For Quick Alerts
ALLOW NOTIFICATIONS  
For Daily Alerts

ಕೊಡಗಿನ ಪಾಪುಟ್ಟು ತಿನ್ನಲು ಬಲು ರುಚಿ

|
ಕರ್ನಾಟಕದ ಕಾಶ್ಮೀರವೆಂದು ಕರೆಯಲ್ಪಡುವ ಕೊಡಗು ಕೊಡವರ ಬೀಡು.ಅಲ್ಲಿಯವರು ಆಚಾರ-ವಿಚಾರಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಉಡುಗೆ-ತೊಡುಗೆಯಲ್ಲಿ ತಮ್ಮದೆ ಆದ ಸಂಸ್ಕತಿಯನ್ನು ಪಾಲಿಸುತ್ತಾ ಬರುತ್ತಿದ್ದಾರೆ.

ಅದು ಅವರ ಅಡುಗೆಯಲ್ಲಿ ಸಹ ಎದ್ದು ಕಾಣಬಹುದಾಗಿದೆ. ನೈಸರ್ಗಿಕ ರಮಣೀಯತೆಯನ್ನು ನೋಡಲು ಬರುವ ಪ್ರವಾಸಿಗರು ಇಲ್ಲಿಯ ಅಡುಗೆಯ ರುಚಿಯನ್ನು ಸಹ ಇಷ್ಟಪಡುತ್ತಾರೆ.

ಕೊಡಗಿನ ವಿಶೇಷ ಆಹಾರ ಮಾಂಸದ ಊಟ ಮತ್ತು ಮದ್ಯ ಆಗಿದ್ದರೂ ಇದಲ್ಲದೆ ಇನ್ನಿತರ ವಿಶೇಷ ಅಡುಗೆಯಲ್ಲಿ ಸಹ ನಿಸ್ಸೀಮರು. ಹೀಗೆ ಕೊಡವರ ವಿಶೇಷ ಅಡುಗೆಗಳಲ್ಲಿ ಪಾಪುಟ್ಟು ಕೂಡ ಒಂದು.ಬೆಳಗ್ಗಿನ ತಿಂಡಿಗೆ ಮಾಡುವ ಪಾಪುಟ್ಟು ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ಪಾಪುಟ್ಟು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

1. ನುಚ್ಚಕ್ಕಿ 2 ಕಪ್
2. ನೀರು 1/2 ಕಪ್
3. ತುರಿದ ತೆಂಗಿನ ಕಾಯಿ
4. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

1. ಚೆನ್ನಾಗಿ ನುಚ್ಚಕ್ಕಿಯನ್ನು ತೊಳೆಯಬೇಕು.

2.
ನಂತರ ಒಂದು ಪ್ಲೇಟ್ ತೆಗೆದು ಅದರ ಅರ್ಧ ಪ್ಲೇಟ್ ಅಕ್ಕಿ ಹಾಕಿ ನೀರು ಅದರ ದುಪ್ಪಟ್ಟು ಹಾಕಿ ಉಪ್ಪನ್ನು ಸ್ವಲ್ಪ ಹಾಕಿ ಅದರ ಮೇಲೆ ತುರಿದ ತೆಂಗಿನ ಕಾಯಿಯನ್ನು ಹಾಕ ಬೇಕು.

3. ನಂತರ ಇಡ್ಲಿ ಪಾತ್ರೆಯಲ್ಲಿ ನೀರನ್ನು ಹಾಕಿ ಇಡ್ಲಿ ಪ್ಲೇಟ್ ಇಡಬೇಕು, ಇಲ್ಲದಿದ್ದರೆ ನುಚ್ಚಕ್ಕಿ ಹಾಕಿದ ಪ್ಲೇಟ್ ನೀರಿನಲ್ಲಿ ಮುಳುಗುವುದು.

4. ಈಗ ಆ ಪ್ಲೇಟ್ ನ ಮೇಲೆ ಈ ನುಚ್ಚಕ್ಕಿಯ ಪ್ಲೇಟ್ ಇಟ್ಟು ಇಡ್ಲಿ ಪಾತ್ರೆಯ ಬಾಯಿಯನ್ನು ಮುಚ್ಚಿ ಹಬೆಯಲ್ಲಿ ಬೇಯಿಸಬೆಕು.

5. ಈ ಪಾಪುಟ್ಟು ಸಹ ಇಡ್ಲಿ ಬೇಯುವ ಸಮಯ ಅಂದರೆ 15-20 ನಿಮಿಷ ತೆಗೆದು ಕೊಳ್ಳುತ್ತದೆ.

6. ಹೀಗೆ ಹಬೆಯಲ್ಲಿ ಬೆಂದ ಪಾಪುಟ್ಟು ಅನ್ನು ಒಂದು ಚಮಚ ತೆಗೆದು ನಾಲ್ಕು ಭಾಗ ಮಾಡಬೇಕು.

ಈಗ ತಯಾರಾದ ಪಾಪುಟ್ಟು ಅನ್ನು ಚಟ್ನಿಯೊಂದಿಗೆ ಸೇರಿಸಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಸಿಹಿ ಬೇಕೆನ್ನುವರು ತೆಂಗಿನ ಹಾಲಿಗೆ ಸಕ್ಕರೆ ಹಾಕಿ ಮಾಡಿದ ರಸದ ಜೊತೆ ತಿನ್ನಬಹುದು.

English summary

Kodava Paaputtu Recipe | Special Food Of Kodagu |ಕೊಡವರ ಪಾಪುಟ್ಟು ಅಡುಗೆ ಮಾಡುವ ವಿಧಾನ | ಕೊಡಗಿನ ವಿಶೇಷ ಅಡುಗೆ

Kodavas have their own food culture. In that paputtu also one of the popular one. This paputtu you can prepare for the breakfast. This is very easy to prepare, by prepare this you will enjoy the unique taste of kodava food. Take a look.
Story first published: Saturday, November 12, 2011, 15:35 [IST]
X
Desktop Bottom Promotion