For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು: ನೀವು ತಿಳಿಯಲೇಬೇಕಾದ ಸಂಗತಿಗಳು

|

ಗರ್ಭಧಾರಣೆ ಮಾಡಿದ ತಕ್ಷಣವೇ ಅದರ ಲಕ್ಷಣಗಳು ಕಾಣಸಿಗುವುದಿಲ್ಲ. ಇದಕ್ಕಾಗಿ ಒಂದು ಸಲದ ಋತುಚಕ್ರವನ್ನು ಕಳೆದುಕೊಳ್ಳಬೇಕು. ಯಾಕೆಂದರೆ ಮೊದಲ ವಾರದಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಲಕ್ಷಣಗಳನ್ನು ಸಾಮಾನ್ಯ ಸಮಸ್ಯೆಗಳೆಂದು ಗೊಂದಲ ಮಾಡಿಕೊಳ್ಳಬೇಕಾಗುತ್ತದೆ.

ಋತುಚಕ್ರ ಕಳೆದುಕೊಂಡ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವಂತಹ ಪ್ರಶ್ನೆಯೆಂದರೆ ನಾನು ಗರ್ಭಿಣಿಯೇ ಎನ್ನುವುದು. ಅದಾಗ್ಯೂ, ಕೆಲವು ಮಹಿಳೆಯರಲ್ಲಿ ಗರ್ಭಧರಿಸಿದ ಮೊದಲ ವಾರದಲ್ಲಿ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುವುದು ತುಂಬಾ ಒಳ್ಳೆಯ ಚಿಹ್ನೆಯಾಗಿದೆ. ಆದರೆ ಇನ್ನು ಕೆಲವೊಂದು ಮಹಿಳೆಯರಿಗೆ ಗರ್ಭಧಾರಣೆಯ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ, ಇದನ್ನು ರಹಸ್ಯ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಆದರೆ ಮಹಿಳೆಯಿಂದ ಮಹಿಳೆಗೆ ಗರ್ಭಧಾರಣೆಯ ಲಕ್ಷಣಗಳು ಭಿನ್ನವಾಗಿ ಇರುವುದು.

Pregnancy

•ತೀವ್ರತೆ
•ನಿರಂತರತೆ
•ಸಮಯ
ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇದೆ.
•ಮೃಧು ಅಥವಾ ಊದಿಕೊಂಡು ಸ್ತನಗಳು
•ನಿಶ್ಯಕ್ತಿ
•ಹಗುರ ರಕ್ತಸ್ರಾವ
•ಸೆಳೆತ
•ವಾಕರಿಕೆ
•ಬಯಕೆ
•ತಲೆನೋವು
•ಮಲಬದ್ಧತೆ
•ಮನಸ್ಥಿತಿ ಬದಲಾವಣೆ

Most Read: ಹುಟ್ಟುವ ಮಗು ಗಂಡೋ ಹೆಣ್ಣೋ? ಈ ಸಂಜ್ಞೆಗಳ ಮೂಲಕ ತಿಳಿಯಬಹುದು!!

ಗರ್ಭಧಾರಣೆಯಾದ ಮರುದಿನವೇ ಯಾವುದೇ ಗರ್ಭಧಾರಣೆಯ ಪರೀಕ್ಷೆಯು ನಿಮಗೆ ಸ್ಪಷ್ಟ ವರದಿಯನ್ನು ನೀಡಲಾರದು. ಕೆಲವೊಂದು ಪರೀಕ್ಷೆಗಳು ನಿಖರವಾಗಿರುವುದು. ಆದರೆ ಇದು ಗರ್ಭಧಾರಣೆ ಮಾಡಿದ 4-6 ದಿನಗಳ ಬಳಿಕ ಮಾತ್ರ. ಗರ್ಭಧಾರಣೆಯ ಕೆಲವೊಂದು ಚಿಹ್ನೆಗಳನ್ನು ನೀವು ತಿಳಿಯಿರಿ.

ಋತುಚಕ್ರ ಕಳೆದುಕೊಳ್ಳುವುದು

ಗರ್ಭಧರಿಸಿದ ಬಳಿಕ ಕಾಣಿಸಿಕೊಳ್ಳುವ ಮೊದಲ ಚಿಹ್ನೆಯೆಂದರೆ ಅದು ಋತುಚಕ್ರ ಕಳೆದುಕೊಳ್ಳುವುದು. ಭ್ರೂನವು ಗರ್ಭಕೋಶಕ್ಕೆ ಅಂಟಿಕೊಳ್ಳುವ ಕಾರಣದಿಂದಾಗಿ ಸ್ವಲ್ಪ ಮಟ್ಟಿನ ರಕ್ತಸ್ರಾವಾಗಿ ನಿಮಗೆ ಗೊಂದಲವಾಗಬಹುದು. ಅದಾಗ್ಯೂ, ರಕ್ತದ ಗಾಢತೆ ಪರೀಕ್ಷೆ ಮಾಡಿಕೊಳ್ಳಬೇಕು. ಗರ್ಭಧಾರಣೆ ವೇಳೆ ಕಂಡುಬರುವ ರಕ್ತವು ಋತುಚಕ್ರದ ವೇಳೆ ಇರುವಂತಹ ರಕ್ತದಷ್ಟು ಗಾಢವಾಗಿರದು ಮತ್ತು ದಪ್ಪವಾಗಿರಲ್ಲ.ಋತುಚಕ್ರ ಕಳೆದುಕೊಂಡ ಬಳಿಕ ನಿಮಗೆ ಕಂಡುಬರುವಂತಹ ಮೊದಲ ಲಕ್ಷಣವು ಇದಾಗಿದೆ. ಇದು ಗರ್ಭಧಾರಣೆಯ ಮೊದಲ ಲಕ್ಷಣವಾಗಿದೆ ಮತ್ತು ಮಹಿಳೆಯರು ಇನ್ನು ಕೆಲವೊಂದು ಲಕ್ಷಣಗಳಿಗಾಗಿ ಹುಡುಕಾಡಬಹುದು.

ಸ್ತನಗಳು ಊದಿಕೊಳ್ಳುವುದು

ನಿಮಗೆ ಗರ್ಭಧಾರಣೆಯ ಸೂಚನೆ ಹಾಗೂ ಲಕ್ಷಣಗಳು ಕಂಡುಬಂದರೆ ಆಗ ನೀವು ವೈದ್ಯರನ್ನು ಹೋಗಿ ಭೇಟಿಯಾಗಿ. ನೋವು ಮತ್ತು ಊದಿಕೊಂಡಿರುವ ಸ್ತನಗಳು ಗರ್ಭಧಾರಣೆಯ ಮೊದಲ ಲಕ್ಷಣಗಳು. ಅದರಲ್ಲೂ ಕೆಲವೊಮ್ಮೆ ಒಳಉಡುಪು ಅಚಾನಕ್ಕಾಗಿ ಬಿಗಿಯಾಗುವುದು ನಿಮ್ಮ ಸ್ತನಗಳ ನರಗಳು ಹಿಗ್ಗುವುದರ ಮೂಲಕ ಗಾತ್ರವೂ ಕೂಡ ಹಿಗ್ಗಿದಂತಿರುತ್ತದೆ. ಒಳಡುಪನ್ನು ಧರಿಸುವುದು ಕಿರಿಕಿರಿಯೆನಿಸುವುದು ಸಾಮನ್ಯವಾಗಿ ಕಂಡುಬರುವಂತಹ ಲಕ್ಷಣವಾಗಿದೆ. ಇಂತಹ ಸಂದರ್ಭಗಳಲ್ಲಿ ಆರಾಮದಾಯಕವೆನಿಸುವ ಸ್ಫೋರ್ಟ್ಸ್ ಒಳಡುಪುಗಳನ್ನು ಧರಿಸಬಹುದು. ಅಷ್ಟೇ ಅಲ್ಲದೆ ಸ್ತನದ ತುದಿಗಳ ಗಾತ್ರ ಹಿಗುಗುವುದು ಮತ್ತು ಸ್ತನದ ನಿಪ್ಪಲ್ಲುಗಳ ಬಣ್ಣ ಬದಲಾಗುವುದೂ ಕೂಡ ನೀವು ಗರ್ಭಿಣಿ ಎನ್ನುವ ಲಕ್ಷಣವನ್ನು ತೋರಿಸುತ್ತದೆ. ಆದ್ದರಿಂದಲೇ ಬೇಸಿಗೆಯ ದಿನಗಳಲ್ಲಿ ಗರ್ಭಿಣಿಯರು ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲವೆನ್ನಲಾಗುತ್ತದೆ. ಅಷ್ಟೇ ಅಲ್ಲದೆ ಕೆಲವು ಆಹಾರ ಪದಾರ್ಥಗಳ ಬಗೆಗೆ ಒಲವು ಮತ್ತು ಕೆಲವು ಆಹಾರ ಪದಾರ್ಥಗಳನ್ನು ದೂರವಿಡಿಸುವುದು ಹಿಂದೆಂದೂ ತಿನ್ನಲು ಇಚ್ಚಿಸದ ಕೆಲವು ಆಹಾರಪದಾರ್ಥಗಳು ರುಚಿಕರವೆನಿಸುವುದು ಮತ್ತು ಅವುಗಳನ್ನು ತಿನ್ನುವ ಹಂಬಲ ಉಂಟಾಗುವುದು. ಹಾಗೆಯೇ ನಿಮಗೆ ರುಚಿಸುವ ಆಹಾರವೂ ರುಚಿಸದೇ ಇರುವುದು ಈ ಎರಡೂ ಬಗೆಯ ಲಕ್ಷಣಗಳೂ ಗರ್ಭಿಣಿಯರಲ್ಲಿ ಸಹಜವಾಗಿ ಕಂಡುಬರುವಂತಹುದು. ಒಂದು ಗಮನಿಸಬೇಕಾದ ಅಂಶವೆಂದರೆ ಆಹರಪದಾರ್ಥಗಳಲ್ಲಿ ನಿಯಮಿತ ಆಯ್ಕೆಗಳನ್ನು ಹೊಂದಿರುವುದು ಆರೋಗ್ಯಕರ ಸಂಗತಿಯಾಗಿರದು. ಎಲ್ಲಾ ಬಗೆಯ ಆಹರವನ್ನೂ ತಿನ್ನುವಂತಹ ಕ್ರಮವನ್ನು ರೂಢಿಸಿಕೊಂಡಿರುವುದು ಅವಶ್ಯಕವಾದುದಾಗಿದೆ. ಕೆಲವು ಮಹಿಳೆಯರಲ್ಲಿ ಗರ್ಭಿಣಿಯಾಗಿದ್ದಾಗ ಕೆಲವು ಆಹಾರ ಪದಾರ್ಥಗಳ ಪರಿಮಳವನ್ನು ತೆಗೆದುಕೊಂಡರೂ ವಾಂತಿ ಅಥವ ವಾಕರಿಕೆಯಾಗುವುದನ್ನು ಕಾಣಬಹುದಾಗಿದೆ.

ನಿಶ್ಯಕ್ತಿ

ಗರ್ಭಧಾರಣೆ ವೇಳೆ ನಿಶ್ಯಕ್ತಿಯು ಕಾಡುವುದು. ಯಾವುದೇ ಕಾರಣವಿಲ್ಲದೆ ನಿಮಗೆ ಆಯಾಸವಾಗುತ್ತಲಿದ್ದರೆ ಆಗ ನೀವು ಗರ್ಭ ಧರಿಸಿರುವಂತಹ ಸಾಧ್ಯತೆಯು ಇದೆ.

ವಾಕರಿಕೆ(ವಾಂತಿ ಬರುವುದು ಅಥವಾ ಬರದೇ ಇರುವುದು)

ಗರ್ಭಧಾರಣೆ ವೇಳೆ ವಾಕರಿಕೆಯು ಒಂದು ಪ್ರಮುಖ ಲಕ್ಷಣವಾಗಿರುವುದು. ಇದು ಯಾವುದೇ ಸಮಯದಲ್ಲೂ ಕಾಣಿಸಿಕೊಳ್ಳಬಹುದು. ಕೆಲವು ಮಹಿಳೆಯರಿಗೆ ಗರ್ಭಧರಿಸಿದ ಎರಡು ವಾರಗಳಲ್ಲಿ ಇದು ಕಾಣಿಸಬಹುದು. ಗರ್ಭಿಣಿ ಮಹಿಳೆಯರಿಗೆ ಕೆಲವೊಂದು ರೀತಿಯ ವಾಸನೆಯಾದ ಆಹಾರ ಬೇಯಿಸುವುದು, ಪರ್ಫ್ಯೂಮ್ ಮತ್ತು ಸಿಗರೇಟ್ ನ ಹೊಗೆಯಿಂದ ವಾಕರಿಕೆ ಬರುವುದು. ಇದು ಗರ್ಭಧಾರಣೆಯ ಕೆಲವು ಲಕ್ಷಣವಾಗಿರಬಹುದು.

ಇತರ ಲಕ್ಷಣಗಳು

ಗರ್ಭಧಾರಣೆ ಮೊದಲು ಎರಡು ವಾರಗಳಲ್ಲಿ ಕಾಣಿಸಿಕೊಳ್ಳುವ ಗರ್ಭಧಾರಣೆಯ ಲಕ್ಷಣಗಳೆಂದರೆ ಅದು ಸ್ತನಗಳು ಮೃಧುವಾಗುವುದು, ನಿರಂತರವಾಗಿ ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ ಮತ್ತು ಆಹಾರಕ್ಕಾಗಿ ಬಯಕೆ. ಈ ಎಲ್ಲಾ ಲಕ್ಷಣಗಳು ಕೆಲವೊಂದು ಸಲ ಗರ್ಭಧರಿಸದೆ ಇರುವಾಗಲು ಬರಬಹುದು. ನಿಮಗೆ ಗರ್ಭಧರಿಸುವ ಬಗ್ಗೆ ಆತಂಕವಿದ್ದರೆ ಆಗ ಮಾನಸಿಕವಾಗಿ ಇದು ನಿಮಗೆ ತೊಂದರೆ ನೀಡಬಹುದು. ಆದರೆ ಇದು ದೃಢವಲ್ಲ. ಇದರಿಂದಾಗಿಯೇ ಮನೆಯಲ್ಲಿ ಕೆಲವೊಂದು ಗರ್ಭಧಾರಣೆಯ ಪರೀಕ್ಷೆಗಳು ಇಂದಿಗೂ ಜನಪ್ರಿಯವಾಗಿದೆ. ಇವುಗಳು ಗರ್ಭಧಾರಣೆ ಆಗಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ಸೂಚಿಸುತ್ತದೆ. ಆದರೆ ರಕ್ತ ಪರೀಕ್ಷೆ ಮಾಡಿಕೊಂಡು ಇದನ್ನು ದೃಢಪಡಿಸಿ.

ಆದರೆ ಗರ್ಭಧರಿಸಿದ ಮರುದಿನವೇ ಯಾವುದೇ ಪರೀಕ್ಷೆ ಕೂಡ ನೀವು ಗರ್ಭಧಾರಣೆ ಮಾಡಿದ್ದೀರಿ ಎಂದು ಹೇಳದು. ಕೆಲವೊಂದು ಗರ್ಭಧಾರಣೆಯ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳಬೇಕು. ಈ ಎಲ್ಲಾ ಲಕ್ಷಣಗಳು ಮೊದಲ ವಾರದಿಂದ ನಾಲ್ಕನೇ ವಾರದಲ್ಲಿ ಕಾಣಿಸಿಕೊಳ್ಳುವುದು. ಗರ್ಭಧರಿಸಿದ್ದೀರಿ ಎಂದು ಅನಿಸಿದರೆ ಆಗ ವೈದ್ಯರನ್ನು ಭೇಟಿಯಾಗಿ. ಮಗುವಿಗಾಗಿ ನೀವು ತಯಾರಿ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.

English summary

Symptoms Of Pregnancy-Things you must Know

Symptoms of pregnancy the day after conception are not observable. You will have to wait till you miss your period because even in the first week, the symptoms that show can be easily confused with common illnesses. First symptoms of pregnancy days after conception: Am I pregnant? This is a general thought in every woman's life whenever they miss periods. However, for some women, it's a blessing that the earliest signs of pregnancy appear in the first few weeks after conception. But for some women, it is really difficult to detect because they are facing the cryptic pregnancy. Signs of pregnancy can also vary in their
Story first published: Thursday, July 25, 2019, 16:08 [IST]
X
Desktop Bottom Promotion