For Quick Alerts
ALLOW NOTIFICATIONS  
For Daily Alerts

ಪ್ರಸವದ ಸೂಚನೆಯಾದ ನೀರಿನ ಒಡೆತ: ಲಕ್ಷಣಗಳೇನು?

|

ಗರ್ಭಾವಸ್ಥೆಯ ಪ್ರತಿಯೊಂದು ಹಂತದಲ್ಲಿ ಶರೀರದಲ್ಲಿ ಹಲವಾರು ಬದಲಾವಣೆಗಳಾಗುತ್ತಿರುತ್ತವೆ. ಇನ್ನು ಏಳು ತಿಂಗಳು ಕಳೆದ ಬಳಿಕ ಹೆರಿಗೆಯ ದಿನಗಳು ಸಮೀಪಿಸುತ್ತಿರುತ್ತದೆ. ಕೆಲವರಿಗೆ ಅವಧಿ ಪೂರ್ವ ಪ್ರಸವ ಸಂಭವಿಸಬಹುದು, ಇನ್ನು ಕೆಲವರಿಗೆ ತಿಂಗಳು ತುಂಬಿದರೂ ಹೆರಿಗೆ ನೋವು ಕಾಣಿಸದೆ ಹೋಗಬಹುದು.
ಆದ್ದರಿಂದ ಏಳು ತಿಂಗಳು ಕಳೆಯುತ್ತಿದ್ದಂತೆ ಯಾವಾಗ ಬೇಕಾದರೂ ಮಗುವಿಗೆ ಜನ್ಮ ನೀಡಬಹುದು. ಆದ್ದರಿಂದ ಈ ಸಮಯದಲ್ಲಿ ಮನೆಯಲ್ಲಿ ಹಿರಿಯ ವಯಸ್ಸಿನ ಮಹಿಳೆಯರು ಹೆರಿಗೆಯಾಗಬಹುದೆಂದು ಕಾಣಿಸುವ ಲಕ್ಷಣಗಳ ಬಗ್ಗೆ ಹೇಳಿರುತ್ತಾರೆ.

Water Breaking Is A Sign Of Labour Pain

ಇನ್ನು ವೈದ್ಯರು ಕೂಡ ಯಾವ ಲಕ್ಷಣಗಳು ಕಂಡು ಬಂದರೆ ತಡಮಾಡದೆ ಆಸ್ಪತ್ರೆಗೆ ಬರಬೇಕೆಂಬ ಸೂಚನೆಯನ್ನು ನೀಡಿರುತ್ತಾರೆ. ಇನ್ನು ಗರ್ಭಾವಸ್ಥೆಯ ಕುರಿತು ತಿಳಿಸುವ ಹಲವಾರು ಆ್ಯಪ್‌ಗಳು ಕೂಡ ಇವೆ.

ಪ್ರಸವವೇದನೆ ಬರುವಾಗ ಕೆಲವರಿಗೆ ಸೊಂಟ ನೋವು ಕಾಣಿಸಿಕೊಳ್ಳುತ್ತದೆ, ಇನ್ನು ಕೆಲವರಿಗೆ ಬಿಟ್ಟು-ಬಿಟ್ಟು ಹೊಟ್ಟೆ ನೋವು ಬರ್ತಾ ಇರುತ್ತದೆ. ಇನ್ನು ಕೆಲವರಿಗೆ ತಿಂಗಳು ತುಂಬಿರುತ್ತದೆ ಆದರೆ ನೋವೇ ಕಂಡು ಬಂದಿರುವುದಿಲ್ಲ ಆದರೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು, ಈ ಸಮಯದಲ್ಲಿ ನೀರಿನ ಒಡೆತ ಉಂಟಾಗಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು, ಇಲ್ಲದಿದ್ದರೆ ಮಗುವಿಗೆ ಅಪಾಯ. ಇಲ್ಲಿ ನಾವು ಪ್ರಸವದ ಲಕ್ಷಣವಾದ ನೀರಿನ ಒಡೆತದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದೇವೆ ನೋಡಿ:

ದೇಹದಿಂದ ದ್ರವದ ಹರಿವಿನ ಬಗ್ಗೆ ಸೂಕ್ಷ್ಮ ಗಮನವಿರಬೇಕು

ದೇಹದಿಂದ ದ್ರವದ ಹರಿವಿನ ಬಗ್ಗೆ ಸೂಕ್ಷ್ಮ ಗಮನವಿರಬೇಕು

ಇದನ್ನು ವಾಟರ್ ಬ್ರೇಕಿಂಗ್‌ ಎಂದು ಕರೆಯುತ್ತಾರೆ. ದೇಹದಿಂದ ಹರಿಯುವ ದ್ರವದ ಹರಿವಿನ ಬಗ್ಗೆ ನೀವು ಸೂಕ್ಷ್ಮವಾದ ಲಕ್ಷ್ಯವನ್ನಿಡಬೇಕು . ಇನ್ನು ಈ ಸಮಯದಲ್ಲಿ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಮದು ಅನಿಸುವುದು, ಹೀಗೆ ಆದಾಗ ಆತಂಕ ಬೇಡ ಹಾಗೂ ತಡಮಾಡುವುದೂ ಬೇಡ ಕೂಡಲೇ ಆಸ್ಪತ್ರೆಗೆ ಹೀಗಿ, ಏಕೆಂದರೆ ಇದು ಪ್ರಸವ ವೇದನೆ ಶುರುವಾಗುವುದರ ಸೂಚನೆಯಾಗಿದೆ.

ಆಮ್ನಿಯೋಟಿಕ್ ಸ್ಯಾಕ್ ಎಂಬ ನೀರಿನ ಪೊರೆ

ಆಮ್ನಿಯೋಟಿಕ್ ಸ್ಯಾಕ್ ಎಂಬ ನೀರಿನ ಪೊರೆ

vಗರ್ಭಾಶಯದಲ್ಲಿ, ಭ್ರೂಣವು ಆಮ್ನಿಯೋಟಿಕ್ ಸ್ಯಾಕ್ ಎಂದು ಕರೆಯಲ್ಪಡುವ ಪೊರೆಯ ಚೀಲದಿಂದ ರಕ್ಷಿಸಲ್ಪಟ್ಟಿದೆ. ಸ್ಕ್ಯಾನಿಂಗ್ ಮಾಡಿಸುವಾಗ ಇದು ಮಗುವಿನ ಸುತ್ತ ಇರುವ ನೀರು ಎಂದು ವೈದ್ಯರು ತೋರಿಸುತ್ತಾರೆ. ಈ ಚೀಲವು ಆಮ್ನಿಯೋಟಿಕ್ ದ್ರವವನ್ನು ಹೊಂದಿರುತ್ತದೆ, ಇದು ಗರ್ಭಧಾರಣೆಯ ಅವಧಿಯಲ್ಲಿ ಮಗುವನ್ನು ರಕ್ಷಿಸುತ್ತದೆ. ಈ ಚೀಲದಲ್ಲಿ ದ್ರವ ಕಡಿಮೆಯಾದರೆ ಮಗುವಿಗೆ ತೊಂದರೆಉಂಟಾಗುವುದು. ಆದ್ದರಿಂದ ಮಗುವಿನ ಸುತ್ತ ಇರುವ ನೀರಿನ ಪ್ರಮಾಣವನ್ನು ಕೂಡ ವೈದ್ಯರು ಗಮನಿಸುತ್ತಾರೆ. ಮೂರನೇ ತ್ರೈಮಾಸಿಕದ ಕೊನೆಯಲ್ಲಿ, ಈ ಚೀಲ ಒಡೆದು, ಆಮ್ನಿಯೋಟಿಕ್ ದ್ರವವನ್ನು ಹೊರಹಾಕುತ್ತದೆ, ಇದು ಕೆಲವು ಹಾರ್ಮೋನುಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಅಂತಿಮವಾಗಿ ಗರ್ಭಾಶಯದ ಸ್ನಾಯುಗಳ ಕುಗ್ಗುವಿಕೆಯನ್ನು ಉಂಟುಮಾಡುತ್ತದೆ.

ಭ್ರೂಣವನ್ನು ಜೋಪಾನ ಮಾಡುವ ನೀರಿನ ಪೊರೆ

ಭ್ರೂಣವನ್ನು ಜೋಪಾನ ಮಾಡುವ ನೀರಿನ ಪೊರೆ

ನೀವು ಸ್ಕ್ಯಾನಿಂಗ್ ಮಾಡಿಸುವಾಗ ಗಮನಿಸಿರಬಹುದು. 34ನೇ ವಾರದಲ್ಲಿ ಆಮ್ನಿಯೋಟಿಕ್ ದ್ರವ ಶೃಂಗಗಳು ಸುಮಾರು 800 ಮಿಲಿಗಳಷ್ಟು ಏರಿಕೆಯಾಗುತ್ತವೆ, ಅದೇ 40 ವಾರ ಕಳೆದ ಮೇಲೆ ಮಾಡಿಸಿದಾಗ ಆದ್ರವವು 600 ಮಿಲಿಗಿಂತಲೂ ಕಡಿಮೆಯಾಗುತ್ತದೆ. ಈ ದ್ರವವು ನಿರಂತರವಾಗಿ ಮಗು ನುಂಗುತ್ತಿರುತ್ತದೆ, ಆ ದ್ರವದಲ್ಲಿಯೇ ಅದರ ಉಸಿರಾಟದ ವಿದ್ಯಾಮಾನ ಸಂಭವಿಸುತ್ತಿರುತ್ತದೆ. ಮಗುವಿನ ಶ್ವಾಸಕೋಶದ ಬೆಳವಣಿಗೆ, ಗರ್ಭಾಶಯದಲ್ಲಿನ ಸ್ಥಿರ ತಾಪಮಾನದ ನಿರ್ವಹಣೆ ಎಲ್ಲವನ್ನು ನಿರ್ವಹಿಸುವಲ್ಲಿ ಈ ದ್ರವದ ಪಾತ್ರ ಪ್ರಮುಖವಾದದ್ದು.

ಮಗು ಹೊರಬರಲು ಸಹಾಯ ಮಾಡುವ ದ್ರವ

ಮಗು ಹೊರಬರಲು ಸಹಾಯ ಮಾಡುವ ದ್ರವ

ಈ ದ್ರವದ ಮತ್ತೊಂದು ಪ್ರಮುಖ ಕಾರ್ಯವೆಂದರೆ ಮಗು ಹೊರ ಬರಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ 44 ವಾರಗಳು ತುಂಬಿದ ಮೇಲೆ ಈ ನೀರು ಹೊರಬರುವುದು. ಆದರೆ ಕೆಲವೊಮ್ಮೆ ಬೇಗನೆ ಕೂಡ ಚೀಲ ಒಡೆದು ನೀರು ಬರಬಹುದು, ಈ ರೀತಿ ಉಂಟಾದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು.

ನೀರು ಒಡೆತ ಉಂಟಾಗಿದೆ ಎಂದು ಕಂಡು ಹಿಡಿಯುವುದು ಹೇಗೆ?

  • ಗರ್ಭಿಣಿಯರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು, ಆದರೆ ನೀರು ಒಡೆತ ಉಂಟಾಗಿದ್ದರೆ ಮೂತ್ರ ವಿಸರ್ಜನೆಗೆ ಹೋದ ಬಳಿಕವೂ ದ್ರವ ಸೋರಿಕೆಯಾಗುತ್ತಿರುತ್ತದೆ.
  • ದ್ರವವು ಹಳದಿಯಾಗಿದ್ದು ಮತ್ತು ಒಂದು ಕಟುವಾದ ವಾಸನೆಯನ್ನು ಹೊಂದಿದ್ದರೆ, ಅದು ಮೂತ್ರವಾಗಿದೆ. ಆದರೆ ದ್ರವವು ಬಣ್ಣವಿಲ್ಲದ ಮತ್ತು ವಾಸನೆಯಿಲ್ಲದದು ಆಗಿದ್ದಲ್ಲಿ , ಇದು ಆಮ್ನಿಯೋಟಿಕ್ ದ್ರವವಾಗಿದೆ.
  • 4.ನಿಮ್ಮ ಶ್ರೋಣಿಯ ಸ್ನಾಯುವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಿ (ನೀವು ಕೆಗೆಲ್ ವ್ಯಾಯಾಮಗಳಲ್ಲಿ ಮಾಡುವಂತೆ) ಮತ್ತು ಹರಿವು ನಿಂತಿದ್ದರೆ ನೋಡಿ. ನಿಂತಿದ್ದಾರೆ ಅದು ಮೂತ್ರ. ಹರಿವು ಮುಂದುವರಿದರೆ, ಅದು ನಿಮ್ಮ ನೀರು ಮುರಿದುಹೋಗಿರುವ ಸಂಕೇತವಾಗಿದೆ.

    ನೀರು ಒಡೆದ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

    ನೀರು ಒಡೆದ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

    ನಿಮ್ಮ ನೀರು ಮುರಿದಾಗಲೇ ನೀವು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು ಇಲ್ಲಿವೆ:

    1. ನಿಮ್ಮ ವೈದ್ಯರಿಗೆ ಕರೆ ಮಾಡಿ ಮತ್ತು ತಕ್ಷಣವೇ ಇದನ್ನು ತಿಳಿಸಿ, ಆದ್ದರಿಂದ ಅವರು ವ್ಯವಸ್ಥೆಯನ್ನು ಅಣಿಗೊಳಿಸಲು ಪ್ರಾರಂಭಿಸಬಹುದು.

    2.ಯೋನಿ ಪ್ರದೇಶವನ್ನು ಸ್ವಚ್ಛಗೊಳಿಸಿ ಮತ್ತು ನಿಮ್ಮ ವೈದ್ಯರು ನೀಡಿದ ಕ್ರಮಗಳನ್ನು ಅನುಸರಿಸಿ.

    3. ಬಟ್ಟೆ ಒದ್ದೆಯಾಗುವುದನ್ನು ತಡೆಯಲು ಮಾತೃತ್ವ ಪ್ಯಾಡ್ಗಳನ್ನು ಅಥವಾ ದಪ್ಪ ಬಟ್ಟೆಯನ್ನು ಬಳಸಿ; ದ್ರವದ ಹರಿವು ಇದ್ದರೆ ನೀವು ಟವಲ್ ಅನ್ನು ಬಳಸಬಹುದು.

    ನೀವು ಬಯಸಿದ ಕ್ಷಣ

    ನೀವು ಬಯಸಿದ ಕ್ಷಣ

    ಯಾವುದೇ ಗರ್ಭಧಾರಣೆಯ ಅಂತ್ಯದಲ್ಲಿ ನೀರಿನ ಒಡೆತವು ಸಾಮಾನ್ಯ ವಿದ್ಯಮಾನವಾಗಿದ್ದರೂ,ಇದು ಪ್ರಸವಕ್ಕೆ ಕಾರಣವಾಗುವುದರಿಂದ ಆತಂಕಕ್ಕೆ ಎಡೆ ಮಾಡಿಕೊಡಬಹುದು . ಅಂತಹ ಸಂದರ್ಭಗಳಲ್ಲಿ, ನಿಮ್ಮ ಸಂಗಾತಿ, ಕುಟುಂಬದ ಸದಸ್ಯರಿಂದ ಅಥವಾ ಹತ್ತಿರದಲ್ಲಿರುವ ಯಾರೊಬ್ಬರಿಂದ ತಕ್ಷಣದ ಸಹಾಯವನ್ನು ಪಡೆದುಕೊಳ್ಳಿ ಮತ್ತು ನಿಮ್ಮನ್ನು ಆಸ್ಪತ್ರೆಗೆ ಹೋಗಲು ಕೇಳಿಕೊಳ್ಳಿ. ಆತಂಕಕ್ಕೆ ಒಳಗಾಗಬೇಡಿ, 9 ತಿಂಗಳು ನೀವು ಎದುರು ನೋಡುತ್ತಿದ್ದ ಕ್ಷಣ, ನಿಮ್ಮ ಕಂದಮ್ಮನನ್ನು ನೋಡುವ ಸಮಯ ಬಂತು ಎಂದು ಖುಷಿ ಪಡಿ.

English summary

Water Breaking Is A Sign Of Labour Pain

How would you know that your water has broken? Here are few signs that will help you know that your water has broken.
Story first published: Tuesday, May 19, 2020, 15:57 [IST]
X
Desktop Bottom Promotion