For Quick Alerts
ALLOW NOTIFICATIONS  
For Daily Alerts

ಗರ್ಭವತಿಯಾಗ ಬಯಸುವುದಾದರೆ ಗಮನಿಸಲೇಬೇಕಾದ ಅಂಶಗಳಿವು

|

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗುತ್ತಿದೆ. ಮಕ್ಕಳಾಗದಿರುವುದಕ್ಕೆ ಜೀವನಶೈಲಿಯಿಂದ ಹಿಡಿದು ಹಲವಾರು ಹಲವಾರು ಕಾರಣಗಳಿರಬಹುದು.

ಕೆಲವರಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಇನ್ನು ಕೆಲವರ ವಯಸ್ಸು ಅಧಿಕವಾಗಿರುತ್ತದೆ, ಮತ್ತೆ ಕೆಲವರಲ್ಲಿ ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ ಹಾಗೂ ಅಂಡೋತ್ಪತ್ತಿ ದಿನಗಳಲ್ಲಿ ಗಂಡ-ಹೆಂಡತಿ ಸೇರದೇ ಇರುವುದು ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳಾಗಲು ತೊಂದರೆ ಉಂಟಾಗುವುದು.

Things to Know Before Getting Pregnant

ಇನ್ನು ಕೆಲವರಲ್ಲಿ ಯಾವುದೇ ಪ್ರಮುಖ ಕಾರಣವಿರಲ್ಲ, ಆದರೂ ಗರ್ಭಧಾರಣೆಯಾಗಿರುವುದಿಲ್ಲ. ಇನ್ನೂ ಕೆಲವರಲ್ಲಿ ಗರ್ಭಧಾರಣಯಾಗದೇ ಇರಲು ನಾವು ಮಾಡುವ ಸಣ್ಣ-ಪುಟ್ಟ ನಿರ್ಲಕ್ಷ್ಯ ಕೂಡ ಕಾರಣವಾಗಿರುತ್ತದೆ.

ಗರ್ಭವತಿಯಾಗ ಬಯಸುವವರು ಕೆಲವೊಂ ದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಬೇಗನೆ ಗರ್ಭಧಾರಣೆಯಾಗುವುದು. ನಾ್ವಿಲ್ಲಿ ಬೇಗನೆ ಗರ್ಭಧಾರಣೆಯಾಗಲು ವೈದ್ಯರು ನೀಡುವ ಪ್ರಮುಖ ಸಲಹೆಗಳೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಎರಡು ದಿನಕ್ಕೊಮ್ಮೆಯಾದರೂ ಮಿಲನಕ್ರಿಯೆ ಮಾಡಬೇಕು

ಎರಡು ದಿನಕ್ಕೊಮ್ಮೆಯಾದರೂ ಮಿಲನಕ್ರಿಯೆ ಮಾಡಬೇಕು

ನಿಮಗೆ ನಿಮ್ಮ ಅಂಡೋತ್ಪತ್ತಿ ದಿನ ಯಾವುದು ಎಂದು ತಿಳಿಯದಿದ್ದರೆ ಪ್ರತಿದಿನ, ತಪ್ಪಿದರೆ ಎರಡು ದಿನಕ್ಕೊಮ್ಮೆ ಮಿಲನಕ್ರಿಯೆ ನಡೆಸುವುದರಿಂದ ಗರ್ಭಧಾರನೆಯಾಗುವ ಸಾಧ್ಯತೆ ಹೆಚ್ಚು. ಮುಟ್ಟಾದ 14ನೇ ದಿನಕ್ಕೆ ಅಂಡೋತ್ಪತ್ತಿಯಾಗುತ್ತದೆ. ಈ ಅಂಡೋತ್ಪತ್ತಿಯ ವಾರದಲ್ಲಿ ತಪ್ಪದೆ ಮಿಲನ ಕ್ರಿಯೆ ನಡೆಸಿದರೆ ಫಲವತ್ತತೆ ಉಂಟಾಗುವ ಸಾಧ್ಯತೆ ಅಧಿಕ.

ಮೈ ತೂಕ ಗಮನಿಸಬೇಕಾದ ಅಂಶ

ಮೈ ತೂಕ ಗಮನಿಸಬೇಕಾದ ಅಂಶ

ಇನ್ನು ಗರ್ಭಧಾರಣೆಯಾಗ ಬಯಸುವವರು ತಮ್ಮ ಮೈ ತೂಕದ ಕಡೆ ಗಮನ ನೀಡಬೇಕು. ತುಂಬಾ ಮೈ ತೂಕ ಹೊಂದಿದ್ದರೆ ಗರ್ಭಧಾರಣೆಗೆ ಪ್ರಯತ್ನಿಸುವ ಮುನ್ನವೇ ಮೈ ತೂಕ ಇಳಿಸಿಕೊಳ್ಳಬೇಕು. ಇನ್ನು ಮೈ ತೂಕ ತುಂಬಾ ಕಡಿಮೆ ಇರುವವರು ಮೈ ತೂಕ ಸ್ವಲ್ಪ ಅಧಿಕವಾಗಲು ಪೌಷ್ಠಿಕ ಆಹಾರದ ಕಡೆಗೆ ಗಮನ ನೀಡಬೇಕು. ಏಕೆಂದರೆ ಆರೋಗ್ಯವಂತೆ ಮಗುವನ್ನು ಪಡೆಯಲು ತಾಯಿಯ ಮೈ ತೂಕ ಪ್ರಮುಖವಾದ ಅಂಶವಾಗಿದೆ. ಮೈ ತೂಕ ತುಂಬಾ ಹೆಚ್ಚಾದರೆ ಅಥವಾ ತುಂಬಾ ಕಡಿಮೆಯಾದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆ.

ಮದ್ಯಪಾನ, ಧೂಮಪಾನದಿಂದ ದೂರವಿರಿ

ಮದ್ಯಪಾನ, ಧೂಮಪಾನದಿಂದ ದೂರವಿರಿ

ಮದ್ಯಪಾನ, ಧೂಮಪಾನ ಮಾಡುವ ಅಭ್ಯಾಸವಿರುವವರು ಗರ್ಭಧಾರಣೆಗೆ ಬಯಸಿದ್ದರೆ ಆ ಅಭ್ಯಾಸ ದೂರವಿಡಲೇಬೇಕು. ಈ ಅಭ್ಯಾಸದಿಂದ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆ, ಒಂದು ವೇಳೆ ಆದರೂ ಮಗುವಿನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು. ಆರೋಗ್ಯವಂತ ಮಗು ಬಯಸಿದ್ದಲ್ಲಿ ಈ ಅಭ್ಯಾಸಗಳಿಂದ ದೂರವಿದ್ದು ಮಗುವಿಗಾಗಿ ಪ್ರಯತ್ನಿಸಿ.

ವ್ಯಾಯಾಮ ಮಾಡಬೇಡಿ

ವ್ಯಾಯಾಮ ಮಾಡಬೇಡಿ

ನೀವು ಗರ್ಭವತಿಯಾಗಲು ಪ್ರಯತ್ನಿಸುತ್ತಿದ್ದರೆ ಕಠಿಣ ವ್ಯಾಯಾಮ ಮಾಡದಿರುವುದು ಒಳ್ಳೆಯದು. ಯೋಗದಲ್ಲಿ ಉಸಿರಾಟಕ್ಕೆ ಸಂಬಂಧ ಪಟ್ಟ ವ್ಯಾಯಾಮ ಮಾಡಬಹುದು. ಅಲ್ಲದೆ ಯಾವುದು ಮಾಡಬಾರದು, ಏನು ಮಾಡಬೇಕು ಎಂಬುವುದಕ್ಕೆ ವೈದ್ಯರ ಬಳಿ ಸಲಹೆ ಕೇಳಿ.

ಆರೋಗ್ಯಕರ ಆಹಾರ ಸೇವನೆ

ಆರೋಗ್ಯಕರ ಆಹಾರ ಸೇವನೆ

ಆರೋಗ್ಯಕರ ಆಹಾರ ಸೇವನೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಉತ್ತಮ ಆರೋಗ್ಯವಾಗಿದ್ದರೆ, ಸಮತೂಕ ಮೈ ಕಟ್ಟು ಹೊಂದಿದ್ದರೆ ಫಲವತ್ತತೆ ಸಾಧ್ಯತೆ ಅಧಿಕ. ಬೀನ್ಸ್, ಧಾನ್ಯಗಳು, ಬೆರ್ರಿ ಹಣ್ಣುಗಳು, ಬೆಣ್ನೆ ಹಣ್ಣು, ನವಣೆ, ಗ್ರೀಕ್ ಯೋಗರ್ಟ್, ಮೀನು, ಮೊಟ್ಟೆ ಈ ರೀತಿಯ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು.

ಸಪ್ಲಿಮೆಂಟ್‌

ಸಪ್ಲಿಮೆಂಟ್‌

ಇನ್ನು ಗರ್ಭಧಾರಣೆಗೆ ಪ್ರಯತ್ನಿಸುವವರಿಗೆ ಕೆಲವೊಂದು ಸಪ್ಲಿಮೆಂಟ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲೂ ಫಾಲಿಕ್ ಆಮ್ಲ, ವಿಟಮಿನ್ ಡಿ, ಫಿಶ್ ಆಯಿಲ್, ಮೆಗ್ನಿಷ್ಯಿಯಂ ಈ ರೀತಿಯ ಸಪ್ಲಿಮೆಂಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಗರ್ಭಧಾರಣೆಗೆ ಪ್ರಯತ್ನಿಸುವ 2-3 ತಿಂಗಳ ಮುಂಚೆಯೇ ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಸಪ್ಲಿಮೆಂಟ್‌ ತೆಗೆದುಕೊಳ್ಳಿ.

ಜೀವನಶೈಲಿ ಕಾರಣದಿಂದಾಗಿ ನೀವು ಗರ್ಭವತಿಯಾಗದಿದ್ದರೆ ಈ ಎಲ್ಲಾ ಅಂಶಗಳನ್ನು ಪಾಲಿಸಿದರೆ ಗರ್ಭವತಿಯಾಗುವ ಸಾಧ್ಯತೆ ಹೆಚ್ಚು.

English summary

Things to Know Before Getting Pregnant in Kannada

Here are things to know before getting pregnant, read on,
X
Desktop Bottom Promotion