆ ರೆಸಿಪಿಯನ್ನು ಮತ್ತು ಅವುಗಳಿಗೆ ಬೇಕಾದ ಪದಾರ್ಥಗಳನ್ನು ತಿಳಿಸಿಕೊಡುತ್ತಿದ್ದೇವೆ.

Dhaba Style Egg Curry Recipe

ನಿಜಕ್ಕು ಇವು ನಿಮ್ಮ ರುಚಿ ಗ್ರಂಥಿಗಳಿಗೆ ಹಬ್ಬವನ್ನು ನೀಡುವುದರಲ್ಲಿ ಸಂಶಯವಿಲ್ಲ. ಮಾಮೂಲಿ ಎಗ್ ರೆಸಿಪಿಯನ್ನು ಬಿಡಿ, ನಾವು ನಿಮಗೆ ತಿಳಿಸುತ್ತಿರುವ ಮೊಟ್ಟೆ ರೆಸಿಪಿಯನ್ನು ಇಂದು ತಯಾರಿಸಿ. ಬನ್ನಿ ಡಾಬಾ ಎಗ್ ಕರಿಯನ್ನು ಮಾಡುವ ಬಗೆಯನ್ನು ತಿಳಿದುಕೊಳ್ಳಿ. 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

ನಾಲ್ಕು ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಬೇಯಿಸಿದ ಮೊಟ್ಟೆಗಳು- 4 (ಸುಲಿದಂತಹವು)
*ಈರುಳ್ಳಿ- 2 (ಸಣ್ಣಗೆ ಕತ್ತರಿಸಿದಂತಹವು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ.ಚಮಚ
*ಹಸಿ ಮೆಣಸಿನಕಾಯಿ- 2 (ಉದ್ದಕ್ಕೆ ಕತ್ತರಿಸಿದಂತಹುದು)
*ಅರಿಶಿನ ಪುಡಿ - 2 ಟೀ. ಚಮಚ
*ಖಾರದ ಪುಡಿ- 1 ಟೀ. ಚಮಚ


*ಕೊತ್ತೊಂಬರಿ ಪುಡಿ - 2 ಟೀ.ಚಮಚ
*ಜೀರಿಗೆ ಪುಡಿ - 1 ಟೀ.ಚಮಚ
*ಮಾವಿನಕಾಯಿ ಪುಡಿ - 1 ಟೀ. ಚಮಚ
*ಗರಂ ಮಸಾಲ ಪುಡಿ - 1/2 ಟೀ. ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಕರಿ ಮೆಣಸಿನ ಪುಡಿ - 11/2 ಟೀ. ಚಮಚ
*ಜೀರಿಗೆ - 1 ಟೀ. ಚಮಚ
*ಚಕ್ಕೆ - 1
*ಏಲಕ್ಕಿ - 2
*ಪಲಾವ್ ಎಲೆ - 1
*ಎಣ್ಣೆ - 4 ಟೀ. ಚಮಚ ಕೇವಲ 15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪುಲಾವ್ ರೆಸಿಪಿ!

ತಯಾರಿಸುವ ವಿಧಾನ
1. ಎರಡು ಟೇಬಲ್ ಚಮಚ ಎಣ್ಣೆಯನ್ನು ಒಂದು ಬಾಣಲೆಗೆ ಮೇಲೆ ಹಾಕಿ ಕಾಯಿಸಿ. ಅದಕ್ಕೆ ಮೊಟ್ಟೆಗಳನ್ನು, ಉಪ್ಪು ಹಾಗು ಒಂದು ಟೀ ಚಮಚ ಅರಿಶಿನ ಪುಡಿಯನ್ನು ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
2. ಇದೆಲ್ಲ ಮುಗಿದ ಮೇಲೆ, ಅದನ್ನು ಬಟ್ಟಲಿಗೆ ಬದಲಿಸಿ, ಪಕ್ಕದಲ್ಲಿಡಿ.
3. ಅದೇ ಬಾಣಲೆಗೆ ಚಕ್ಕೆ, ಏಲಕ್ಕಿ, ಪಲಾವ್ ಎಲೆ ಮತ್ತು ಜೀರಿಗೆಯನ್ನು ಹಾಕಿ. ಒಗ್ಗರೆಣ್ಣೆಯ ರೀತಿ ತಯಾರಿಸಿಕೊಳ್ಳಿ.
4. ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ, 4-5 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ.


5. ಇದಾದ ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿಗಳ ಪೇಸ್ಟ್, ಅರಿಶಿನ ಪುಡಿ ಮತ್ತು ಖಾರದ ಪುಡಿಯನ್ನು ಹಾಕಿ. 3-4 ನಿಮಿಷಗಳವರೆಗೆ ಉರಿಯಿರಿ.
6. ಇದಾದ ಮೇಲೆ ಹಸಿ ಮೆಣಸಿನ ಕಾಯಿ, ಕರಿ ಮೆಣಸಿನ ಪುಡಿ, ಕೊತ್ತೊಂಬರಿ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಬೆರೆಸಿ 3-4 ನಿಮಿಷಗಳ ಕಾಲ ಉರಿಯಿರಿ.
7. ಇದಾದ ಮೇಲೆ ಇದಕ್ಕೆ ಸ್ವಲ್ಪ ಪ್ರಮಾಣದ ನೀರನ್ನು ಬೆರೆಸಿ ಮತ್ತು ಚೆನ್ನಾಗಿ ಕಲೆಸಿ ಕೊಡಿ. ನಂತರ ಇದಕ್ಕೆ ಮಾವಿನ ಪುಡಿ ಹಾಗು ಗರಂ ಮಸಾಲ ಪುಡಿಯನ್ನು ಬೆರೆಸಿ.
8. ಈಗ ಫ್ರೈ ಮಾಡಲಾದ ಮೊಟ್ಟೆಗಳನ್ನು ಮತ್ತು ಒಂದು ಕಪ್ ನೀರನ್ನು ಇದಕ್ಕೆ ಹಾಕಿ. ಗ್ರೇವಿಯನ್ನು ಮಧ್ಯಮ ಗಾತ್ರದ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿ.
9. ಇದೆಲ್ಲ ಮುಗಿದ ಮೇಲೆ, ಉರಿಯನ್ನು ಆರಿಸಿ ಮತ್ತು ನಿಮ್ಮವರಿಗೆ ಬಡಿಸಿ.
ಈಗ ನಿಮ್ಮ ಮುಂದೆ ಡಾಬಾ ಶೈಲಿಯ ಎಗ್ ಕರಿ ರೆಸಿಪಿಯು ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ರೋಟಿಯ ಜೊತೆಗೆ ನಿಮ್ಮವರಿಗೆ ಬಡಿಸಿ.

ಸಲಹೆ:
ಬೆಂದ ಮೊಟ್ಟೆಗಳನ್ನು ಫ್ರೈ ಮಾಡುವ ಮುನ್ನ ಟೂಥ್ ಪಿಕ್ ಅಥವಾ ಪೊರ್ಕ್ ಜೊತೆಗೆ ಹಿಡಿದುಕೊಳ್ಳಿ. ಈ ಕರಿಯ ರುಚಿಯನ್ನು ಹೆಚ್ಚಿಸಲು ಇದನ್ನು ಸಾಸಿವೆ ಎಣ್ಣೆಯಲ್ಲಿ ಬೇಯಿಸಿ.

English summary

Dhaba Style Egg Curry Recipe

Nothing matches the taste of the dhaba food. The spicy dal tadka, varieties of paneer curries and the hot rotis straight from the tandoor are simply mouthwatering. There are many dhaba style recipes that you can try at home too! Dhaba recipes are very popular in India. take a look at the recipe of dhaba style egg curry.
X
Desktop Bottom Promotion