For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವ ಭ್ರೂಣದ ಲಿಂಗ ಹೆಣ್ಣೋ/ಗಂಡೋ ನಿರ್ಧಾರವಾಗುವುದು ಯಾವಾಗ?

|

ತಾಯ್ತನ ಎಂಬುವುದು ಒಂದು ಅದ್ಭುತವಾದ ಅನುಭವ. ಒಂಭತ್ತು ತಿಂಗಳು ಮಗುವಿನ ಬೆಳವಣಿಗೆಯ ಒಂದೊಂದು ಹಂತವಿದೆಯೆಲ್ಲಾ ಒಂದು ಹೊಸ ಅನುಭವ. ನಾವು ಎಷ್ಟನೇ ಬಾರಿ ಗರ್ಭಿಣಿಯಾದರೂ ಆ ಗರ್ಭಾವಸ್ಥೆಯಲ್ಲಿ ಒಂದು ಬೇರೆಯದೇ ಖುಷಿ ಇರುತ್ತದೆ. ಚೊಚ್ಚಲ ಬಾರಿ ಗರ್ಭಿಣಿಯಾದಾಗ ತಮ್ಮ ಮೊದಲ ಮಗುವನ್ನು ನೋಡುವ ನಿರೀಕ್ಷೆ. ಅದೇ ಎರಡನೇ ಬಾರಿ ಗರ್ಭಿಣಿಯಾದಾಗ ಯಾವ ಮಗು ಹುಟ್ಟಬೇಕೆಂಬ ನಿರೀಕ್ಷೆ ಹೆಚ್ಚಿರುತ್ತದೆ.

ಮೊದಲನೇ ಮಗು ಗಂಡಾಗಿದ್ದರೆ ಈಗ ಮಗಳು ಹುಟ್ಟಲಿ ಎಂದು ಬಯಸುತ್ತೇವೆ, ಅದೇ ಮೊದಲು ಹೆಣ್ಣಾಗಿದ್ದರೆ ನಂತರದ್ದು ಗಂಡಾಗಲಿ ಎಂದು ಬಯಸುತ್ತೇವೆ. ಆದರೆ ಮಗು ಹೆಣ್ಣಾಗಬೇಕು, ಗಂಡಾಗಬೇಕು ಎಂದು ನಾವು ಬಯಸಬಹುದೇ ಹೊರತು ನಮ್ಮ ಮಗುವಿನ ಲಿಂಗ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮಗುವಿನ ಲಿಂಗ ನಿರ್ಧಾರ ಮಾಡುವುದು ಕ್ರೋಮೋಸೋಮ್ಸ್‌ಗಳಾಗಿವೆ.

ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಲಿಂಗ ಯಾವಾಗ ಮೂಡುತ್ತವೆ, ಕ್ರೋಮೋಸೋಮ್ಸ್‌ ಹೇಗೆ ಲಿಂಗವನ್ನು ನಿರ್ಧರಿಸುತ್ತೆ, ಮಗುವಿನ ಲಿಂಗ ನಿರ್ಧಾರಕ್ಕೆ ಪುರುಷ ಕಾರಣವೋ, ಸ್ತ್ರೀ ಕಾರಣವೋ ಎಂಬ ಮಾಹಿತಿ ತಿಳಿಯೋಣ:

ಹೊಟ್ಟೆಯಲ್ಲಿರುವ ಲಿಂಗವನ್ನು ಯಾವುದು ನಿರ್ಧರಿಸುತ್ತದೆ?

ಹೊಟ್ಟೆಯಲ್ಲಿರುವ ಲಿಂಗವನ್ನು ಯಾವುದು ನಿರ್ಧರಿಸುತ್ತದೆ?

ಲಿಂಗವನ್ನು X ಮತ್ತು y ಕ್ರೋಮೋಸೋಮ್‌ಗಳು ನಿರ್ಧರಿಸುತ್ತವೆ. X ಮತ್ತು Xಕ್ರೋಮೋಸೋಮ್ಸ್‌ ಸೇರಿದರೆ ಮಗು ಹೆಣ್ಣಾಗುತ್ತೆ, X ಮತ್ತು y ಕ್ರೋಮೋಸೋಮ್ಸ್ ಸೇರಿದರೆ ಮಗು ಗಂಡಾಗುತ್ತೆ.

ಮಹಿಳೆಯರ ಅಂಡಾಣುವಿನಲ್ಲಿ X ಕ್ರೋಮೋಸೋಮ್ಸ್‌ ಇರುತ್ತದೆ, ಪುರುಷರ ವೀರ್ಯಾಣುವಿನಲ್ಲಿ X ಮತ್ತು y ಕ್ರೋಮೋಸೋಮ್ಸ್ ಇರುತ್ತೆ. ಪುರುಷರ ಯಾವ ಕ್ರೋಮೋಸೋಮ್ಸ್‌ ಮೊದಲು ಸೇರುತ್ತದೆ ಅದರ ಮೇಲೆ ಹೆಣ್ಣು, ಮತ್ತು ಗಂಡು ಎಂಬ ಲಿಂಗ ನಿರ್ಧಾರವಾಗುತ್ತೆ.

ಮಹಿಳೆಯರ X ಕ್ರೋಮೋಸೋಮ್ಸ್‌ಗೆ ಪುರುಷ X ಕ್ರೋಮೋಸೋಮ್ಸ್ ಮೊದಲು ಸೇರಿದರೆ ಹೆಣ್ಣಾಗುತ್ತೆ, ಅದೇ y ಕ್ರೋಮೋಸೋಮ್ಸ್ ಸೇರಿದರೆ ಮಗು ಗಂಡಾಗುತ್ತೆ.

ಮಗುವಿನ ವರ್ತನೆ ಮೇಲೆ ಜೀನ್ ಪ್ರಭಾವ ಬೀರುತ್ತೆ

ಮಗುವಿನ ವರ್ತನೆ ಮೇಲೆ ಜೀನ್ ಪ್ರಭಾವ ಬೀರುತ್ತೆ

ಲಿಂಗ ಕ್ರೋಮೋಸೋಮ್ಸ್ ನೊಂದಿಗೆ 70 ಇತರ ಜೀನ್ಗಳು ಸೇರಿರುತ್ತೆ, ಇದು ಮಗುವಿನ ಅಂಗ ರಚನೆ, ಮಗುವಿನ ವರ್ತನೆ ಇದರ ಮೇಲೆ ಪ್ರಭಾವ ಬೀರುತ್ತೆ.

ಯಾವಾಗ ಭ್ರೂಣಕ್ಕೆ ಲಿಂಗ ಮೂಡುತ್ತದೆ

ಯಾವಾಗ ಭ್ರೂಣಕ್ಕೆ ಲಿಂಗ ಮೂಡುತ್ತದೆ

ಗರ್ಬಧಾರಣೆಯಾದ 7-12ವಾರದೊಳಗೆ ಮಗುವಿಗೆ ಲಿಂಗ ಮೂಡುತ್ತೆ.

ಪುರುಷ ಲಿಂಗ

ಪುರುಷ ಲಿಂಗ

ಮಹಿಳೆಯ ಅಂಡಾಣುವಿನ X ಕ್ರೋಮೋಸೋಮ್‌ ಜೊತೆಗೆ Y ಕ್ರೋಮೋಸೋಮ್‌ ಮೂಡಿದಾಗ ಪುರುಷ ಲಿಂಗ ಮೂಡುವುದು, ಆಗ ಟೆಸ್ಟೋಸ್ಟೊರೋನೆ ಉತ್ಪತ್ತಿ ಹೆಚ್ಚಾಗುವುದು. ಮಗುವಿನ ಮೂತ್ರ ವಿಸರ್ಜನೆ ಅಂಗ ಸಮಪೂರ್ಣವಾಗಿ ರೂಪುಗೊಳ್ಳಲು 10 ವಾರಗಳು ಬೇಕಾಗುತ್ತದೆ. ಆಗ ಮಗುವಿನ ದೇಹದಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣ ವಯಸ್ಕ ಪುರುಷರ ದೇಹದಲ್ಲಿ ಇರುವಷ್ಟೇ ಇರುತ್ತದೆ, ಗರ್ಭಾಸ್ಥೆ 16-20 ವಾರಗಳಲ್ಲಿ ಕಡಿಮೆಯಾಗುವುದು. ಮಗುವಿನ ಶಿಶ್ನ 3ನೇ ತಿಂಗಳಿನಲ್ಲಿ ಗೋಚರಿಸಲಾರಂಭಿಸುತ್ತದೆ.

ಸ್ತ್ರೀ ಲಿಂಗ

ಸ್ತ್ರೀ ಲಿಂಗ

ಹೆಣ್ಣು ಮಗುವಾದರೆ ಗರ್ಭಕೋಶ ಗರ್ಭಾವಸ್ಥೆಯ 11ರಿಂದ 12ನೇ ವಾರದಲ್ಇ ಉತ್ಪತ್ತಿಯಾಗುತ್ತೆ. 20ನೇ ವಾರದಲ್ಲಿ ಹೆಣ್ಣು ಮಗುವಿನ ದೇಹದಲ್ಲಿ ಸುಮಾರು 7 ಮಿಲಿಯನ್‌ ಅಂಡಾಣುಗಳಿರುತ್ತದೆ, ಆ ಮಗು ಹುಟ್ಟುವಾಗ ಅದರ ಪ್ರಮಾಣ 2 ಮಿಲಿಯನ್‌ಗೆ ಕಡಿಮೆಯಾಗಿರುತ್ತದೆ. ಗಭಾವಸ್ಥೆ 22ನೇ ವಾರದಲ್ಲಿ ಮಗುವಿನ ಜನನೇಂದ್ರೀಯ ಉಂಟಾಗುವುದು.

ಮಗುವಿನ ಲಿಂಗ ಯಾವಾಗ ತಿಳಿಯುತ್ತದೆ?

ಮಗುವಿನ ಲಿಂಗ ಯಾವಾಗ ತಿಳಿಯುತ್ತದೆ?

ಭಾರತದಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ, ಅದು ಕಾನೂನು ಬಾಹಿರ. ವಿದೇಶಗಳಲ್ಲಿ ಮಾಡಲಾಗುವುದು. ಅಲ್ಟ್ರಾಸೌಂಡ್‌ನಲ್ಲಿ 18-22ವಾರಗಳಲ್ಲಿ ಲಿಂಗ ಪತ್ತೆಯಾಗುವುದು. amniocentesis ಮತ್ತು chorionic villus sampling (CVS) ಮೂಲಕ ಮಗುವಿನ ಲಿಂಗ ತಿಳಿಯಲಾಗುವುದು.

ಎಷ್ಟು ಮಕ್ಕಳು ತೃತೀಯ ಲಿಂಗಿಗಳಾಗಿ ಜನಿಸುತ್ತಾರೆ?

ಎಷ್ಟು ಮಕ್ಕಳು ತೃತೀಯ ಲಿಂಗಿಗಳಾಗಿ ಜನಿಸುತ್ತಾರೆ?

ಸುಮಾರು 1000ಕ್ಕೆ 1 ಮಗು ಆ ತೃತೀಯ ಲಿಂಗಿಯಾಗಿ ಹುಟ್ಟಬಹುದು. ಹೊರಗಡೆ ಸ್ತ್ರೀ ರೂಪ ಆದರೆ ಪುರುಷ ಹಾರ್ಮೋನ್‌, ಹೊರಗಡೆ ಪುರುಷ ರೂಪ ಸ್ತ್ರೀ ಒಳಗಡೆ ಸ್ತ್ರೀ ಹಾರ್ಮೋನ್‌ಗಳಿಂದ ಜನಿಸುತ್ತಾರೆ. ಈ ರೀತಿ ಉಂಟಾಗಲು ಕಾರಣವೇನು ಎಂಬುವುದಕ್ಕೆ ನಿಖರ ಸಾಕ್ಷ್ಯಗಳಿಲ್ಲ. ಮಗು ಗರ್ಭದಲ್ಲಿರುವಾಗ NIPT, amniocentesis ಮತ್ತು CVS ಮೂಲಕ ಈ ರೀತಿಯ ಲಿಂಗವನ್ನು ಪತ್ತೆ ಹಚ್ಚಬಹುದು.

ಅದಲ್ಲದೆ ಮಗು ಹುಟ್ಟಿದಾಗ ಗೊತ್ತಾಗಲ್ಲ, ಆ ಮಕ್ಕಳು ಬೆಳೆದು ಹದಿಹರೆಯದ ಪ್ರಾಯಕ್ಕೆ ಬಂದಾಗ ಅವರಿಗೆ ತಿಳಿಯಲಾರಂಭಿಸುತ್ತದೆ.

English summary

When Your Baby's Sex Is Determined? Explained in kannada

When Your Baby's Sex Is Determined? Explained in kannada, Read on...
X
Desktop Bottom Promotion