For Quick Alerts
ALLOW NOTIFICATIONS  
For Daily Alerts

ಗರ್ಭಪಾತ: ಕಾರಣ, ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

|

ಗರ್ಭಿಣಿ ಎಂದು ಗೊತ್ತಾದ ಕ್ಷಣದಿಂದ ಹುಟ್ಟಲಿರುವ ಮಗುವಿನ ಬಗ್ಗೆ ತಾಯಿ ಅನೇಕ ಕನಸ್ಸು ಕಾಣಲಾರಂಭಿಸುತ್ತಾಳೆ. ದಿನಗಳು ಕಳೆದಂತೆ ಹೊಟ್ಟೆಲಿರುವ ಮಗುವಿನ ಜೊತೆ ಒಂದು ಭಾವನಾತ್ಮಕವಾದ ಬಂಧ ಏರ್ಪಟ್ಟಿರುತ್ತದೆ. ಆದರೆ ಕೆಲವರಿಗೆ ಮೂರು ತಿಂಗಳು ತುಂಬುವ ಒಳಗಾಗಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

Miscarriage: Causes, Symptoms Risk Factors, Diagnosis, Treatment & Prevention

ಮೂರು ತಿಂಗಳು ಕಳೆದ ಮೇಲೆ ಸ್ವಲ್ಪ ಸೇಫ್‌ ಎಂದು ಹೇಳಬಹುದು. ಆದರೆ ಕೆಲ ಆರೋಗ್ಯ ಸಮಸ್ಯೆ ಇರುವವರಿಗೆ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಗರ್ಭಪಾತ ಉಂಟಾಗಬಹುದು. ಆದರೆ ಈ ರೀತಿ ಗರ್ಭಪಾತ ಉಂಟಾದಾಗ ತಾಯಿಯ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಮಾನಸಿಕ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ.

ಕೆಲವರು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾರೆ. ಶೇ. 10-26ರಷ್ಟು ಗರ್ಭಿಣಿಯರಿಗೆ ಗರ್ಭಪಾತ ಉಂಟಾಗುತ್ತದೆ. ಅದರಲ್ಲೂ ಮೂರನೇ ತ್ರೈ ಮಾಸಿಕದಲ್ಲಿ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚು, ಹನ್ನೆರಡು ವಾರಗಳ ಬಳಿಕ ಗರ್ಭಪಾತವಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ಹೇಳುತ್ತವೆ.

 ಗರ್ಭಪಾತಕ್ಕೆಕಾರಣವೇನು?

ಗರ್ಭಪಾತಕ್ಕೆಕಾರಣವೇನು?

1. ಕ್ರೋಮೋಸೋಮಲ್ ಅಬ್‌ನಾರ್ಮಲಿಟಿ (ಕ್ರೋಮ್‌ಸೋಮ್‌ನಲ್ಲಿ ಅಸಾಮಾನ್ಯತೆ)

ಮೊದಲನೇ ತ್ರೈ ಮಾಸಿಕದಲ್ಲಿ ಗರ್ಭಪಾತಕ್ಕೆ ಪ್ರಮುಖ ಕಾರಣ ಕ್ರೋಮೋಸೋಮ್‌ನಲ್ಲಿ ಅಸಾಮಾನ್ಯತೆ ಉಂಟಾಗುವುದು. ಇದರಲ್ಲಿ ವ್ಯತ್ಯಾಸ ಉಂಟಾದರೆ ಭ್ರೂಣದ ಬೆಳವಣಿಗೆ ಸರಿಯಾಗಿ ಉಂಟಾಗುವುದಿಲ್ಲ, ಇದರಿಂದಾಗಿ ಗರ್ಭಪಾತ ಉಂಟಾಗುವುದು.

ಕ್ರೋಮೋಸೋಮಲ್ ಅಬ್‌ನಾರ್ಮಲಿಟಿ (ಕ್ರೋಮ್‌ಸೋಮ್‌ನಲ್ಲಿ ವ್ಯತ್ಯಾಸ) ಅಂಡಾಣು ಅಥವಾ ವೀರ್ಯಾಣುಗೆ ಹಾನಿಯುಂಟಾದಾಗ ಸಂಭವಿಸುತ್ತದೆ ಎಂದು ಅಮೆರಿಕನ್ ಪ್ರೆಗ್ನೆನ್ಸಿ ಅಸೋಷಿಯೇಷನ್ ಹೇಳಿದೆ.

ಜರಾಯುವಿನಲ್ಲಿ(Placenta) ತೊಂದರೆ ಉಂಟಾದಾಗ: ಇದು ಗರ್ಭಿಣಿಯಾದಾಗ ಉಂಟಾಗುವ ತಾತ್ಕಾಲಿಕ ಅಂಗವಾಗಿದ್ದು ಇದು ಗರ್ಭಕೋಶದ ಒಳಗೆ ಇರುತ್ತದೆ. ಇದು ಗರ್ಭಿಣಿಯಾದಾಗ ಗರ್ಭಕೋಶದ ಒಳಗೆ ಈ ಪದರ ಉಂಟಾಗುವುದು, ಮಗು ಹುಟ್ಟುವಾಗ ಹೊರ ಬೀಳುತ್ತದೆ. ತಾಯಿಂದ ಮಗುವಿಗೆ ಸರಿಯಾದ ರೀತಿಯಲ್ಲಿ ರಕ್ತದ ಪೂರೈಕೆ ಉಂಟಾಗದಿದ್ದಾಗ ಪ್ಲಸೆಂಟಾದಲ್ಲಿ ಅಸಮಾನ್ಯತೆ ಉಂಟಾಗುವುದು.

ಗರ್ಭಕಂಠ ದುರ್ಬಲವಾಗುವುದು

ಯಾವಾಗ ಗರ್ಭಕೋಶದ ಕೆಳಗಿನ ಭಾಗ ಗರ್ಭಕಂಠ ದುರ್ಬಲವಾದಾಗ ಗರ್ಭಪಾತ ಉಂಟಾಗುತ್ತದೆ.

ಗರ್ಭಪಾತಕ್ಕೆ ಇತರ ಕಾರಣಗಳೆಂದರೆ

ಗರ್ಭಪಾತಕ್ಕೆ ಇತರ ಕಾರಣಗಳೆಂದರೆ

  • ಸೋಂಕು
  • ಹಾರ್ಮೋನ್‌ ಅಸಮತೋಲನ
  • ಗರ್ಭಿಣಿಯ ವಯಸ್ಸು
  • ಒಬೆಸಿಟಿ (ಬೊಜ್ಜು)
  • ಗರ್ಭಿಣಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ
  • ಅತ್ಯಧಿಕ ರಕ್ತದೊತ್ತಡ
  • ಅಂಡಾಣುವಿಗೆ ಹಾನಿಯಾಗಿದ್ದರೆ
  • ಧೂಮಪಾನ, ಮದ್ಯಪಾನ
  • ಕಿಡ್ನಿ ಸಮಸ್ಯೆ
  • ಹೃದಯ ಸಮಸ್ಯೆ
  • ರೋಗನಿರೋಧಕ ವ್ಯವಸ್ಥೆಯ ಕಾಯಿಲೆ
  • ಥೈರಾಯ್ಡ್
  • ಪೋಷಕಾಂಶದ ಕೊರತೆ
  • ಕೆಲವೊಂದು ಔಷಧಗಳು
  • ವ್ಯಾಯಾಮ ಮಾಡುವುದು, ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಪಾತ ಉಂಟಾಗುವುದಿಲ್ಲ. ಆದರೆ ನಿಮ್ಮ ವೈದ್ಯರ ಬಳಿ ಸಲಹೆ ಕೇಳುವುದು ಒಳ್ಳೆಯದು. ಏಕೆಂದರೆ ಕೆಲವರಿಗೆ ಕೆಲವು ದಿನಗಳವರೆಗೆ ಸೆಕ್ಸ್ ಮಾಡಬೇಡಿ ಎಂದು ವೈದ್ಯರು ಹೇಳಿರುತ್ತಾರೆ. ಈ ರೀತಿಯ ಸಲಹೆಗಳು ನಿಮ್ಮ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

    ಗರ್ಭಪಾತದ ವಿಧಗಳು

    ಗರ್ಭಪಾತದ ವಿಧಗಳು

    ಭಯಪಡಿಸುವ ಗರ್ಭಪಾತ(threatened miscarriage)

    ಗರ್ಭಪಾತ ಉಂಟಾಗಿ ಕೆಳಹೊಟ್ಟೆಯಲ್ಲಿ ತುಂಬಾ ನೋವು ಹಾಗೂ ಅಸಾಮಾನ್ಯ ರಕ್ತಸ್ರಾವ ಉಂಟಾಗುತ್ತಿರುತ್ತದೆ. ಕೆಲವರಿಗೆ ಮೊದಲ ತ್ರೈಮಾಸಿಕದಲ್ಲಿ ಸ್ವಲ್ಪ -ಸ್ವಲ್ಪ ರಕ್ತಸ್ರಾವ ಉಂಟಾಗುವುದು ಸಹಜ. ಅದಕ್ಕಿಂತ ಹೆಚ್ಚು ಕಂಡು ಬಂದಾಗ ಗರ್ಭಪಾತವಾಗಿದೆಯೇ ಎಂದು ಭಯ ಬೀಳುವಂತಾಗುವುದು. ಇದಕ್ಕೆ ಭಯಪಡಿಸುವ ಗರ್ಭಪಾತ ಎಂದು ಹೇಳಲಾಗುವುದು.

    ಲಕ್ಷಣಗಳು: ತುಂಬಾ ಕೆಳಹೊಟ್ಟೆ ನೋವು

    ರಕ್ತಸ್ರಾವ(Inevitable Miscarriage) : ಇದರಲ್ಲಿ ಗರ್ಭಕಂಠ ಓಪನ್‌ ಆಗಿ ಹೊಟ್ಟೆಯಲ್ಲಿ ಸೆಳೆತ ಉಂಟಾಗುವುದು ಹಾಗೂ ರಕ್ತಸ್ರಾವ ಉಂಟಾಗುವುದು.

    ಲಕ್ಷಣ: ಇದ್ದಕ್ಕಿದ್ದಂತೆ ರಕ್ತಸ್ರಾವ ಉಂಟಾಗುವುದು

    ಗರ್ಭಪಾತ ಸರಿಯಾಗಿ ಆಗದೇ ಇರುವುದು (Incomplete Miscarriage): ಇದರಲ್ಲಿ ಭ್ರೂಣದ ಎಲ್ಲಾ ಅಂಶ ಹೊರಗೆ ಹೋಗಿರುವುದಿಲ್ಲ, ಸ್ವಲ್ಪ ಅಂಶ ಉಳಿದು ಕೊಂಡಿರುತ್ತದೆ.

    ಪೂರ್ಣ ಗರ್ಭಪಾತ (Complete Miscarriage): ಇದರಲ್ಲಿ ಭ್ರೂಣದ ಎಲ್ಲಾ ಅಂಶಗಳು ಹೊರ ಹೋಗಿರುತ್ತದೆ.

    ಅಪೂರ್ಣ ಗರ್ಭಪಾತ (Missed Miscarriage): ಇದರಲ್ಲಿ ಮಗು ಸತ್ತಿರುತ್ತದೆ, ಆದರೆ ಯಾವುದೇ ರಕ್ತಸ್ರಾವ ಉಂಟಾಗಿರುವುದಿಲ್ಲ, ಭ್ರೂಣದ ಅಂಶ ಹೊರ ಹೋಗಿರುವುದಿಲ್ಲ.

    ಸೆಪ್ಟಿಕ್ ಗರ್ಭಪಾತ(Septic Miscarriage): ಇದರಲ್ಲಿ ಭ್ರೂಣದ ಸ್ವಲ್ಪ ಅಂಶ ಉಳಿದುಕೊಂಡು ಸೆಪ್ಟಿಕ್ ಉಂಟಾಗುವುದು.

    ಗರ್ಭಪಾತದ ಲಕ್ಷಣಗಳು

    ಗರ್ಭಪಾತದ ಲಕ್ಷಣಗಳು

    • ಸ್ವಲ್ಪ ಅಥವಾ ಅಧಿಕ ರಕ್ತಸ್ರಾವ
    • ಸ್ನಾಯು ಸೆಳೆತ
    • ಕೆಳಹೊಟ್ಟೆ ನೋವು
    • ಸ್ವಲ್ಪ ಅಥವಾ ತುಂಬಾ ಬೆನ್ನು ಅಥವಾ ಸೊಂಟ ನೋವು
    • ಜನನೇಂದ್ರೀಯದಲ್ಲಿ ನೋವು
    • ಸೊಂಟ ನೋವು
    • ಸುಸ್ತು
    • ದ್ರವ ಅಥವಾ ಭ್ರೂಣದ ಅಂಶ ಹೊರಬರುವುದು
    • ತೂಕ ಇಳಿಕೆ
    • ಗರ್ಭಪಾತ ಉಂಟಾಗಲು ಪ್ರಮುಖ ಕಾರಣಗಳು

      ಗರ್ಭಪಾತ ಉಂಟಾಗಲು ಪ್ರಮುಖ ಕಾರಣಗಳು

      • ವಯಸ್ಸು
      • ಈ ಹಿಂದೆ ಗರ್ಭಪಾತವಾಗಿದ್ದರೆ
      • ನಿಯಂತ್ರಣಕ್ಕೆ ಬಾರದ ಮಧುಮೇಹ
      • ತುಂಬಾ ತೂಕ ಕಡಿಮೆ ಅಥವಾ ಅತಿಯಾದ ತೂಕ
      • ದೈಹಿಕ ತೊಂದರೆ
      • ತುಂಬಾ ಕೆಫೀನ್ ವಸ್ತುಗಳ ಸೇವನೆ
      • ಧೂಮಪಾನ
      • ಮದ್ಯ
      • ವಿಕಿರಣಗಳು ಬಿದ್ದರೆ
      • ಗರ್ಭಕೋಶದಲ್ಲಿ ತೊಂದರೆ
      • ಅವಳಿ ಮಕ್ಕಳು ಮಕ್ಕಳು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳು ಗರ್ಭದಲ್ಲಿದ್ದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

        ಗರ್ಭಪಾತವಾಗಿದೆ ಎಂದು ಪತ್ತೆ ಹೇಗೆ?

        ಗರ್ಭಪಾತವಾಗಿದೆ ಎಂದು ಪತ್ತೆ ಹೇಗೆ?

        • ಅಲ್ಟ್ರಾಸೌಂಡ್: ಇದರಲ್ಲಿ ಭ್ರೂಣದ ಅಂಶ ಉಳಿದೆಯೇ ಎಂದು ತಿಳಿದುಕೊಳ್ಳಲಾಗುವುದು.
        • ಪೆಲ್ವಿಕ್ ಪರೀಕ್ಷೆ ಮಾಡಿ ನೋಡಲಾಗುವುದು
        • ರಕ್ತ ಪರೀಕ್ಷೆ
        • ಚಿಕಿತ್ಸೆ:

          ಚಿಕಿತ್ಸೆ:

          • ಗರ್ಭಪಾತ ಉಂಟಾದಾಗ ಭ್ರೂಣದ ಎಲ್ಲಾ ಅಂಶಗಳು ಹೊರ ಹೋಗಿದ್ದರೆ ಚಿಕಿತ್ಸೆ ಬೇಕಾಗಿಲ್ಲ.
          • ಸ್ವಲ್ಪ ಅಂಶ ಉಳಿದುಕೊಂಡರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಭ್ರೂಣ ಸಂಪೂರ್ಣ ಹೊರ ಹೋಗುವಂತೆ ಮಾಡಲಾಗುವುದು.
          • ಕೆಲವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಉಳಿದ ಭ್ರೂಣದ ಅಂಶ ತೆಗೆಯಲಾಗುವುದು.
          •  ಗರ್ಭಪಾತದ ಬಳಿಕ

            ಗರ್ಭಪಾತದ ಬಳಿಕ

            ಚೇತರಿಕೆ: ಕೆಲವರು ಒಂದೆರಡು ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ, ಇನ್ನು ಕೆಲವರಿಗೆ 15ರಿಂದ ಒಂದು ತಿಂಗಳು ಬೇಕಾಗಬಹುದು. ನಾಲ್ಕರಿಂದ ಆರು ವಾರ ಕಳೆಯುವಷ್ಟರಲ್ಲಿ ತಿಂಗಳ ಮುಟ್ಟು ಶುರುವಾಗುತ್ತದೆ.

            ಬೆಂಬಲ: ಗರ್ಭಪಾತವಾದಾಗ ದೇಹಕ್ಕಿಂತ ಅಧಿಕ ಮನಸ್ಸಿಗೆ ನೋವಾಗಿರುತ್ತದೆ. ಈ ಸಮಯದಲ್ಲಿ ಮನೆಯವರು ಆಕೆಗೆ ಮಾನಸಿಕ ಧೈರ್ಯ ತುಂಬಬೇಕು. ಗರ್ಭಪಾತವಾದವರು ಕಳೆದು ಹೋದ ಕಹಿ ಘಟನೆ ನೆನಪಿಸುವ ಬದಲು ಧನಾತ್ಮಕವಾಗಿ ಚಿಂತನೆ ಮಾಡುವುದು ಒಳ್ಳೆಯದು.

            ಯಾವಾಗ ಗರ್ಭಧಾರಣೆಗೆ ಪ್ರಯತ್ನಿಸಬಹುದು?

            ಯಾವಾಗ ಗರ್ಭಧಾರಣೆಗೆ ಪ್ರಯತ್ನಿಸಬಹುದು?

            ಮತ್ತೆ ಗರ್ಭಧಾರಣೆಗೆ ಪ್ರಯತ್ನಿಸುವಾಗ ದೇಹ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ನೀಡಬೇಕು, ವೈದ್ಯರು ಎಷ್ಟು ತಿಂಗಳ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸಬಹುದು ಎಂದು ಸಲಹೆ ನೀಡುತ್ತಾರೆ.

            ಗರ್ಭಪಾತ ತಡೆಗಟ್ಟುವುದು ಹೇಗೆ?

            • ಪೋಷಕಾಂಶವಿರುವ ಆಹಾರ ಸೇವಿಸಿ
            • ಆರೋಗ್ಯಕರ ತೂಕ ಹೊಂದಿ
            • ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು
            • ಯಾವುದೇ ಸೋಂಕು ತಗುಲದಂತೆ ಮುನ್ನೆಚ್ಚರಿಕೆವಹಿಸಿ
            • ಕೆಫೀನ್ ಸೇವನೆ ಮಾಡದಿರುವುದು ಒಳ್ಳೆಯದು
            • ಗರ್ಭಿಣಿ ಎಂದು ಗೊತ್ತಾದ ಕ್ಷಣದಿಂದ ಎಚ್ಚರವಹಿಸಿ.
English summary

Miscarriage: Causes, Symptoms Risk Factors, Diagnosis, Treatment & Prevention

Studies show that about 10 to 26 per cent of all recognised pregnancies end in miscarriage. A miscarriage is most likely to occur within the first three months of pregnancy, which is estimated to be around 80 per cent.
X
Desktop Bottom Promotion