Just In
Don't Miss
- Movies
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
35ರ ನಂತರ ಗರ್ಭಿಣಿಯಾಗುತ್ತಿದ್ದೀರಾ? ಆರೋಗ್ಯವಂತ ಮಗು ಪಡೆಯಲು ಏನು ಮಾಡಬೇಕು?
ಮಗು ನಿಧಾನಕ್ಕೆ ಮಾಡಿಕೊಳ್ಳುವ, ಈಗಲೇ ಬೇಡ ಎಂದು ಹೇಳುವ ಅನೇಕ ದಂಪತಿಗಳಿದ್ದಾರೆ. ಮೊದಲು ನಮ್ಮ ಕೆರಿಯರ್, ಫೈನಾನ್ಷಿಯಲ್ ಇಂಪ್ರೂವ್ ಮಾಡುವ ನಂತರ ಮಗು ಮಾಡುವ ಎಂದು ಮಗು ಮಾಡುವ ಪ್ಲ್ಯಾನ್ ಮುಂದೂಡುತ್ತಾರೆ. ಹೀಗಾಗಿ ತುಂಬಾ ದಂಪತಿ ಮಗು ಮಾಡಿಕೊಳ್ಳಲು ಮನಸ್ಸು ಮಾಡುವಾಗ ವಯಸ್ಸು 30 ದಾಟುತ್ತಿದೆ.
ನೀವು ಆರೋಗ್ಯವಾಗಿದ್ದರೆ 40ರ ನಂತರ ಕೂಡ ಮಗು ಮಾಡಿಕೊಳ್ಳಬಹುದು, ಎಷ್ಟೋ ಜನರು ತುಂಬಾ ತಡವಾಗಿ ಗರ್ಭಿಣಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡುತ್ತಿದ್ದಾರೆ, ಆದರೆ ಆರೋಗ್ಯಕರ ಮಗುವನ್ನು ಪಡೆಯುವ ದೃಷ್ಟಿಯಿಂದ ನೋಡುವುದಾದರೆ ವಯಸ್ಸು 35 ದಾಟಿದರೆ ಸವಾಲುಗಳು ಅಧಿಕ.
35 ವರ್ಷ ಕಳೆದ ಮೇಲೆ ಗರ್ಭಿಣಿಯಾದರೆ ಅದನ್ನು ವೈದ್ಯಕೀಯ ಭಾಷೆಯಲ್ಲಿ ಜೆರಿಯಾಟ್ರಿಕ್ ಪ್ರೆಗ್ನೆನ್ಸಿ (Geriatric Pregnancy) ಎಂದು ಕರೆಯಲಾಗುವುದು.
35 ವರ್ಷ ಕಳೆದ ಮೇಲೆ ಗರ್ಭಿಣಿಯಾದರೆ ಎದುರಾಗಬಹುದಾದ ಸಮಸ್ಯೆಗಳೇನು? 35 ರ ನಂತರ ಮಗುವಿಗೆ ಪ್ಲ್ಯಾನ್ ಮಾಡಿದರೆ ಪ್ರಯೋಜನಗಳೇನು? ಆರೋಗ್ಯಕರ ಮಗುವನ್ನು ಪಡೆಯುವುದು ಹೇಗೆ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

35ರ ಗರ್ಭಿಣಿಯಾದರೆ ಎದುರಾಗುವ ಸಮಸ್ಯೆಗಳು
* ಅತ್ಯಧಿಕ ರಕ್ತದೊತ್ತಡ (ಗರ್ಭಿಣಿಯ ರಕ್ತದೊತ್ತಡ ಹೆಚ್ಚಾದರೆ ತುಂಬಾನೇ ಅಪಾಯಕಾರಿ, ಇದರಿಂದ ಮಗುವಿನ ಅಂಗಾಂಗಕ್ಕೆ ಹಾನಿಯಾಗಬಹುದು, ಅವಧಿ ಪೂರ್ವ ಮಗು ಜನಿಸುವ ಸಾಧ್ಯತೆ ಹೆಚ್ಚು)
* ಗರ್ಭಾವಸ್ಥೆಯಲ್ಲಿ ಮಧುಮೇಹ
* ಗರ್ಭಪಾತ
* ಮಗು ಸತ್ತು ಹುಟ್ಟುವುದು
* ಸಹಜ ಹೆರಿಗೆ ತೊಂದರೆಯಾಗಿ ಸಿ ಸೆಕ್ಷನ್ ಮಾಡಬೇಕಾಗುವುದು
* ಅವಧಿ ಪೂರ್ವ ಮಗುವಿನ ಜನನ
* ಅತ್ಯಧಿಕ ಕಡಿಮೆ ಮೈ ತೂಕ
* ಮಗುವಿನಲ್ಲಿ ಕ್ರೋಮೋಸೋಮ್ ತೊಂದರೆ ಅಂದ್ರೆ ಡೌನ್ ಸಿಂಡ್ರೋಮ್

35ರ ನಂತರ ಗರ್ಭಧಾರಣೆಯಾದರೆ ಪ್ರಯೋಜನಗಳು
* ವಯಸ್ಸು ಅಧಿಕವಾಗಿರುವುದರಿಂದ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂಬ ಪಕ್ವತೆ ಇರುತ್ತದೆ
* ವಯಸ್ಸಾದ ಮೇಲೆ ಮಕ್ಕಳಾದರೆ ಆ ತಾಯಿಯ ಆಯುಸ್ಸು ಹೆಚ್ಚಿರುತ್ತದಂತೆ
* ವಯಸ್ಸಾದ ತಾಯಿಗೆ ಜನಿಸಿದ ಮಕ್ಕಳು ಆರೋಗ್ಯಕರವಾಗಿದ್ದರೆ ಅವರಲ್ಲಿ ಹೊಂದಾಣಿ, ಬುದ್ಧಿವಂತಿಕೆ ಚೆನ್ನಾಗಿರುತ್ತದೆ.
* ವಯಸ್ಸು 35 ಅಂದ್ರೆ ಲೈಫ್‌ನಲ್ಲಿ ಆಲ್‌ಮೋಸ್ಟ್ ಸೆಟ್ಲ್ ಆಗಿರುವುದರಿಂದ ಮಗುವನ್ನು ಸಾಕಲು, ಅದಕ್ಕೆ ಒಂದೊಳ್ಳೆ ಶಿಕ್ಷಣ ಕೊಡಿಸಲು ಆರ್ಥಕ ತೊಂದರೆಯಿರಲ್ಲ.

35ರ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು ಹೇಗೆ?
ನೀವು 35ರ ನಂತರ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಗರ್ಭಧಾರಣೆಯ ಮುನ್ನ ವೈದ್ಯರನ್ನು ಕಂಡು ಅವರ ಸಲಹೆ -ಸೂಚನೆ ಪಡೆಯಿರಿ. ಅವರು ನಿಮಗೆ ಫಾಲಿಕ್ ಆಮ್ಲ ತೆಗೆದುಕೊಳ್ಲುವಂತೆ ಸೂಚಿಸಬಹುದು. ಗರ್ಭಧಾರಣೆಗೆ ಪ್ರಯತ್ನಿಸುವ 6 ತಿಂಗಳ ಮುಂಚೆಯೇ ಫಾಲಿಕ್ ಆಮ್ಲ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಇನ್ನು ನಿಮಗೆ ಅಗ್ಯತವಿರುವ ಕೆಲ ಸಪ್ಲಿಮೆಂಟ್ಸ್ ಸೂಚಿಸುತ್ತಾರೆ, ಅದನ್ನು ತೆಗೆದುಕೊಳ್ಳಿ.

ಗರ್ಭಿಣಿಯಾದ ಮೇಲೆ ಸರಿಯಾದ ಆರೈಕೆ ಮಾಡಿ
ಮೊದಲ 8 ವಾರಗಳು ಮಗುವಿನ ಬೆಳವಣಿಗೆಗೆ ತುಂಬಾನೇ ಮುಖ್ಯವಾದ ಸಮಯ. ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಿರುವುದರಿಂದ 35 ವರ್ಷದ ದಾಟಿದ ಗರ್ಭಿಣಿಯರು ತುಂಬಾನೇ ಎಚ್ಚರಿಕೆವಹಿಸಬೇಕು. ವೈದ್ಯರು ನಿಮ್ಮ ದೇಹದ ಸ್ಥಿತಿ ನೋಡಿ ನಿಮಗೆ ಸರಿಯಾದ ಸಲಹೆ ಸೂಚನೆ ನೀಡುತ್ತಾರೆ, ಅವುಗಳನ್ನು ತಪ್ಪದೆ ಪಾಲಿಸಿ. ಕಂಪ್ಲೀಟ್ ರೆಸ್ಟ್ ಬೇಕೆಂದರೆ ತಪ್ಪದೆ ಪಾಲಿಸಿ.
ಸ್ಕ್ಯಾನಿಂಗ್ ಮಾಡಿಸಿ, ಇದು ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇನ್ನು ಈ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗದಂತೆ ತುಂಬಾನೇ ಎಚ್ಚರವಹಿಸಬೇಕು.
* ಗರ್ಭಾವಸ್ಥೆಯಲ್ಲಿ ಮಧುಮೇಹ ಬಾರದಂತೆ ಎಚ್ಚರವಹಿಸಿ. ಆರೋಗ್ಯಕರ ಆಹಾರ ಸೇವಿಸಿ. ನಿಮ್ಮ ಆಹಾರದಲ್ಲಿ ತರಕಾರಿ ಅಧಿಕವಿರಲು. ಲಘು ವ್ಯಾಯಾಮ ಅಂದ್ರೆ ವಾಕಿಂಗ್ ಮಾಡಿ, ನಂತರ ಎಕ್ಸ್‌ಪರ್ಟ್ ಸಲಹೆ ಪಡೆದು ಯೋಗ ಅಭ್ಯಾಸ ಮಾಡುವುದರಿಂದ ಮಧುಮೇಹ ಬಾರದಂತೆ ತಡೆಗಟ್ಟಲು ಪ್ರಯತ್ನಿಸಬಹುದು.
* ಈ ಸಮಯದಲ್ಲಿ ಯಾವುದೇ ಟೆನ್ಷನ್ ತೆಗೆದುಕೊಳ್ಳಲು, ಮನಸ್ಸನ್ನು ಧ್ಯಾನ ಕಡೆಗೆ ಗಮನ ಹರಿಸಿ, ಇದು ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.
ಕೊನೆಯಾದಾಗಿ ಪಾಸಿಟಿವ್ ಚಿಂತನೆ ಮಾಡಿ, ನೀವು ಒಳ್ಳೆಯದನ್ನೇ ಯೋಚಿಸಿ, ಆರೋಗ್ಯಕರ ಮಗುವಿನ ಕನಸ್ಸು ಕಾಣಿ, ಎಲ್ಲವೂ ಒಳ್ಳೆಯದೇ ಆಗುತ್ತದೆ.