For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಕರ ಟೊಮೆಟೊ ಹಣ್ಣಿನ ಚಟ್ನಿ

By Prasad
|
North karnataka special, tomato chutney
ಮನೆಯಲ್ಲಿ ಬಿಸಿಬಿಸಿಯಾದ ಭಕ್ಕರಿ ಅಥವಾ ಜೋಳದ ರೊಟ್ಟಿ ಮಾಡುವ ಇರಾದೆಯಿದ್ದರೆ ಪಲ್ಯದ ಜೊತೆ ಹಚ್ಚಿಕೊಳ್ಳಲು ಟೊಮೆಟೊ ಹಣ್ಣಿನ ಚಟ್ನಿ ಮಾಡಲು ಮರೆಯಬೇಡಿ. ಉತ್ತರ ಕರ್ನಾಟಕದ ಸ್ವಾದಿಷ್ಟ ಚಟ್ನಿಗಳಲ್ಲಿ ಟೊಮೆಟೊ ಹಣ್ಣಿನ ಚಟ್ನಿಯೂ ಒಂದು.

* ಸುನಂದ ಅರುಣಕುಮಾರ್ ಗೋಸಿ

ಪದಾರ್ಥಗಳ ಪಟ್ಟಿ

ಟೊಮೆಟೊ ಹಣ್ಣು - 1/2 ಕೆ .ಜಿ.
ಬ್ಯಾಡಗಿ ಒಣಮೆಣಸಿನಕಾಯಿ - 10
ಜೀರಿಗೆ - 1 ಚಮಚ
ಉದ್ದಿನಬೇಳೆ - 1 ಚಮಚ
ಮೆಂತೆ - 1 ಚಮಚ
ಒಣ ಕೊಬ್ಬರಿ - ಸ್ವಲ್ಪ
ಬೆಳ್ಳುಳ್ಳಿ ಎಸಳು - 6 (ಆಪ್ಶನಲ್)
ಕೊತ್ತಂಬರಿ ಸೊಪ್ಪು
ಕರಿಬೇವು - ಸ್ವಲ್ಪ
ಎಣ್ಣೆ - ಸ್ವಲ್ಪ
ಉಪ್ಪು ರುಚಿಗೆ

ಮಾಡುವ ವಿಧಾನ :

ಮೊದಲಿಗೆ ಟೊಮೆಟೊ ಹಣ್ಣನ್ನು ತೊಳೆದುಕೊಂಡು ಒರೆಸಿ ನಿಮಗಿಷ್ಟವಾದ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಉದ್ದಿನಬೇಳೆ, ಮೆಂತೆ, ಜೀರಿಗೆ ಎಲ್ಲಾ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಹಾಗೇ ತುಸು ಎಣ್ಣೆ ಹಾಕಿ ಒಣ ಮೆಣಸಿನಕಾಯಿಯನ್ನು ಕೂಡ ಹುರಿದು ತೆಗೆದುಕೊಳ್ಳಿ.

ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಿಟ್ಟು ಹೆಚ್ಚಿದ ಟೊಮೆಟೊ ಹಣ್ಣನ್ನು ರಸ ಹೋಗುವವರಿಗೂ ಚೆನ್ನಾಗಿ ತಾಳಿಸಿರಿ. ನಂತರ ಮಿಕ್ಸಿ ಜಾರಿನಲ್ಲಿ ಹುರಿದ ಉದ್ದಿನಬೇಳೆ, ಮೆಂತೆ, ಜೀರಿಗೆ, ಒಣ ಮೆಣಸಿನಕಾಯಿ, ಕೊಬ್ಬರಿ ಎಲ್ಲ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ, ತಾಳಿಸಿದ ಟೊಮೆಟೊ ಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು ಎಲ್ಲಾ ಹಾಕಿ ನೀರು ಹಾಕದೇ ತರಿ ತರಿಯಾಗಿ ರುಬ್ಬಿ.

Story first published: Monday, February 8, 2010, 15:17 [IST]
X
Desktop Bottom Promotion