Just In
Don't Miss
- News
ವಾಷಿಂಗ್ಟನ್, ರೋಮ್ನಲ್ಲಿ ರಾಯಭಾರ ಕಚೇರಿ ಮುಂದೆ ಖಲಿಸ್ತಾನಿಗಳ ಪ್ರತಿಭಟನೆ
- Movies
ತುಂಬಾ ಕಷ್ಟದ ಹಂತದ ಚಿತ್ರೀಕರಣ ಮಾಡಿ ಮುಗಿಸಿದ ರಕ್ಷಿತ್ ಶೆಟ್ಟಿ '777 ಚಾರ್ಲಿ' ತಂಡ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಹಾ 'ಪಾಲಕ್ ಪನ್ನೀರ್ ದೋಸೆ'-ಬೊಂಬಾಟ್ ರುಚಿ...
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಖಾದ್ಯವೆಂದರೆ ನಿರ್ವಿವಾದವಾಗಿ ಮಸಾಲೆ ದೋಸೆ ಎಂದು ಹೇಳಬಹುದು. ಮಸಾಲೆ ಇಲ್ಲದಿದ್ದರೂ ಈ ಎಲ್ಲರ ಮನೆಯ ತೂತಿನ ದೋಸೆ ಉಪಾಹಾರಕ್ಕೇ ಆಗಲಿ, ಮಧ್ಯಾಹ್ನದ ಊಟಕ್ಕೇ ಆಗಲಿ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ನೀರುದೋಸೆ, ಇವುಗಳಿಗೆ ಕೊಂಚವೇ ಮಸಾಲೆ ಅಥವಾ ಆಲೂಗಡ್ಡೆ ಬೇಯಿಸಿ ಪಲ್ಯ ಮಾಡಿಕೊಂಡರೆ ದೋಸೆಯ ವೈವಿಧ್ಯತೆ ಅಪಾರವಾಗಿ ಹೆಚ್ಚುತ್ತದೆ.
ಇಂದು ದೋಸೆ ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಅಂಗಡಿಯಿಂದ ತರಲು ಇಚ್ಛಿಸದವರಿಗೆ ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು. ಬ್ರೇಕ್ ಫಾಸ್ಟ್ ಗೆ ಫಟಾಫಟ್ ಪಾಲಾಕ್ ರೈಸ್
ಹಿಂದಿನಿಂದಲೂ ಮಸಾಲೆ ದೋಸೆ ನಮ್ಮ ಅಚ್ಚುಮೆಚ್ಚಿನದ್ದಾಗಿದೆ. ಈ ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ಈ ದೋಸೆಯ ರುಚಿನನ್ನು ಭಿನ್ನವಾಗಿಸಿ ಇನ್ನಷ್ಟು ಸ್ವಾದಿಷ್ಟವಾಗಿಸಬಹುದು. ಆಲೂಗಡ್ಡೆಯ ಬದಲಿಗೆ ಇಂದಿನ ನಮ್ಮ ಆಯ್ಕೆ ಪಾಲಕ್ ಪನ್ನೀರ್. ಆಲೂಗಡ್ಡೆಗಿಂತಲೂ ಪನ್ನೀರ್ ಹೆಚ್ಚು ಸತ್ವಯುತ ಮತ್ತು ಹೆಚ್ಚಿನ ಪೌಷ್ಟಿಕವಾದ ಕಾರಣ ರುಚಿಯಲ್ಲಿ ಮಾತ್ರವಲ್ಲ, ಗುಣದಲ್ಲಿಯೂ ನಿಮ್ಮ ಮನಸೂರೆಗೊಳ್ಳುವುದು ಖಂಡಿತ. ಬನ್ನಿ, ಒಮ್ಮೆ ಪ್ರಯತ್ನಿಸಿ...
*ಪ್ರಮಾಣ: ಎರಡು ದೋಸೆಗಳಿಗೆ ಸಾಕಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು ಬಗೆ ಬಗೆಯ ದೋಸೆ-ಬಾಯಲ್ಲಿ ನೀರೂರಿಸುತ್ತಿದೆ
ಅಗತ್ಯವಿರುವ ಸಾಮಾಗ್ರಿಗಳು
1. ಪಾಲಕ್‌ನ ಪ್ಯೂರಿ - 1 ಕಪ್
2. ಸಿದ್ಧರೂಪದ ಅಥವಾ ಮನೆಯಲ್ಲಿಯೇ ರುಬ್ಬಿದ ದೋಸೆ ಹಿಟ್ಟು - 2½ ಕಪ್
3. ಪನ್ನೀರ್- 250 ಗ್ರಾಂ (ಚಿಕ್ಕದಾಗಿ ಚೌಕಾಕಾರದಲ್ಲಿ ಕತ್ತರಿಸಿದ್ದು)
4. ಈರುಳ್ಳಿ - 3 (2 ಮಧ್ಯಮ ಮತ್ತು 1 ಚಿಕ್ಕ)
5. ಎಣ್ಣೆ - 2 ಚಿಕ್ಕಚಮಚ
6. ಜೀರಿಗೆ - 1½ ಚಿಕ್ಕಚಮಚ
7. ಬೆಳ್ಳುಳ್ಳಿ - 1½ ಚಿಕ್ಕಚಮಚ (ಚಿಕ್ಕದಾಗಿ ಹೆಚ್ಚಿದ್ದು)
8. ಕೊತ್ತಂಬರಿ ಎಲೆಗಳು- 1 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು)
9. ಕೆಂಪು ಮೆಣಸಿನ ಪುಡಿ - 1½ ಚಿಕ್ಕಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಹೆಚ್ಚು ರುಚಿಕರ, 3 ಚಿಕ್ಕಚಮಚ)
10. ಹಸಿಮೆಣಸು - 2 (ಚಿಕ್ಕದಾಗಿ ಹೆಚ್ಚಿದ್ದು)
11. ಉಪ್ಪು ರುಚಿಗನುಸಾರ ಆರೋಗ್ಯದ ಸರದಾರ ಪಾಲಕ್ ಸೊಪ್ಪಿನ ಚಪಾತಿ...
ವಿಧಾನ
1. ಒಂದು ಪಾತ್ರೆಯಲ್ಲಿ ದೋಸೆಹಿಟ್ಟನ್ನು ಹಾಕಿ ಇದಕ್ಕೆ ಪಾಲಕ್ ಪ್ಯೂರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಬೆರೆಸಿ.
2. ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಕೊಂಚವೇ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಬಳಿಕ ಪನ್ನೀರ್ ತುಂಡುಗಳನ್ನು ಹಾಕಿ ಸತತವಾಗಿ ಚಮಚವಾಡಿಸುತ್ತಾ ಪನ್ನೀರ್ ತುಂಡುಗಳ ಅಂಚುಗಳೆಲ್ಲವೂ ಕಂದುಬಣ್ಣ ಬರುವಷ್ಟು ಹುರಿಯಿಸಿ.
3. ಬಳಿಕ ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಎಲೆಗಳು ಮತ್ತು ಇನ್ನೂ ಕೊಂಚ ಉಪ್ಪು ಹಾಕಿ ಮಿಶ್ರಣ ಮಾಡಿ.
4. ಈಗ ದೋಸೆ ಕಾವಲಿಯನ್ನು ಒಲೆಯ ಎರಡನೆಯ ಭಾಗದಲ್ಲಿ ಬಿಸಿ ಮಾಡಲು ಇಡಿ. ಚಿಕ್ಕ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಒಂದು ಭಾಗ ಕೆಳಗಿರುವಂತೆ ಮುಳ್ಳಿನ ಚಮಚ (fork) ಅಥವಾ ಚಿಕ್ಕ ಚಾಕುವಿನಿಂದ ಈರುಳ್ಳಿಗೆ ಚುಚ್ಚಿ, ಈರುಳ್ಳಿಯ ತಳಭಾಗಕ್ಕೆ ಕೊಂಚ ಎಣ್ಣೆ ಹಚ್ಚಿ ಕಾವಲಿಗೆ ಸವರಿ ಬಳಿಕ ತೆಳುವಾದ ಬಟ್ಟೆಯೊಂದನ್ನು ನಯವಾಗಿ ಒರೆಸಿ ಹೆಚ್ಚಿನ ಎಣ್ಣೆಯನ್ನು ನಿವಾರಿಸಿ. ಕಾವಲಿ ನಾನ್ ಸ್ಟಿಕ್ ಆದರೆ ಈ ಕ್ರಮದ ಅಗತ್ಯವಿಲ್ಲ.
5. ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತುಂಬಿಸಿ ಕಾವಲಿಯ ನಡುವೆ ಹುಯ್ಯಿರಿ. ಬಳಿಕ ಸೌಟಿನ ತಳಭಾಗವನ್ನು ಬಳಸಿ ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ವೃತ್ತಾಕಾರದಲ್ಲಿ ನೇವರಿಸಿ. ಕೇಂದ್ರ ಹಾಗೂ ಅಂಚಿನ ನಡುವೆ ಒಂದು ವೃತ್ತಾಕಾರದಷ್ಟು ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಬಿಡಬಹುದು. ಈ ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ. (ಉರಿ ಹೆಚ್ಚಾಗಬಾರದು, ಹೆಚ್ಚಾದರೆ ದೋಸೆ ತಳದಲ್ಲಿ ಸುಡುತ್ತದೆ)
6. ಬಳಿಕ ಮುಚ್ಚಳ ತೆರೆದು ಕರಣೆ (spatula) ಯನ್ನು ಬಳಸಿ ದೋಸೆಯನ್ನು ಕಾವಲಿಯಿಂದ ಮೇಲಕ್ಕೆತ್ತಿ ತಟ್ಟೆಯೊಂದರಲ್ಲಿ ಹಾಕಿ. ಇದೇ ರೀತಿ ಉಳಿದ ದೋಸೆಗಳನ್ನು ತಯಾರಿಸಿ.
7. ಈ ದೋಸೆಯ ನಡುವೆ ಪನ್ನೀರ್‌ನ ಮಸಾಲೆಯನ್ನು ಸುಮಾರು ಎರಡು ದೊಡ್ಡ ಚಮಚದಷ್ಟು ಪ್ರಮಾಣವನ್ನು ಹಾಕಿ ಎರಡೂ ಬದಿಗಳ ಅಂಚನ್ನು ಮಸಾಲೆಯ ಮೇಲೆ ಇರಿಸಿ ಸುರುಳಿ ಸುತ್ತಿ. ಬಿಸಿಬಿಸಿ ಇದ್ದಂತೆಯೇ ಮನೆಯವರಿಗೆ ಬಡಿಸಿ. ಇದರ ಆಕರ್ಷಣೆ ಹೆಚ್ಚಲು ಅತಿಥಿಗಳಿಗೆ ಬಡಿಸುವ ಕೆಲವೇ ಸೆಕೆಂಡುಗಳ ಮುನ್ನ ಬೆಣ್ಣೆಯ ಚಿಕ್ಕ ಮುದ್ದೆಯನ್ನು ಇದರ ಮೇಲೆ ಇಡಿ. ಈ ದೋಸೆ ಆರೋಗ್ಯಕರವಾಗಿದ್ದು ತೂಕ ಇಳಿಸುವವರಿಗೂ ಸೂಕ್ತವಾಗಿದೆ.