For Quick Alerts
ALLOW NOTIFICATIONS  
For Daily Alerts

ಐವಿಎಫ್ ಮಾಡಿಸಿಕೊಳ್ಳುವವರು ತಿನ್ನಬಾರದ, ತಿನ್ನಬೇಕಾದ ಆಹಾರಗಳಿವು

|

ಕೆಲ ದಂಪತಿಗಳಿಗೆ ನೈಸರ್ಗಿಕವಾಗಿ ಮಗು ಪಡೆಯಲು ಸಾಧ್ಯವಾಗುವುದಿಲ್ಲ. ಆಗ ವೈದ್ಯರು ಐವಿಎಫ್‌ ಮೂಲಕ ಮಗು ಪಡೆಯಬಹುದೆಂಬ ಸಲಹೆ ನೀಡುತ್ತಾರೆ. ಈ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಅನೇಕ ದಂಪತಿಗಳಿಗೆ ಮಕ್ಕಳನ್ನು ಪಡೆಯಲು ಸಾಧ್ಯವಾಗಿದೆ.

ಐವಿಎಫ್‌ ಎಂಬುವುದು ಮಹಿಳೆಯ ಫಲವತ್ತಾದ ಅಂಡಾಣು ಪಡೆದು ಅದಕ್ಕೆ ವೀರ್ಯಾಣು ಸೇರಿಸಿ ಭ್ರೂಣ ಉತ್ಪತ್ತಿ ಮಾಡಲಾಗುವುದು, ಈ ಪ್ರಕ್ರಿಯೆ ಲ್ಯಾಬ್‌ನಲ್ಲಿ ನಡೆಯುತ್ತದೆ. ಅದಾದ ಬಳಿಕ ಆ ಭ್ರೂಣವನ್ನು ತಾಯಿಯಾಗ ಬಯಸುವ ಮಹಿಳೆ ಅಥವಾ ಬಾಡಿಗೆ ತಾಯಿಯ ಗರ್ಭಾಶಯದ ಒಳಗಡೆ ಸೇರಿಸಲಾಗುವುದು. ಈ ಕ್ರಿಯೆಗೆ ಸಾಮಾನ್ಯವಾಗಿ ಮೂರು ವಾರಗಳು ಬೇಕಾಗುವುದು. ಐವಿಎಫ್‌ ಯಶಸ್ವಿಯಾಗಬೇಕಾದರೆ ಮಹಿಳೆಯ ಮೈ ತೂಕ ಕೂಡ ಮುಖ್ಯವಾಗಿದೆ. ಅತೀ ತೂಕದ ಅಥವಾ ತುಂಬಾ ಕಡಿಮೆ ತೂಕದ ಮಹಿಳೆಯರಲ್ಲಿ ಐವಿಎಫ್‌ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಐವಿಎಫ್‌ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಸಮತೂಕವನ್ನು ಹೊಂದುವಂತೆ ವೈದ್ಯರು ಸೂಚಿಸುತ್ತಾರೆ.

ಯಾರು ಐವಿಎಪ್‌ಗೆ ಒಳಗಾಗುತ್ತಾರೋ ಅವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಐವಿಎಫ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲುವಂತೆ ಮಾಡಬಹುದು. ಹೀಗಾಗಿ ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಈ ಸಮಯದಲ್ಲಿ ನಿಮ್ಮ ಆಹಾರಕ್ರಮದಲ್ಲಿ ತುಂಬಾನೇ ಬದಲಾವಣೆ ಮಾಡಬೇಕಾಗುವುದು. ಉದಾಹರಣೆಗೆ ಈ ಸಮಯದಲ್ಲಿ ಗ್ಲುಟೇನ್‌ ಫ್ರೀ ಆಹಾರಗಳ ಸೇವನೆ ಅಥವಾ ವೇಗನ್‌ ಡಯಟ್ ಇವೆಲ್ಲಾ ಒಳ್ಳೆಯದಲ್ಲ.

ಐವಿಎಫ್‌ ಚಿಕಿತ್ಸೆ ಪಡೆಯುವವರು ಪೋಷಕಾಂಶದ ಅಹಾರಗಳನ್ನು ಸೇವಿಸಬೇಕಾಗುತ್ತದೆ. ಫಾಸ್ಟ್‌ ಫುಡ್ಸ್, ಅನಾರೋಗ್ಯಕರ ಆಹಾರ ಇವುಗಳನ್ನು ದೂರವಿಡಬೇಕಾಗುತ್ತದೆ. ಐವಿಎಫ್‌ ಚಿಕಿತ್ಸೆ ಪಡೆಯುವವರು ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಯೋಣ ಬನ್ನಿ:

ಸಂಸ್ಕರಿಸಿದ ಆಹಾರ

ಸಂಸ್ಕರಿಸಿದ ಆಹಾರ

ಸಂಸ್ಕರಿಸಿದ ಆಹಾರಗಳನ್ನು ಸೇವಿಸಬಾರದು. ಇದರ ಜೊತೆಗೆ ಸಂಸ್ಕರಿಸಿದ ಮಾಂಸ , ಸಾಸೇಜ್ ಮುಂತಾದವುಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳು ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟು ಮಾಡುತ್ತವೆ. ಆದ್ದರಿಂದ ಚಿಕಿತ್ಸೆ ಮತ್ತಷ್ಟು ಫಲಕಾರಿಯಾಗಲು ನೀವು ಇಂಥ ಆಹಾರಗಳನ್ನು ದೂರವಿಡುವುದು ಒಳ್ಳೆಯದು.

ಕೃತಕ ಸಿಹಿ ಪದಾರ್ಥಗಳು: ಕೃತಕ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಕೃತಕ ಸಿಹಿ ಪದಾರ್ಥಗಳಿಂದ ದೂರವಿರಿ, ಇದರಿಂದ ತೂಕ ನಿಯಂತ್ರಿಸಬಹುದು ಹಾಗೂ ಐವಿಎಫ್‌ ಚಿಕಿತ್ಸೆ ಫಲಕಾರಿಯಾಗಲು ಸಹಕಾರಿಯಾಗುವುದು.

ಹಸಿ ಮೊಟ್ಟೆ ಸೇವಿಸಬೇಡಿ

ಹಸಿ ಮೊಟ್ಟೆ ಸೇವಿಸಬೇಡಿ

ಹಸಿ ಮೊಟ್ಟೆಯಲ್ಲಿ ಸಾಲ್‌ಮೊನೆಲ್ಲಾ ಎಂಬ ವೈರಸ್ ಇರುತ್ತದೆ. ಇದರಿಂದ ಫುಡ್‌ ಪಾಯಿಸನ್ ಆಗಬಹುದು. ಮೊಟ್ಟೆಯನ್ನು ಬೇಯಿಸಿ ತಿನ್ನಿ.

ಮದ್ಯಪಾನ-ಧೂಮಪಾನ: ಐವಿಎಫ್‌ ಚಿಕಿತ್ಸೆ ತೆಗೆದುಕೊಳ್ಳುವವರು ಮದ್ಯಪಾನ ಮಾಡಬಾರದು. ಧೂಮಪಾನ ಮಾಡಬಾರದು.

ಸಕ್ಕರೆ,ಚೀಸ್: ಐವಿಎಫ್‌ ಚಿಕಿತ್ಸೆ ಮಾಡಿಸುವವರು ಸಕ್ಕರೆಯಂಶ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಬೇಕು. ಈ ಸಮಯದಲ್ಲಿ ಚೀಸ್‌ ಸೇವಿಸದಿರುವುದು ಒಳ್ಳೆಯದು.

ಯಾವ ಬಗೆಯ ಆಹಾರಗಳನ್ನು ಸೇವಿಸಬೇಕು?

ಯಾವ ಬಗೆಯ ಆಹಾರಗಳನ್ನು ಸೇವಿಸಬೇಕು?

ಸತುವಿನಂಶವಿರುವ ಆಹಾರ: ಸತು ದೇಹದಲ್ಲಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಧಾನ್ಯಗಳು, ನಟ್ಸ್, ಹಾಲಿನ ಉತ್ಪನ್ನಗಳು, ಮಾಂಸ, ಆಲೂಗಡ್ಡೆ ಇವುಗಳಲ್ಲಿ ಸತುವಿನಂಶವಿರುತ್ತದೆ.

ಫಾಲಿಕ್ ಆಮ್ಲ ಇರುವ ಆಹಾರಗಳು: ಮಗುವಿನ ಮೆದುಳು ಹಾಗೂ ಬೆನ್ನು ಮೂಳೆಯ ಬೆಳವಣಿಗೆಗೆ ಫಾಲಿಕ್ ಆಮ್ಲ ಅವಶ್ಯಕ. ಈ ಕಾರಣಕ್ಕಾಗಿ ಗರ್ಭಿಣಿಯರಿಗೆ ಫಾಲಿಕ್ ಅಮ್ಲ ಸಪ್ಲಿಮೆಂಟ್‌ ನೀಡಲಾಗುವುದು. ಪಾಲಾಕ್, ಬ್ರೊಕೋಲಿ, ಲೆಟ್ಯೂಸೆ, ಅಶ್ವಗಂಧ, ಬೀನ್ಸ್, ಬಟಾಣಿ ಇಂಥ ಆಹಾರಗಳಲ್ಲಿ ಫಾಲಿಕ್ ಆಮ್ಲ ಅಧಿಕವಿರುತ್ತದೆ.

ಕಬ್ಬಿಣದಂಶ ಅಧಿಕವಿರುವ ಆಹಾರ

ಕಬ್ಬಿಣದಂಶ ಅಧಿಕವಿರುವ ಆಹಾರ

ಸಿಹಿ ಕುಂಬಳದ ಬೀಜ, ಮೃದ್ವಂಗಿಗಳು, ಪಾಲಾಕ್, ಇತರ ಸೊಪ್ಪುಗಳಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂಶದ ಆಹಾರಗಳ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಬಹುದು.

ಪ್ರೊಟೀನ್ ಅಧಿಕವಿರುವ ಅಹಾರ

ನಮ್ಮ ಮೈ ತೂಕ ಎಷ್ಟಿದೆಯೋ ಅಷ್ಟು ಗ್ರಾಂ ಪ್ರೊಟೀನ್‌ ಬೇಕಾಗುವುದು. ಚಿಕನ್, ಮೀನು, ಟೋಫು, ಬೀನ್ಸ್, ಧಾನ್ಯಗಳು, ಮೊಸರು, ಹಾಲು, ಪಾಲಾಕ್, ಬ್ರೊಕೋಲಿ, ನಟ್ಸ್ ಇಂಥ ಆಹಾರಗಳಲ್ಲಿ ಪ್ರೊಟೀನ್ ಇರುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಖರ್ಜೂರ, ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ದಿನದಲ್ಲಿ 3-4 ಲೀಟರ್ ನೀರು ಕುಡಿಯಿರಿ.

English summary

IVF success Diet tips: Foods to Eat & Foods to avoid during treatment in Kannada

IVF success Diet tips: Foods to Eat & Foods to avoid during treatment in Kannada...
Story first published: Saturday, November 6, 2021, 9:23 [IST]
X
Desktop Bottom Promotion