For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಬಗ್ಗೆ ವ್ಯಾಪಕವಾಗಿರುವ ಈ ಮಿಥ್ಯೆಗಳು ಎಷ್ಟು ನಿಜ?

|

ಗರ್ಭವತಿಯರಿಗೆ ಸಲಹೆ ಹೇಳುವಷ್ಟು ಈ ಜಗತ್ತಿನಲ್ಲಿ ಇನ್ಯಾರಿಗೂ ಪುಕ್ಕಟೆ ಸಲಹೆಗಳನ್ನು ಯಾರೂ ಹೇಳಿರರಾರರು. ಇವುಗಳಲ್ಲಿ ಕೆಲವು ಗರ್ಭಾವಸ್ಥೆಗೆ ನೇರವಾಗಿ ಸಂಬಂಧಿಸಿದ್ದರೆ ಕೆಲವು ಪರೋಕ್ಷ ಪರಿಣಾಮಗಳೂ ಇವೆ.

ಉದಾಹರಣೆಗೆ ಗರ್ಭಾವಸ್ಥೆಯ ಸಮಯದಲ್ಲಿ ಗ್ರಹಣ ಉಂಟಾದರೆ ಇದು ಗರ್ಭದಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು. ಈ ಸಮಯದಲ್ಲಿ ಹೊರಗೆ ಹೋಗಬೇಡಿ ಎಂದು ಸಲಹೆ ನೀಡುವವರಲ್ಲಿ ಕಿರಿಯ ವಯಸ್ಸಿನವರಿಂದ ಹಿಡಿದು ವಯೋವೃದ್ದೆಯವರೆಗೂ ಇರುತ್ತಾರೆ.

ಚಿಕ್ಕ ವಯಸ್ಸಿನವರೇನೋ ಯಾರಿಂದಲೋ ಕೇಳಿದ್ದು ಎಂದು ಉಪೇಕ್ಷಿಸಬಹುದು. ಆದರೆ ಅಪಾರ ವಯಸ್ಸಿನ ಅನುಭವದ ಮಾತುಗಳನ್ನು ನಿರ್ಲಕ್ಷಿಸುವುದಾದರೂ ಹೇಗೆ? ಹಾಗಾಗಿ, ಇಂತಹ ನೂರಾರು ಮಾಹಿತಿಗಳು ಇಂದಿಗೂ ಜನಜನಿತವಾಗಿಯೇ ಇವೆ. ಎಲ್ಲಿಯವರೆಗೆ ಇವುಗಳಿಗೆ ವೈಜ್ಞಾನಿಕ ಪುರಾವೆ ಇಲ್ಲವೋ ಅಲ್ಲಿಯವರೆಗೂ ಇದನ್ನು ನಾವು ಮಿಥ್ಯೆ ಎಂದೇ ಪರಿಗಣಿಸಬಹುದು.

ಅವುಗಳಲ್ಲಿ ಕೆಲವು ಸುಳ್ಳು ಎಂದು ನಮಗೇ ಅನ್ನಿಸುತ್ತದೆ, ಆದರೆ ಕೆಲವು ಮಾಹಿತಿಗಳಿಗೆ ಎಷ್ಟೋ ದಶಕಗಳ ಸಾಕ್ಷ್ಯವಿದ್ದು, ಅವುಗಳ ಹಿಂದಿನ ನೈಜ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸದೆ ಇವುಗಳನ್ನು ನಿಜವೆಂದೇ ನಾವು ಒಪ್ಪಿಕೊಳ್ಳಲು ಬಿಟ್ಟಿದ್ದೇವೆ. ಇಂತಹ ಹಲವಾರು ಮಿಥ್ಯೆಗಳಲ್ಲಿ ಪ್ರಮುಖವಾದ ಇಪ್ಪತ್ತ ಮೂರು ಮಿಥ್ಯೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ ನೋಡೋಣ:

ಮಿಥ್ಯೆ 1: ಉಬ್ಬಿದ ಹೊಟ್ಟೆಯ ಸ್ಥಾನವು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ:

ಮಿಥ್ಯೆ 1: ಉಬ್ಬಿದ ಹೊಟ್ಟೆಯ ಸ್ಥಾನವು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ:

ಸಾಮಾನ್ಯವಾಗಿ ಗರ್ಭಿಣಿಯ ಹೊಟ್ಟೆಯ ಗಾತ್ರವನ್ನು ಹಿರಿಯ ಮಹಿಳೆಯರು ಅತಿ ಸೂಕ್ಷ್ಮವಾಗಿ ನೋಡುವುದು ಎಲ್ಲೆಡೆ ಕಂಡು ಬರುತ್ತದೆ. ಇವರ ಅನುಭವದ ಪ್ರಕಾರ ಉಬ್ಬಿರುವ ಹೊಟ್ಟೆಯ ಆಕಾರಕ್ಕೂ ಒಳಗಿರುವ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಈ ಆಕಾರ ಆಕೆಯ ಆರೋಗ್ಯ, ದೇಹದ ಗಾತ್ರ, ಮಗುವಿನ ಬೆಳವಣಿಗೆ ಮತ್ತು ಇತರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಅನುಸರಿಸುತ್ತದೆಯೇ ಹೊರತು ಮಗುವಿನ ಲಿಂಗಕ್ಕೂ ಹೊಟ್ಟೆಯ ಆಕಾರಕ್ಕೂ ಯಾವುದೇ ಸಂಬಂಧವಿಲ್ಲ.

ಮಿಥ್ಯೆ 2: ಕೆಲವು ವಿಧದ ಆಹಾರಗಳು ಮಗುವಿನ ಬಣ್ಣದ ಮೇಲೆ ಪರಿಣಾಮ ಬೀರುತ್ತವೆ:

ಮಿಥ್ಯೆ 2: ಕೆಲವು ವಿಧದ ಆಹಾರಗಳು ಮಗುವಿನ ಬಣ್ಣದ ಮೇಲೆ ಪರಿಣಾಮ ಬೀರುತ್ತವೆ:

ಆಫ್ರಿಕಾದ ಗರ್ಭವತಿ ತನ್ನ ಗರ್ಭಾವಸ್ಥೆಯ ಎಲ್ಲಾ ದಿನಗಳಲ್ಲಿಯೂ ಹಾಲನ್ನೇ ಕುಡಿದರೆ ಆಕೆಗೆ ಹುಟ್ಟುವ ಮಗು ಬೆಳ್ಳಗಿರುತ್ತದೆಯೇ? ಸರ್ವಥಾ ಇಲ್ಲ. ಏಕೆಂದರೆ ಮಗುವಿನ ಬಣ್ಣ ಅನುವಂಶಿಕ ಗುಣಗಳನ್ನು ಆಧರಿಸಿದೆಯೇ ಹೊರತು ಗರ್ಭಿಣಿ ಸೇವಿಸುವ ಆಹಾರವನ್ನಲ್ಲ. ಕೆಲವು ಮಹಿಳೆಯರಂತೂ ಮಗುವಿನ ಚರ್ಮ ಬೆಳ್ಳಗಿರಬೇಕೆಂದರೆ ಆಹಾರದಲ್ಲಿ ಕಬ್ಬಿಣ ಅಂಶ ಇರಬಾರದು ಎಂದೂ ತಪ್ಪು ಮಾಹಿತಿ ನೀಡಿ ಅಮೂಲ್ಯವಾದ ಪೋಷಕಾಂಶದಿಂದ ವಂಚಿತರಾಗಿಸಬಹುದು. ಇದನ್ನು ನಂಬಿ ಕಬ್ಬಿಣದ ಅಂಶವನ್ನು ಸೇವಿಸದೇ ಹೋದರೆ ರಕ್ತಹೀನತೆಯ ಸಹಿತ ಇನ್ನೂ ಹಲವಾರು ತೊಂದರೆಗಳು ಎದುರಾಗಬಹುದು.

ಮಿಥ್ಯೆ 3: ಗರ್ಭಿಣಿ ಇಬ್ಬರ ಆಹಾರ ಸೇವಿಸಬೇಕು:

ಮಿಥ್ಯೆ 3: ಗರ್ಭಿಣಿ ಇಬ್ಬರ ಆಹಾರ ಸೇವಿಸಬೇಕು:

ಯಾರು ಏನೇ ಹೇಳಲಿ, ಇದನ್ನಂತೂ ಖಂಡಿತಾ ಮಾಡಲು ಹೋಗದಿರಿ. ಗರ್ಭಾವಸ್ಥೆಯಲ್ಲಿ ಕ್ಯಾಲೋರಿಗಳ ಅವಶ್ಯಕತೆ ಹೆಚ್ಚಾಗಿರುವುದು ನಿಜ. ಅಂದರೆ ಕೇವಲ ಮುನ್ನೂರು ಕ್ಯಾಲೋರಿ ಅಷ್ಟೇ. ಇಷ್ಟನ್ನು ಪಡೆಯಲು ಒಂದು ಚಪಾತಿ ಮತ್ತು ಒಂದು ಚಮಚ ತುಪ್ಪ ಸಾಕು. ಅಥವಾ ಎರಡು ಪ್ರಮಾಣದ ಹಣ್ಣು ಅಥವಾ ಸಾಲಾಡ್ ಸಹಾ ಸಾಕಾಗುತ್ತದೆ. ಇಷ್ಟಕ್ಕೇ ಇಬ್ಬರು ತಿನ್ನವಷ್ಟು ಆಹಾರವನ್ನು ಸೇವಿಸುವ ಅಗತ್ಯವೇ ಇಲ್ಲ. ನಿಮ್ಮ ಒಡಲಲ್ಲಿ ಮಗು ಬೆಳೆಯುತ್ತಿದೆ ಎಂದಾಕ್ಷಣ ಅದರ ಪಾಲಿನ ಆಹಾರವನ್ನೂ ನೀವೇ ಸೇವಿಸಬೇಕೆಂದಿಲ್ಲ. ಬದಲಿಗೆ ನಿಮ್ಮ ನಿತ್ಯದ ಆಹಾರ ಹೆಚ್ಚು ಪೌಷ್ಟಿಕ ಮತ್ತು ಸಮತೋಲಿತವಾಗಿದ್ದರೆ ಸಾಕು.

ಮಿಥ್ಯೆ 4: ಖಾರ ತಿಂದರೆ ಪ್ರಸವ ವೇದನೆ ಬೇಗನೇ ಎದುರಾಗುತ್ತದೆ

ಮಿಥ್ಯೆ 4: ಖಾರ ತಿಂದರೆ ಪ್ರಸವ ವೇದನೆ ಬೇಗನೇ ಎದುರಾಗುತ್ತದೆ

ಖಾರ ಹೆಚ್ಚು ತಿಂದಷ್ಟೂ ಎದೆಯುರಿ ಮತ್ತು ವಾಯುಪ್ರಕೋಪ ಉಂಟಾಗುವ ಸಾಧ್ಯತೆ ಹೆಚ್ಚು. ಆದರೆ ಇದಕ್ಕೂ ಪ್ರಸವ ವೇದನೆ ಪ್ರಾರಂಭವಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ ವಾಯುಪ್ರಕೋಪ ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ಹೆಚ್ಚು ಬಾಧಿಸುತ್ತದೆ. ಏಕೆಂದರೆ ಗರ್ಭವತಿಯ ಆರೋಗ್ಯ ಸೂಕ್ಷ್ಮವೂ ಆಗಿದ್ದು ಕೆಲವಾರು ರಸದೂತಗಳ ಪ್ರಭಾವದ ಮೇಲೆ ಆಮ್ಲೀಯತೆ ಪರೋಕ್ಷ ಪ್ರಭಾವ ಉಂಟುಮಾಡಿ ಅನಾರೋಗ್ಯ ಉಂಟು ಮಾಡಬಹುದು. ಹಾಗಾಗಿ ಗರ್ಭವತಿಯರು ಖಾರದ, ಎಣ್ಣೆಯ ಪದಾರ್ಥಗಳನ್ನು ಆದಷ್ಟೂ ಮಿತಗೊಳಿಸಬೇಕು.

ಮಿಥ್ಯೆ 5: ಎದೆಯುರಿ ಹೆಚ್ಚಿದಷ್ಟೂ ಮಗುವಿನ ತಲೆಯ ಮೇಲೆ ಹೆಚ್ಚು ಕೂದಲಿರುತ್ತದೆ

ಮಿಥ್ಯೆ 5: ಎದೆಯುರಿ ಹೆಚ್ಚಿದಷ್ಟೂ ಮಗುವಿನ ತಲೆಯ ಮೇಲೆ ಹೆಚ್ಚು ಕೂದಲಿರುತ್ತದೆ

ಮಗುವಿನ ತಲೆಯ ಮೇಲಿನ ಕೂದಲ ಬೆಳವಣಿಗೆ ಅನುವಂಶಿಕ ಗುಣಗಳನ್ನು ಆಧರಿಸಿರುತ್ತದೆಯೇ ಹೊರತು ಗರ್ಭಿಣಿಯ ಆಹಾರ ಅಥವಾ ಆಹಾರದ ಪರಿಣಾಮಗಳಲ್ಲ! ಭ್ರೂಣದ ಬೆಳೆಯುತ್ತಿರುವ ತೂಕದ ಪರಿಣಾಮವಾಗಿ ಆಗಾಗ್ಗೆ ಜೀರ್ಣರಸಗಳನ್ನು ಹೃದಯದ ಕಡೆಗೆ ಅಂದರೆ ಕೆಳಗಿನಿಂದ ಮೇಲ್ಭಾಗಕ್ಕೆ ಒತ್ತಿ ಕೊಡಲು ಕಾರಣವಾಗುತ್ತದೆ, ಇದು ಆಮ್ಲೀಯತೆಗೆ ಕಾರಣವಾಗುತ್ತದೆಯೇ ಹೊರತು ಮಗುವಿನ ಕೂದಲಿಗೆ ಅಲ್ಲ. ಇದು ಅತಿ ಆಮ್ಲೀಯತೆ ಅಥವಾ ಹೈಪರ್‌ಸಿಡಿಟಿಗೆ ಗೂ ಕಾರಣವಾಗಬಹುದು. ವಾಸ್ತವದಲ್ಲಿ ಭಾರೀ ಎದೆಯುರಿ ಹೊಂದಿರುವ ಅನೇಕ ಮಹಿಳೆಯರು ಕೂದಲು ರಹಿತ ಶಿಶುಗಳಿಗೆ ಜನ್ಮ ನೀಡಿದ್ದಾರೆ, ಮತ್ತು ಎದೆಯುರಿಯ ತೊಂದರೆಯೇ ಇಲ್ಲದ ಅನೇಕ ಗರ್ಭವತಿಯರು ತಲೆಯ ಮೇಲೆ ಗಾಢವಾದ ಕೂದಲನ್ನು ಹೊಂದಿರುವ ಮಕ್ಕಳನ್ನು ಹೆತ್ತಿದ್ದಾರೆ.

ಮಿಥ್ಯೆ6: ಗರ್ಭಾವಸ್ಥೆಯಲ್ಲಿ ಸಂಸರ್ಗ ನಡೆಸಬಾರದು

ಮಿಥ್ಯೆ6: ಗರ್ಭಾವಸ್ಥೆಯಲ್ಲಿ ಸಂಸರ್ಗ ನಡೆಸಬಾರದು

ಬಹುತೇಕ ವೈದ್ಯರು ಮೊದಲ ತ್ರೈಮಾಸಿಕದಲ್ಲಿ ಸಂಸರ್ಗ ಬೇಡ ಎಂದು ಸಲಹೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ದಂಪತಿಗಳು ಸಾಕಷ್ಟು ಸುರಕ್ಷತೆಯನ್ನು ಅನುಸರಿಸುವ ಮೂಲಕ ಆರೋಗ್ಯಕರ ಲೈಂಗಿಕ ಜೀವನ ನಡೆಸಬಹುದು. ವಾಸ್ತವದಲ್ಲಿ ರಸದೂತಗಳ ಪರಿಣಾಮದಿಂದ ಗರ್ಭವತಿಯರಲ್ಲಿ ಲೈಂಗಿಕ ಬಯಕೆ ಸಾಮಾನ್ಯವಾಗಿ ಹೆಚ್ಚುತ್ತದೆ. ಗರ್ಭದಲ್ಲಿರುವ ಮಗು ಹಲವಾರು ರಕ್ಷಣಾ ಕವಚಗಳಲ್ಲಿ ಸುರಕ್ಷಿತವಾಗಿದೆ ಹಾಗೂ ಮಗುವಿಗೆ ಸಂಸರ್ಗದ ಮೂಲಕ ಯಾವುದೇ ತೊಂದರೆ ಎದುರಾಗದು. ಎಲ್ಲಿಯವರೆಗೆ ನಿಮ್ಮ ವೈದ್ಯರು ಕಟ್ಟುನಿಟ್ಟಾಗಿ ಬೇಡ ಎನ್ನುವುದಿಲ್ಲವೋ (ಇದಕ್ಕೆ ಗುರುತರವಾದ ಆರೋಗ್ಯ ಸಂಬಂಧಿ ಕಾರಣ ಇದ್ದೇ ಇರುತ್ತದೆ) ಅಲ್ಲಿಯವರೆಗೂ ಸಂಸರ್ಗ ಸುರಕ್ಷಿತವಾಗಿದೆ.

ಮಿಥ್ಯೆ7: ಗ್ರಹಣಗಳು ಆನುವಂಶಿಕ ದೋಷಗಳಿಗೆ ಕಾರಣವಾಗಬಹುದು

ಮಿಥ್ಯೆ7: ಗ್ರಹಣಗಳು ಆನುವಂಶಿಕ ದೋಷಗಳಿಗೆ ಕಾರಣವಾಗಬಹುದು

ಸೀಳು ತುಟಿಗಳು ಮತ್ತು ಒಸಡುಗಳು ಆನುವಂಶಿಕ ವೈಪರೀತ್ಯಗಳು ಮತ್ತು ಕೆಲವು ಆನುವಂಶಿಕ ಅಂಶಗಳಿಂದ ಉಂಟಾಗುತ್ತವೆ. ಒಂದೇ ಕುಟುಂಬದ ಒಳಗಿನ ಸಂಬಂಧಗಳಲ್ಲಿ ಈ ತೊಂದರೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದಕ್ಕೂ ಸೂರ್ಯ ಅಥವಾ ಚಂದ್ರನ ಗ್ರಹಣಗಳಿಗೂ ಯಾವುದೇ ಸಂಬಂಧವಿಲ್ಲ.

ಮಿಥ್ಯೆ 8: ಬೆನ್ನು ಅರಿವಳಿಕೆ ಬೆನ್ನುನೋವಿಗೆ ಕಾರಣವಾಗುತ್ತದೆ

ಮಿಥ್ಯೆ 8: ಬೆನ್ನು ಅರಿವಳಿಕೆ ಬೆನ್ನುನೋವಿಗೆ ಕಾರಣವಾಗುತ್ತದೆ

ಬೆನ್ನಿಗೆ ನೀಡುವ ಅರಿವಳಿಕೆ ಬೆನ್ನುನೋವುಗಳಿಗೆ ಸ್ವಲ್ಪಮಟ್ಟಿಗೆ ಕೊಡುಗೆ ನೀಡಬಹುದಾದರೂ, ಅವು ಪ್ರಾಥಮಿಕವಾಗಿ ಗರ್ಭಿಣಿ ಮಹಿಳೆಯರಲ್ಲಿ ಗುರುತ್ವಾಕರ್ಷಣೆಯ ಕೇಂದ್ರ ಬದಲಾಗಿರುವ ಕಾರಣದಿಂದಲೇ ಹೆಚ್ಚಾಗಿ ಉಂಟಾಗಿರುತ್ತವೆ. ಗರ್ಭವತಿಯ ದೇಹದ ಮುಂಭಾಗದಲ್ಲಿ ಈಗ ತೂಕ ಹೆಚ್ಚಿರುವುದರಿಂದ ಆಕೆ ಅನಿವಾರ್ಯವಾಗಿ ಹಿಂದೆ ವಾಲಿ ನಡೆಯಬೇಕಾಗುತ್ತದೆ. ಈ ಭಂಗಿ ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ನೀಡುತ್ತದೆ. ಇದೇ ಬೆನ್ನುನೋವಿಗೆ ಕಾರಣವಾಗುತ್ತದೆ. ಸ್ವಾಭಾವಿಕವಾಗಿ ಹೆರಿಗೆಯ ದಿನ ಹತ್ತಿರಾದಂತೆಲ್ಲಾ ಈ ನೋವು ಸಹಾ ಹೆಚ್ಚುತ್ತಾ ಹೋಗುತ್ತದೆ. ಮತ್ತು ಇದನ್ನು ತಡೆಯುವ ಏಕೈಕ ಮಾರ್ಗವೆಂದರೆ ಗರ್ಭಾವಸ್ಥೆಯಲ್ಲಿ ಮತ್ತು ನಂತರ ಬೆನ್ನುಮೂಳೆಯನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡುವುದಾಗಿದೆ.

ಮಿಥ್ಯೆ9: ಸುಲಭ ಪ್ರಸವ ಮತ್ತು ಹೆರಿಗೆಯಾಗಬೇಕೇ? ತುಪ್ಪ ತಿನ್ನಿ

ಮಿಥ್ಯೆ9: ಸುಲಭ ಪ್ರಸವ ಮತ್ತು ಹೆರಿಗೆಯಾಗಬೇಕೇ? ತುಪ್ಪ ತಿನ್ನಿ

ತುಪ್ಪ ಉತ್ತಮ ಜಾರುಕದ್ರವದ ಪರಿಣಾಮವನ್ನು ಹೊಂದಿದ್ದು ಗರ್ಭವತಿಯ ಜನನಾಂಗದಲ್ಲಿ ಹೆಚ್ಚಿನ ಜಾರುಕ ಪರಿಣಾಮವನ್ನು ಉಂಟು ಮಾಡಿ ಹೆರಿಗೆಯನ್ನು ಸುಲಭವಾಗಿಸುತ್ತದೆ ಎಂದು ಹಿತ ಬಯಸುವ ಹಿರಿಯ ಮಹಿಳೆಯರು ವಿವರಿಸಬಹುದು. ಆದರೆ ತುಪ್ಪ ಗರ್ಭವತಿಯ ಸಹಿತ ಯಾರಿಗೂ ಆರೋಗ್ಯಕರವೇ ಆಗಿದ್ದರೂ ಇದರಿಂದ ಜನನಕ್ರಿಯೆ ಸುಲಭವಾಗುತ್ತದೆ ಎಂಬುದರಲ್ಲಿ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಅಲ್ಲದೇ ಇದನ್ನು ನಂಬಿ ಅತಿಯಾಗಿ ತುಪ್ಪ ಸೇವಿಸಿದರೆ ಗರ್ಭಿಣಿಯ ದೇಹದಲ್ಲಿ ಅಗತ್ಯಕ್ಕೂ ಹೆಚ್ಚು ಕೊಬ್ಬು ಸಂಗ್ರಹವಾಗಿ ತೂಕ ಏರುತ್ತದೆ. ಹೆರಿಗೆಯಾಗಲು ಪ್ರತಿ ಗರ್ಭವತಿಯ ದೇಹದ ಅಂಕಿ ಅಂಶಗಳನ್ನೇ ವೈದ್ಯರು ಪರಿಗಣಿಸುತ್ತಾರೆಯೇ ಹೊರತು ಆಕೆ ಎಷ್ಟು ತುಪ್ಪ ತಿಂದಿದ್ದಾಳೆ ಎಂಬುದನ್ನಂತೂ ಖಂಡಿತಾ ಅಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೊಂಚ ತುಪ್ಪ ತಿನ್ನಬಹುದು. ಎಷ್ಟು ತಿನ್ನಬಹುದು ಅಥವಾ ತಿನ್ನಬೇಕು ಎಂಬುದನ್ನು ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಸಲಹೆ ಮಾಡುತ್ತಾರೆ.

ಮಿಥ್ಯೆ10: ಪೊಪ್ಪಾಯಿ ತಿಂದರೆ ಗರ್ಭಪಾತ ಖಚಿತ

ಮಿಥ್ಯೆ10: ಪೊಪ್ಪಾಯಿ ತಿಂದರೆ ಗರ್ಭಪಾತ ಖಚಿತ

ಪೊಪ್ಪಾಯಿ ಕಾಯಿಯ ಸೇವನೆಯಿಂದ ಗರ್ಭಾಶಯದ ಸ್ನಾಯುಗಳು ಹೆಚ್ಚು ಸಂಕುಚಿತಗೊಳ್ಳುತ್ತವೆ. ಹಾಗಾಗಿ, ಈ ಸಂಕುಚನೆ ಗರ್ಭಾಪಾತವಾಗುವಷ್ಟು ಪ್ರಬಲವಾಗಿರಬೇಕೆಂದರೆ ಇದು ಗರ್ಭಾವಸ್ಥೆಯ ಪ್ರಾರಂಭಿಕ ದಿನಗಳಾಗಿರಬೇಕು. ಕೊಂಚ ಬೆಳೆದ ಬಳಿಕ ಗರ್ಭಪಾತ ಮಾಡುವಷ್ಟು ಪೊಪ್ಪಾಯಿ ತಿನ್ನಬೇಕೆಂದರೆ ಆಕೆ ಭಾರೀ ಪ್ರಮಾಣದ್ದನ್ನೇ ತಿನ್ನಬೇಕಾಗುತ್ತದೆ. ಹಾಗಾಗಿ ಮಿತ ಪ್ರಮಾಣದಲ್ಲಿ ತಿನ್ನಬಹುದು. ಹಣ್ಣಾದ ಪೊಪ್ಪಾಯಿ ಈ ತೊಂದರೆ ಉಂಟು ಮಾಡದ ಕಾರಣ ಇದನ್ನು ಸುರಕ್ಷಿತವಾಗಿ ಸೇವಿಸಬಹುದು. ಆದರೆ ಪೊಪ್ಪಾಯಿ ಕಾಯಿಯನ್ನು ಯಾವುದೇ ಹಂತದಲ್ಲಿ ಸೇವಿಸಿದರೂ ಇದು ಹೊಟ್ಟೆಯ ಸೆಡೆತವನ್ನು ಹೆಚ್ಚಿಸುವ ಕಾರಣ ಇದನ್ನು ಸೇವಿಸದಿರುವುದೇ ಜಾಣತನದ ಕ್ರಮವಾಗಿದೆ.

ಮಿಥ್ಯೆ11: ಲೈಂಗಿಕ ಆಸನದ ಪ್ರಕಾರ ಮಗುವಿನ ಲೈಂಗಿಕತೆಯನ್ನು ನಿರ್ಧರಿಸುತ್ತದೆ

ಮಿಥ್ಯೆ11: ಲೈಂಗಿಕ ಆಸನದ ಪ್ರಕಾರ ಮಗುವಿನ ಲೈಂಗಿಕತೆಯನ್ನು ನಿರ್ಧರಿಸುತ್ತದೆ

ಗರ್ಭಧಾರಣೆಯ ಸಮಯದಲ್ಲಿ ದಂಪತಿಗಳು ಅನುಸರಿಸಿದ ಆಸನದಿಂದ ಮಗುವಿನ ಲಿಂಗ ನಿರ್ಣಯಗೊಳ್ಳುತ್ತದೆ ಎಂಬ 'ಕಲ್ಪನೆ' ಯನ್ನು ಅನೇಕ ಮಹಿಳೆಯರು ಕೇಳಿರಬಹುದು. ನಿಜವೇನೆಂದರೆ ನಿಮ್ಮ ಮಗುವಿನ ಲಿಂಗವನ್ನು ನಿರ್ಧರಿಸುವಲ್ಲಿ ತಂದೆಯ ವೀರ್ಯಾಣುವಿನ ಎಕ್ಸ್ ಮತ್ತು ವೈ ವರ್ಣತಂತುಗಳಲ್ಲಿ ಯಾವುದು ಅಂಡಾಣುವಿನೊಂದಿಗೆ ಮಿಲನಗೊಂಡಿತು ಎಂಬುದೇ ಮಗುವಿನ ಲಿಂಗವನ್ನು ನಿರ್ಧರಿಸುತ್ತದೆಯೇ ಹೊರತು ಆಸನವಲ್ಲ.

ಮಿಥ್ಯೆ12: ಉಬ್ಬಿದ ಹೊಟ್ಟೆ ಮುಂದಿದ್ದರೆ ಅಥವಾ ಕೆಳಗಿದ್ದರೆ ಇದು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ

ಮಿಥ್ಯೆ12: ಉಬ್ಬಿದ ಹೊಟ್ಟೆ ಮುಂದಿದ್ದರೆ ಅಥವಾ ಕೆಳಗಿದ್ದರೆ ಇದು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ

ಇದು ಗರ್ಭಧಾರಣೆಗೆ ಸಂಬಂಧಿಸಿದ ಸಾಮಾನ್ಯ ಮಿಥ್ಯೆಗಳಲ್ಲಿ ಒಂದಾಗಿದೆ. ಹೊಟ್ಟೆ ಮೇಲಿದ್ದಷ್ಟೂ ಹೆಣ್ಣು ಮತ್ತು ಹೊಟ್ಟೆ ಕೆಳಗಿದ್ದಷ್ಟೂ ಗಂಡು ಎಂದು ಹಿರಿಯರು ಅನುಭವದಿಂದ ವಿವರಿಸುತ್ತಾರೆ. ಆದರೆ ಗರ್ಭಾವಸ್ಥೆಯ ಅವಧಿಯಲ್ಲಿ, ಭ್ರೂಣದ ಸ್ಥಾನ, ಸ್ನಾಯುವಿನ ಗಾತ್ರ ಮತ್ತು ಗರ್ಭವತಿಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿ ಮಹಿಳೆಯ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತದೆ, ಅದು ಗರ್ಭಿಣಿಯ ದೇಹದ ಗಾತ್ರ ಮತ್ತು ಆಕಾರವನ್ನು ತೋರಿಸುತ್ತದೆ. ಇದಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.

ಮಿಥ್ಯೆ13: ಮಗುವಿನ ಲಿಂಗವನ್ನು ನಿರ್ಧರಿಸುವುದರಲ್ಲಿ ವಾಕರಿಕೆಯ ಪಾತ್ರ ಮಹತ್ವದ್ದು:

ಮಿಥ್ಯೆ13: ಮಗುವಿನ ಲಿಂಗವನ್ನು ನಿರ್ಧರಿಸುವುದರಲ್ಲಿ ವಾಕರಿಕೆಯ ಪಾತ್ರ ಮಹತ್ವದ್ದು:

ಇಲ್ಲ, ವಾಕರಿಕೆಗೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ನೈಸರ್ಗಿಕ ಕ್ರಿಯೆಯಾಗಿದ್ದು hyperemesis gravidarum ಎಂದು ವೈದ್ಯರು ಗುರುತಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿದ್ದಾಗ ಅಥವಾ ಕೆಲವು ಔಷಧಿಗಳ ಪ್ರಭಾವ ಅಥವಾ ಆಹಾರದ ಸೇವನೆಯ ಬಳಿಕ ವಾಕರಿಕೆ ಮತ್ತು ವಾಂತಿ ಎದುರಾಗಬಹುದು. ಇದಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.

ಮಿಥ್ಯೆ14: ಮಗುವಿನ ಬೆಳವಣಿಗೆ ಹೆಚ್ಚಿದಷ್ಟೂ ನಿಮ್ಮ ತ್ವಚೆ ಕಳಾಹೀನವಾಗುತ್ತದೆ

ಮಿಥ್ಯೆ14: ಮಗುವಿನ ಬೆಳವಣಿಗೆ ಹೆಚ್ಚಿದಷ್ಟೂ ನಿಮ್ಮ ತ್ವಚೆ ಕಳಾಹೀನವಾಗುತ್ತದೆ

ಮಗುವಿನ ಬೆಳವಣಿಗೆಗೂ ಚರ್ಮ ಕಳಾಹೀನವಾಗುವುದಕ್ಕೂ ಸಂಬಂಧವಿಲ್ಲ. ಎಲ್ಲಾ ಜೀವಕೋಶಗಳಲ್ಲಿ ರಕ್ತದ ಹರಿವು ಹೆಚ್ಚಾದಂತೆ ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳ ಅನುಭವ ಆಗುತ್ತದೆ. ಅನೇಕ ಮಹಿಳೆಯರಿಗೆ ಕಾಂತಿಯುಕ್ತ ತ್ವಚೆಯ ಅನುಭವ ಎದುರಾಗುತ್ತದೆ, ಇದನ್ನು ಜನಪ್ರಿಯವಾಗಿ 'ಬೇಬಿ-ಗ್ಲೋ' ಎಂದು ಕರೆಯಲಾಗುತ್ತದೆ ಮತ್ತು ಕೆಲವರು ತಮ್ಮ ದೇಹದ ಸ್ವರೂಪ ಮತ್ತು ಹಾರ್ಮೋನುಗಳ ಅಸಮತೋಲನದಿಂದಲೂ ಎದುರಾಗಿರಬಹುದು. ಆದರೆ ಕೆಲವು ಮಹಿಳೆಯರಿಗೆ 'ಬೇಬಿ-ಗ್ಲೋ' ಏಕೆ ಸಿಗುತ್ತಿಲ್ಲ ಎಂಬುದನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಸತ್ಯವಿಲ್ಲ. ಕಳಾಹೀನ ಮತ್ತು ಕಾಂತಿಯನ್ನು ಪಡೆಯುವ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು, ಮಹಿಳೆಯರು ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ಸರಿಯಾದ ವ್ಯಾಯಾಮದೊಂದಿಗೆ ಮತ್ತು ಆರೋಗ್ಯಕರ ಆಹಾರದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗಮನ ಹರಿಸಬೇಕು.

ಮಿಥ್ಯೆ15: ನಿಮ್ಮ ಬೆನ್ನಿನ ಮೇಲೆ ಮಲಗಬೇಡಿ

ಮಿಥ್ಯೆ15: ನಿಮ್ಮ ಬೆನ್ನಿನ ಮೇಲೆ ಮಲಗಬೇಡಿ

ಗರ್ಭಾವಸ್ಥೆಯಲ್ಲಿ, ನಿಮ್ಮ ಬೆನ್ನಿನ ಮೇಲೆ ಮಲಗುವುದರಿಂದ ನಿಮ್ಮ ಮಗುವಿನ ದೇಹದಲ್ಲಿ ರಕ್ತ ಪರಿಚಲನೆ ನಿಧಾನಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ, ಇಲ್ಲಿಯವರೆಗೆ ಬೆನ್ನಿನ ಮೇಲೆ ಮಲಗುವುದರಿಂದ ಯಾವುದೇ ರೀತಿಯ ಹಾನಿ ಎದುರಾಗಬಹುದು ಎಂಬ ಅಂಶವನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆರಾಮ ಮತ್ತು ಅಸ್ವಸ್ಥತೆಯ ಅಂಶಗಳು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತವೆ. ನಿಮ್ಮ ಎಡಭಾಗಕ್ಕೆ ಮಲಗುವುದು ಒಳ್ಳೆಯದು ಏಕೆಂದರೆ ಅದು ನಿಮ್ಮ ಕೆಳಗಿನ ದೇಹಕ್ಕೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಮಿಥ್ಯೆ16: ಗರ್ಭಿಣಿಯಾಗಿದ್ದಾಗ ಕೈಗಳನ್ನು ತಲೆಗಿಂತ ಮೇಲೆ ಎತ್ತಬಾರದು

ಮಿಥ್ಯೆ16: ಗರ್ಭಿಣಿಯಾಗಿದ್ದಾಗ ಕೈಗಳನ್ನು ತಲೆಗಿಂತ ಮೇಲೆ ಎತ್ತಬಾರದು

ಇದು ಮತ್ತೊಂದು ಮಿಥ್ಯೆಯಾಗಿದೆ. ನಿಮ್ಮ ಗರ್ಭಧಾರಣೆಯ ಅವಧಿಯಲ್ಲಿ ನಿಮ್ಮ ತೋಳುಗಳನ್ನು ನಿಮ್ಮ ತಲೆಯ ಮೇಲೆ ಎತ್ತಿದರೆ ಹೊಕ್ಕುಳಬಳ್ಳಿಯು ಮಗುವಿನ ಕುತ್ತಿಗೆಗೆ ಸುತ್ತಿಕೊಳ್ಳಬಹುದು ಎಂದು ಇದನ್ನು ಹೇಳುವವರು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ನಿಮ್ಮ ತೋಳುಗಳನ್ನು ಎತ್ತುವುದು ನಿಮ್ಮ ಮಗುವಿನ ಸುತ್ತಲೂ ಬಳ್ಳಿಯನ್ನು ಸುತ್ತಲು ಕಾರಣವಾಗಬಹುದು ಎಂಬ ಅಂಶವನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಕೈಗಳನ್ನು ಮೇಲೆ ಎತ್ತಲು ಮತ್ತು ನಿಯಮಿತ ವ್ಯಾಯಾಮ ಮಾಡಲು ಹಿಂಜರಿಯಬೇಡಿ, ಸೂರ್ಯ ನಮಸ್ಕಾರ ಮಾಡಿ ಮತ್ತು ನೆನೆಸಿದ ಬಟ್ಟೆಗಳನ್ನು ಒಣಗಿಸುವುದು ಮೊದಲಾದ ಮನೆಕೆಲಸಗಳೂ ನಿಮಗೆ ಉತ್ತಮವಾಗಿವೆ.

ಮಿಥ್ಯೆ17: ಗರ್ಭಿಣಿಯರು ಸ್ನಾನವನ್ನೇ ಮಾಡಬಾರದು

ಮಿಥ್ಯೆ17: ಗರ್ಭಿಣಿಯರು ಸ್ನಾನವನ್ನೇ ಮಾಡಬಾರದು

ಇದು ಅಸಾಧಾರಣ ತಮಾಷೆಯಾಗಿ ಕಾಣಿಸಬಹುದು, ಆದರೆ ಹೌದು, ಕೆಲವು ಸಮಯದಿಂದ ಈ ರೀತಿಯ ಮಿಥ್ಯೆಗಳನ್ನು ತಯಾರಿಸುವ ವ್ಯಕ್ತಿಗಳೂ ಇದ್ದಾರೆ. ಗರ್ಭಾವಸ್ಥೆಯಲ್ಲಿ, ಆಕೆಯ ದೇಹದಲ್ಲಿ ಸಂಭವಿಸುತ್ತಿರುವ ರಸದೂತಗಳ ಪ್ರಭಾವಗಳ ಬದಲಾವಣೆಗಳನ್ನು ಗಮನಿಸಿದರೆ, ಸ್ನಾನವು ಇತರ ಸಮಯಗಳಿಗಿಂತ ಹೆಚ್ಚು ಮುಖ್ಯವಾಗಿದೆ. ಸ್ನಾನ ಮಾಡುವುದರಿಂದ ಮಗುವಿಗೆ ಅಥವಾ ತಾಯಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಆದರೆ ಸಂಭವನೀಯ ಯಾವುದೇ ಅಪಾಯಗಳನ್ನು ಕಡಿಮೆ ಮಾಡಲು ಕೆಲವು ಕಾಳಜಿಯನ್ನು ವಹಿಸುವುದು ಅಗತ್ಯ. ಉದಾಹರಣೆಗೆ ನಿಮ್ಮ ಸ್ನಾನದ ನೀರು ಹೆಚ್ಚು ಬಿಸಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ತಾಪಮಾನ ಹೆಚ್ಚಳವು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಉಗುರುಬೆಚ್ಚನೆಯ ನೀರಿನ ಸ್ನಾನವೇ ನಿಮಗೆ ಸೂಕ್ತ.

ಮಿಥ್ಯೆ18: ಮಾನಸಿಕ ಒತ್ತಡ ಭ್ರೂಣದ ಆರೋಗ್ಯಕ್ಕೆ ಮಾರಕ:

ಮಿಥ್ಯೆ18: ಮಾನಸಿಕ ಒತ್ತಡ ಭ್ರೂಣದ ಆರೋಗ್ಯಕ್ಕೆ ಮಾರಕ:

ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳುವುದು ಭ್ರೂಣದ ಆರೋಗ್ಯಕ್ಕೆ ಕೆಟ್ಟದು ಎಂದು ನಮ್ಮಲ್ಲಿ ಹೆಚ್ಚಿನವರು ನಂಬುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳು ಮಧ್ಯಮ ಪ್ರಮಾಣದ ಮಾನಸಿಕ ಒತ್ತಡವನ್ನು ಎದುರಿಸುವುದು ಭ್ರೂಣಕ್ಕೆ ಒಳ್ಳೆಯದು ಎಂದು ತೋರಿಸುತ್ತದೆ. ಇದು ಮಗುವಿನ ಬೆಳವಣಿಗೆಯನ್ನು ಕ್ಷಿಪ್ರಗೊಳಿಸುತ್ತದೆ ಮತ್ತು ಭ್ರೂಣದ ನರಮಂಡಲದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಮಧ್ಯಮ ಮಟ್ಟದ ಒತ್ತಡವನ್ನು ಅನುಭವಿಸಿದ ತಾಯಂದಿರ ಶಿಶುಗಳು ಒತ್ತಡವಿಲ್ಲದ ತಾಯಂದಿರಿಗಿಂತ ವೇಗವಾಗಿ ಕೆಲಸ ಮಾಡುವ ಮಿದುಳನ್ನು ಪಡೆದಿವೆ. ಅಲ್ಲದೆ, ಮಾನಸಿಕ ಒತ್ತಡ ಎದುರಿಸಿದ ತಾಯಂದಿರಿಗೆ ಜನಿಸಿದ ಮಕ್ಕಳು ಅಂಬೆಗಾಲಿಡುವ ಸಮಯದಲ್ಲಿ ಹೆಚ್ಚಿನ ಮಾನಸಿಕ ಮತ್ತು ಕಲಿಕಾ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ.

ಮಿಥ್ಯೆ19: ಗರ್ಭಿಣಿಯರು ಸಿಹಿತಿಂಡಿಗಳನ್ನು ತಿನ್ನಬಾರದು

ಮಿಥ್ಯೆ19: ಗರ್ಭಿಣಿಯರು ಸಿಹಿತಿಂಡಿಗಳನ್ನು ತಿನ್ನಬಾರದು

ಹೆಚ್ಚಿನ ಸಿಹಿ ಯಾರಿಗೂ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಬಿಳಿ ಸಕ್ಕರೆಯನ್ನು ಅಪಾರ ಪ್ರಮಾಣದಲ್ಲಿ ಬೆರೆಸಿರುತ್ತಾರೆ. ಆದರೆ ಚಾಕೊಲೇಟ್ ಇದಕ್ಕೊಂದು ದೊಡ್ಡ ಅಪವಾದ. ನಿಯಮಿತವಾಗಿ ಚಾಕೊಲೇಟ್ ಹೊಂದಿರುವ ಗರ್ಭಿಣಿಯರು ಹೆಚ್ಚಾಗಿ ನಗುವ ಮತ್ತು ಕಡಿಮೆ ಭಯ ಮತ್ತು ನಗುವನ್ನು ತೋರಿಸುವ ಶಿಶುಗಳಿಗೆ ಜನ್ಮ ನೀಡುತ್ತಾರೆ ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಅಲ್ಲದೆ, ಮೂರನೇ ತ್ರೈಮಾಸಿಕದಲ್ಲಿ ವಾರದಲ್ಲಿ ಐದು ಮತ್ತು ಇದಕ್ಕೂ ಹೆಚ್ಚು ಬಾರಿ ಚಾಕೊಲೇಟ್ ತಿನ್ನುವ ಗರ್ಭಿಣಿಯರು ಅಧಿಕ ರಕ್ತದೊತ್ತಡವನ್ನು ಅನುಭವಿಸುವ ಅಪಾಯವನ್ನು 40% ಕಡಿಮೆ ಹೊಂದಿರುತ್ತಾರೆ.

ಮಿಥ್ಯೆ20: ನೀವು ಸಾಗರ ಉತ್ಪನ್ನ ಸೇವಿಸಬಾರದು:

ಮಿಥ್ಯೆ20: ನೀವು ಸಾಗರ ಉತ್ಪನ್ನ ಸೇವಿಸಬಾರದು:

ಇದು ಮತ್ತೊಂದು ಸುಳ್ಳು ಹೇಳಿಕೆ. ಸಾಗರ ಉತ್ಪನ್ನಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಇವನ್ನು ಸೇವಿಸುವ ಮೂಲಕ ನಿಮಗೆ ಚುರುಕಾದ ಮಕ್ಕಳು ಜನಿಸುತ್ತಾರೆ. ಒಂದು ಅಧ್ಯಯನದ ಪ್ರಕಾರ, ವಾರಕ್ಕೆ ಕನಿಷ್ಠ 12 ಔನ್ಸ್ ಸಾಗರ ಉತ್ಪನ್ನವನ್ನು ಸೇವಿಸುವ ತಾಯಂದಿರ ಮಕ್ಕಳು ಹೆಚ್ಚಿನ ಬುದ್ದಿಮತ್ತೆ, ಸಂವಹನ ಕೌಶಲ್ಯ, ಸಾಮಾಜಿಕ ಮತ್ತು ಉನ್ನತ ಕಲಿಕಾ ಸಾಮರ್ಥ್ಯಗಳನ್ನು ಹೊಂದಿದ್ದರು.

ಮಿಥ್ಯೆ21: ಗರ್ಭಿಣಿಯಾಗಿದ್ದಾಗ ಇವರು ಹೆಚ್ಚು ಸಂತೋಷದಿಂದಿರುತ್ತಾರೆ:

ಮಿಥ್ಯೆ21: ಗರ್ಭಿಣಿಯಾಗಿದ್ದಾಗ ಇವರು ಹೆಚ್ಚು ಸಂತೋಷದಿಂದಿರುತ್ತಾರೆ:

ವಾಸ್ತವದಲ್ಲಿ, ಇದು ನಿಜವಲ್ಲ. ಗರ್ಭಿಣಿಯರು ಇತರ ಮಹಿಳೆಯರಂತೆ ಮನೋಭಾವದ ಏರುಪೇರಿನ ಪ್ರಭಾವದಿಂದ ಬಳಲುತ್ತಾರೆ. ಸುಮಾರು 20% ಗರ್ಭಿಣಿ ಮಹಿಳೆಯರು ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಖಿನ್ನತೆಗೆ ಒಳಗಾಗುವುದು ಅವಧಿಗೂ ಮುನ್ನ ಹೆರಿಗೆ ಅಥವಾ ಕಡಿಮೆ ಜನನದ ತೂಕದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಿಥ್ಯೆ22: ನಿಮ್ಮ ಸಾಕುಪ್ರಾಣಿಗಳಿಂದ ನೀವು ದೂರವಿರಬೇಕು:

ಮಿಥ್ಯೆ22: ನಿಮ್ಮ ಸಾಕುಪ್ರಾಣಿಗಳಿಂದ ನೀವು ದೂರವಿರಬೇಕು:

ಇದು ಸತ್ಯವಲ್ಲ. ಆದರೆ, ನಿಮ್ಮ ಸಾಕುಪ್ರಾಣಿಗಳ ಕಸದ ಪೆಟ್ಟಿಗೆಯನ್ನು ನೀವು ಬದಲಾಯಿಸಬಾರದು ಏಕೆಂದರೆ ಅದು ಟೊಕ್ಸೊಪ್ಲಾಸ್ಮಾಸಿಸ್ ಸೋಂಕಿನ ಅಪಾಯವನ್ನು ಇದು ಉಂಟುಮಾಡುತ್ತದೆ. ಹೇಗಾದರೂ, ನಿಮ್ಮ ಸಾಕುಪ್ರಾಣಿಗಳನ್ನು ನೀವು ಮುದ್ದಾಡಬಹುದು ಮತ್ತು ನಿಮಗೆ ಸಂತೋಷವನ್ನೂ ನೀಡಬಹುದು. ಆದರೆ ಪ್ರಾಣಿಗಳ ಕೂದಲು ನಿಮ್ಮ ಆಹಾರದಲ್ಲಿ ಬಾರದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಮಿಥ್ಯೆ23: ವಿಮಾನಯಾನ ತೊಡಕುಗಳನ್ನು ಹೆಚ್ಚಿಸುತ್ತದೆ:

ಮಿಥ್ಯೆ23: ವಿಮಾನಯಾನ ತೊಡಕುಗಳನ್ನು ಹೆಚ್ಚಿಸುತ್ತದೆ:

ನಿಜವಲ್ಲ. ಅದು ಮತ್ತೊಂದು ಸುಳ್ಳು. ವಿಮಾನ ನಿಲ್ದಾಣದ ಬಾಡಿ ಸ್ಕ್ಯಾನರ್‌ಗಳು, ಎಕ್ಸ್- ರೇ ಯಂತ್ರಗಳು ಮತ್ತು ಇತರ ವಿಕಿರಣಗಳು ನಿಮ್ಮ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಈ ಬಗೆಯ ವಿಕಿರಣಗಳು ಅತಿ ಹೆಚ್ಚು ಪ್ರಬಲವಲ್ಲ ಹಾಗೂ ದೇಹವನ್ನು ಆಸ್ಪತ್ರೆಯಲ್ಲಿದ್ದಷ್ಟು ತೀಕ್ಷ್ಣವಾಗಿ ಭೇದಿಸುವುದಿಲ್ಲ. ಆದ್ದರಿಂದ, ಈ ಕಾರ್ಯಗಳಿಂದ ಭ್ರೂಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಆದಾಗ್ಯೂ, ಮೂರನೇ ತ್ರೈಮಾಸಿಕದ ಸಮಯದಲ್ಲಿ ವಿಮಾನಯಾನ ಸೂಕ್ತವಲ್ಲ ಏಕೆಂದರೆ ನೀವು ಮಾರ್ಗದಲ್ಲಿ ಹೆರಿಗೆಗೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೇ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ವೈದ್ಯರು ಅನಿವಾರ್ಯ ಎಂದು ಪ್ರಮಾಣ ಪತ್ರ ನೀಡದ ಹೊರತು ಮೂರನೆಯ ತ್ರೈಮಾಸಿಕದ ಸಮಯದಲ್ಲಿ ಟಿಕೇಟನ್ನೇ ಕೊಡುವುದಿಲ್ಲ. ಹಾಗಾಗಿ, ಒಂದು ವೇಳೆ ಪ್ರಯಾಣ ಅನಿವಾರ್ಯವಾಗಿದ್ದರೆ ಎರಡನೇ ತ್ರೈಮಾಸಿಕದಲ್ಲಿಯೇ ಪೂರೈಸಿ ಬಿಡಬೇಕು.

English summary

Myths About Pregnancy That We Still Believe in

Here we are discussing about Most Believed Myths About Pregnancy. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X