For Quick Alerts
ALLOW NOTIFICATIONS  
For Daily Alerts

ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ

By Super
|
Cinnamon Clove Masala Tea
ಮಳೆಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ಗಂಟಲಿನ ಸಮಸ್ಯೆ ಸಾಮಾನ್ಯ. ಆದರೆ ಈ ಮಳೆಗಾಲದ ತೊಂದರೆಗಳಿಗೆ ಹೆದರಬೇಕಿಲ್ಲ. ಈ ಸ್ಪೆಷಲ್ ಚೆಕ್ಕೆ ಮಸಾಲ ಟೀ ಮಾಡಿ ಕುಡಿದರೆ ಸಾಕು. ಚೆಕ್ಕೆ ಬೆರೆಸಿದ ಈ ಮಸಾಲಾ ಟೀ ಕುಡಿಯುವುದರಿಂದ ಬೇಗನೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ದೇಹಕ್ಕೂ ಮನಸ್ಸಿಗೂ ರಿಲ್ಯಾಕ್ಸ್ ಆಗುತ್ತೆ. ಚೆಕ್ಕೆ ಟೀ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಚೆಕ್ಕೆ ಮಸಾಲಾ ಟೀ ಗೆ ಬೇಕಾಗುವ ಸಾಮಗ್ರಿ:
* ಒಂದು ತುಂಡು ಚೆಕ್ಕೆ
* 2-3 ಲವಂಗ
* 1 ಲೋಟ ಹಾಲು
* ಸಕ್ಕರೆ (ಅಗತ್ಯಕ್ಕೆ ತಕ್ಕಂತೆ)

ಚೆಕ್ಕೆ ಮಸಾಲಾ ಟೀ ತಯಾರಿಸುವ ವಿಧಾನ:

* ಚಿಕ್ಕ ಬಾಣಲೆಯಲ್ಲಿ ಒಂದು ನಿಮಿಷ ಚೆಕ್ಕೆ ಮತ್ತು ಲವಂಗ ಹುರಿದುಕೊಳ್ಳಬೇಕು.
* ಈ ಹುರಿದ ಚೆಕ್ಕೆ ಲವಂಗವನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.
* ಹಾಲನ್ನು ಕಾಯಿಸಿ ಅದಕ್ಕೆ ಚೆಕ್ಕೆ ಲವಂಗ ಪುಡಿ ಬೆರೆಸಿ ಅವಶ್ಯಕವಿದ್ದಷ್ಟು ಸಕ್ಕರೆ ಹಾಕಿಕೊಳ್ಳಬೇಕು.
* ಈ ಮಿಶ್ರಣವನ್ನು ಸೋಸಿದರೆ ಚೆಕ್ಕೆ ಮಸಾಲಾ ಟೀ ಕುಡಿಯಲು ರೆಡಿ.

ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದರೆ ದಿನಕ್ಕೆ ಮೂರು ಬಾರಿ ಈ ಟೀ ಕುಡಿಯಿರಿ, ಆಗ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳಬಹುದು.

English summary

Cinnamon Clove Tea | Tea to get Relief from Cough | ಚೆಕ್ಕೆ ಲವಂಗ ಮಸಾಲ ಟೀ | ಕೆಮ್ಮಿನ ನಿವಾರಣೆಗೆ ಚೆಕ್ಕೆ ಟೀ

Cough, common cold and throat irritation are common ailments during winter. Today, we will share a secret tea recipe that is prepared to get rid of these ailments. Take a look at the special masala tea called the cinnamon clove tea that feels great to drink during this season.
X
Desktop Bottom Promotion