For Quick Alerts
ALLOW NOTIFICATIONS  
For Daily Alerts

ಕಬ್ಬಿಣದಂಶ ಕಡಿಮೆಯಾದರೂ ಗರ್ಭಧಾರಣೆ ಕಷ್ಟ!

|

ತುಂಬಾ ತೆಳ್ಳಗೆ ಇದ್ದರೆ ಕೆಲವು ಹೆಣ್ಣುಮಕ್ಕಳಿಗೆ ಗರ್ಭಧಾರಣೆ ಕಷ್ಟವಾಗುವುದು, ರಕ್ತಹೀನತೆ ಸಮಸ್ಯೆ ಇದ್ದವರಲ್ಲಿ ಎಷ್ಟೇ ಬಾರಿ ಪ್ರಯತ್ನಿಸಿದರೂ ಗರ್ಭನಿಲ್ಲದೇ ಹೋಗಬಹುದು. ಆದ್ದರಿಂದ ನೀವು ತುಂಬಾ ತೆಳ್ಳಗಿದ್ದೀರಾ ನಿಮ್ಮಲ್ಲಿ ರಕ್ತಹೀನತಗೆ ಸಮಸ್ಯೆಯಿದ್ದರೆ ಗರ್ಭಧಾರಣೆ ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣ ನಿಮ್ಮ ದೇಹದ ತೂಕ ಎಂದು ಹೇಳಬಹುದು.

 Iron Deficiency Affects fertility In Women; details in Kannada

ರಕ್ತಹೀನತೆಯ ಲಕ್ಷಣಗಳೇನು, ರಕ್ತಹೀನತೆ ಇರುವವರು ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವುದರಿಂದ ಗರ್ಭ ನಿಲ್ಲುವುದೇ ಅಥವಾ ಗರ್ಭಧಾರಣೆಗೆ ಫರ್ಟಿಲಿಟಿ ಚಿಕಿತ್ಸೆಯ ಅಗ್ಯತ ಬೀಳುವುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ...

ರಕ್ತಹೀನತೆಯ ಲಕ್ಷಣಗಳು

* ಸುಸ್ತು
* ಸ್ವಲ್ಪ ನಡೆದರೂ ಉಸಿರಾಡಲು ಕಷ್ಟವಾಗುವುದು
* ಮಂಡಿ ನೋವು
* ತ್ವಚೆ ಬಿಳುಚಿಕೊಂಡಿರುವುದು

ವಿಟಮಿನ್ಸ್ ಹಾಗೂ ಕಬ್ಬಿಣದಂಶದ ಕೊರತೆಯಾದರೆ ಸಂತೋನೋತ್ಪತ್ತಿ ಮೇಲೆ ಹೇಗೆ ಪರಿಣಾಮ ಬೀರುವುದು?

ಸಂತನೋತ್ಪತ್ತಿ ಅಂಡಾಣುಗಳ ಉತ್ಪತ್ತಿಗೆ ಕಬ್ಬಿಣದಂಶ ಅವಶ್ಯಕ. ಯಾರಲ್ಲಿ ಕಬ್ಬಿಣದಂಶ ಕಡಿಮೆ ಇರುತ್ತದೋ ಆಗ ಬಂಜೆತನ, ಕಡಿಮೆ ತೂಕದ ಮಗುವಿನ ಜನನ, ಅವಧಿ ಪೂರ್ವ ಹೆರಿಗೆ, ಗರ್ಭಪಾತ ಈ ಬಗೆಯ ಸಮಸ್ಯೆಗಳು ಹೆಚ್ಚುವುದು.

ಕಬ್ಬಿಣದಂಶ ಕಡಿಮೆಯಿದ್ದರೆ ಅಂಡೋತ್ಪತ್ತಿ ಕೂಡ ಸರಿಯಾಗಿ ಆಗುವುದಿಲ್ಲ, ಕಬ್ಬಿಣದಂಶದ ಕೊರತೆ ಇದ್ದಾಗ ಗರ್ಭಕೋಶಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕದ ಪೂರೈಕೆಯಾಗುವುದಿಲ್ಲ, ಈ ಎಲ್ಲಾ ಕಾರಣದಿಂದ ಅಂಡಾಣುಗಳ ಉತ್ಪತ್ತಿ ಸರಿಯಾಗಿ ಆಗುವುದಿಲ್ಲ, ಒಂದು ವೇಳೆ ಅಂಡಾಣುಗಳು ಉತ್ಪತ್ತಿಯಾದರೂ ಅದರ ಗುಣಮಟ್ಟ ಉತ್ತಮವಾಗಿರುವುದಿಲ್ಲ.

ಕಬ್ಬಿಣದಂಶ ಕಡಿಮೆಯಿದ್ದಾಗ ಗರ್ಭಿಣಿಯಾದರೆ ಏನಾಗುವುದು?

ಕಬ್ಬಿಣದಂಶ ಕಡಿಮೆ ಇರುವ ಮಹಿಳೆ ಗರ್ಭಿಣಿಯಾದರೆ ಮಗು ಆರೋಗ್ಯಕರವಾಗಿ ಬೆಳೆಯಲು ತೊಂದರೆ ಉಂಟಾಗುವುದು. ಪ್ಲಾಸೆಂಟಾ ಚೆನ್ನಾಗಿ ಬೆಳವಣಿಗೆಯಾಗದೆ ತೊಂದರೆಯಾಗುವುದು. ವಿಟಮಿನ್‌ ಬಿ ಹಾಗೂ ವಿಟಮಿನ್‌ ಡಿ ಕೊರತೆ ಉಂಟಾದರೆ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.

ವಿಟಮಿನ್ ಕೊರತೆ ಉಂಟಾದರೆ ಏನು ಮಾಡಬೇಕು?

ವಿಟಮಿನ್‌ಗಳು ಹಾಗೂ ಕಬ್ಬಿಣದಂಶದ ಕೊರತೆ ಉಂಟಾದರೆ ನಿಮ್ಮ ದೇಹ ಅದರ ಲಕ್ಷಣಗಳನ್ನು ಸೂಚಿಸುತ್ತದೆ, ಆಗ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು, ಅವರು ನಿಮಗೆ ಕೆಲವೊಂದು ಸಪ್ಲಿಮೆಂಟ್ಸ್ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ, ಅವರು ಹೇಳಿದ ಪ್ರಮಾಣದಲ್ಲಿ ತೆಗೆದುಕೊಳ್ಳಿ.
ಕಬ್ಬಿಣದಂಶವಿರುವ ವೆಜ್‌ ಆಹಾರಗಳು
* ಧಾನ್ಯಗಳು
* ಟೋಫು
* ಸೋಯಾಬೀನ್
* ಬೀನ್ಸ್, ಬಟಾಣಿ
* ನಟ್ಸ್‌ ಹಾಗೂ ಸಿಹಿಕುಂಬಳಕಾಯಿ ಬೀಜ
* ಎಳ್ಳು, ಅಗಸೆಬೀಜ
* ಗೋಡಂಬಿ

ತರಕಾರಿಗಳು

* ಸೊಪ್ಪು
* ಟೊಮೆಟೊ
* ಆಲೂಗಡ್ಡೆ
* ಅಣಬೆ

ಹಣ್ಣುಗಳು
ಪ್ಲಮ್
ಒಣ ಪ್ಲಮ್
ಆಲೀವ್

ಈ ಆಹಾರಗಳಲ್ಲೂ ಕಬ್ಬಿಣದಂಶ ಇವೆ
* ಡಾರ್ಕ್ ಚಾಕೋಲೆಟ್
* ತೆಂಗಿನಕಾಯಿ ಹಾಲು

ದೇಹವು ಕಬ್ಬಿಣದಂಶ ಹೀರಿಕೊಳ್ಳಲು ಈ ಆಹಾರಗಳು ಸಹಾಯ ಮಾಡುತ್ತವೆ:

* ವಿಟಮಿನ್ ಸಿ ಅಧಿಕವಿರುವ ಆಹಾರಗಳು
* ಮೊಳಕೆಬರಿಸಿದ ಕಾಳುಗಳು
* ಹುದುಗು ಬರಿಸಿದ ಆಹಾರ
* ಕಬ್ಬಿಣದ ಪಾತ್ರೆಯಲ್ಲಿ ಮಾಡಿದ ಆಹಾರಗಳು
* ನವಣೆ

ಕಬ್ಬಿಣದಂಶ ಅಧಿಕವಿರುವ ಮಾಂಸಾಹಾರ

* ಕುರಿ
* ಬೀಫ್
* ಟರ್ಕಿ
* ಚಿಕನ್
* ಪೋರ್ಕ್‌
* ಲಿವರ್
* ಮೊಟ್ಟೆ
(ನಾಟಿ ಕೋಳಿ ಮೊಟ್ಟೆ, ಪಾರಂ ಕೋಳಿ ಎರಡರಲ್ಲೂ ಇದೆ)

ಕಬ್ಬಿಣದಂಶ ಅಧಿಕವಿರುವ ಸಮುದ್ರಾಹಾರಗಳು

* ಸೀಗಡಿ
* ಮೃದ್ವಂಗಿಗಳು
* ಬೂತಾಯಿ
* ತುನಾ
* ಬಂಗುಡೆ

ಕಬ್ಬಿಣದಂಶ ಅಧಿಕವಿರುವ ಹಣ್ಣುಗಳು

* ಸ್ಟ್ರಾಬೆರ್ರಿ
* ಕಲ್ಲಂಗಡಿ ಹಣ್ಣು
* ಒಣ ದ್ರಾಕ್ಷಿ
* ಖರ್ಜೂರ
* ಅಂಜೂರ
* ಏಪ್ರಿಕಾಟ್
* ಪೀಚ್

ಬ್ರೆಡ್ ಹಾಗೂ ಧಾನ್ಯಗಳು
ವೈಟ್ ಬ್ರೆಡ್
* ಹೋಲ್‌ ವ್ಹೀಟ್ ಬ್ರೆಡ್
* ಓಟ್ಸ್
* ಕ್ರೀಮ್ ಆಫ್ ವ್ಹೀಟ್
* ಕೆಂಪಕ್ಕಿ

ಆಹಾರಶೈಲಿ ಹಾಗೂ ಸಪ್ಲಿಮೆಂಟ್ಸ್ ಗರ್ಭಧಾರಣೆ ಸಾಧ್ಯತೆ ಹೆಚ್ಚಿಸುವುದೇ?

ಹೌದು, ಕಬ್ಬಿಣದಂಶ ಅಧಿಕವಿರುವ ಆಹಾರಗಳ ಸೇವನೆಯಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿ ಆರೋಗ್ಯವಂತ ಮಗುವನ್ನು ಪಡೆಯಬಹುದು.

ದೇಹಕ್ಕೆ ಎಷ್ಟು ಕಬ್ಬಿಣದಂಶ ಅವಶ್ಯಕ

ದೇಹಕ್ಕೆ ಎಷ್ಟು ಕಬ್ಬಿಣದಂಶ ಅವಶ್ಯ?
19-50 ವರ್ಷದ ಮಹಿಳೆಯರಿಗೆ
50 ವರ್ಷ ಮೇಲ್ಪಟ್ಟ ಮಹಿಳೆರಿಗೆ 8.7ಮಿಗ್ರಾಂ ಬೇಕು

English summary

Iron Deficiency Affects fertility In Women; details in Kannada

Iron Deficiency: How Iron Deficiency affects fertlity, list of iron rich foods, read on...
Story first published: Monday, December 12, 2022, 12:07 [IST]
X
Desktop Bottom Promotion