For Quick Alerts
ALLOW NOTIFICATIONS  
For Daily Alerts

ಚಪಾತಿ ಜೊತೆ ಬಟರ್ ಚಿಕನ್ ತಿನ್ನಲು ಬಲು ರುಚಿ

|
Butter Chicken Recipe
ರೊಟ್ಟಿ ಅಥವಾ ಚಪಾತಿ ಅನ್ನು ಬಟ್ಟರ್ ಚಿಕನ್ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಬಟರ್ ಚಿಕನ್ ಮಾಡುವುದು ಬ್ರಹ್ಮ ವಿದ್ಯೆಯಲ್ಲ. ಬಟರ್ ಚಿಕನ್ ಹೋಟೆಲ್ ನಲ್ಲಿ ತಿನ್ನುವಾಗ ಇದನ್ನು ಮನೆಯಲ್ಲಿ ಮಾಡಲು ಗೊತ್ತಿದ್ದರೆ ಎಷ್ಟು ಚೆನ್ನ ಎಂದು ಬಯಸುವವರಿಗಾಗಿ ಈ ರೆಸಿಪಿ. ಬಟರ್ ಚಿಕನ್ ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ಚಿಕನ್ 500 ಗ್ರಾಂ( ಮೂಳೆ ಇರಬಾರದು)
* ಟೊಮೆಟೊ 2 ( ಪೇಸ್ಟ್ ರೀತಿ ಮಾಡಿರಬೇಕು)
* ಈರುಳ್ಳಿ 2 ( ಪೇಸ್ಟ್)
* ಮೊಸರು 250 ಗ್ರಾಂ
* ಕೆಂಪು ಮೆಣಸಿನ ಪುಡಿ 1 ಚಮಚ
* ಜೀರಿಗೆ ಪುಡಿ 1 ಚಮಚ
* ಹಸಿ ಮೆಣಸು 3-4( ಪೇಸ್ಟ್)
* ಬಾದಾಮಿ ಮತ್ತು ಗೋಡಂಬಿ 250 ಗ್ರಾಂ ( ಪೇಸ್ಟ್)
* ಗರಂ ಮಸಾಲ ( ಕರಿಮೆಣಸು, ಬೆಳ್ಳುಳ್ಳಿ, ಚಕ್ಕೆ-ಲವಂಗ, ಏಲಕ್ಕಿ ಇವುಗಳನ್ನು ಪುಡಿ ಮಾಡಿದ್ದು )
* ಪಲಾವ್ ಎಲೆ 1
* ಸಕ್ಕರೆ 1 ಚಮಚ
* ಬೆಣ್ಣೆ 50 ಗ್ರಾಂ
* ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

1. ಕತ್ತರಿಸಿದ ಚಿಕನ್ ಚೆನ್ನಾಗಿ ತೊಳೆದು ಅದನ್ನು ಮೊಸರು, ಒಂದು ಚಮಚ ಈರುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಅರ್ಧ ಗಂಟೆ ಇಡಬೇಕು.

2. ಮಿಶ್ರ ಮಾಡಿದ ಚಿಕನ್ ಅನ್ನು 10 ನಿಮಿಷ 640 ಡಿಗ್ರಿ ಉಷ್ಣತೆಯಲ್ಲಿ ಗ್ರಿಲ್ಡ್ ಮಾಡಿ.

3. ಈಗ ಸಾರು ಮಾಡುವ ಪಾತ್ರೆಯಲ್ಲಿ ಬೆಣ್ಣೆ ಹಾಕಿ ಅದು ಬಿಸಿಯಾದಾಗ ಪಲಾವ್ ಎಲೆ ಸೇರಿಸಿ ನಂತರ ಉಳಿದ ಈರುಳ್ಳಿ ಪೇಸ್ಟ್ ಹಾಕಬೇಕು. ನಂತರ ಈರುಳ್ಳಿ ಪೇಸ್ಟ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸೌಟ್ ನಿಂದ ಆಡಿಸುತ್ತಾ ಇರಬೇಕು.

4. ಈಗ ಟೊಮೆಟೊ ರಸವನ್ನು ಸೇರಿಸಿ 4 ನಿಮಿಷ ಬಿಸಿ ಮಾಡಬೇಕು.

5. ಮಿಶ್ರಣ ಬಿಸಿಯಾಗಿ ಬೆಣ್ಣೆ ಅದರ ಮೇಲೆ ತೇಲಲು ಪ್ರಾರಂಭಿಸಿದಾಗ ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಮಿಶ್ರ ಮಾಡಿ.

6. ನಂತರ ಗೋಡಂಬಿ ಮತ್ತು ಬಾದಾಮಿ ಪೇಸ್ಟ್ ಹಾಕಿ 4 ನಿಮಿಷದವರೆಗೆ ತಿರುಗಿಸುತ್ತಾ ಇರಿ.

7. ಈಗ ಚಿಟುಕಿ ಸಕ್ಕರೆ ಮತ್ತು ಮೊಸರು ( ಗ್ರೇವಿ ನಿಮಗೆ ತುಂಬಾ ಗಟ್ಟಿಯಾಗಿ ಬೇಕಿದ್ದರೆ ಜಾಸ್ತಿ ಮೊಸರು ಹಾಕಬೇಡಿ) ಹಾಕಿ 5 ನಿಮಿಷ ಕುದಿಸಿ. ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ.

8. ಈಗ ಗ್ರಿಲ್ಡ್ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ನಂತರ ಗರಂ ಮಸಾಲ ಸೇರಿಸಿ 5 ನಿಮಿಷ ಬೇಯಿಸಿ ನಂತರ ಪಾತ್ರೆಯನ್ನು ಉರಿಯಿಂದ ತೆಗೆಯಿರಿ.

9. ತಯಾರಾದ ಬಟ್ಟರ್ ಚಿಕ್ಕನ್ ಗೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ.

ಈಗ ಬಟರ್ ಚಿಕನ್ ನಾನ್ ರೊಟ್ಟಿ ಅಥವಾ ಚಪಾತಿ ಜೊತೆ ತಿಂದು ಹೋಟೆಲ್ ಗಿಂತ ನಿಮ್ಮ ಕೈ ರುಚಿಯೇ ಮೆಚ್ಚುಗೆಯಾಗುವುದು.

English summary

Butter Chicken Recipe | Types Of Chicken Curry | ಬಟರ್ ಚಿಕನ್ ರೆಸಿಪಿ | ಚಿಕನ್ ಖಾದ್ಯದ ವಿಧಗಳು

Butter Chicken the first and the most typical simple chicken curry in North Indian cuisine. It is also one of the most frequently ordered non vegetarian dishes.
Story first published: Friday, February 3, 2012, 14:12 [IST]
X
Desktop Bottom Promotion