For Quick Alerts
ALLOW NOTIFICATIONS  
For Daily Alerts

ಹಿಟ್ಟು ಕಲೆಸುವುದರಲ್ಲಿದೆ ಈ ದೋಸೆಯ ರುಚಿ

|
Beetroot Dosa Recipe
ದೋಸೆಯನ್ನು ಬರೀ ಹಿಟ್ಟನ್ನು ಬಳಸಿ ತಯಾರಿಸುವುದಕ್ಕಿಂತ ತರಕಾರಿಯನ್ನು ಹಾಕಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ದೇಹದಲ್ಲಿ ರಕ್ತದ ಉತ್ಪತ್ತಿಯನ್ನು ಹೆಚ್ಚಿಸುವಲ್ಲಿ ಬೀಟ್‌ರೂಟ್ ತುಂಬಾ ಸಹಕಾರಿಯಾಗಿದೆ. ಇವತ್ತು ರುಚಿಕರವಾದ ಬೀಟ್‌ರೂಟ್ ದೋಸೆ ಮಾಡುವ ವಿಧಾನ ತಿಳಿಯೋಣ. ದೋಸೆ ಹಿಟ್ಟಿಗೆ ಬೀಟ್‌ರೂಟ್ ಹಾಕಿದರೆ ಬೀಟ್‌ರೂಟ್ ದೋಸೆ ಆಯಿತು ಅಂದು ಕೊಳ್ಳಬೇಡಿ. ಈ ದೋಸೆಯ ರುಚಿ ಅಡಗಿರುವುದು ಅದರ ಹಿಟ್ಟು ಕಲೆಸುವುದರಲ್ಲಿ. ರುಚಿಕರವಾಗಿ ಬೀಟ್‌ರೂಟ್ ದೋಸೆ ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ಒಂದು ದೊಡ್ಡ್ ಬೀಟ್‌ರೂಟ್
* 1/2 ಕಪ್ ಉದ್ದಿನ ಬೇಳೆ
* 1 ಕಪ್ ಅಕ್ಕಿ ಹಿಟ್ಟು ಅಥವಾ ಒಂದೂವರೆ ಕಪ್ ಅಕ್ಕಿ
* 2-3 ಹಸಿಮೆಣಸಿನ ಕಾಯಿ
* 1 ಚಮಚ ಜೀರಿಗೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
* ಎಣ್ಣೆ

ತಯಾರಿಸುವ ವಿಧಾನ:

1. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು 3 ಗಂಟೆಗಳ ನೀರಿನಲ್ಲಿ ನೆನೆ ಹಾಕಿರಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಅರೆಯಬೇಕು.

2. ನಂತರ ಅಕ್ಕಿಯನ್ನು ತೊಳೆದು ಮಿಕ್ಸಿಯಲ್ಲಿ ಅರೆಯಬೇಕು. ನಂತರ ಅರೆದ ಉದ್ದಿನ ಬೇಳೆ ಮತ್ತು ಹಿಟ್ಟನ್ನು ಮಿಶ್ರ ಮಾಡಿ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು. ಈ ಮಿಶ್ರಣವನ್ನು ಸ್ವಲ್ಪ ಕತ್ತಲೆ ಇರುವ ಜಾಗದಲ್ಲಿ 8 ಗಂಟೆ ಕಾಲ ಇಡಬೇಕು.

3. ಹಸಿ ಮೆಣಸಿನ ಕಾಯಿ ಮತ್ತು ಬೀಟ್‌ರೂಟ್‌ ಕತ್ತರಿಸಿ ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಅರೆಯಬೇಕು. ನಂತರ ಇದನ್ನು ದೋಸೆ ಹಿಟ್ಟಿನ ಜೊತೆ ಮಿಶ್ರ ಮಾಡಬೇಕು. ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಹಾಕಿ ಮಿಶ್ರ ಮಾಡಬೇಕು.

4. ನಂತರ ದೋಸೆ ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ದೋಸೆ ಹುಯ್ಯಬೇಕು.

ಬೀಟ್‌ರೂಟ್‌ ದೋಸೆಯನ್ನು ತೆಂಗಿನ ಕಾಯಿ ಚಟ್ನಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

English summary

Beetroot Dosa Recipe | Variety Of Dosa Recipe | ಬೀಟ್‌ರೂಟ್ ದೋಸೆ ರೆಸಿಪಿ | ಅನೇಕ ಬಗೆಯ ದೋಸೆ ರೆಸಿಪಿ

If you add vegetable to the dosa, it will more tasty and healthy. Beetroot is good for increase the blood in our body.To prepare tasty beetroot dosa you should know some technique. Here is those technique to prepare tasty beetroot dosa.
Story first published: Thursday, May 3, 2012, 15:59 [IST]
X
Desktop Bottom Promotion