For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಮತ್ತು ಸ್ವಲ್ಪ ವಿಭಿನ್ನವಾದ ಪಾನಕ!

|
Papaya Carrot Delight
ಪಪ್ಪಾಯಿ ಮತ್ತು ಕ್ಯಾರೆಟ್ ಜ್ಯೂಸ್ ನಮಗೆ ಚಿರಪರಿಚಿತ. ಈ ಎರಡು ಸಾಮಾಗ್ರಿಗಳನ್ನು ಸೇರಿಸಿ ತಯಾರಿಸುವ ಸ್ವಲ್ಪ ಗಟ್ಟಿಯಾದ ಪಾನಕದ ರುಚಿ ನೋಡಿದ್ದೀರಾ? ಇಲ್ಲ ಅಂದರೆ ತುಂಬಾ ರುಚಿಕರವಾದ ಪಾನಕವನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:

* ಪಪ್ಪಾಯಿ
* 4-5 ಕ್ಯಾರೆಟ್
* 1 ಲೀಟರ್ ಹಾಲು
* 4-5 ಚಮಚ ಸಕ್ಕರೆ
* ಒಂದು ಚಿಟಿಕಿ ಏಲಕ್ಕಿ ಪುಡಿ
* ಸ್ವಲ್ಪ ಕಸ್ತೂರಿ ಮತ್ತು ಬಾದಾಮಿ

ತಯಾರಿಸುವ ವಿಧಾನ:

1. ಹಾಲನ್ನು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಬೇಕು.

2. ಕ್ಯಾರೆಟ್ ಮತ್ತು ಪಪ್ಪಾಯಿಯನ್ನು ಸ್ವಲ್ಪ ನೀರು ಹಾಕಿ 10 ನಿಮಿಷ ಮೈಕ್ರೋವೇವ್ ನಲ್ಲಿ ಬೇಯಿಸಿ.

3. ಈಗ ಕ್ಯಾರೆಟ್ ಮತ್ತು ಪಪ್ಪಾಯಿಯನ್ನು ಸೌಟ್ ನಿಂದ ಕುಟ್ಟಿ ಪೇಸ್ಟ್ ರೀತಿ ಮಾಡಿ.

4. ಈ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ , ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಬೇಕು.

5. ಈಗ ಈ ಮಿಶ್ರಣವನ್ನು ತಣ್ಣಗಾಗಲು ಫ್ರಿಜ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ನಂತರ ಅದಕ್ಕೆ ಬಾದಾಮಿ ಮತ್ತು ಕಸ್ತೂರಿ ಹಾಕಿದರೆ ರುಚಿಕರವಾದ ಕ್ಯಾರೆಟ್ ಪಪ್ಪಾಯಿ ಯಿಂದ ತಯಾರಿಸಿದ ಪಾನಕ ರೆಡಿ.
ಶಿವರಾತ್ರಿಗೆ ಜಾಗರಣೆ ಇರುವವರು ಇದನ್ನು ಮಾಡಿ ಕುಡಿಯಬಹುದು.

English summary

Papaya Carrot Delight | Special Recipe For Shivaratri | ಪಪ್ಪಾಯಿ ಮತ್ತು ಕ್ಯಾರೆಟ್ ನ ರುಚಿಕರವಾದ ಪಾನಕ | ಶಿವರಾತ್ರಿಗೆ ಸ್ಪೆಷೆಲ್ ಅಡುಗೆ

On the occasion of Mahashivaratri, we thought of sharing a special recipe called the carrot papaya delight.
Story first published: Monday, February 20, 2012, 18:27 [IST]
X
Desktop Bottom Promotion