For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕೆ ಸ್ಪಿನಾಚ್ ಕಟಲೆಟ್

|

ಸೊಪ್ಪನ್ನು ಬಳಸಿ ಮಾಡುವ ಈ ತಿಂಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹಸಿರು ಬಣ್ಣದಿಂದಾಗಿ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಈವತ್ತು ಬೆಳಗ್ಗೆ ಈ ತಿಂಡಿಯನ್ನು ನಿಮ್ಮ ಮಗುವಿಗೆ ಮಾಡಿಕೊಡಿ.

ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸ್ಪಿನಾಚ್ ನಲ್ಲಿ ಕಬ್ಬಿಣದಂಶ ಹೆಚ್ಚಿದ್ದು ಇದು ಮಗುವಿನ ಬೆಳವಣಿಗೆಗೆ ಬಹಳ ಒಳ್ಳೆಯದು. ಹಾಗಿದ್ದರೆ ತಡವೇಕೆ? ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ.

Spinach Cutlet Recipe For Breakfast

ಬೇಕಾಗುವ ಸಾಮಗ್ರಿಗಳು

1. ಸ್ಪಿನಾಚ್- 2 ಕಪ್ (ಹೆಚ್ಚಿಕೊಳ್ಳಿ)
2. ಆಲೂಗಡ್ಡೆ- 1 (ಬೇಯಿಸಿ ಪುಡಿಮಾಡಿಟ್ಟುಕೊಳ್ಳಿ)
3. ಎಣ್ಣೆ- 2 ಟೀಚಮಚ
4. ಈರುಳ್ಳಿ- 1 (ಹೆಚ್ಚಿಕೊಳ್ಳಿ)
5. ಹಸಿಮೆಣಸಿನಕಾಯಿ- 2 (ಕತ್ತರಿಸಿಕೊಳ್ಳಿ)
6. ಶುಂಠಿ ಪೇಸ್ಟ್- 1 ಟೀಚಮಚ
7. ಗರಂ ಮಸಾಲ- 1/2 ಟೀಚಮಚ
8. ಕಡಲೆಹಿಟ್ಟು- 1 ಕಪ್
9. ಬ್ರೆಡ್ ತುಂಡುಗಳು- 2 ಕಪ್
10. ನೀರು- 1/2 ಕಪ್
11. ಎಣ್ಣೆ
12. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

1. ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಿ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
2. ಇವು ಬೆಂದ ಮೇಲೆ ಇದಕ್ಕೆ ಸ್ಪಿನಾಚ್ ಎಲೆಗಳನ್ನು ಸೇರಿಸಿ 2-3 ನಿಮಿಷ ಇದನ್ನು ಕಲಸುತ್ತಿರಿ. ಆದ ಮೇಲೆ ಒಲೆಯಿಂದ ಕೆಳಗಿಳಿಸಿ.
3. ಇದಕ್ಕೆ ಆಲೂಗಡ್ಡೆ, ಗರಂ ಮಸಾಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
4. ಇದನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
5. ಮತ್ತೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಉಪ್ಪು ಮತ್ತು ನೀರನ್ನು ಹಾಕಿ ಹದವಾಗಿ ಕಲಸಿಕೊಳ್ಳಿ. ಇದು ತುಂಬ ನೀರಾಗಬಾರದು ಎಚ್ಚರವಿರಲಿ.
6. ಇದರೊಳಗೆ ಮಾಡಿಟ್ಟುಕೊಂಡ ಹೂರಣವನ್ನು ಇಟ್ಟು ತಟ್ಟಿಕೊಳ್ಳಿ. ಇದಕ್ಕೆ ಬ್ರೆಡ್ ಪುಡಿಯೊಳಗೆ ಹೊರಳಿಸಿ ಎಣ್ಣೆಯಲ್ಲಿ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.

ಸ್ಪಿನಾಚ್ ಕಟ್ ಲೆಟ್ ತಿನ್ನಲು ಸಿದ್ಧ. ಿದನ್ನು ಟೊಮೊಟೊ ಸಾಸ್ ನೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

English summary

Spinach Cutlet Recipe For Breakfast

The spinach cutlet is one of the most loved veggies in the kids section because of the bright green colour it emits when cooked.
Story first published: Thursday, December 12, 2013, 10:22 [IST]
X
Desktop Bottom Promotion