For Quick Alerts
ALLOW NOTIFICATIONS  
For Daily Alerts

ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?

|

ಅವಳಿ ಮಕ್ಕಳನ್ನು ಪಡೆಯುವ ಬಯಕೆ ಪ್ರತಿ ತಾಯಿಯಲ್ಲಿಯೂ ಇರುತ್ತದೆ. ಆದರೆ ಈ ಸೌಭಾಗ್ಯವನ್ನು ಎಲ್ಲರಿಗೂ ಆ ದೇವರು ಕರುಣಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿ ಮಕ್ಕಳಾಗುವ ಪ್ರಮಾಣ ಹೆಚ್ಚುತ್ತಿದೆ. ಕೇರಳದ ಒಂದು ಗ್ರಾಮದಲ್ಲಂತೂ ವಿಶ್ವದ ಯಾವುದೇ ಭಾಗದಲ್ಲಿ ಇಲ್ಲದಷ್ಟು ಅವಳಿ ಮಕ್ಕಳಿವೆ. ಸಮೀಕ್ಷೆಯ ಪ್ರಕಾರ, ಕಳೆದ ಮೂವತ್ತು ವರ್ಷಗಳಲ್ಲಿ ಪ್ರತಿ ಸಾವಿರಕ್ಕೆ ಮೂವತ್ತ್ಮೂರು ಪ್ರಕರಣಗಳಲ್ಲಿ ಅವಳಿ ಮಕ್ಕಳಾಗುತ್ತಿರುವುದು ಕಂಡುಬಂದಿದೆ, ಹಾಗೂ ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. ಎಪ್ಪತ್ತೈದು ಹೆಚ್ಚಳ ಕಂಡಿದೆ.

ಅಷ್ಟಕ್ಕೂ, ಎಲ್ಲಾ ತಾಯಿಯರಿಗೆ ಅವಳಿ ಮಕ್ಕಳೇಕೆ ಆಗುತ್ತಿಲ್ಲ? ಇದರ ಹಿಂದಿನ ವಿಶ್ಲೇಷಣೆಯಲ್ಲಿ ಇದಕ್ಕೆ ಹಲವಾರು ಅಂಶಗಳನ್ನು ಗುರುತಿಸಲಾಗಿದೆ. ಫಲವತ್ತತೆ ಹೆಚ್ಚಿಸುವ ಚಿಕಿತ್ಸೆಗಳು, ಸ್ಥೂಲಕಾಯದಲ್ಲಿ ಹೆಚ್ಚಳ ಇವುಗಳಲ್ಲಿ ಕೆಲವು ಪ್ರಮುಖ ಅಂಶಗಳಾಗಿವೆ. ಆದರೆ ಇವುಗಳಿಗೂ ಹೊರತಾದ ಇನ್ನೂ ಹಲವಾರು ಅಂಶಗಳಿವೆ ಹಾಗೂ ನಿರ್ದಿಷ್ಟವಾದ ಒಂದು ಅಂಶವನ್ನು ಹೇಳಲು ಸಾಧ್ಯವಿಲ್ಲ.

ಆದರೆ, ಕೆಲವು ಅಂಶಗಳನ್ನು ಪರಿಗಣಿಸಿದರೆ ಅವಳಿ ಮಕ್ಕಳಾಗುವ ಸಾಧ್ಯತೆ ಇದ್ದರೆ, ಈ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಅವಳಿ ಮಕ್ಕಳಿದ್ದರೆ ಎಲ್ಲವೂ ಸಂತೋಷಕರವಂತೂ ಅಲ್ಲ, ಏಕೆಂದರೆ ಹೆರಿಗೆಯ ಸಮಯ ತಾಯಿಗೂ, ಹೆರಿಗೆ ಮಾಡಿಸುತ್ತಿರುವ ವೈದ್ಯರಿಗೂ ಅತೀವ ಸವಾಲು ಎಸೆಯುವ ಸಂದರ್ಭವಾಗಬಹುದು.

ಅವಳಿ ಮಕ್ಕಳಾಗುವ ಸಾಧ್ಯತೆಗಳೇನು?

ಅವಳಿ ಮಕ್ಕಳಾಗುವ ಸಾಧ್ಯತೆಗಳೇನು?

ಅಮೇರಿಕಾ ಒಂದರಲ್ಲಿಯೇ ಪ್ರತಿ ನೂರು ಹೆರಿಗೆಗಳಲ್ಲಿ ನಾಲ್ಕರಷ್ಟು ಹೆರಿಗೆಗಳಲ್ಲಿ ಅವಳಿ ಮಕ್ಕಳಾಗುತ್ತಿವೆ. ಅಪರೂಪಕ್ಕೆ ತ್ರಿವಳಿಗಳೂ, ಇದಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳೂ ಇರಬಹುದು. ಆದರೆ ಎರಡಕ್ಕಿಂತಲೂ ಹೆಚ್ಚು ಮಕ್ಕಳಾಗಿರುವ ಒಟ್ಟಾರೆ ಪ್ರಕರಣಗಳಲ್ಲಿ ಶೇಖಡಾ ತೊಂಭತ್ತೈದರಷ್ಟು ಮಕ್ಕಳು ಅವಳಿಗಳೇ ಆಗಿರುತ್ತಾರೆ.

ಅವಳಿ ಮಕ್ಕಳಾಗುವ ಸಾಧ್ಯತೆಯನ್ನು ಹೆಚ್ಚಿಸುವ ಎಂಟು ಅಂಶಗಳು:

ಅವಳಿ ಮಕ್ಕಳಾಗುವ ಸಾಧ್ಯತೆಯನ್ನು ಹೆಚ್ಚಿಸುವ ಎಂಟು ಅಂಶಗಳು:

ವಾಸ್ತವದಲ್ಲಿ ಅವಳಿಗಳು ಎಂದಾಕ್ಷಣ ಒಂದೇ ರೂಪದ ಇಬ್ಬರು ಮಕ್ಕಳು ಎಂದು ಅರ್ಥವಲ್ಲ, ಪರಿಪೂರ್ಣವಾಗಿ ಒಂದೇ ರೂಪವನ್ನು ಪಡೆದಿರುವ ಮಕ್ಕಳ ಸಂಖ್ಯೆ ಅತಿ ಅಪರೂಪ. ಪ್ರತಿ ಅವಳಿಗಳಲ್ಲಿಯೂ ಕೊಂಚವಾದರೂ ವ್ಯತ್ಯಾಸ ಇದ್ದೇ ಇರುತ್ತದೆ. ತಂದೆ ತಾಯಿಯರು ಈ ವ್ಯತ್ಯಾಸಗಳಿಂದಲೇ ಮಕ್ಕಳನ್ನು ಗುರುತಿಸುತ್ತಾರೆ. ನೀವು ಗರ್ಭವತಿಯಾಗಬಯಸುತ್ತಿದ್ದು ಅವಳಿ ಮಕ್ಕಳನ್ನು ಹೊಂದುವ ಇಚ್ಛೆ ಹೊಂದಿದ್ದರೆ, ಈ ಅಂಶಗಳು ಈ ಸಾಧ್ಯತೆಯನ್ನು ಹೆಚ್ಚಿಸುತ್ತವೆ:

ಈ ಮಹಿಳೆರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು

ಈ ಮಹಿಳೆರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು

* ನಿಮ್ಮ ಕುಟುಂಬದ ಇತಿಹಾಸದಲ್ಲಿ ಅವಳಿ ಮಕ್ಕಳಾಗಿದ್ದರೆ. ನಿಮಗೆ ಈ ಸಾಧ್ಯತೆ ದುಪ್ಪಟ್ಟಾಗಿರುತ್ತದೆ. ಆದರೆ, ನೆನಪಿರಲಿ, ಈ ಕುಟುಂಬ ಇತಿಹಾಸ ನಿಮ್ಮ ತಾಯಿಯ ಮನೆಯಲ್ಲಿದ್ದರೆ ಮಾತ್ರ ಈ ಸಾಧ್ಯತೆ ಹೆಚ್ಚು. ಒಂದು ವೇಳೆ ಪತಿಯ ಮತ್ತು ತಾಯಿಯ ಮನೆಯ ಎರಡೂ ಕುಟುಂಬಗಳಲ್ಲಿ ಅವಳಿ ಮಕ್ಕಳಿದ್ದರೆ ನಿಮಗೂ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು.

* ಇದಕ್ಕೂ ಮೊದಲ ಹೆರಿಗೆಯಲ್ಲಿ ನಿಮಗೆ ಅವಳಿ ಮಕ್ಕಳಾಗಿದ್ದರೆ, ಇದು ಈಗಲೂ ಸಾಧ್ಯವಾಗಬಹುದು.

* ನೀವು ತಡವಯಸ್ಸಿನಲ್ಲಿ ಗರ್ಭ ಧರಿಸುತ್ತಿದ್ದಿರಬಹುದು. ಸಾಮಾನ್ಯವಾಗಿ ಅವಳಿ ಮಕ್ಕಳಾದ ತಾಯಂದಿರು ನಡುವಯಸ್ಸು ದಾಟಿದ ಮಹಿಳೆಯರೇ ಆಗಿರುತ್ತಾರೆ.

* ಅಧ್ಯಯನಗಳ ಪ್ರಕಾರ, ಮೂವತ್ತೈದು ದಾಟಿದ ಮಹಿಳೆಯರಲ್ಲಿ ಕೋಶಕಗಳನ್ನು ಉತ್ತೇಜಿಸುವ ರಸದೂತಗಳು (follicle stimulating hormone (FSH) ಚಿಕ್ಕ ವಯಸ್ಸಿನ ಮಹಿಳೆಯರಿಗಿಂತ ಹೆಚ್ಚಿರುತ್ತದೆ. ಪರಿಣಾಮವಾಗಿ, ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಅಂಡಾಣುಗಳನ್ನು ಬಿಡುಗಡೆ ಮಾಡಬಹುದು.

* ಹಿಂದಿನ ಗರ್ಭಾವಸ್ಥೆಗಳೂ ಅವಳಿ ಮಕ್ಕಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಂದರೆ ಪ್ರತಿ ಬಾರಿಯ ಗರ್ಭಾವಸ್ಥೆಯೂ ಮಹಿಳೆಯ ದೇಹವನ್ನು ಇನ್ನಷ್ಟು ಪ್ರಬುದ್ಧವಾಗಿಸುತ್ತದೆ ಹಾಗೂ ಒಂದರ ಬದಲು ಎರಡು ಅಂಡಾಣುಗಳು ಬಿಡುಗಡೆಗೊಳ್ಳುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

 ಫಲವತ್ತತೆಯ ಚಿಕಿತ್ಸೆಗೆ ಒಳಗಾಗಿದ್ದರೆ

ಫಲವತ್ತತೆಯ ಚಿಕಿತ್ಸೆಗೆ ಒಳಗಾಗಿದ್ದರೆ

ಸಾಮಾನ್ಯವಾಗಿ, ಈ ಚಿಕಿತ್ಸೆಗಳಿಂದ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚದೇ ಇದ್ದರೂ, ಫಲವತ್ತತೆಯ ಸಾಧ್ಯತೆಯನ್ನು ಹೆಚ್ಚಿಸುವ (ವಿಶೇಷವಾಗಿ, ಅಂಡೋತ್ಪತ್ತಿಯನ್ನು ಉತ್ತೇಜಿಸುವ) ಕ್ರಮಗಳಿಂದ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚುತ್ತದೆ. ಇದುವರೆಗೆ ಜನಿಸಿರುವ ಅವಳಿ ಮಕ್ಕಳಲ್ಲಿ ಪ್ರತಿ ಮೂರರಲ್ಲಿ ಒಂದು ಹಾಗೂ ತ್ರಿವಳಿ (ಅಥವಾ ಇನ್ನೂ ಹೆಚ್ಚು) ಮಕ್ಕಳಾದ ಪ್ರಕರಣದಲ್ಲಿ ಪ್ರತಿ ನಾಲ್ಕರಲ್ಲಿ ಮೂರು ಪ್ರಕರಣ ನಾಲ್ಕು ಮಕ್ಕಳು ಫಲವತ್ತಿಕೆ ಹೆಚ್ಚಿಸುವ ಚಿಕಿತ್ಸೆ ಪಡೆದ ಬಳಿಕ ಜನಿಸಿದ ಮಕ್ಕಳಾಗಿವೆ. ಈ ವಿವರಗಳನ್ನು ಇಂಗ್ಲೆಂಡಿನ ಜರ್ಲಲ್ ಆಫ್ ಮೆಡಿಸಿನ್ ಪತ್ರಿಕೆ ಪ್ರಕಟಿಸಿದೆ.

ನೀವು ಸ್ಥೂಲಕಾಯದ ಮಹಿಳೆಯಾಗಿದ್ದರೆ:

ನೀವು ಸ್ಥೂಲಕಾಯದ ಮಹಿಳೆಯಾಗಿದ್ದರೆ:

ನಿಮ್ಮ ಎತ್ತರಕ್ಕೆ ತಕ್ಕ ತೂಕದ ಮಾಪಕವಾದ ಬಿ ಎಂ ಐ ಕೋಷ್ಟಕ 30 ಕ್ಕೂ ಹೆಚ್ಚಿದ್ದರೆ ಎರಡು ಪ್ರತ್ಯೇಕ ಅಂಡಾಣುಗಳಿಂದ ಇಬ್ಬರು ಮಕ್ಕಳನ್ನು ಪಡೆಯುವ ಸಾಧ್ಯತೆ ಹೆಚ್ಚು ಸಂಶೋಧಕರ ಪ್ರಕಾರ, ಎತ್ತರದ ಮಹಿಳೆಯರು ಇನ್ಸುಲಿನ್ ನಂತಹದ ಬೆಳವಣಿಗೆಯ ಅಂಶವನ್ನು (insulin-like growth factor (IGF) ಹೊಂದಿರುತ್ತಾರೆ. ಇದು ಅಂಡಾಶಯ FSH ಗೆ ಹೆಚ್ಚಿನ ಸಂವೇದನೆಯನ್ನು ಪ್ರಕಟಿಸುವ ಮೂಲಕ ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತದೆ.

ನೀವು ಎತ್ತರದ ಮಹಿಳೆಯಾಗಿದ್ದರೆ: ಸಾಮಾನ್ಯವಾಗಿ ಅವಳಿ ಮಕ್ಕಳಾಗಿರುವ ಮಹಿಳೆಯರು ಎತ್ತರವಾಗಿರುವುದನ್ನು ಗಮನಿಸಲಾಗಿದೆ. (ಒಂದು ಅಧ್ಯಯನದಲ್ಲಿ ಸಾಮಾನ್ಯ ಎತ್ತರಕ್ಕಿಂತಲೂ (5 ಅಡಿ 3 ¾ ಇಂಚು) ಒಂದು ಇಂಚು ಹೆಚ್ಚು ಎತ್ತರ ಇರುವ ಮಹಿಳೆಯರು (5 ಅಡಿ 5 ಇಂಚು) ಅವಳಿ ಮಕ್ಕಳನ್ನು ಪಡೆಯುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಮಹಿಳೆಯರಲ್ಲಿ (IGF) ಮಟ್ಟ ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಅಮೇರಿಕನ್-ಆಫ್ರಿಕನ್ ಮಹಿಳೆಯರು: ವಿಶ್ವ ಮಟ್ಟದಲ್ಲಿ ಪರಿಗಣಿಸಿದಾಗ, ಕಪ್ಪು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯುವ ಸಾಧ್ಯತೆಯನ್ನು ಬಿಳಿಯ ಮಹಿಳೆಯರಿಗಿಂತಲೂ ಹೆಚ್ಚು ಹೊಂದಿರುತ್ತಾರೆ. ಉಳಿದಂತೆ ಏಷ್ಯನ್ನರು, ಸ್ಪಾನಿಶ್ ಮೂಲದ ಮಹಿಳೆಯರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಕಡಿಮೆ.

English summary

What Are the Chances of Having Twins in Kannada

What are the chances of having twins in kannada, read on,
X
Desktop Bottom Promotion