For Quick Alerts
ALLOW NOTIFICATIONS  
For Daily Alerts

ಗರ್ಭನಿರೋಧಕ ವಿಧಾನದ ಬಗ್ಗೆ ಇರುವ ಟಾಪ್ 5 ತಪ್ಪು ಕಲ್ಪನೆಗಳು

|

ಗರ್ಭನಿರೋಧಕ ವಿಧಾನಗಳ ಬಗ್ಗೆ ಜನರ ಮನಸ್ಸಿನಲ್ಲಿ ಹಲವಾರು ಸಂಶಯಗಳಿವೆ. ಅದರಲ್ಲೂ ಮೊದಲ ಸಮಯದಲ್ಲಿ ಬಳಸುವವರಿಗೆ ಇದು ಪರಿಣಾಮಕಾರಿಯೇ, ಇದರಿಂದ ಅಡ್ಡಪರಿಣಾಮವಿದೆಯೇ ಎಂಬ ಸಂಶಯಗಳು ಇದ್ದೇ ಇರುತ್ತದೆ. ಭಾರತದಲ್ಲಿ ಲೈಂಗಿಕ ಶಿಕ್ಷಣದ ಕೊರತೆಯೂ ಇದೆ, ಕೆಲವೊಂದು ಆನ್‌ಲೈನ್‌ ಮಾಹಿತಿಗಳು ನಿಖರವಾಗಿರುವುದಿಲ್ಲ, ಇದನ್ನು ನಂಬಿ ಕೊನೆಗೆ ವೈದ್ಯರ ಬಳಿ ಹೋಗುವ ಪರಿಸ್ಥಿತಿ ಉಂಟಾಗುವುದು.

ಅನೇಕ ಮಹಿಳೆಯರು ತಪ್ಪಾದ ಮಾಹಿತಿಯ ಕಾರಣದಿಂದ ಗರ್ಭ ನಿರೋಧಕಗಳನ್ನು ಬಳಸುವುದನ್ನು ನಿಲ್ಲಿಸುತ್ತಾರೆ, ಇದರಿಂದ ಬೇಡದ ಗರ್ಭಧಾರಣೆ ಉಂಟಾಗುವುದು. ಗರ್ಭನಿರೋಧಕ ಬಳಸುವವರು ಈ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡರೆ ಬೇಡದ ಗರ್ಭಧಾರಣೆ ತಡೆಗಟ್ಟಬಹುದು.

ಗರ್ಭನಿರೋಧಕ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳು

ತಪ್ಪು ಕಲ್ಪನೆ 1: ಗರ್ಭನಿರೋಧಕಗಳಿಂದ ಕ್ಯಾನ್ಸರ್ ಉಂಟಾಗುತ್ತದೆ

ತಪ್ಪು ಕಲ್ಪನೆ 1: ಗರ್ಭನಿರೋಧಕಗಳಿಂದ ಕ್ಯಾನ್ಸರ್ ಉಂಟಾಗುತ್ತದೆ

ಸತ್ಯಾಂಶ: ಗರ್ಭನಿರೋಧಕ ಮತ್ರೆಗಳು ಗರ್ಭಕೋಶ ಹಾಗೂ ಎಂಡೋಮೆಟಿರಿಯಲ್ (ಗರ್ಭಾಶಯದ ಒಳಗೆ ಇರುವ ತೆಳುವಾದ ನರ) ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ. ಇನ್ನು ಸ್ತನ ಕ್ಯಾನ್ಸರ್‌ಗೂ ಹಾಗೂ ಮಾತ್ರೆಗೂ ಸಂಬಂಧವಿದೆ. ಮಾತ್ರೆ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

 ತಪ್ಪು ಕಲ್ಪನೆ 2: ಕಾಂಡೋಮ್‌ನಿಂದ ಗರ್ಭಧಾರಣೆಯನ್ನು ಶೇ.100ರಷ್ಟು ತಡೆಗಟ್ಟಬಹುದು

ತಪ್ಪು ಕಲ್ಪನೆ 2: ಕಾಂಡೋಮ್‌ನಿಂದ ಗರ್ಭಧಾರಣೆಯನ್ನು ಶೇ.100ರಷ್ಟು ತಡೆಗಟ್ಟಬಹುದು

ಸತ್ಯಾಂಶ: ಕಾಂಡೋಮ್‌ನಿಂದ ಗರ್ಭಧಾರಣೆ ತಡೆಗಟ್ಟುವ ಸಾಧ್ಯತೆ ಶೇ.80ರಷ್ಟಿದೆ ಅಷ್ಟೆ. ಅಂದರೆ ಕಾಂಡೋಮ್ ಬಳಸುವ 10 ದಂಪತಿಗಳಲ್ಲಿ ಇಬ್ಬರು ಗರ್ಭಧಾರಣೆಯಾಗುವ ಸಾಧ್ಯತೆ ಇದೆ. ಆದರೆ ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆಯಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದು.

 ತಪ್ಪು ಕಲ್ಪನೆ 3: ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೆ ಮುಂದೆ ಮಕ್ಕಳಾಗುವುದೇ ಇಲ್ಲ

ತಪ್ಪು ಕಲ್ಪನೆ 3: ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೆ ಮುಂದೆ ಮಕ್ಕಳಾಗುವುದೇ ಇಲ್ಲ

ಸತ್ಯಾಂಶ: ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವಾಗ ಮಾತ್ರ ಮಕ್ಕಳಾಗುವುದಿಲ್ಲ. ಇದನ್ನು ನಿಲ್ಲಿಸಿದ ಕೆಲವೇ ದಿನಗಳಲ್ಲಿ ಗರ್ಭಧಾರಣೆಯಾಗುವುದು.

ತಪ್ಪು ಕಲ್ಪನೆ 4: ಗರ್ಭನಿರೋಧಕ ಮಾತ್ರೆ ಸೇವನೆಯಿಂದ ಮೈ ತೂಕ ಹೆಚ್ಚುವುದು

ತಪ್ಪು ಕಲ್ಪನೆ 4: ಗರ್ಭನಿರೋಧಕ ಮಾತ್ರೆ ಸೇವನೆಯಿಂದ ಮೈ ತೂಕ ಹೆಚ್ಚುವುದು

ಸತ್ಯಾಂಶ: ಗರ್ಭನಿರೋಧಕ ಮಾತ್ರೆಗಳು ಮೈ ತೂಕ ಹೆಚ್ಚಿಸುವುದಿಲ್ಲ. ಇತರ ಕಾರಣಗಳಿಂದಾಗಿ ಮೈ ತೂಕ ಹೆಚ್ಚಾಗಿರಬಹುದು. ಗರ್ಭ ನಿರೋಧಕ ಮತ್ರೆಗಳು ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ, ಕಿಬ್ಬೊಟ್ಟೆ ನೋವು ಇದನ್ನು ಕೂಡ ತಡೆಗಟ್ಟುತ್ತದೆ. ಅಲ್ಲದೆ ಮುಖದಲ್ಲಿ ಮೊಡವೆ ಸಮಸ್ಯೆಯಿದ್ದರೆ ಅದು ಕೂಡ ಕಡಿಮೆಯಾಗುವುದು. ಈ ಮಾತ್ರೆ ಪಿಸಿಓಎಸ್ ಹಾಗೂ ಎಂಡೋಮೆಟ್ರಿಯೋಸಿಸ್ ತಡೆಗಟ್ಟಲು ಕೂಡ ಸಹಕಾರಿ.

ತಪ್ಪು ಕಲ್ಪನೆ 5: ಗರ್ಭನಿರೋಧಿಸುವುದು ಮಹಿಳೆಯ ಮಾತ್ರ ಸಮಸ್ಯೆ

ತಪ್ಪು ಕಲ್ಪನೆ 5: ಗರ್ಭನಿರೋಧಿಸುವುದು ಮಹಿಳೆಯ ಮಾತ್ರ ಸಮಸ್ಯೆ

ಸತ್ಯಾಂಶ: ಮಗು ಬೇಡವೆಂದು ತೀರ್ಮಾನಿಸಿದ ಮೇಲೆ ಗಂಡು-ಹೆಣ್ಣು ಇಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ತಮಗೆ ಯಾವ ವಿಧಾನ ಸೂಕ್ತವೆಂದು ತೀರ್ಮಾನಿಸಬೇಕು. ಅಗ್ಯತವಿದ್ದರೆ ಸ್ತ್ರೀರೋಗ ತಜ್ಞರು ಸಲಹೆ ನೀಡುತ್ತಾರೆ.

English summary

Myths and facts about contraception in Kannada

Here are myths and facts about contraceptive, read on.....
X
Desktop Bottom Promotion