For Quick Alerts
ALLOW NOTIFICATIONS  
For Daily Alerts

40ರ ಬಳಿಕ ಮಗು ಪಡೆಯಲು ಬೆಸ್ಟ್‌ ಎಗ್‌ ಫ್ರೀಜಿಂಗ್‌ ಒಳ್ಳೆಯದು ಏಕೆ?

|

ನೀವು ಎಗ್‌ ಫ್ರೀಜಿಂಗ್ ಬಗ್ಗೆ ಕೇಳಿದ್ದೀರಾ? ಪ್ರಿಯಂಕಾ ಚೋಪ್ರಾ ಸೇರಿ ಹಲವಾರು ಸೆಲೆಬ್ರಿಟಿಗಳು ಎಗ್‌ಫ್ರೀಜಿಂಗ್‌ ಮಾಡಿದ್ದರು ಎಂಬುವುದನ್ನು
ಓದಿರುತ್ತೀರಿ, ಕೇಳಿರುತ್ತೀರಿ.

ಈ ಎಗ್‌ಫ್ರೀಜಿಂಗ್ ಎಂದರೇನು, ಯಾರು ಇದನ್ನು ಮಾಡಬಹುದು, ಗರ್ಭಧಾರಣೆಯಲ್ಲಿ ಈ ಎಗ್‌ ಫ್ರೀಜಿಂಗ್‌ ಎಷ್ಟು ಸಹಕಾರಿ, ಇದಕ್ಕೆ ತಗುಲುವ ವೆಚ್ಚವೇನು ಎಂಬೆಲ್ಲಾ ಮಾಹಿತಿ ತಿಳಿಯೋಣ:

ಎಗ್‌ ಫ್ರೀಜಿಂಗ್‌ ಎಂದರೇನು?

ಎಗ್‌ ಫ್ರೀಜಿಂಗ್‌ ಎಂದರೇನು?

ಎಗ್‌ ಫ್ರೀಜಿಂಗ್‌ಗೆ ವೈದ್ಯಕೀಯ ಭಾಷೆಯಲ್ಲಿ oocyte cryopreservation ಎಂದು ಕರೆಯಲಾಗುವುದು. ಮಹಿಳೆಯ ದೇಹದಲ್ಲಿ ನೈಸರ್ಗಿಕವಾಗಿ ಬಿಡುಗಡೆಯಾಗಿರುವ ಅಂಡಾಣುಗಳನ್ನು ಪ್ರತ್ಯೇಕಿಸಿ ಅದನ್ನು ಸಂರಕ್ಷಿಸಿ ಇಡುವ ತಂತ್ರಜ್ಞಾನಕ್ಕೆ ಎಗ್‌ ಫ್ರೀಜಿಂಗ್‌ ಎಂದು ಕರೆಯಲಾಗುವುದು.

ಯಾರು ಎಗ್‌ಫ್ರೀಜಿಂಗ್‌ ಮಾಡಬಹುದು?

ಯಾರು ಎಗ್‌ಫ್ರೀಜಿಂಗ್‌ ಮಾಡಬಹುದು?

ನಿಮಗೆ ಮಗುವನ್ನು ಪಡೆಯುವ ಹಂಬಲವಿದೆ ಆದರೆ ವೃತ್ತಿ ಜೀವನದ ಕಾರಣದಿಂದಲೂ, ಮತ್ಯಾವುದೋ ಕಾರಣದಿಂದಲೂ ಈಗ ಮಗುಬೇಡ ಒಂದು 35 ವರ್ಷದ ಬಳಿಕ ಮಗು ಪಡೆಯುವ ಎಂದು ಬಯಸುವುದಾದರೆ ಎಗ್‌ಫ್ರೀಜಿಂಗ್‌ ಮಾಡುವುದು ಅತ್ಯುತ್ತಮವಾದ ಆಯ್ಕೆಯಾಗಿದೆ.

35 ವರ್ಷದ ಬಳಿಕ ಮಗು ಪಡೆಯುವುದಾದರೆ ಎಗ್‌ಫ್ರೀಜಿಂಗ್ ಅತ್ಯುತ್ತಮವಾದ ಆಯ್ಕೆ ಯಾಕೆ?

35 ವರ್ಷದ ಬಳಿಕ ಮಗು ಪಡೆಯುವುದಾದರೆ ಎಗ್‌ಫ್ರೀಜಿಂಗ್ ಅತ್ಯುತ್ತಮವಾದ ಆಯ್ಕೆ ಯಾಕೆ?

ವಯಸ್ಸಾಗುತ್ತಿದ್ದಂತೆ ಅಂಡಾಣುಗಳ ಉತ್ಪತ್ತಿ ಕಡಿಮೆಯಾಗುವುದು ಅದೇ 20-30 ವರ್ಷದೊಳಗೆ ಸಂತಾನೋತ್ಪತ್ತಿ ಸಾಮರ್ಥ್ಯ ತುಂಬಾ ಚೆನ್ನಾಗಿರುತ್ತದೆ. ಆ ಸಾಮರ್ಥ್ಯ 30 ವರ್ಷದ ನಂತರ ಕಡಿಮೆಯಾಗತ್ತಾ ಹೋಗುವುದು. ಆಗ ಗರ್ಭ ನಿಲ್ಲುವುದು ಕಷ್ಟವಾಗುದು. ಅದೇ ಎಗ್‌ ಫ್ರೀಜಿಂಗ್‌ ಮಾಡಿಟ್ಟರೆ ಆ ಫಲವತ್ತತೆಯ ಅಂಡಾಣು ಬಳಸಿ ಗರ್ಭಧಾರಣೆಯಾಗಬಹುದು.

ಎಗ್‌ ಫ್ರೀಜಿಂಗ್‌ ಮಾಡಬೇಕೆ? ಬೇಡ್ವೆ ಎಂಬುವುದು ತಿಳಿಯುವುದು ಹೇಗೆ?

ಎಗ್‌ ಫ್ರೀಜಿಂಗ್‌ ಮಾಡಬೇಕೆ? ಬೇಡ್ವೆ ಎಂಬುವುದು ತಿಳಿಯುವುದು ಹೇಗೆ?

ಅಂಡಾಣು ಬಿಡುಗಡೆ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತೆ. ಕೆಲವರಲ್ಲಿ 40 ಬಳಿಕ ಕೂಡ ಅಂಡಾಣುಗಳ ಉತ್ಪತ್ತಿ ಚೆನ್ನಾಗಿರುತ್ತದೆ ಆದರೆ ಇನ್ನು ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಅಂಡಾಣಗಳ ಉತ್ಪತ್ತಿ ಕಡಿಮೆಯಾಗುವುದು.

ನೀವು AMH (anti-mullerian hormone) ಪರೀಕ್ಷೆ ಮಾಡಿಸಿದರೆ ನಿಮ್ಮ ಅಂಡಾಣುಗಳ ಉತ್ಪತ್ತಿ ಸಾಮರ್ಥ್ಯ ಹೇಗಿರುತ್ತದೆ ಎಂಬುವುದು ತಿಳಿಯುತ್ತದೆ. ಇದೊಂದು ಸರಳವಾದ ರಕ್ತ ಪರೀಕ್ಷೆಯಾಗಿದೆ. ಯಾರಲ್ಲಿ ಅಂಡಾಣುಗಳ ಉತ್ಪತ್ತಿ ಕಡಿಮೆ ಇದೆಯೋ ಅವರು ಭವಿಷ್ಯದಲ್ಲಿ ಮಗು ಪಡೆಯಲು ಬಯಸುವುದಾದರೆ ಅಂಡಾಣುಗಳನ್ನು ಸಂಗ್ರಹಿಸಿಡಬಹುದು.

ಇನ್ನು ಕುಟುಂಬದಲ್ಲಿ ಎಂಡೋಮೆಟ್ರೋಸಿಸ್ ಅಥವಾ ಓವರಿಯನ್‌ ಸಿಸ್ಟ್‌ ಸಮಸ್ಯೆಯ ಇತಿಹಾಸವಿದ್ದರೆ ಅಥವಾ ಮೆನೋಪಾಸ್‌ ಬೇಗನೆ ಪ್ರಾರಂಭವಾಗುವ ಕುಟುಂಬ ಇತಿಹಾಸವಿದ್ದರೆ ಅಂಥವರು ಮಗುವನ್ನು ನಿಧಾನಕ್ಕೆ ಪಡೆಯಲು ಬಯಸುವುದಾದರೆ ಎಗ್‌ಫ್ರೀಜಿಂಗ್‌ ಅತ್ಯುತ್ತಮವಾದ ಆಯ್ಕೆಯಾಗಿದೆ.

ಇನ್ನು ಕ್ಯಾನ್ಸರ್‌ ಟ್ರೀಟ್ಮೆಂಟ್ ಪಡೆಯುವ ಮುನ್ನ ಎಗ್‌ಫ್ರೀಜಿಂಗ್‌ ಮಾಡುವುದು ಒಳ್ಳೆಯದು.

ಯಾವ ವಯಸ್ಸಿನಲ್ಲಿ ಎಗ್‌ಫ್ರೀಜಿಂಗ್ ಮಾಡುವುದು ಒಳ್ಳೆಯದು?

ಯಾವ ವಯಸ್ಸಿನಲ್ಲಿ ಎಗ್‌ಫ್ರೀಜಿಂಗ್ ಮಾಡುವುದು ಒಳ್ಳೆಯದು?

ಎಗ್‌ಫ್ರೀಜಿಂಗ್‌ ಮಾಡುವುದಾದರೆ 20-30 ವರ್ಷದೊಳಗೆ ಮಾಡುವುದು ಒಳ್ಳೆಯದು.

ತಜ್ಞರ ಪ್ರಕಾರ 38 ವರ್ಷದ ಬಳಿಕ ಎಗ್‌ಫ್ರೀಜಿಂಗ್‌ ಮಾಡಿದರೆ ಪ್ರಯೋಜನವಿಲ್ಲ.

ಎಗ್‌ಫ್ರೀಜಿಂಗ್‌ ಮಾಡುವ ವಿಧಾನ:

ಎಗ್‌ಫ್ರೀಜಿಂಗ್‌ ಮಾಡುವ ವಿಧಾನ:

* ಎಗ್‌ಫ್ರೀಜಿಂಗ್‌ ಮಾಡುವುದಾದರೆ 9-14 ದಿನಗಳ ಕೋರ್ಸ್‌ನಲ್ಲಿ ಹಾರ್ಮೋನ್‌ ಇಂಜೆಕ್ಷನ್‌ ತೆಗೆದುಕೊಳ್ಳಬೇಕು.

* ಈ ಇಂಜೆಕ್ಷನ್‌ ಅದಿಕ ಅಂಡಾಣುಗಳನ್ನು ಉತ್ಪಾದಿಸುತ್ತದೆ.

* ಅಲ್ಟ್ರಾಸೌಂಡ್‌ ಮೂಲಕ ಯಾವೆಲ್ಲಾ ಅಂಡಾಣುಗಳ ಫಲವತ್ತತೆಯಾಗಿದೆ ಎಂದು ಪತ್ತೆಹಚ್ಚಲಾಗುವುದು, ರಕ್ತ ಪರೀಕ್ಷೆ ಕೂಡ ಮಾಡಿಸಲಾಗುವುದು.

* ನಂತರ ಜನನೇಂದ್ರೀಯ ಮೂಲಕ ಅಲ್ಟ್ರಾಸೌಂಡ್‌ ನೀಡೆಲ್ ಬಳಸಿ ಗರ್ಭಕೋಶದಿಂದ ಅಂಡಾಶಯದಿಂದ ಪ್ರತ್ಯೇಕಿಸಲಾಗುವುದು.

* ಇದಕ್ಕೆ 20-30 ನಿಮಿಷ ಬೇಕು.

* ಈ ಕಾರ್ಯ ವಿಧಾನದಲ್ಲಿ ಯಾವುದೇ ನೋವಾಗಲ್ಲ

* ಹೀಗೆ ಸಂಗ್ರಹಿಸಿದ ಅಂಡಾಣುಗಳನ್ನು ವರ್ಷಗಟ್ಟಲೆ ಸಂಗ್ರಹಿಸಿ ಇಡಬಹುದು.

* ಗರ್ಭಧಾರಣೆ ಮಾಡಲು ಬಯಸುವಾಗ ಆ ಅಂಡಾಣುಗಳಿಗೆ ಸರಿಯಾದ ಉಷ್ಣಾಂಶ ನೀಡಿ ಫಲವತ್ತತೆ ಹೆಚ್ಚಿಸಿ ಅದಕ್ಕೆ ಒಂದು ವೀರ್ಯಾಣು ಹಾಕಿ ಫಲವತ್ತತೆ ಮಾಡಲಾಗುವುದು. ನಂತರ ಭ್ರೂಣವನ್ನು ಗರ್ಭಾಶಯದ ಒಳಗಡೆ ಸೇರಿಸಲಾಗುವುದು.

ಎಗ್‌ಫ್ರೀಜಿಂಗ್‌ಗೆ ಎಷ್ಟು ಖರ್ಚಾಗಬಹುದು?

ಈ ವಿಧಾನಕ್ಕೆ ಸ್ವಲ್ಪ ಅಧಿಕ ವೆಚ್ಚ ತಗುಲುತ್ತದೆ. ಇದಕ್ಕೆ ವರ್ಷಕ್ಕೆ 70 ಸಾವಿರಕ್ಕೂ ಅಧಿಕ ಖರ್ಚಾಗುವುದು. ಆಸ್ಪತ್ರೆಯಿಂದ ಆಸ್ಪತ್ರೆಗೆ ಈ ವೆಚ್ಚದಲ್ಲಿ ವ್ಯತ್ಯಾಸವಿರುತ್ತದೆ.

English summary

What is Egg Freezing? Best Age to Freeze Your Eggs?

What is Egg Freezing? Best Age to Freeze Your Eggs?, Read on...
Story first published: Monday, May 16, 2022, 11:39 [IST]
X
Desktop Bottom Promotion