For Quick Alerts
ALLOW NOTIFICATIONS  
For Daily Alerts

ಒಮ್ಮೆ ಸವಿದು ನೋಡಿ, ಮೆಂತೆ-ಪಾಲಕ್ ಸೊಪ್ಪಿನ ಅಕ್ಕಿರೊಟ್ಟಿ!

By Super
|

ಬೆಳಗಿನ ಉಪಾಹಾರ ಅತಿ ಪೌಷ್ಟಿಕವೂ ಸಾಕಷ್ಟು ಪ್ರಮಾಣದಲ್ಲಿರುವುದೂ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ಸಮಯದ ಆಭಾವದಿಂದ ಬರೆಯ ಬ್ರೆಡ್ ಜಾಮ್ ನಂತಹ ಅನಾರೋಗ್ಯಕರ ಉಪಾಹಾರ ಸೇವಿಸಿ ಧಾವಂತದಲ್ಲಿ ಕಛೇರಿಗೆ ಧಾವಿಸಿ ಆರೋಗ್ಯ ಧಕ್ಕೆಗೊಳಿಸುವುದಕ್ಕಿಂತ ಕೊಂಚ ವ್ಯವಧಾನ ವಹಿಸಿದರೆ ಸೂಕ್ತ ಸಮಯದಲ್ಲಿಯೇ ಉತ್ತಮವಾದ ಉಪಾಹಾರ ಸೇವಿಸಬಹುದು.

ಮೆಂತೆಸೊಪ್ಪು ಮತ್ತು ಪಾಲಕ್ ಸೊಪ್ಪುಗಳನ್ನು ಸೇರಿಸಿ ಮಾಡಿದ ಅಕ್ಕಿರೊಟ್ಟಿಯೂ ಒಂದು ಅತ್ಯಂತ ಆರೋಗ್ಯಕರ ಮತ್ತು ಪುಷ್ಟಿದಾಯಕವಾದ ಉಪಾಹಾರವನ್ನು ಪಡೆಯಬಹುದು. ಅಲ್ಲದೆ ಬೆಳಗಿನ ಉಪಾಹಾರವೇ ಮಧ್ಯಾಹ್ನಕ್ಕೂ, ರಾತ್ರಿಯೂಟಕ್ಕೂ ಬಳಸಬಹುದು. ಹೆಚ್ಚು ಹೊತ್ತು ಇಟ್ಟರೂ ಗಟ್ಟಿಯಾಗದೇ ಇರುವ ಕಾರಣ ಬುತ್ತಿಯಾಗಿ ತೆಗೆದುಕೊಂಡು ಹೋಗಲೂ ಸೂಕ್ತವಾಗಿದೆ.

ಇದರ ಒಂದು ಉಪಯೋಗವೆಂದರೆ ಈ ರೊಟ್ಟಿಯನ್ನು ನಿಮ್ಮ ನೆಚ್ಚಿನ ಯಾವುದೇ ಸಾರಿನೊಂದಿಗೆ ಸೇವಿಸಬಹುದು. ಕಾಯಿ ಚಟ್ನಿ ಮತ್ತು ಈ ರೊಟ್ಟಿಯ ಜೊತೆಯಂತೂ ಅತ್ಯದ್ಭುತವಾಗಿದೆ. ಏನೂ ಇಲ್ಲದಿದ್ದರೆ ಕೊಂಚ ಬೆಲ್ಲ, ಮೊಸರು ಅಥವಾ ಕೇವಲ ಕೊಂಚ ಉಪ್ಪಿನಕಾಯಿಯೊಂದಿಗೂ ಸೇವಿಸಬಹುದು. ಗರಿಗರಿಯಾದ ಈ ಅಕ್ಕಿರೊಟ್ಟಿಯನ್ನು ಮಾಡುವ ವಿಧಾನವನ್ನು ಈಗ ನೋಡೋಣ: ಹುಣ್ಣಿಮೆ ಚಂದ್ರನ ಹೋಲುವ ಅಕ್ಕಿ ರೊಟ್ಟಿ

 Healthy Methi Palak Akki Roti

ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹದಿನೈದು ನಿಮಿಷಗಳೂ

ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಅಕ್ಕಿಹಿಟ್ಟು: ಎರಡು ಕಪ್

*ಮೆಂತೆ ಸೊಪ್ಪು : ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು) - ತಾಜಾ ಎಲೆಗಳಾಗಿರಬೇಕು

*ಪಾಲಕ್ ಸೊಪ್ಪು: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)- ತಾಜಾ ಎಲೆಗಳಾಗಿರಬೇಕು, ಸಾಧ್ಯವಾದಷ್ಟು ದಂಟು ಉಪಯೋಗಿಸಬೇಡಿ.

*ಜೀರಿಗೆ - ಒಂದು ಚಿಕ್ಕ ಚಮಚ

*ಕಾಯಿತುರಿ: ಒಂದು ಕಪ್

*ಹಸಿಮೆಣಸು: ಸುಮಾರು ಮೂರು

*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿದ್ದು.

*ಅಡುಗೆ ಎಣ್ಣೆ - ಎರಡು ದೊಡ್ಡ ಚಮಚ

*ಉಪ್ಪು - ರುಚಿಗನುಸಾರ

ವಿಧಾನ:

1) ಒಂದು ಪಾತ್ರೆಯಲ್ಲಿ ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಜೀರಿಗೆ, ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಕೈಗಳಿಂದ ಚೆನ್ನಾಗಿ ಕಲಕಿ.

2) ಈಗ ಇದಕ್ಕೆ ಅಕ್ಕಿ ಹಿಟ್ಟುಹಾಕಿ ಕಲಸುತ್ತಾ ಹೋಗಿ. ನಡುನಡುವೆ ಸ್ವಲ್ಪಸ್ವಲ್ಪವಾಗಿಯೇ ನೀರು ಸೇರಿಸುತ್ತಾ ಹೋಗಿ ರೊಟ್ಟಿ ತಟ್ಟುವಷ್ಟು ಹದ ಬರುವವರೆಗೆ ಕಲಸುತ್ತಾ ಹೋಗಿ. ನೀರು ಹೆಚ್ಚಾಗದಂತೆ ಎಚ್ಚರವಹಿಸಿ, ಹೆಚ್ಚಾದರೆ ತಟ್ಟಲು ಬರುವುದಿಲ್ಲ, ಬಂದರೂ ಕಾವಲಿಯ ಮೇಲೆ ಇಡುವಾಗ ತುಂಡುತುಂಡಾಗುತ್ತದೆ. ಈ ಹಿಟ್ಟನ್ನು ಒಂದು ಬದಿಗಿಡಿ.

3) ಒಂದು ದಪ್ಪತಳದ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಸವರಿ.

4) ಅಕ್ಕಿಹಿಟ್ಟಿನ ಒಂದು ಚಿಕ್ಕ ಮುದ್ದೆಯನ್ನು ಬಾಳೆ ಎಲೆ ಅಥವಾ ಸ್ವಚ್ಛಗೊಳಿಸಿದ ದಪ್ಪ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ರೊಟ್ಟಿಯನ್ನು ಅತಿ ದಪ್ಪವೂ ಅಲ್ಲ, ಅತಿ ತೆಳ್ಳಗೂ ಅಲ್ಲವೆನ್ನುವಷ್ಟು ದಪ್ಪಗೆ ತಟ್ಟಿ.

5) ಈ ಹಿಟ್ಟನ್ನು ಕಾವಲಿಯ ಮೇಲೆ ಉಲ್ಟಾ ಹಾಕಿ ಬಾಳೆಯೆಲೆ ಅಥವಾ ಪ್ಲಾಸ್ಟಿಕ್ ಹಾಳೆಯನ್ನು ಒಂದು ಕಡೆಯಿಂದ ಎತ್ತುತ್ತಾ ಬನ್ನಿ

6) ಒಂದೆರಡು ನಿಮಿಷದ ಬಳಿಕ ರೊಟ್ಟಿಯನ್ನು ತಿರುವಿ ಇನ್ನೊಂದು ಬದಿಯನ್ನು ಬೇಯಿಸಿ

7) ಕಾವಲಿಗೆ ಮುಚ್ಚಳ ಮುಚ್ಚಬೇಡಿ, ಮುಚ್ಚಿದರೆ ರೊಟ್ಟಿ ಸೀದು ಹೋಗಬಹುದು.

8) ಬಿಸಿಬಿಸಿಯಿದ್ದಂತೆಯೇ ನಿಮ್ಮ ನೆಚ್ಚಿನ ಸಾರು, ಚಟ್ನಿ ಅಥವಾ ಇತರ ವ್ಯಂಜನದೊಂದಿಗೆ ಬಡಿಸಿ.

ಸಲಹೆ:

ಪೌಷ್ಟಿಕವಾದ ಈ ಆಹಾರವನ್ನು ಎಲ್ಲಾ ವಯಸ್ಸಿನವರು ಸೇವಿಸಬಹುದು. ತೂಕ ಇಳಿಸುವವರೂ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು.

English summary

Healthy Methi Palak Akki Roti

Today, we shall learn to prepare one of the healthiest recipes around- methi palak akki roti. Akki roti is famous in Karnataka. This food is highly nutritious as it contains the green veggies, methi and palak. Some love to have this for breakfast, and also as the main course for lunch. If you are hungry, the first thing that you can do is, just start preparing this dish. There are many side dishes that go with akki roti.
Story first published: Saturday, August 8, 2015, 12:09 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more