For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ

|

ವಿಶ್ವ ಕ್ಯಾನ್ಸರ್ ದಿನವಾದ ಫೆಬ್ರವರಿ 4ರಂದು HCG ಕ್ಯಾನ್ಸರ್ ಆಸ್ಪತ್ರೆ ಮತ್ತು ಮಿಲಾನ್ನ ಫರ್ಟಿಲಿಟಿ ಆಸ್ಪತ್ರೆ ಜೊತೆಯಾಗಿ ಕ್ಯಾನ್ಸರ್‌ ರೋಗಿಗಳಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಮುನ್ನ ಫರ್ಟಿಲಿಟಿ ಸಂರಕ್ಷಿಸಿಡುವುದರ ಬಗ್ಗೆ ಜಾಗೃತಿ ಮೂಡಿಸಿದ್ದರು.

Pregncay After Cancer: Can We Preserve Fertility Before Cancer Treatment, Here is how Do

ಕ್ಯಾನ್ಸರ್‌ ರೋಗಿಳು ಕೀಮೋ ಚಿಕಿತ್ಸೆಗೆ ಒಳಗಾದಾಗ ಅದು ಅವರ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುವುದು, ಈ ಕಾರಣದಿಂದಾಗಿ ಕ್ಯಾನ್ಸರ್‌ ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ಫರ್ಟಿಲಿಟಿ ಸಂರಕ್ಷಿಸುವುದು ಒಳ್ಳೆಯದು, ಇದರ ಕುರಿತ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ನೋಡೋಣ:

ಕ್ಯಾನ್ಸರ್ ಚಿಕಿತ್ಸೆಯ ನಂತರ ಗರ್ಭಧಾರಣೆ

ಕ್ಯಾನ್ಸರ್‌ ಚಿಕಿತ್ಸೆಯ ನಂತರ ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗುವುದರಿಂದ ಗರ್ಭಧಾರಣೆ ಕಷ್ಟವಾಗುವುದು. ಈ ಬಗೆಯ ಸಮಸ್ಯೆ ಪುರುಷ ಹಾಗೂ ಮಹಿಳೆ ಇಬ್ಬರಲ್ಲ ಕಂಡು ಬರುತ್ತದೆ, ಆದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಮಗು ಪಡೆಯಲು ಬಯಸುವುದಾದರೆ ನಿಮ್ಮ ವೀರ್ಯಾಣು ಅಥವಾ ಅಂಡಾಣುಗಳಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ಸಂರಕ್ಷಿಸುವುದು ಒಳ್ಳೆಯದು.

ಏಕೆ?

ಕ್ಯಾನ್ಸರ್‌ ಚಿಕಿತ್ಸೆ ಗರ್ಭಧಾರಣೆಯ ಹಲವು ರೀತಿಯಲ್ಲಿ ಅಡ್ಡಪರಿಣಾಮ ಬೀರುವುದು

* ರೇಡಿಯೇಷನ್ ಥೆರಪಿ: ರೇಡಿಯೇಷನ್‌ ಮಾಡಿಸಿದಾಗ ಸಪೋರ್ಟ್‌ ಸೆಲ್‌ ಹಾಗೂ ಯೂಟ್ರಸ್‌ಗೆ ರಕ್ತ ಸಂಚಾರಕ್ಕೆ ತೊಂದರೆ ಉಂಟಾಗುವುದು, ಇದರಿಂದಾಗಿ ಗರ್ಭಪಾತ, ಅವಧಿ ಪೂರ್ವ ಹೆರಿಗೆ, ಕಡಿಮೆ ತೂಕದ ಮಗು ಜನಿಸುವುದು ಹೀಗೆ ಅನೇಕ ಸಮಸ್ಯೆ ಉಂಟಾಗುವುದು.

ಗರ್ಭಕಂಠ ( cervix)ದ ಸರ್ಜರಿ ಮಾಡಿಸಿದಾಗ : ಗರ್ಭಕಂಠದ ಸರ್ಜರಿಯಾದಾಗ ಗರ್ಭಪಾತವಾಗುವುದು ಅಥವಾ ಗರ್ಭಧಾರಣೆಗೆ ತೊಂದರೆ ಉಂಟಾಗುವುದು.

ಕೀಮೋಥೆರಪಿ: ಕೀಮೋಥೆರಪಿಯಲ್ಲಿ ಬಳಸುವ Anthracycline,daunorubicin, epirubicin ಈ ಬಗೆಯ ಔಷಧಗಳು ಕೂಡ ಗರ್ಭಧಾರಣೆಯ ಮೇಲೆ ಪ್ರಭಾವ ಬೀರುವುದು.

ಆದರೆ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗುವಾಗ ಗರ್ಭಧಾರಣೆಗೆ ಬಗ್ಗೆ ಚಿಂತಿಸುವುದು ಕಡಿಮೆ

ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಗಾಬರಿ ಬೀಳುವುದು ಸಹಜ. ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗುವಾಗ ಮುಂದೆ ಗರ್ಭಧರಿಸುವುದರ ಬಗ್ಗೆ ಯೋಚಿಸುವುದು ಕಡಿಮೆ. ಕ್ಯಾನ್ಸರ್‌ ಅಂದ ತಕ್ಷಣ ಗಾಬರಿ ಪಡಬೇಕಾಗಿಲ್ಲ, ಸೂಕ್ತ ಚಿಕಿತ್ಸೆ ಹಾಗೂ ಭರವಸೆ, ಆತ್ಮವಿಶ್ವಾಸದಿಂದ ಕ್ಯಾನ್ಸರ್ ಗೆದ್ದವರು ನಮ್ಮ ನಡುವೆ ಇದ್ದಾರೆ. ಆದ್ದರಿಂದ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭಿಸುವ ಮುನ್ನವೇ ವೀರ್ಯಾಣು ಅಥವಾ ಅಂಡಾಣು ಸಂರಕ್ಷಿಸಿಡುವುದು ಒಳ್ಳೆಯದು.

ಫರ್ಟಿಲಿಟಿ ಸಂರಕ್ಷಣೆ ವಿಧಾನಗಳಾವುವು?

ವಯಸ್ಸು, ಲಿಂಗ ಹಾಗೂ ಯಾವ ವಿಧದ ಕ್ಯಾನ್ಸರ್ ಇವುಗಳನನ್ನು ಮೊದಲು ಗಮನಿಸಲಾಗುವುದು. ಫರ್ಟಿಲಿಟಿ ಸಂರಕ್ಷಣೆಯ ಸಾಮಾನ್ಯ ವಿಧಾನಗಳೆಂದರೆ ಸ್ಪರ್ಮ್ ಕ್ರಿಯೋಪ್ರಿಸರ್ವೇಶನ್(Sperm Cryopreservation)ಓಸೈಟ್ ಕ್ರಿಯೋಪ್ರಿಸರ್ವೇಶನ್(Oocyte Cryopreservation)ಹಾಗೂ ಎಂಬ್ರಾಯೋ ಕ್ರಿಯೋಪ್ರಿಸರ್ವೇಶನ್ (Embryo Cryopreservation).

ಈ ವಿಧಾನದಲ್ಲಿ ಅಂಡಾಣು ಹಾಗೂ ವೀರ್ಯಾಣು ಸಂರಕ್ಷಿಸಿದರೆ ಕ್ಯಾನ್ಸರ್‌ ಚಿಕಿತ್ಸೆ ಮುಗಿದ ಬಳಿಕ ವೈದ್ಯರ ಸಲಹೆ ಪಡೆದು ಗರ್ಭಧಾರಣೆಯಾಗಬಹುದು.

ಯೌವನ ಪ್ರಾಯದ ಹೆಣ್ಮಕ್ಕಳಿಗೆ ಕ್ಯಾನ್ಸರ್ ಬಂದರೆ ಅವರು ಕ್ಯಾನ್ಸರ್‌ ಚಿಕಿತ್ಸೆ ಪಡೆಯುವಾಗ ಅವರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರದಿರಲು ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು:

*ಎಗ್‌ ಫ್ರೀಜಿಂಗ್: ಇದರಲ್ಲಿ ಗರ್ಭಕೋಶದಿಂದ ಅಂಡಾಣುಗಳನ್ನು ತೆಗೆದು ಶೈತಲೀಕರಿಸಿ ಇರಿಸಿ ಇಡಲಾಗುವುದು, ನಂತರ ಆ ಅಂಡಾಣುವನ್ನು ವೀರ್ಯಾಣು ಜೊತೆ ಸೇರಿಸಿ ಫಲವತ್ತತೆ ಮಾಡಿ ನಂತರ ಗರ್ಭಕೋಶದಲ್ಲಿ ಇರಿಸಲಾಗುವುದು.

ಭ್ರೂಣ ಸಂಗ್ರಹಿಸಿಡುವುದು: ಇದರಲ್ಲಿ ಅಂಡಾಣು ಜೊತೆ ವೀರ್ಯಾಣು ಸೇರಿಸಿ ಭ್ರೂಣ ಮಾಡಿ ಶೈತಲೀಕರಿಸಲಾಗುವುದು, ನಂತರ ದಂಪತಿ ಮಗು ಬೇಕೆಂದು ಬಯಸಿದಾಗ ಬಳಸಲಾಗುವುದು.

ಗರ್ಭಕೋಶವನ್ನು ಶೀಲ್ಡ್‌ ಮಾಡುವುದು: ಈ ವಿಧಾನದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಕೀಮೋ ಚಿಕಿತ್ಸೆ ಕೊಡುವಾಗ ಹೊಟ್ಟೆ ಭಾಗ ಹಾಗೂ ಸಂತಾನೋತ್ಪತ್ತಿ ಭಾಗದ ಮೇಲೆ ರೇಡಿಯೇಷನ್ ಬೀರದಂತೆ ವೈಜ್ಞಾನಿಕ ವಿಧಾನದಲ್ಲಿ ಶೀಲ್ಡ್ ಮಾಡಲಾಗುವುದು.

ವೀರ್ಯಾಣು ಅಥವಾ ಅಂಡಾಣು ಸಂರಕ್ಷಣೆ ದುಬಾರಿಯೇ?

ಭಾರತದಲ್ಲಿ ವೀರ್ಯಾಣು ಹಾಗೂ ಅಂಡಾಣು ಸಂರಕ್ಷಿಸಿ ಇಡಲು 2 ಲಕ್ಷ ಖರ್ಚಾಗಬಹುದು, ಇನ್ನು ಆಸ್ಪತ್ರೆ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.

ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಯಾವಾಗ ಗರ್ಭಧಾರಣೆಗೆ ಪ್ರಯತ್ನಿಸಬಹುದು?
ಕ್ಯಾನ್ಸರ್ ಚಿಕಿತ್ಸೆ ಪಡೆದು ಒಂದು ವರ್ಷದ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸಬಹುದು. ಕೆಲವರ ಆರೋಗ್ಯ ಸ್ಥಿತಿ ಭಿನ್ನವಾಗಿರುತ್ತದೆ, ಆವಾಗ ವೈದ್ಯರು ನಿಮಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ.

English summary

Pregncay After Cancer: Can We Preserve Fertility Before Cancer Treatment, Here is how Do

How To Avoid Infertlity After Cancer Treatmen, what is Fertility preserving, how to do, Read on...
X
Desktop Bottom Promotion