For Quick Alerts
ALLOW NOTIFICATIONS  
For Daily Alerts

ದೇಹವನ್ನು ಬೆಚ್ಚಗಿಡುವ ಈ ರೊಟ್ಟಿ ಚಳಿಗಾಲಕ್ಕಿರಲಿ

By Super
|
North Karnataka Jolada Roti Recipe
ದೇಹದಲ್ಲಿ ಉಷ್ಣವನ್ನು ಉತ್ಪಾದಿಸಲು ಸಹಕರಿಸುವ ಜೋಳದ ರೊಟ್ಟಿ ಚಳಿಗಾಲಕ್ಕೆ ಹೇಳಿಮಾಡಿಸಿದ ಖಾದ್ಯ. ಬಾಯಿಗೂ ಹಿತ, ಆರೋಗ್ಯಕ್ಕೂ ಉತ್ತಮವಾಗಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಜೋಳದ ರೊಟ್ಟಿ ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಜೋಳದ ರೊಟ್ಟಿಗೆ ಏನೇನು ಬೇಕು: 2 ಕಪ್ ಜೋಳದ ಹಿಟ್ಟು, 2 1/2 ಕಪ್ ನೀರು, ಉಪ್ಪು

ಜೋಳದ ರೊಟ್ಟಿಯನ್ನು ಈ ರೀತಿ ಮಾಡಿ:
ಕುದಿಯುತ್ತಿರುವ ನೀರಿಗೆ ಜರಡಿ ಹಿಡಿದ ಜೋಳದ ಹಿಟ್ಟನ್ನು ಹಾಕಿ ಅದು ಮೃದುವಾಗುವವರೆಗೂ ಚೆನ್ನಾಗಿ ಕಲೆಸಬೇಕು. (ರಾಗಿ ಮುದ್ದೆಯಂತೆ) ಹಿಟ್ಟು ತಣ್ಣಗಾದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಬೇಕು.

ಪ್ಲಾಸ್ಟಿಕ್ ಪೇಪರ್ ಮೇಲೆ ಉಂಡೆಯನ್ನು ಹಾಕಿ ವೃತ್ತಾಕಾರವಾಗಿ ತಟ್ಟಿಕೊಳ್ಳಬೇಕು. ತವೆಯನ್ನು ಬಿಸಿ ಮಾಡಿ ಎರಡೂ ಕಡೆ ರೊಟ್ಟಿಯನ್ನು ಬೇಯಿಸಿದರೆ ಜೋಳದ ರೊಟ್ಟಿ ತಿನ್ನಲು ರೆಡಿಯಾಗಿರುತ್ತೆ . ಇದನ್ನು ಚಟ್ನಿ, ಬೆಣ್ಣೆ ಮತ್ತು ಈರುಳ್ಳಿಯೊಂದಿಗೆ ತಿಂದರೆ ಇನ್ನೂ ರುಚಿ.

English summary

Jowari Roti Recipe | Breakfast Recipe | ಜೋಳದ ರೊಟ್ಟಿ ರೆಸಿಪಿ | ಬ್ರೇಕ್ ಫಾಸ್ಟ್ ರೆಸಿಪಿ

Jowar roti is the healthiest Indian bread as it is prepared with zero oil and fat. Know how to make jowar roti this season as it is best to during winter. Look for the procedure to make the famous north karnataka jolada roti.
Story first published: Monday, March 26, 2012, 17:46 [IST]
X
Desktop Bottom Promotion