For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಗಂಟಲು ನೋವಿಗೆ ಇಲ್ಲಿದೆ ಸುಲಭ ಪರಿಹಾರ

|

ಗಂಟಲು ನೋವು ಸಾಮಾನ್ಯವಾಗಿ ನಿಮ್ಮನ್ನು ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದು ಗಂಟಲಿನ ಉರಿಯೂತವಾಗಿದ್ದು ನೋವು, ಶುಷ್ಕತೆ ಅಥವಾ ಕಿರಿಕಿರಿ ಭಾವನೆಯನ್ನು ಉಂಟುಮಾಡುತ್ತದೆ. ಏನನ್ನಾದರೂ ನುಂಗಿದಾಗ ಈ ನೋವು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಹೆಚ್ಚಾಗಿ ಇದು ವೈರಲ್ ಸೋಂಕುಗಳು (ಶೀತ ಮತ್ತು ಜ್ವರ) ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಆದಾಗ್ಯೂ, ನೋಯುತ್ತಿರುವ ಗಂಟಲು ಆಸಿಡ್ ರಿಫ್ಲಕ್ಸ್, ಅಲರ್ಜಿಗಳು, ಗಂಟಲಿನಲ್ಲಿ ಸ್ನಾಯುಗಳ ಒತ್ತಡ, ರಾಸಾಯನಿಕಗಳು ಅಥವಾ ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಮತ್ತು ಸೈನುಟಿಸ್ ನಿಂದ ಕೂಡ ಉಂಟಾಗುತ್ತದೆ. ಸಾಮಾನ್ಯವಾಗಿ ಗಂಟಲು ನೋವು ಕೆಲವು ದಿನಗಳ ನಂತರ ತನ್ನಷ್ಟಕ್ಕೆ ಕಡಿಮೆಯಾಗುತ್ತದೆ. ಆದರೆ ಬ್ಯಾಕ್ಟೀರಿಯಾದಿಂದ ಉಂಟಾಗುವ ಸ್ಟೆçಪ್ ಗಂಟಲು ನೋವಿಗೆ ಚಿಕಿತ್ಸೆ ಅವಶ್ಯಕ. ನೀವು ಗರ್ಭಿಣಿಯಾಗಿದ್ದರೆ ಮತ್ತು ಗಂಟಲು ನೋವನ್ನು ಅನುಭವಿಸುತ್ತಿದ್ದರೆ, ಈ ಸಾಮಾನ್ಯ ಕಾಯಿಲೆಯ ಚಿಕಿತ್ಸೆಯು ಹೆಚ್ಚು ಕಷ್ಟಕ್ಕೆ ಕಾರಣವಾಗಬಹುದು. ಏಕೆಂದರೆ ಈ ಸಮಯದಲ್ಲಿ ನೀವು ಕೆಲವೊಂದು ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದಕ್ಕಾಗಿ ಗರ್ಭಾವಸ್ಥೆಯಲ್ಲಿ ನೋಯುತ್ತಿರುವ ಗಂಟಲಿಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಕೆಲವು ಉತ್ತಮ ಮನೆಮದ್ದುಗಳಿವೆ.

ಆದರೆ ಮೊದಲು ಗರ್ಭಾವಸ್ಥೆಯಲ್ಲಿ ಗಂಟಲು ನೋವಿಗೆ ಸಾಮಾನ್ಯ ಕಾರಣಗಳನ್ನು ಅರ್ಥಮಾಡಿಕೊಳ್ಳೋಣ. ನೀವು ಗರ್ಭಿಣಿಯಾಗಿದ್ದಾಗ, ನಿಮ್ಮ ರೋಗ ನಿರೋಧಕ ಶಕ್ತಿಯು ಸ್ವಲ್ಪಮಟ್ಟಿಗೆ ಕಡಿಮೆ ಇರುತ್ತದೆ. ಆದ್ದರಿಂದ ನಿಮ್ಮ ದೇಹವು ನೋಯುತ್ತಿರುವ ಗಂಟಲಿಗೆ ಕಾರಣವಾಗುವ ಶೀತ ಮತ್ತು ಜ್ವರ ಸೇರಿದಂತೆ ಸೋಂಕುಗಳಿಗೆ ತುತ್ತಾಗುತ್ತದೆ. ಗರ್ಭಾವಸ್ಥೆಯಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿನ ಬದಲಾವಣೆಯು ವಾಕರಿಕೆ ಮತ್ತು ತಲೆನೋವಿನಂತಹ ಇತರ ರೋಗಲಕ್ಷಣಗಳೊಂದಿಗೆ ಗಂಟಲು ನೋಯುತ್ತಿರುವ ಕಾರಣವಾಗಬಹುದು. ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಸಹ ಗರ್ಭಧಾರಣೆಯ ಸಾಮಾನ್ಯ ಲಕ್ಷಣವಾಗಿದೆ, ಮತ್ತು ಇದು ಕೂಡ ನಿಮಗೆ ನೋಯುತ್ತಿರುವ ಗಂಟಲನ್ನು ಸಹ ನೀಡುತ್ತದೆ. ದರೆ ಭಯ ಪಡಬೇಡಿ, ಸರಳವಾದ ಮನೆಮದ್ದುಗಳು ಗಂಟಲು ನೋವಿನ ಸಮಸ್ಯೆಗೆ ಪರಿಹಾರ ಒದಗಿಸುತ್ತವೆ.

ನಿಮ್ಮ ನೋಯುತ್ತಿರುವ ಗಂಟಲು ಕೇವಲ ಸಣ್ಣ ಕಿರಿಕಿರಿಯುಂಟುಮಾಡಿದರೆ, ಮಗುವಿಗೆ ಸುರಕ್ಷಿತವಾದ ಕೆಲವು ಮನೆಮದ್ದುಗಳೊಂದಿಗೆ ಇದನ್ನು ನಿರ್ವಹಿಸಬಹುದು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ನೋಯುತ್ತಿರುವ ಗಂಟಲಿಗೆ ಈ 5 ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಿ:

ಬೆಚ್ಚಗಿನ ಉಪ್ಪು ನೀರಿನಿಂದ ಗಾಗ್ಲ್ ಅಥವಾ ಗಂಟಲು ಮುಕ್ಕಳಿಸಿ:

ಬೆಚ್ಚಗಿನ ಉಪ್ಪು ನೀರಿನಿಂದ ಗಾಗ್ಲ್ ಅಥವಾ ಗಂಟಲು ಮುಕ್ಕಳಿಸಿ:

ಗರ್ಭಾವಸ್ಥೆಯಲ್ಲಿ ನೋಯುತ್ತಿರುವ ಗಂಟಲಿಗೆ ಇದು ಸುರಕ್ಷಿತ ಮನೆಮದ್ದುಗಳಲ್ಲಿ ಒಂದಾಗಿದೆ. ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಅಥವ ಗಂಟಲು ಮುಕ್ಕಳಿಸುವುದರಿಂದ ನಿಮ್ಮ ಗಂಟಲಿನ ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಗಂಟಲು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಉಪ್ಪು ಗಂಟಲಿನ ಹೆಚ್ಚುವರಿ ತೇವಾಂಶವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ, ಉಪ್ಪಿನಲ್ಲಿ ನಂಜುನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳಿವೆ, ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಗಂಟಲು ನೋವಿನಿಂದ ಪರಿಹಾರ ಪಡೆಯಲು ದಿನಕ್ಕೆ ಕನಿಷ್ಠ 3ಬಾರಿಯಾದರೂ ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಿ.

ಬಿಸಿ ಅರಿಶಿನ ಹಾಲು ಕುಡಿಯಿರಿ:

ಬಿಸಿ ಅರಿಶಿನ ಹಾಲು ಕುಡಿಯಿರಿ:

ಅರಿಶಿನದಲ್ಲಿ ಇರುವ ಕರ್ಕ್ಯುಮಿನ್ ಎಂಬ ಸಂಯುಕ್ತ ಉರಿಯೂತವನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆ ಹೇಳುತ್ತದೆ. ಜೊತೆಗೆ, ಅರಿಶಿನವು ನೋವು ನಿವಾರಕ ಗುಣಗಳನ್ನು ಹೊಂದಿದ್ದು ಅದು ಗಂಟಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿರಿಕಿರಿಯುಂಟುಮಾಡುವ ನೋವನ್ನು ತೊಡೆದುಹಾಕಲು ಬಿಸಿಯಾದ ಅರಿಶಿನ ಹಾಲನ್ನು ಪ್ರತಿದಿನ 2 ಬಾರಿ ಕುಡಿಯಿರಿ.

ಆಪಲ್ ಸೈಡರ್ ವಿನೆಗರ್‌ನಿಂದ ಪರಿಹಾರ ಪಡೆಯಿರಿ:

ಆಪಲ್ ಸೈಡರ್ ವಿನೆಗರ್‌ನಿಂದ ಪರಿಹಾರ ಪಡೆಯಿರಿ:

1 ಚಮಚ ಕಚ್ಚಾ, ಫಿಲ್ಟರ್ ಮಾಡದ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಈ ದ್ರಾವಣವನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ. ನೀವು ಇದಕ್ಕೆ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು. ಪರ್ಯಾಯವಾಗಿ, ನೀವು 1-2 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಈ ಮಿಶ್ರಣದಿಂದ ದಿನಕ್ಕೆ 2 ರಿಂದ 3. ಬಾರಿ ಗಾರ್ಗ್ಲ್ ಮಾಡಬಹುದು.

ಆಪಲ್ ಸೈಡರ್ ವಿನೆಗರ್ ಆಸಿಡಿಕ್ ಆಗಿದೆ. ಆದರೆ ಸೇವಿಸಿದಾಗ ಅವು ಕ್ಷಾರೀಯವಾಗುತ್ತವೆ. ಹೆಚ್ಚಿನ ವೈರಸ್ಗಳು ಕ್ಷಾರೀಯ ಪರಿಸರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕ್ಷಾರೀಯ ಪರಿಣಾಮದಿಂದಾಗಿ, ಆಪಲ್ ಸೈಡರ್ ವಿನೆಗರ್ ನೋಯುತ್ತಿರುವ ಗಂಟಲಿಗೆ ಪರಿಣಾಮಕಾರಿ ಪರಿಹಾರವೆಂದು ಪರಿಗಣಿಸಲಾಗಿದೆ.

ಊಟದ ನಂತರ ಶುಂಠಿ ಚಹಾ ಸೇವಿಸಿ:

ಊಟದ ನಂತರ ಶುಂಠಿ ಚಹಾ ಸೇವಿಸಿ:

ನಿಮ್ಮ ನೋಯುತ್ತಿರುವ ಗಂಟಲಿಗೆ ಆಸಿಡ್ ರಿಫ್ಲಕ್ಸ್ ಕಾರಣವಾಗಿದ್ದರೆ, ಶುಂಠಿ ಉತ್ತಮ ಪರಿಹಾರವಾಗಿದೆ. ಶುಂಠಿಯು ಸಕ್ರಿಯ ಘಟಕಗಳಾದ ತೈಲಗಳು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿದ್ದು ಅದು ಹೊಟ್ಟೆಯ ಆಮ್ಲಗಳನ್ನು ತಟಸ್ಥಗೊಳಿಸಲು ಮತ್ತು ಗರ್ಭಾವಸ್ಥೆಯಲ್ಲಿ ಆಸಿಡಿಟಿ ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಸಾಮಾನ್ಯವಾಗಿ ಆಸಿಡಿಟಿಯಿಂದ ಬರುವ ವಾಕರಿಕೆ ಮತ್ತು ವಾಂತಿಯನ್ನು ಸಹ ಎದುರಿಸಬಹುದು. ಇದಲ್ಲದೆ, ಶುಂಠಿಯಲ್ಲಿ ರೋಗ ನಿರೋಧಕ, ಆಂಟಿವೈರಲ್, ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಗಳಿವೆ. ಊಟ ಮಾಡಿದ ನಂತರ ಬೆಚ್ಚಗಿನ ಶುಂಠಿ ಚಹಾವನ್ನು ಕುಡಿಯಿರಿ ಆದರೆ ಸೇವನೆಯನ್ನು ದಿನಕ್ಕೆ 2 ಕಪ್‌ಗೆ ಮಿತಿಗೊಳಿಸಿ.

English summary

How to deal with sore throat during pregnancy in Kannada

Here we explain about How to deal with sore throat during pregnancy in Kannada, Read on ...
Story first published: Saturday, December 19, 2020, 16:50 [IST]
X
Desktop Bottom Promotion