For Quick Alerts
ALLOW NOTIFICATIONS  
For Daily Alerts

ಬಂಜೆತನ: ಅವಳಿಗೆ ಮಾತ್ರ ಏಕೆ ಮಾನಸಿಕ ವೇದನೆ? ಈ ನೋವಿನಿಂದ ಹೊರಬರುವುದು ಹೇಗೆ?

|

ಮಕ್ಕಳಿಲ್ಲದ ಮಹಿಳೆಗೆ ಮಾತ್ರ ಬಂಜೆತನದ ನೋವು ಗೊತ್ತಿರುತ್ತದೆ. ಒಂದು ಕಡೆ ತನ್ನ ಮಡಿಲಿನಲ್ಲಿ ಒಂದು ಮಗು ನಲಿದಾಡಬೇಕೆಂಬ ಹಂಬಲ, ಆದರೆ ಅದು ಆಗದೇ ಇದ್ದಾಗ ಕಾಡುವ ಹತಾಶೆ, ಮತ್ತೊಂದೆಡೆ ಸಮಾಜದ ಚುಚ್ಚು ಮಾತು ಅವಳಿಗೆ ಚಾಕುವಿನಿಂದ ಇರಿದಷ್ಟು ನೋವು ಕೊಡುತ್ತಿರುತ್ತದೆ.

ಮಕ್ಕಳಾಗುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ ಎಂಬುವುದನ್ನು ಈ ಸಮಾಜ ಅರ್ಥ ಮಾಡಿಕೊಳ್ಳುವುದೇ ಇಲ್ಲ, ಇನ್ನೂ ಮಕ್ಕಳಾಗಲ್ವಾ, ಏನೂ ಟ್ರೀಟ್ಮೆಂಟ್‌ ತೆಗೆದುಕೊಳ್ಳುತ್ತಿಲ್ವಾ? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ನೋವುಂಟು ಮಾಡುತ್ತಾರೆ.

ಕೆಲವರು ಅಂತು ಮಕ್ಕಳಾಗದಿದ್ದರೇ ಅವಳದ್ದೇ ದೋಷ ಎಂಬಂತೆ ದೂರುತ್ತಾರೆ, ಕೆಲವೊಮ್ಮೆ ಪತಿಯಲ್ಲಿ ದೋಷಗಳಿದ್ದರೂ ಮಕ್ಕಳಾಗಲ್ಲ, ಆದರೆ ಮಕ್ಕಳಾಗದಿದ್ದರೆ ದೂಷಿಸುವುದು ಹೆಣ್ಣನ್ನೇ... ಇವೆಲ್ಲಾ ಅವಳ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ನನ್ನ ಸಂಸಾರ ಹಾಳಾಗಬಹುದೇ ಎಂಬ ಭಯದಲ್ಲಿ ಖಿನ್ನತೆಗೆ ಜಾರುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳಾಗದಿದ್ದರೆ ಅವರನ್ನು ಮಾತಿನಿಂದ ನೋಯಿಸುವ ಕೆಲಸವನ್ನು ಯಾರೂ ಮಾಡಬಾರದು.

ಭಾರತದಲ್ಲಿ ಹೆಚ್ಚಾಗುತ್ತಿದೆ ಬಂಜೆತನ

ಭಾರತದಲ್ಲಿ ಹೆಚ್ಚಾಗುತ್ತಿದೆ ಬಂಜೆತನ

ಭಾರತದಲ್ಲಿ ಬಂಜೆತನ ಸಮಸ್ಯೆ ಶೇ. 15ಷ್ಟು ಹೆಚ್ಚಾಗುತ್ತಿದೆ. ಹಲವು ಕಾರಣಗಳಿಂದಾಗಿ ಮಕ್ಕಳಾಗುತ್ತಿಲ್ಲ. ಕೆರಿಯರ್‌ ಅಂತ ತುಂಬಾ ತಡವಾಗಿ ಮದುವೆಯಾಗುವುದು, ಮದುವೆಯಾದ ಲೈಫ್‌ ಸೆಟಲ್ ಆಗಬೇಕೆಂಬ ಕಾರಣ ಮಕ್ಕಳು ಮಾಡಿಕೊಳ್ಳಲು ತಡ ಮಾಡುವುದು, ಅತ್ಯಧಿಕ ಒತ್ತಡದ ಬದುಕು, ಆಹಾರ, ಜೀವನ ಶೈಲಿ, ಪಿಸಿಒಡಿಯಂಥ ಅನಾರೋಗ್ಯಕರ ಸಮಸ್ಯೆ ಈ ಎಲ್ಲಾ ಕಾರಣಗಳಿಂದಾಗಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ.

ಬಂಜೆತನ ಸಂಸಾರದಲ್ಲಿ ಸಮಸ್ಯೆ ಇರುವುದು?

ಬಂಜೆತನ ಸಂಸಾರದಲ್ಲಿ ಸಮಸ್ಯೆ ಇರುವುದು?

ಅದು ಪತಿ-ಪತ್ನಿಯ ಮೇಲೆ ಅವಲಂಬಿಸಿದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನ ಸಾಗಿಸುವವರು ಏನೇ ಬಂದರೂ ಜೊತೆಯಾಗಿಯೇ ಇರುತ್ತಾರೆ. ಆದರೆ ಕೆಲ ಸಂಸಾರಗಳಲ್ಲಿ ಇದೇ ಕಾರಣಕ್ಕೆ ವಿಚ್ಚೇದನ ಕೂಡ ಸಂಭವಿಸುತ್ತಿದೆ. ಮಾನಸಿಕ ಹಿಂಸೆ ಅಧಿಕವಾಗುತ್ತಿದೆ.

ಬಂಜೆತನ ಹಾಗೂ ಸಮಾಜ ಬೀರುವ ಪ್ರಭಾವ

ಬಂಜೆತನ ಹಾಗೂ ಸಮಾಜ ಬೀರುವ ಪ್ರಭಾವ

ಈ ಸಮಾಜದಲ್ಲಿ ಮಕ್ಕಳಾಗದಿದ್ದರೆ ಸಂಪ್ರದಾಯ ಹೆಸರಿನಲ್ಲಿ ನೋಯಿಸುತ್ತಾರೆ,ಅಂದರೆ ಮಕ್ಕಳಾಗದವರನ್ನು ಏನಾದರೂ ಶುಭ ಕಾರ್ಯಕ್ರಮಕ್ಕೆ ಕರೆಯುವುದಿಲ್ಲ, ಇನ್ನು ಆಡಿಕೊಳ್ಳುವವರ ಸಂಖ್ಯೆ ಅಧಿಕವಿರುತ್ತದೆ. ಕೆಲವು ಕಡೆ ಕುಟುಂಬದಿಂದಲೂ ಬೆಂಬಲ ದೊರೆಯಲ್ಲ. ಈ ಎಲ್ಲಾ ಅಂಶಗಳು ಅವಳ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುತ್ತದೆ.

ಮಕ್ಕಳಾಗದಿದ್ದರೆ ಅವಳಲ್ಲಿ ಮಾತ್ರ ದೋಷವಿದೆಯಿಂದಲ್ಲ

ಮಕ್ಕಳಾಗದಿದ್ದರೆ ಅವಳಲ್ಲಿ ಮಾತ್ರ ದೋಷವಿದೆಯಿಂದಲ್ಲ

ಮಕ್ಕಳಾಗದಿದ್ದರೆ ಹೆಣ್ಣನಲ್ಲಿ ಮಾತ್ರ ದೋಷವಿದೆಯೆಂದಲ್ಲ, ಕೆಲವೊಮ್ಮೆ ಪುರುಷನಲ್ಲಿನ ದೋಷಗಳಿಂದಾಗಿ ಮಕ್ಕಳಾಗಲ್ಲ. ಎಷ್ಟೋ ಮಹಿಳೆಯರು ಭಯದಿಂದ ತಮ್ಮ ಪುರುಷನಿಗೂ ಪರೀಕ್ಷೆ ಮಾಡಿಸುವಂತೆ ಹೇಳುವುದಿಲ್ಲ. ತುಂಬಾ ವರ್ಷಗಳಿಂದ ಪ್ರಯತ್ನಿಸಿ ಮಕ್ಕಳಾಗದಿದ್ದರೆ ಗಂಡ-ಹೆಂಡತಿ ಇಬ್ಬರೂ ಪರೀಕ್ಷೆ ಮಾಡಿಸಿದರೆ ದೋಷ ಯಾರಲ್ಲಿ ಇದೆ ಎಂದು ತಿಳಿಯುತ್ತದೆ, ಅದಕ್ಕೆ ಚಿಕಿತ್ಸೆ ಪಡೆದರೆ ಮಕ್ಕಳನ್ನು ಪಡೆಯುವ ಸಾಧ್ಯತೆ ಹೆಚ್ಚುವುದು.

ತಂತ್ರಜ್ಞಾನಗಳಿವೆ

ತಂತ್ರಜ್ಞಾನಗಳಿವೆ

ವೈದ್ಯಕೀಯ ವಿಜ್ಞಾನ ತುಂಬಾ ಮುಂದುವರೆದಿದೆ. ಸಾಕಷ್ಟು ಸಮಸ್ಯೆಗಳಿಗೆ ಈಗ ಪರಿಹಾರವಿದೆ. ಆದರೆ ಇದಕ್ಕೆಲ್ಲಾ ತುಂಬಾ ಹಣ ಖರ್ಚಾಗುವುದು. ಮಧ್ಯಮ ವರ್ಗದ ಕುಟುಂಬಕ್ಕೆ ಅಷ್ಟೊಂದು ಹಣ ಭರಿಸಲು ಕಷ್ಟವಾಗುವುದು. ಅಂಥವರು ಮಕ್ಕಳಾಗಲಿಲ್ಲ ಎಂದು ಕೊರಗಬೇಡಿ, ನಿಮ್ಮ ಕೈಯಲ್ಲಾಗುವ ಸಹಾಯವನ್ನು ಇತರ ಬಡ ಮಗುವಿಗೆ ಮಾಡಿ.

ಮಕ್ಕಳಾಗಲಿಲ್ಲ ಎಂದು ಕೊರಗುವ ಬದಲಿಗೆ ಬದುಕಿನಲ್ಲಿ ನಿಮಗೆ ಖುಷಿ ಪಡುವ ವಿಚಾರದತ್ತ ಗಮನ ಕೊಡಿ.

ಸಮಾಜ ನೀವು ಅತ್ತರೆ ಮತ್ತಷ್ಟು ಅಳಿಸುತ್ತದೆ, ಆದ್ದರಿಂದ ನಿಮ್ಮ ಮನಸ್ಸಿನ ಖುಷಿಯ ಕಡೆಯಷ್ಟೇ ಗಮನ ನೀಡಿ.

English summary

The emotional-psychological impact on infertile women in Kannada

How infertility impact on emotionaly and psychologicaly, read on....
Story first published: Friday, November 11, 2022, 13:40 [IST]
X
Desktop Bottom Promotion