For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ವೆಜ್ ಬಿರಿಯಾನಿ!

|

ವಾವ್! ಮುಂಜಾನೆಯ ಗಡಿಬಿಡಿಯ ಅಲ್ಪ ಸಮಯದಲ್ಲಿ ಬಿಸಿ ಬಿಸಿಯಾದ ತರಕಾರಿ ಬಿರಿಯಾನಿಯ ರುಚಿಯೇ ಬೇರೆಯಾಗಿರುತ್ತದೆ! ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಪುಟ್ಟ ಮಕ್ಕಳ ಹಸಿವನ್ನು ತಣಿಸಲು ಈ ರುಚಿಯಾದ ತರಕಾರಿ ಬಿರಿಯಾನಿಯನ್ನು ನೀವು ಪ್ರಯತ್ನಿಸಲೇಬೇಕು.

ಈ ರುಚಿಯಾದ ತರಕಾರಿ ಬಿರಿಯಾನಿಯ ರೆಸಿಪಿಯನ್ನು ತಯಾರಿಸಲು ನೀವು ತುಂಬಾ ಹೊತ್ತು ಕಳೆಯಬೇಕೆಂದಿಲ್ಲ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಬನ್ನಿ ಈ ಹೊಸತಾದ ರುಚಿಯನ್ನು ತಯಾರಿಸಿ ನಿಮ್ಮ ಮನೆಮಂದಿಗೆಲ್ಲಾ ಖುಷಿ ನೀಡಿ.

Veg biriyani for breakfast

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಕರವಾದ ಕಡಲೆಕಾಳು ಪುಲಾವ್ ರೆಸಿಪಿ

ಬೇಕಾಗುವ ಪದಾರ್ಥಗಳು:

ಬಾಸುಮತಿ ಅಕ್ಕಿ 4 ಕಪ್

ವಿವಿಧ ಬಗೆಯ ತರಕಾರಿಗಳು (ಬೀನ್ಸ್, ಕ್ಯಾರಟ್, ಹಸಿ ಬಟಾಣಿ, ಹೂಕೋಸು, ಆಲೂಗಡ್ಡೆ)

2 ಕಪ್ ಈರುಳ್ಳಿ

2 ಬೆಳ್ಳುಳ್ಳಿ,

ಒಂದು ಚಮಚದಷ್ಟು ಶುಂಠಿ ಪೇಸ್ಟ್

ಒಣ ಮೆಣಸಿನಕಾಯಿ 6

ಪಲಾವ್ ಎಲೆ 3

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ

ತುರಿದ ಹಸಿಕೊಬ್ಬರಿ

ಸ್ವಲ್ಪ ದಾಲ್ಚಿನ್ನಿ

ಸ್ವಲ್ಪ ಲವಂಗ, ಏಲಕ್ಕಿ, ಗೋಡಂಬಿ

ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

ವೆಜಿಟೇಬರ್ ಬಿರಿಯಾನಿ ತಯಾರಿಕೆಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳುವ ಮೊದಲು ಬಾಸುಮತಿ ಅಕ್ಕಿಯನ್ನು ಎರಡು ಬಾರಿ ತೊಳೆದು ನೀರಿನಲ್ಲಿ ನೆನೆಯಿಟ್ಟುಬಿಡಿ. ಅದು ಸುಮಾರು ಅರ್ಧ ಗಂಟೆ ನೆನೆಯಲಿ.

ಅಕ್ಕಿ ನೆನೆಯಿಟ್ಟ ಕೂಡಲೆ ತರಕಾರಿ ಹೆಚ್ಚಿಕೊಳ್ಳಲು ಶುರುಹಚ್ಚಿಕೊಳ್ಳಿ. ತೊಳೆದು ಹೆಚ್ಚಿದ ತರಕಾರಿಗಳು ಎರಡು ಬಟ್ಟಲಷ್ಟಾದರೆ ಸಾಕು. ಇನ್ನೊಂದೆಡೆ ಹಸಿಕೊಬ್ಬರಿಯನ್ನು ಹೆರೆದಿಟ್ಟುಕೊಂಡು, ಮಿಕ್ಸಿಯಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಬೆಳ್ಳುಳ್ಳಿ ಕಂಡರೆ ಮೂಗು ಮುರಿಯುವವರು ಅದನ್ನು ಸಾಮಗ್ರಿಗಳ ಲಿಸ್ಟಿನಿಂದ ಡಿಲೀಟ್ ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಪಾಲಕ್ ರೈಸ್!

ಇದೆಲ್ಲ ಒಂದು ಹಂತಕ್ಕೆ ಬಂದ ನಂತರ ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ತುಸು ಕಾಯ್ದ ನಂತರ ಚಿಟಿಕೆ ಅರಿಷಿಣ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿ, ಒಣ ಮೆಣಸಿನಕಾಯಿ, ತರಕಾರಿ, ದಾಲ್ಚಿನ್ನಿ, ಪಲಾವ್ ಎಲೆ ಸೇರಿಸಿ ಘಮ್ಮನೆ ವಾಸನೆ ಬರುವವರೆಗೆ ತಾಳಿಸಿ. ಗೋಡಂಬಿ ಹಾಕಿದರೆ ಬಿರಿಯಾನಿ ಘಮಲು ಇನ್ನೂ ಜಾಸ್ತಿಯಾಗುತ್ತದೆ. ಇದಕ್ಕೆ ತುಸು ನೀರು ಹಾಕಿ ಅರ್ಧ ಬೇಯುವವರೆಗೆ ಬಿಡಿ.

ಐದು ನಿಮಿಷದ ನಂತರ ನೆನೆಯಿಟ್ಟ ಅಕ್ಕಿ, ಅಕ್ಕಿಯ ಎರಡು ಪಟ್ಟಿನಷ್ಟು ನೀರು ಸುರುವಿ, ರುಚಿಗೆ ತಕ್ಕಷ್ಟು ಉಪ್ಪು, ಕೊಬ್ಬರಿ, ಏಲಕ್ಕಿ ಮತ್ತು ಲವಂಗ ಹಾಕಿ ಪ್ಯಾನ್ ಮುಚ್ಚಳ ಮುಚ್ಚಿಟ್ಟು ವೈಟ್ ಇಡಿ. ಒಂದು ಕನ್ನಡ ಸೀರಿಯಲ್ ಸೀರಿಯಸ್ಸಾಗಿ ನೋಡುವವರೆಗೆ ಅಕ್ಕಿ ಬೆಂದಿರುತ್ತದೆ. ಮುಚ್ಚಳ ತೆಗೆದರೆ ಘಮ್ಮನೆ ವೆಜಿಟೇಬರ್ ಬಿರಿಯಾನಿ ತಯಾರಾಗಿರುತ್ತದೆ, ಜೊತೆಗೆ ಹೊಟ್ಟೆಯೂ ಚುರುಗುಟ್ಟುತ್ತಿರುತ್ತದೆ, ತಟ್ಟೆಯಲ್ಲಿ ಬಿರಿಯಾನಿ ಹಾಕಿಕೊಂಡು ಎರಡು ಚಮಚ ತುಪ್ಪ ಬೆರೆಸಿ ಹೊಟ್ಟೆಗಿಳಿಸುತ್ತಿರುವಾಗ ಜಗತ್ತಿನ ಗೊಂದಲಗಳೂ ಕ್ಷಣಕಾಲ ಮರೆಯಾಗಿರುತ್ತವೆ.

Read more about: cookery ಅಡುಗೆ
English summary

Veg biriyani for breakfast

Take a look and try the delicious “Veg Biriyani" at home, also share the simple rice recipe with those who are looking for lunch box recipe options.
Story first published: Thursday, March 6, 2014, 17:23 [IST]
X
Desktop Bottom Promotion