For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ತಿಂಡಿಗೆ ಸ್ಪೆಷಲ್ ಆಲೂ ಮಟರ್ ಚಪಾತಿ

|
Aloo Mutter Chapati Recipe
ಯಾವಾಗಲೂ ಗೋಧಿ ಚಪಾತಿ ತಿಂದು ಬೋರಾಗಿದ್ದರೆ ಈ ಸ್ಪೆಷಲ್ ಚಪಾತಿ ಟ್ರೈ ಮಾಡಿ ರುಚಿನೋಡಬಹುದು. ಆಲೂಗಡ್ಡೆ ಮತ್ತು ಬಟಾಣಿ ಬೆರೆಸಿ ಮಾಡುವ ಈ ಆಲೂ ಮಟರ್ ಚಪಾತಿ ನಿಜಕ್ಕೂ ಸ್ಪೆಷಲ್ ಅನ್ನಿಸುತ್ತೆ. ಇದನ್ನು ತಯಾರಿಸೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಆಲೂ ಮಟರ್ ಗೆ ಇಷ್ಟು ಸಾಮಾನಿರಲಿ: 1 ಕಪ್ ಚೆನ್ನಾಗಿ ಬೇಯಿಸಿದ ಆಲೂಗಡ್ಡೆ, 1 ಕಪ್ ಬೇಯಿಸಿದ ಬಟಾಣಿ, 1 ಚಮಚ ಗರಂ ಮಸಾಲ, 2 ಕಪ್ ಗೋಧಿ ಹಿಟ್ಟು, ಉಪ್ಪು, ಎಣ್ಣೆ, ತುಪ್ಪ

ಆಲೂ ಮಟರ್ ಚಪಾತಿ ತಯಾರಿಸುವುದು ಹೀಗೆ:
ಮೊದಲು ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಚೆನ್ನಾಗಿ ಮೆತ್ತಗಾಗುವಂತೆ ಕಲೆಸಿಕೊಂಡು ಗೋಧಿ ಹಿಟ್ಟಿನೊಂದಿಗೆ ಬೆರೆಸಿ ಉಪ್ಪು, ಗರಂ ಮಸಾಲೆ ಪುಡಿ ಹಾಕಿ ಸ್ವಲ್ಪ ಎಣ್ಣೆ, ನೀರಿನೊಂದಿಗೆ ಹದವಾಗಿ ಹಿಟ್ಟಿನಂತೆ ಕಲೆಸಿಕೊಂಡು ಚೆನ್ನಾಗಿ ಮಿದಿಯಬೇಕು.

ಮಾಮೂಲಿ ಚಪಾತಿ ಮಾಡುವಂತೆ ಉಂಡೆ ಮಾಡಿಕೊಂಡು ತಟ್ಟಿಕೊಳ್ಳಬೇಕು. ತವೆ ಕಾಯಿಸಿ ಒತ್ತಿಕೊಂಡಿದ್ದ ಚಪಾತಿ ಹಾಕಿ ಎಣ್ಣೆ ಬದಲು ತುಪ್ಪವನ್ನು ಅದರ ಸುತ್ತ ಹಾಕಿ ಬೇಯಿಸಿದರೆ ರುಚಿಯಾದ ಆಲೂ ಮಟರ್ ಚಪಾತಿ ತಿನ್ನಲು ತಯಾರಾಗಿರುತ್ತೆ.

English summary

Aloo Mutter Chapati Recipe | Indian Breakfast | ಆಲೂ ಮಟರ್ ಚಪಾತಿ ತಯಾರಿಸುವ ವಿಧಾನ

If you are bored having the plain and boring wheat chapatis, then we suggest you to taste our unique chapati recipe. “Aloo Mutter Chapati" is made of potatoes and green peas, mashed well and mixed with dough. Take a look at how to make the easy and nutritious chapati recipe.
Story first published: Wednesday, November 9, 2011, 11:05 [IST]
X
Desktop Bottom Promotion