For Quick Alerts
ALLOW NOTIFICATIONS  
For Daily Alerts

ಬರೀ ಐದೇ ನಿಮಿಷದಲ್ಲಿ ಮಾಡಿ ಸವಿಯಿರಿ-ಹುಳಿ ಅವಲಕ್ಕಿ!

By Arshad
|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಜೀವನ ಶೈಲಿ ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ ಪದ್ಧತಿಯನ್ನು ತಯಾರಿಸುವುದು ಕೂಡ ತುಸು ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ ವಾಲುವುದು ಸಾಮಾನ್ಯ.

ಈ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿದೆ ಹುಳಿ ಅವಲಕ್ಕಿ. ಇದನ್ನು ಐದೇ ನಿಮಿಷದಲ್ಲಿ ಮಾಡಿ ಬಡಿಸಲು ಸಾಧ್ಯವಿರುವುದರಿಂದ ಬೆಳಗ್ಗಿನ ಧಾವಂತದಲ್ಲಿ ಮಾಡಿ ಮುಗಿಸಲು ಸೂಕ್ತವಾಗಿದೆ. ಅಲ್ಲದೆ ಇದು ಸುಲಭವಾಗಿ ಮತ್ತು ನಿಧಾನವಾಗಿ ಜೀರ್ಣವಾಗುವುದರಿಂದ ಮಧ್ಯಾಹ್ನದವರೆಗೂ ಹಸಿವನ್ನು ತಣಿಸುವಲ್ಲಿ ಸಮರ್ಥವಾಗಿದೆ. ಕೇವಲ ಉಪಾಹಾರಕ್ಕೇ ಏಕೆ, ಮಧ್ಯಾಹ್ನದ ಊಟ ಅಥವಾ ಸಂಜೆಯ ತಿಂಡಿಯ ರೂಪದಲ್ಲಿಯೂ ಸೇವಿಸಬಹುದು. ಬನ್ನಿ, ಧಿಡೀರನೇ ತಯಾರಿಸಬಹುದಾದ ಈ ರುಚಿಕರ ಮತ್ತು ಆರೋಗ್ಯಕರ ತಿಂಡಿಯನ್ನು ತಯಾರಿಸುವ ವಿಧಾನವನ್ನು ನೋಡೋಣ: ಒಮ್ಮೆ ಮಾಡಿ, ಸವಿದು ನೋಡಿ-ಪಾಲಕ್ ಅವಲಕ್ಕಿ!

5-Minute Puli Aval Treat For Breakfast

ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು
*ತಯಾರಿಕಾ ಸಮಯ: ಐದು ನಿಮಿಷಗಳಿಗೂ ಕಡಿಮೆ
*ಬೇಯಲು ತೆಗೆದುಕೊಳ್ಳುವ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಅವಲಕ್ಕಿ - ಒಂದು ಕಪ್
*ಅರಿಶಿನ ಪುಡಿ: ಕಾಲು ಚಿಕ್ಕ ಚಮಚ
*ಹುಣಸೆ ಹುಳಿಯ ಪೇಸ್ಟ್: ಒಂದು ಚಿಕ್ಕ ಚಮಚ
*ಉಪ್ಪು-ರುಚಿಗನುಸಾರ

ಒಗ್ಗರಣೆಗೆ:
*ಎಣ್ಣೆ - ಎರಡು ಚಿಕ್ಕ ಚಮಚ
*ಸಾಸಿವೆ - ಒಂದು ಚಿಕ್ಕ ಚಮಚ
*ಹಿಂಗು - ಒಂದು ಚಿಟಿಕೆ
*ಕಡ್ಲೆ ಬೇಳೆ - ಎರಡು ಚಿಕ್ಕ ಚಮಚ
*ಒಣಮೆಣಸು - ಎರಡು
*ಹಸಿಮೆಣಸು-ಒಂದು
*ಹುರಿದ ಶೇಂಗಾಬೀಜ -ಸುಮಾರು ಮೂರು ದೊಡ್ಡಚಮಚ
*ಕರಿಬೇವಿನ ಎಲೆ-ಒಂದು ಎಸಳು

ವಿಧಾನ:
1) ಮೊದಲು ಅವಲಕ್ಕಿಯನ್ನು ಎರಡು ಬಾರಿ ತೊಳೆದು ನೀರು ಬಸಿಯಿರಿ. ಬಳಿಕ ನೀರು ಬಸಿದು ಹೋಗುವ ಜಾಲರಿಯಲಿಟ್ಟು ಪೂರ್ಣವಾಗಿ ನೀರು ಹೊರಹೋಗುವಂತೆ ಮಾಡಿ.
2) ಬಳಿಕ ಇದಕ್ಕೆ ಅರಿಶಿನ ಪುಡಿ, ಹುಳಿಯ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಕಲಕಿ ಬದಿಗಿಡಿ.
3) ಒಗ್ಗರಣೆಗಾಗಿ ಒಂದು ಬಾಣಲೆ ಅಥವಾ ದಪ್ಪತಳದ ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಇಂಗು, ಕಡ್ಲೆಬೇಳೆ, ಒಣಮೆಣಸು, ಹಸಿಮೆಣಸು, ಶೇಂಗಾಬೀಜ, ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
4) ಬೇಳೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ನೀರು ಬಸಿದ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊಂಚ ರುಚಿ ನೋಡಿ ಉಪ್ಪು ಕಡಿಮೆಯೆನಿಸಿದರೆ ಸೇರಿಸಬಹುದು. ಸುಮಾರು ಮೂರು ನಿಮಿಷಗಳವರೆಗೆ ನಿಧಾನವಾಗಿ ತಿರುವುತ್ತಿರಿ. ಬಳಿಕ ಉರಿ ನಂದಿಸಿ ಬಿಸಿಬಿಸಿಯಿರುವಂತೆಯೇ ಹಪ್ಪಳ ಅಥವಾ ಆಲುಗಡ್ಡೆ ಚಿಪ್ಸ್ ನೊಂದಿಗೆ ನೀಡಿ. ಹುಳಿ ಅವಲಕ್ಕಿಯೊಂದಿಗೆ ಗರಿಗರಿ ಹಪ್ಪಳ ವಿಶಿಷ್ಟವಾದ ಅನುಭವ ನೀಡುತ್ತದೆ.

English summary

5-Minute Puli Aval Treat For Breakfast

If you are running out of time and need something fast and healthy to prepare this morning, try the yummy puli aval recipe. Also known as beaten rice it is an ingredient which is easily digestible. The healthy aval is also used to prepare other dishes too. Not only can you eat it as breakfast, but it can be prepared into a meal or as a dessert too.
X
Desktop Bottom Promotion