For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನಿಮ್ಮ ಕೂದಲಿಗೆ ಡೈ ಮಾಡುವುದು ಸುರಕ್ಷಿತವೇ?

|

ಕೆಲವು ಸೌಂದರ್ಯದ ಅಭ್ಯಾಸಗಳನ್ನು ಗರ್ಭಿಣಿಯಾದಾಗಲೂ ಮುಂದುವರಿಸಬೇಕು ಎಂದು ಬಯಸುವುದು ಸರ್ವೇಸಾಮಾನ್ಯ. ಅಂತಹವುಗಳಲ್ಲಿ ಕೂದಲಿಗೆ ಡೈ ಮಾಡುವ ಅಭ್ಯಾಸ ಕೂಡ ಒಂದು. ಒಂದು ವೇಳೆ ಹೇರ್ ಡೈ ಮಾಡುವುದು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಆಗಿದ್ದಲ್ಲಿ ಅದನ್ನು ತಪ್ಪಿಸುವುದಕ್ಕೆ ಅಥವಾ ಗರ್ಭಿಣಿಯಾಗಿದ್ದಾಗ ನಿಲ್ಲಿಸುವುದಕ್ಕೆ ಹೆಚ್ಚಿನವರು ಬಯಸುವುದಿಲ್ಲ.

Hair dye

ಆದರೆ ಗರ್ಭಿಣಿಯಾಗಿದ್ದಾಗ ಈ ಅಭ್ಯಾಸವನ್ನು ಮುಂದುವರಿಸುವುದು ಸುರಕ್ಷಿತವೇ? ಅಥವಾ ಹೇರ್ ಡೈ, ಬ್ಲೀಚ್ ಗಳಲ್ಲಿ ಬಳಕೆಯಾಗಿರುವ ರಾಸಾಯನಿಕಗಳು ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಏನಾದರೂ ದುಷ್ಪರಿಣಾಮವನ್ನು ಉಂಟು ಮಾಡುತ್ತದೆಯೇ? ಬೋಲ್ಡ್ ಸ್ಕೈ ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುತ್ತದೆ ಮತ್ತು ನೈಸರ್ಗಿಕವಾಗಿ ಬಳಕೆ ಮಾಡಬಹುದಾದ ಕೆಲವು ಪರ್ಯಾಯ ವಿಧಾನಗಳನ್ನು ಕೂಡ ತಿಳಿಸುತ್ತದೆ. ಮೊದಲನೆಯದಾಗಿ ಉತ್ತರಿಸಬೇಕಾಗಿರುವ ಪ್ರಶ್ನೆ ಕೂದಲಿಗೆ ಬಣ್ಣ ಹಾಕಿಕೊಳ್ಳವುದು ಸುರಕ್ಷಿತವೇ ಎಂಬುದಾಗಿದೆ.

ಗರ್ಭಿಣಿಯಾಗಿದ್ದಾಗ ಕೂದಲಿಗೆ ಬಣ್ಣ ಹಚ್ಚುವುದು ಸುರಕ್ಷಿತವೇ?

ಗರ್ಭಿಣಿಯಾಗಿದ್ದಾಗ ಕೂದಲಿಗೆ ಬಣ್ಣ ಹಚ್ಚುವುದು ಸುರಕ್ಷಿತವೇ?

ಈ ವಿಚಾರದಲ್ಲಿ ಕೆಲವು ಸೀಮಿತ ಅಧ್ಯಯನಗಳು ನಡೆದಿವೆ. ಈ ಸಂಶೋಧನೆಗಳು ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ. ಶಾಶ್ವತ ಮತ್ತು ಅರೆ-ಶಾಶ್ವತ ರಾಸಾಯನಿಕಯುಕ್ತ ಡೈಗಳು ವಿಷಕಾರಿಯಾಗಿರುವುದಿಲ್ಲ. ಅಷ್ಟೇ ಅಲ್ಲ ಕೂದಲಿನಲ್ಲಿ ಹೀರಲ್ಪಡುವ ಹೇರ್ ಡೈನ ಬಣ್ಣವು ಭ್ರೂಣವನ್ನು ತಲುಪುವುದು ಬಹಳ ಕಡಿಮೆ ಎಂದು ಅಧ್ಯಯನವು ಹೇಳುತ್ತದೆ.

ಈ ಬಗ್ಗೆ ತಜ್ಞರು ಹೇಳುವುದೇನು?

ಈ ಬಗ್ಗೆ ತಜ್ಞರು ಹೇಳುವುದೇನು?

ಸರಿಯಾದ ಸಾಕ್ಷ್ಯಾಧಾರಗಳು ಲಭ್ಯವಿರದ ಕಾರಣ ಸದ್ಯಕ್ಕೆ ತಜ್ಞರು ಹೇಳುವುದೇನೆಂದರೆ ಕೂದಲಿನ ಬಣ್ಣಗಳಿಂದ ಸುರಕ್ಷಿತವಾಗಿರುವಂತೆ ಹೇಳುತ್ತಾರೆ. ಡೈಗಳು ಕೂದಲಿನ ಸ್ಕಾಲ್ಪ್ ಅಥವಾ ಹಣೆಯ ಭಾಗದೊಂದಿಗೆ ಸಂಪರ್ಕ ಹೊಂದುತ್ತದೆ. ಗರ್ಭಿಣಿಯಾಗಿದ್ದಾಗ ನಿಮ್ಮ ಚರ್ಮವು ಹೆಚ್ಚು ಸೂಕ್ಷ್ಮವಾಗುವುದರಿಂದಾಗಿ ಡೈಗಳು ತುರಿಕೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕಾಗಿ ಹೆಚ್ಚಿನ ತಜ್ಞರು ನೈಸರ್ಗಿಕವಾಗಿರುವ ಕೂದಲಿನ ಬಣ್ಣಗಳನ್ನು ಈ ಸಮಯದಲ್ಲಿ ಬಳಸುವಂತೆ ಸಲಹೆ ನೀಡುತ್ತಾರೆ.

ಗರ್ಭಿಣಿಯಾಗಿದ್ದಾಗ ಬಳಸಬಹುದಾದ ನೈಸರ್ಗಿಕ ಹೇರ್ ಡೈ ಮಾರ್ಗಗಳು

ಗರ್ಭಿಣಿಯಾಗಿದ್ದಾಗ ಬಳಸಬಹುದಾದ ನೈಸರ್ಗಿಕ ಹೇರ್ ಡೈ ಮಾರ್ಗಗಳು

ಕೇವಲ ಗರ್ಭಿಣಿಯಾಗಿದ್ದಾಗ ಮಾತ್ರವಲ್ಲ ಬಾಣಂತಿಯಾಗಿದ್ದಾಗ ಕೂಡ ಬಳಸಬಹುದಾದ ಹಲವು ನೈಸರ್ಗಿಕವಾದ ಅಥವಾ ರಾಸಾಯನಿಕ ಕೂದಲಿನ ಬಣ್ಣಗಳಿಗೆ ಪರ್ಯಾಯವಾಗಿರುವ ಹೇರ್ ಕಲರ್ ಗಳು ಲಭ್ಯವಿದೆ. ಅವುಗಳ ಕೆಲವು ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ಇವುಗಳಲ್ಲಿ ನಿಮ್ಮ ಕೂದಲಿಗೆ ಹೊಂದಿಕೆಯಾಗುವುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಮದರಂಗಿ

ಮದರಂಗಿ

ಮದರಂಗಿ, ಚಹಾದ ಡಿಕಾಕ್ಷನ್ ಮತ್ತು ನಿಂಬೆಯ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸಮಪ್ರಮಾಣದಲ್ಲಿ ಎಲ್ಲಾ ಕೂದಲಿಗೂ ತಗುಲುವಂತೆ ಹಚ್ಚಿಕೊಂಡು ಒಣಗಲು ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲಿಗೆ ಕೆಂಪು-ಕಿತ್ತಳೆ ವರ್ಣವನ್ನು ನೀಡುತ್ತದೆ ಮತ್ತು ಫಳಫಳ ಹೊಳೆಯುವಂತೆ ಮಾಡುತ್ತದೆ.

ಕಾಫಿ

ಕಾಫಿ

ಅರ್ಧ ಕಪ್‌ನಷ್ಟು ಎಸ್ಪ್ರೆಸ್ಸೋ ಮತ್ತು ಒಂದು ಕಪ್‌ನಷ್ಟು ಕಪ್ಪಾಗಿ ಹುರಿದಿರುವ ಕಾಫಿ ಬೀಜಗಳಿಂದ ತಯಾರಿಸಿದ ಕಾಫಿಯನ್ನು ರೆಡಿ ಮಾಡಿಕೊಳ್ಳಿ. ಅರ್ಧ ಕಪ್ ನಷ್ಟು ಲಿವ್-ಇನ್-ಕಂಡೀಷನರ್ ಜೊತೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒದ್ದೆಯಾಗಿರುವ ಸ್ವಚ್ಛ ಕೂದಲಿಗೆ ಈ ಮಿಶ್ರಣವನ್ನು ಅಪ್ಲೈ ಮಾಡಿ ಮತ್ತು ಒಂದು ಘಂಟೆ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಇದು ಕೂದಲನ್ನು ಕಪ್ಪಾಗಿಸಿ ನಿಮ್ಮ ಬದಲಾದ ಕೂದಲಿನ ಬಣ್ಣವನ್ನು ಕಪ್ಪು ವರ್ಣಕ್ಕೆ ತಿರುಗುವಂತೆ ಮಾಡುತ್ತದೆ.

ಕ್ಯಾಮೋಮೈಲ್ ಚಹಾ

ಕ್ಯಾಮೋಮೈಲ್ ಚಹಾ

ಕೇಂದ್ರೀಕರಿಸಿದ ಚಹಾ ಡಿಕಾಕ್ಷನ್ ನಿಮ್ಮ ಕೂದಲನ್ನು ಹಗುರಗೊಳಿಸುತ್ತದೆ ಮತ್ತು ಬೂದು ವರ್ಣಕ್ಕೆ ತಿರುಗಿರುವ ಕೂದಲನ್ನು ಕಪ್ಪಾಗಿಸುತ್ತದೆ. ಕೂದಲನ್ನು ನೀರಿನಿಂದ ತೇವಗೊಳಿಸಿ ಮತ್ತು ಅದಕ್ಕೆ ಕ್ಯಾಮೋಮೈಲ್ ಚಹಾವನ್ನು ಅಪ್ಲೈ ಮಾಡಿ. ಒಂದು ಘಂಟೆ ಹೊತ್ತು ಹಾಗೆಯೇ ಕುಳಿತುಕೊಳ್ಳಿ ಮತ್ತು ನಂತರ ತೊಳೆಯಿರಿ. ಇದು ಅತ್ಯುತ್ತಮವಾದ ಗಾಢ ಬಣ್ಣವನ್ನು ನಿಮ್ಮ ಕೂದಲಿಗೆ ನೀಡುತ್ತದೆ.

ಕ್ಯಾರೆಟ್ ರಸ

ಕ್ಯಾರೆಟ್ ರಸ

ಕ್ಯಾರೆಟ್ ರಸ ನಿಮ್ಮ ಕೂದಲಿಗೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ನೀಡುತ್ತದೆ ಮತ್ತು ಒಂದೆರಡು ವಾರಗಳವರೆಗೆ ಇರುತ್ತದೆ. ಕ್ಯಾರೆಟ್ ರಸವನ್ನು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯ ಜೊತೆಗೆ ಸೇರಿಸಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಒಂದು ಘಂಟೆಯ ಹೊತ್ತು ನಿಮ್ಮ ಕೂದಲಿನಲ್ಲಿ ಇರುವಂತೆ ನೋಡಿಕೊಳ್ಳಿ. ಆಪಲ್ ಸಿಡರ್ ವಿನೆಗರ್ ಬಳಸಿ ಕೂದಲನ್ನು ತೊಳೆಯಿರಿ. ಒಂದು ವೇಳೆ ನೀವು ಗಾಢ ಕೆಂಪು ವರ್ಣವನ್ನು ಬಯಸುತ್ತೀರಾದರೆ ಕ್ಯಾರೆಟ್ ಜ್ಯೂಸ್ ಬದಲಿಗೆ ಬೀಟ್ ರೂಟ್ ರಸವನ್ನು ಕೂಡ ಬಳಕೆ ಮಾಡಬಹುದು.

ನಿಂಬೆಯ ರಸ

ನಿಂಬೆಯ ರಸ

ಇದು ನಿಮಗೆ ಶಾಶ್ವತವಾಗಿ ಕೂದಲಿಗೆ ಬಣ್ಣವನ್ನು ನೀಡುತ್ತದೆ. ತಾಜಾವಾಗಿ ಹಿಂಡಿದ ನಿಂಬೆಯ ರಸವನ್ನು ಕೂದಲಿಗೆ ಅಪ್ಲೈ ಮಾಡಿ ಒಂದು ಘಂಟೆಯ ಕಾಲ ಹಾಗೆಯೇ ಬಿಡಿ. ಸೂಕ್ತ ಫಲಿತಾಂಶಕ್ಕಾಗಿ ನಿಂಬೆಯ ರಸ ಹಚ್ಚಿದ ನಂತರ ಸೂರ್ಯನ ಕಿರಣಗಳಿಗೆ ನಿಮ್ಮ ಕೂದಲನ್ನು ಒಡ್ಡುವುದು ಒಳ್ಳೆಯದು. ಸೂರ್ಯನ ಕಿರಣಗಳ ಸ್ಪರ್ಷದಿಂದಾಗಿ ನೀವು ಪ್ರೀತಿಸುವಂತ ಕಂದು ಬಣ್ಣವು ನಿಮ್ಮ ಕೂದಲಿಗೆ ಲಭ್ಯವಾಗುತ್ತದೆ.

ಒಂದು ವೇಳೆ ನೀವು ನೈಸರ್ಗಿಕ ಡೈಗಳನ್ನು ಬಳಸುವುದಕ್ಕೆ ಖುಷಿ ಪಡುವವರಾದಲ್ಲಿ ಖಂಡಿತ ಈ ಮೇಲಿನ ವಿಧಾನಗಳನ್ನು ಅನುಸರಿಸಬಹುದು. ಆದರೆ ಒಂದು ವೇಳೆ ನಿಮ್ಮ ಮೊದಲಿನ ಡೈಗಳನ್ನೇ ಬಳಸುವುದನ್ನು ಮುಂದುವರಿಸುವವರಾದಲ್ಲಿ ನಾವು ಹೇಳುವ ಕೆಲವು ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.

ಸುರಕ್ಷಿತವಾಗಿ ಕೂದಲಿಗೆ ಡೈ ಮಾಡುವುದು ಹೇಗೆ?

ಸುರಕ್ಷಿತವಾಗಿ ಕೂದಲಿಗೆ ಡೈ ಮಾಡುವುದು ಹೇಗೆ?

ಸುರಕ್ಷಿತವಾಗಿ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಎರಡನೇ ತ್ರೈಮಾಸಿಕವನ್ನು ತಲುಪುವವರೆಗೆ ಕಾಯಿರಿ. ಗರ್ಭಧಾರಣೆಯ ಪ್ರಾರಂಭಿಕ 12 ವಾರಗಳಲ್ಲಿ ನಿಮ್ಮ ಮಗುವು ದುರ್ಬಲವಾಗಿರುವ ಹಂತದಲ್ಲಿರುತ್ತದೆ. ಅದೇ ಕಾರಣಕ್ಕೆ ಯಾವುದೇ ಹಾನಿಕಾರಕ ರಾಸಾಯನಿಕವನ್ನು ಬಳಸದಂತೆ ತಜ್ಞರು ಸಲಹೆ ನೀಡುತ್ತಾರೆ. ಕೂದಲಿನ ಬಣ್ಣ ಮತ್ತು ಭ್ರೂಣದ ನಡುವಿನ ಸಂಬಂಧದ ಬಗೆಗಿನ ಅಪಾಯವನ್ನು ತಿಳಿಸುವ ಯಾವುದೇ ಅಧ್ಯಯನಗಳು ಇಲ್ಲವಾದರೂ ಕೂಡ 12 ವಾರಗಳವರೆಗೆ ರಾಸಾಯನಿಕವನ್ನು ಬಳಸದೇ ಸುರಕ್ಷಿತವಾಗಿರುವುದು ಒಳಿತು.

ಪರ್ಯಾಯ ಕೂದಲು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ

ಪರ್ಯಾಯ ಕೂದಲು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ಕೂದಲನ್ನು ಸೌಮ್ಯಗೊಳಿಸುವ ಮತ್ತು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆಗೊಳಿಸುವ ಪರ್ಯಾಯ ಕೂದಲು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ. ಹೈಲೈಟ್ ಗಳು, ಲೋಲೈಟ್ ಗಳು, ಸ್ಟ್ರೀಕಿಂಗ್ ಗಳು ಮತ್ತು ಫ್ರಾಸ್ಟಿಂಗ್ ಗಳನ್ನು ಮಾಡಿಸಿಕೊಳ್ಳುವುದರಿಂದಾಗಿ ಕಡಿಮೆ ಬಣ್ಣಗಳನ್ನು ಕೂದಲಿಗೆ ಅಪ್ಲೈ ಮಾಡಲಾಗುತ್ತದೆ.

ಸುರಕ್ಷಿತವಾಗಿರುವ ಬಣ್ಣಗಳನ್ನು ಆಯ್ಕೆ ಮಾಡಿ

ಅಮೋನಿಯಾದಿಂದ ಮುಕ್ತವಾಗಿರುವ ಮತ್ತು ಬ್ಲೀಚ್ ಗಳಿಂದ ಮುಕ್ತವಾಗಿರುವ ಹೇರ್ ಡೈಗಳು ಯಾವುದು ಎಂಬ ಬಗ್ಗೆ ನಿಮ್ಮ ಹೇರ್ ಸ್ಟೈಲಿಸ್ಟ್ ಗಳು ಮಾಹಿತಿ ಕೇಳಿ ನಂತರ ಬಳಸಿ. ಒಂದು ವೇಳೆ ನಿಮಗೆ ನೀವೇ ಅಪ್ಲೈ ಮಾಡಿಕೊಳ್ಳುವುದಕ್ಕೆ ಇಚ್ಛಿಸುವವರಾಗಿದ್ದಲ್ಲಿ ಅರೆ-ಶಾಶ್ವತ ಬಣ್ಣಗಳನ್ನು ಬಳಸಿ. ಇದರಲ್ಲಿ ಬ್ಲೀಚ್ ಇರುವುದಿಲ್ಲ ಮತ್ತು ರಾಸಾಯನಿಕಗಳಿಗೆ,ವಿಷಪೂರಿತ ವಸ್ತುಗಳಿಗೆ ಒಡ್ಡುವಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿಕೊಳ್ಳಬಹುದು.

ಕೆಲಸದ ಪ್ರದೇಶವು ಗಾಳಿಯಾಡುವಂತೆ ಇರಲಿ

ಕೆಲಸದ ಪ್ರದೇಶವು ಗಾಳಿಯಾಡುವಂತೆ ಇರಲಿ

ಒಂದು ವೇಳೆ ನೀವು ಸಲೂನ್ ನಲ್ಲಿದ್ದರೆ, ಸರಿಯಾಗಿ ಗಾಳಿಯಾಡುವ ಪ್ರದೇಶದಲ್ಲಿ ಕುಳಿತುಕೊಳ್ಳಿ. ಒಂದು ವೇಳೆ ಮನೆಯಲ್ಲಿದ್ದರೆ ತೆರೆದ ಪ್ರದೇಶದಲ್ಲಿ ಕುಳಿತು ನಿಮ್ಮ ಕೂದಲಿಗೆ ಡೈ ಮಾಡಿಕೊಳ್ಳಿ. ಅಲ್ಲಿ ನೀವು ತಾಜಾ ಗಾಳಿಯನ್ನು ಉಸಿರಾಡುವಂತಿರಬೇಕು. ಟಾಕ್ಸಿಕ್ ಗ್ಯಾಸ್ ಗಳ ಸೇವನೆ ಆಗದಂತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವುದು ಒಳ್ಳೆಯದು.

ಕೈಗಳನ್ನು ಸರಿಯಾಗಿ ಕವರ್ ಮಾಡಿಕೊಳ್ಳಿ

ಕೈಗಳನ್ನು ಸರಿಯಾಗಿ ಕವರ್ ಮಾಡಿಕೊಳ್ಳಿ

ಒಂದು ವೇಳೆ ನಿಮಗೆ ನೀವೇ ಡೈ ಮಾಡಿಕೊಳ್ಳುತ್ತಿದ್ದೀರಾದರೆ, ಕೈಗಳಿಗೆ ಗ್ಲೌಸ್ ನ್ನು ತೊಟ್ಟುಕೊಳ್ಳಿ.ಆ ಮೂಲಕ ರಾಸಾಯನಿಕಕ್ಕೆ ನಿಮ್ಮ ಕೈಗಳನ್ನು ಒಡ್ಡಿಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ. ಮ್ಯಾನುವಲ್ ಪುಸ್ತಕದಲ್ಲಿ ನೀಡಲಾಗಿರುವ ಹಂತಗಳನ್ನು ಸರಿಯಾಗಿ ಅನುಸರಿಸಿ ಮತ್ತು ಸ್ಕಾಲ್ಪ್ ನ್ನು ಚೆನ್ನಾಗಿ ತೊಳೆಯಿರಿ ಮತ್ತು ಕೈಗಳನ್ನು ಕೂಡ ಎಲ್ಲಾ ಹಂತಗಳು ಸಂಪೂರ್ಣ ಮುಗಿದ ನಂತರ ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.

ಸ್ಟ್ಯಾಂಡ್ ಪರೀಕ್ಷೆ ಮಾಡಿ

ಸ್ಟ್ಯಾಂಡ್ ಪರೀಕ್ಷೆ ಮಾಡಿ

ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದಾಗಿ ಹೇರ್ ಡೈ ಗೆ ನಿಮ್ಮ ಚರ್ಮವು ಸೂಕ್ಷ್ಮವಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಕೂದಲಿಗೆ ಅಪ್ಲೈ ಮಾಡುವ ಮುನ್ನ ಕೆಲವು ಕೂದಲಿಗೆ ಮಾತ್ರವೇ ಅಪ್ಲೈ ಮಾಡಿ ಪರೀಕ್ಷೆ ಮಾಡಿಕೊಳ್ಳಿ. 24 ಘಂಟೆಗಳ ಕಾಲ ಕಾಯಿರಿ. ಒಂದು ವೇಳೆ ಯಾವುದೇ ರೀತಿಯ ಚರ್ಮದ ಪ್ರತಿಕ್ರಿಯೆಗಳು ಆಗದೇ ಇದ್ದಲ್ಲಿ ಮಾತ್ರವೇ ಎಲ್ಲಾ ಕೂದಲಿಗೂ ಅಪ್ಲೈ ಮಾಡಿಕೊಳ್ಳಿ. ಒಂದು ವೇಳೆ ನೀವು ನೈಸರ್ಗಿಕವಲ್ಲದ ಹೇರ್ ಡೈ ಗಳನ್ನು ಪ್ರಯೋಗ ಮಾಡುತ್ತೀರಾದರೆ ಸುರಕ್ಷಿತವಾಗಿರುವ ಹೇರ್ ಡೈಗಳಿಗೆ ಪ್ರಾಮುಖ್ಯತೆ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಆ ಮೂಲಕ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಗರ್ಭಾವಸ್ಥೆಯಲ್ಲಿ ಆಗದಂತೆ ನೋಡಿಕೊಳ್ಳಿ.

ಗರ್ಭಿಣಿಯಾಗಿದ್ದಾಗ ಬಳಸಬಹುದಾದ ಉತ್ತಮ ಹೇರ್ ಡೈ ಯಾವುದು?

ಗರ್ಭಿಣಿಯಾಗಿದ್ದಾಗ ಬಳಸಬಹುದಾದ ಉತ್ತಮ ಹೇರ್ ಡೈ ಯಾವುದು?

ಅಮೋನಿಯಾ, ಪ್ಯಾರಾಬೆನ್ಸ್, ಫೆರಾಕ್ಸೈಡ್, ರೆಸಾರ್ಸಿನಾಲ್ ಮತ್ತು ಪ್ಯಾರಾ-ಫೆನಿಲೆನೆಡಿಯಾಮೈನ್ ಗಳು ಇಲ್ಲದ ಹೇರ್ ಕಲರ್ ಗಳು ಗರ್ಭಾವಸ್ಥೆಯಲ್ಲಿ ಬಳಸುವುದಕ್ಕೆ ಸುರಕ್ಷಿತವಾಗಿರುತ್ತದೆ. ಸುರಕ್ಷಿತವಾಗಿರುವ ಉತ್ಪನ್ನವನ್ನು ನೀವು ಬಳಕೆ ಮಾಡುತ್ತಿದ್ದರೂ ಕೂಡ ನಿಮ್ಮ ಚರ್ಮದೊಂದಿಗೆ ಅವು ಹೊಂದಿಕೆಯಾಗುತ್ತಿದೆಯೇ ಎಂಬುದನ್ನು ಗಮನಿಸಿಕೊಳ್ಳಿ.

ಹೇರ್ ಡೈಯನ್ನು ಪರೀಕ್ಷೆ ಮಾಡುವುದು ಹೇಗೆ?

ಹೇರ್ ಡೈಯನ್ನು ಪರೀಕ್ಷೆ ಮಾಡುವುದು ಹೇಗೆ?

ಯಾವುದೇ ಬ್ರ್ಯಾಂಡಿನ ಹೇರ್ ಡೈಯನ್ನೇ ನೀವು ಖರೀದಿಸಿದ್ದರೂ ಕೂಡ ಅದನ್ನು ಕೂದಲಿಗೆ ಅಪ್ಲೈ ಮಾಡಿಕೊಳ್ಳುವ ಮುನ್ನ ಪರೀಕ್ಷಿಸುವುದು ಬಹಳ ಒಳ್ಳೆಯ ಅಭ್ಯಾಸ. ಮೊದಲಿಗೆ ನೀವು ಕಂಕುಳ ಭಾಗಕ್ಕೆ ಅಪ್ಲೈ ಮಾಡಿಕೊಂಡು ಟೆಸ್ಟ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ತುರಿಕೆ, ಚರ್ಮ ಕೆಂಪಾಗುವುದು, ನೋವು ಅಥವಾ ಉರಿಯಂತ ಅನುಭವವಾದಲ್ಲಿ ಕೂಡಲೇ ತೊಳೆಯಿರಿ ಮತ್ತು ಆ ಡೈಯನ್ನು ಬಳಕೆ ಮಾಡಬೇಡಿ.

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವಾಗ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವಾಗ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು

ಕೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವಾಗ ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾಗಿರುವ ಕೆಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ಆ ಮೂಲಕ ಆಗುವ ಅಡ್ಡಪರಿಣಾಮವನ್ನು ತಡೆಗಟ್ಟಿಕೊಳ್ಳುವುದಕ್ಕೆ ಇವುಗಳು ನೆರವು ನೀಡುತ್ತದೆ.

• ಕೈಪಿಡಿಯಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಅನುಸರಿಸಿ.

• ಹೇರ್ ಕಲರ್ ಬಳಕೆಯನ್ನು ಮಾಡುವ ಮೊದಲು ಪ್ಯಾಚ್ ಪರೀಕ್ಷೆಯನ್ನು ನಡೆಸಿ.

• ಕಣ್ಣು ಮತ್ತು ಚರ್ಮಕ್ಕೆ ನೇರವಾಗಿ ಎಫೆಕ್ಟ್ ಆಗದಂತೆ ಜಾಗೃತೆ ವಹಿಸಿ. ನಂಬಿಕಸ್ಥ ಬ್ರ್ಯಾಂಡ್ ನ ಹೇರ್ ಡೈ ಗಳನ್ನೇ ಖರೀದಿಸಿ.

• ಕಡಿಮೆ ಬೆಲೆಯ ಹೇರ್ ಕಲರ್ ಗಳು ನಿಮಗೆ ಅಡ್ಡಪರಿಣಾಮವನ್ನು ಮಾಡುವ ಸಾಧ್ಯತೆ ಇರುತ್ತದೆ.

• ಕೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವ ಸಮಯದಲ್ಲಿ ಆಹಾರ ಸೇವಿಸಬೇಡಿ ಅಥವಾ ಪಾನೀಯ ಕುಡಿಯಬೇಡಿ. ಇದರಿಂದಾಗಿ ರಾಸಾಯನಿಕ ಅಪ್ಪಿತಪ್ಪಿಯೂ ಹೊಟ್ಟೆ ಸೇರುವುದನ್ನು ತಡೆಯಬಹುದು.

• ಉತ್ತಮ ಗುಣಮಟ್ಟದ ಶಾಂಪೂ ಮತ್ತು ಕಂಡೀಷನರ್ ನ್ನು ಕೂದಲು ತೊಳೆಯುವುದಕ್ಕೆ ಬಳಸಿ

• ಸ್ಕಾಲ್ಪ್ ನ್ನು ಚೆನ್ನಾಗಿ ತೊಳೆಯಿರಿ. ಆ ಮೂಲಕ ಡೈ ಚರ್ಮದಲ್ಲಿ ಹೀರಿಕೊಳ್ಳುವುದನ್ನು ತಡೆಯಬಹುದು.

• ಎಲ್ಲಾ ರೀತಿಯ ಮುಂಜಾಗೃತೆಯನ್ನು ತೆಗೆದುಕೊಂಡಾಗ ಅಡ್ಡಪರಿಣಾಮಗಳಾಗುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?

ವೈದ್ಯರನ್ನು ಯಾವಾಗ ಕಾಣಬೇಕು?

ಒಂದು ವೇಳೆ ಜಾಗರೂಕತೆಯಿಂದ ಹೇರ್ ಡೈ ಆಯ್ಕೆ ಮಾಡಿಕೊಂಡಿದ್ದಲ್ಲಿ ರಾಸಾಯನಿಕಗಳಿಂದ ಆಗುವ ಅಡ್ಡಪರಿಣಾಗಳು ಕಡಿಮೆ. ಪ್ಯಾಚ್ ಟೆಸ್ಟ್ ನ್ನು ಮಾಡಿಕೊಳ್ಳಿ ಮತ್ತು ಎಲ್ಲಾ ರೀತಿಯ ಜಾಗೃತೆಯನ್ನು ತೆಗೆದುಕೊಂಡು ಕೆಟ್ಟ ಪರಿಣಾಮವಾಗುವುದನ್ನು ತಡೆಯಿರಿ.

ಆದರೆ ಒಂದು ವೇಳೆ ತುರಿಕೆ, ನೋವು, ಸ್ಕ್ಯಾಲ್ಪ್ ನಲ್ಲಿ ಅತಿಯಾದ ಕಿರಿಕಿರಿ,ರ್ಯಾಷಶ್ ಗಳು ಇತ್ಯಾದಿಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಗರ್ಭಾವಸ್ಥೆಯಲ್ಲಿ ಎಲ್ಲಾ ರೀತಿಯಲ್ಲೂ ಖುಷಿಯಾಗಿ ಇರುವುದು ಬಹಳ ಮುಖ್ಯ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ನಿಮಗೆ ಖುಷಿ ನೀಡುತ್ತದೆಯಾದರೆ ಖಂಡಿತ ಹಚ್ಚಿಕೊಳ್ಳಿ. ಆದರೆ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದನ್ನು ಮಾತ್ರ ಮರೆಯಬೇಡಿ. ಅತಿಯಾದ ಬಣ್ಣಗಳ ಬಳಕೆಯನ್ನು ಮಾಡಬೇಡಿ. ನಿಮ್ಮ ಗರ್ಭಾವಸ್ಥೆಯ ಸಂಪೂರ್ಣ ಅವಧಿಯಲ್ಲಿ ಮೂರರಿಂದ ನಾಲ್ಕು ಬಾರಿ ಬಳಕೆ ಮಾಡುವುದು ಒಳ್ಳೆಯದು.

English summary

Is't Safe To dye Your Hair During Pregnancy

There are certain beauty practices you would want to continue even when you are pregnant. Hair dye is one such thing, which you do not want to miss if it has always been your style statement or you have been too used to discontinue it now.
Story first published: Wednesday, December 11, 2019, 9:05 [IST]
X
Desktop Bottom Promotion