For Quick Alerts
ALLOW NOTIFICATIONS  
For Daily Alerts

ಮುಂಬೈ ಪಾವ್‌ಭಾಜಿ

By Super
|

ಬೆಹೆನೋ ಔರ್‌ ಭಾಯಿಯೋ, ಪಾವ್‌ಭಾಜಿ ಕರ್‌ನಾ ಸೀಖ್‌ಲೊ. ಪೂರೆಕೆ ಪೂರೆ ಮುಂಬೈ ಶಹರ್‌ ಎ ಚೀಜ್‌ ಖಾರಹಾಹೈ, ಆಪ್‌ ಕ್ಯಾ ಕರ್‌ರಹೇ ಹೈ? ಮುಂಬೈ ಪಾವ್‌ ಭಾಜಿ ಕರ್‌ನೆಕಾ ತರೀಖಾ ಪ್ರಿಯಂವದಾ ಹಮ್‌ಕೊ ಸಿಖಾತಿ ಹೈ...ಚಲೋ ಬನಾಯೇಂಗೆ!

ಅಗತ್ಯವಾದ ಸಾಮಗ್ರಿಗಳು (ಇಷ್ಟು ಮೂವರಿಗೆ ಸಾಕಾಗುತ್ತದೆ)

1- ಅಲೂಗಡ್ಡೆ
1- ಸಣ್ಣಗಾತ್ರದ ಕಾಲಿ ಫ್ಲವರ್‌
1/2 - ಕಪ್‌ಬಟಾಣಿ
1 - ದೊ. ಮೆಣಸಿನಕಾಯಿ(ಗಾತ್ರ ಚಿಕ್ಕದು)
2 - ಈರುಳ್ಳಿ
4- ಟೊಮಾಟೊ
ಖಾರದಪುಡಿ(ರುಚಿಗೆ ತಕ್ಕಷ್ಟು)
ಉಪ್ಪು(ರುಚಿಗೆ ತಕ್ಕಷ್ಟು)
ಪಾವ್‌-ಭಾಜಿ ಮಸಾಲೆ ಎರಡು ಚಮಚ (ಯಾವ ಬ್ರಾಂಡ್‌ ಆದರೂ ಪರವಾಗಿಲ್ಲ )
ಶುಂಠಿ(ಒಂದಿಂಚು)
ಬೆಳ್ಳುಳ್ಳಿ ಎರಡು ಎಸಳು(ಬೇಕಿದ್ದರೆ)
ಕೊತ್ತಂಬರಿ ಸೊಪ್ಪು
150ಗ್ರಾಂ ಬೆಣ್ಣೆ
1 ನಿಂಬೆ ಹಣ್ಣು
ಪಾವ್‌(ಸಿಗದಿದ್ದಲ್ಲಿ ಬ್ರೆಡ್‌ ಉಪಯೋಗಿಸಬಹುದು)

ಮೊದಲು ಇಷ್ಟು ಮಾಡಿ :

1. ಆಲೂ, ಬಟಾಣಿ ಮತ್ತು ಕಾಲಿಫ್ಲವರ್‌ ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿ, ಮ್ಯಾಷ್‌ ಮಾಡಿ ಇಟ್ಟುಕೊಳ್ಳಿ.
2. ದೊ. ಮೆಣಸಿನಕಾಯಿ, ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ.
3. ಬೆಳ್ಳುಳ್ಳಿ, ಶುಂಠಿ ಮತ್ತು ಇನ್ನೊಂದು ಈರುಳ್ಳಿಯನ್ನು ಮಿಕ್ಸರಿನಲ್ಲಿ ರುಬ್ಬಿತೆಗೆದಿಟ್ಟುಕೊಳ್ಳಿ.
4. ಟೊಮಾಟೊ ಹಣ್ಣನ್ನು ಹೆಚ್ಚಿ ಅದನ್ನು ಕೂಡ ಮಿಕ್ಸರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ರಸ ತೆಗೆದು ಇಟ್ಟುಕೊಳ್ಳಿ.

ಆಮೇಲೆ ಹೀಗೆ ಮಾಡಿ :

ಬಾಣಲೆಯಲ್ಲಿ ಎರಡು ಚಮಚ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ನಂತರ ರುಬ್ಬಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್‌ ಹಾಕಬೇಕು. ಬೆಳ್ಳುಳ್ಳಿ, ಈರುಳ್ಳಿಯ ಹಸಿವಾಸನೆ ಹೋಗುವ ತನಕ ಸ್ವಲ್ಪ ಹುರಿಯಿರಿ.

ನಂತರ ಸಣ್ಣಗೆ ಹೆಚ್ಚಿದ ದೊ.ಮೆ.ಕಾಯಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವ ಮತ್ತೆ ಹುರಿಯಿರಿ. ಆಮೇಲೆ ಮ್ಯಾಷ್‌ ಮಾಡಿದ ತರಕಾರಿ, ಟೊಮಾಟೋ ರಸವನ್ನು ಸೇರಿಸಿ, ಉಪ್ಪು, ಖಾರದಪುಡಿ ಮತ್ತು ಪಾವ್‌-ಬಾಜಿ ಮಸಾಲ ಬೆರೆಸಿ ಚೆನ್ನಾಗಿ ಸ್ವಲ್ಪ ಗಟ್ಟಿ ಅಗುವ ತನಕ ಕುದಿಸಿ. ಮೇಲೆ ಸ್ವಲ್ಪ ಬೆಣ್ಣೆ ಹಾಕಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.

ಬಿಸಿಯಾದ ದೋಸೆ ತವದ ಮೇಲೆ ಬೆಣ್ಣೆ ಸವರಿದ ಪಾವ್‌ ಅಥವಾ ಬ್ರೆಡ್‌ತುಣುಕುಗಳನ್ನು ಹಾಕಿ ಸ್ವಲ್ಪ ಟೊಸ್ಟ್‌ ಮಾಡಿ. ಪಾವ್‌ ಮೇಲೆ ಭಾಜಿಯನ್ನಿಡಿ. ಅದರ ಮೇಲೆ ಹಚ್ಚಿದ ಹಸಿ ಈರುಳ್ಳಿ, ಕೊತ್ತಂಬರಿ, ಅರ್ಧ ನಿಂಬೆಹಣ್ಣಿನ ರಸ ಹಾಕಿ ಕಣ್ಣಿಗೆ ಅಂದಕಾಣುವಂತೆ ಮಾಡಬಹುದು. ಆಮೇಲೆ ಅಂತೀರಾ? ಇನ್ನೇನಿದೆ, ಮನೆಯಲ್ಲಿಯೇ ತಯಾರಿಸಿದ ಮುಂಬೈ ಪಾವ್‌-ಭಾಜಿಯನ್ನು ರುಚಿನೋಡಿ!

X
Desktop Bottom Promotion