For Quick Alerts
ALLOW NOTIFICATIONS  
For Daily Alerts

ಮಧುಮೇಹವಿದ್ದರೆ ಗರ್ಭಧಾರಣೆಯಾಗುವುದೇ? ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದ್ರೆ ಅಪಾಯಗಳೇನು?

|

ಸ್ವಲ್ಪ ವರ್ಷದ ಹಿಂದೆ ಟೈಪ್ 2 ಮಧುಮೇಹ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುವ ಸಮಸ್ಯೆಯಾಗಿತ್ತು, ಆದರೆ ಈಗ ಎಷ್ಟೋ ಜನರಲ್ಲಿ 30ರ ಹರೆಯದಲ್ಲಿಯೇ ಕಂಡು ಬರುತ್ತಿದೆ. ಬದಲಾದ ಜೀವನಶೈಲಿ ಹಾಗೂ ಅತ್ಯಧಿಕ ಮಾನಸಿಕ ಒತ್ತಡ ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ.

How diabetes can impact ovulation in women in kannada

ಮಧುಮೇಹದ ಸಮಸ್ಯೆ ಇದ್ದರೆ ಮಕ್ಕಳಾಗುವುದಕ್ಕೆ ಏನಾದರೂ ಸಮಸ್ಯೆ ಇದೆಯೇ? ಎಂದು ನೋಡುವುದಾದರೆ ಹೌದು ಮಧುಮೇಹ ಗರ್ಭಧಾರಣೆ , ಮಗುವಿನ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.

ಪುರುಷರಲ್ಲಿ ಮಧುಮೇಹವಿದ್ದರೆ ಅದು ಗರ್ಭಧಾರಣೆಯ ಮೇಲೆ ಅಷ್ಟೇನು ಪ್ರಭಾವ ಬೀರಲ್ಲ, ಆದರೆ ಮಹಿಳೆಯರಲ್ಲಿ ಮಧುಮೇಹವಿದ್ದರೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಹೇಗೆ? ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಮಧುಮೇಹ ಅಂಡೋತ್ಪತ್ತಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಧುಮೇಹವಿದ್ದರೆ ಗರ್ಭಧಾರಣೆ ತುಂಬಾನೇ ಕಷ್ಟವಾಗುವುದು. ಇದರಿಂದ ಮತ್ತಿತರ ಆರೋಗ್ಯ ಸಮಸ್ಯೆ ಜೊತೆಗೆ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರುವುದು. ಅಂಡಾಣುಗಳ ಉತ್ಪತ್ತಿ ಕಡಿಮೆಯಾದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು.

ಮಧುಮೇಹವಿಲ್ಲದವರಲ್ಲಿ ಗರ್ಭಿಣಿಯಾಗಿದ್ದಾಗ ಮಧುಮೇಹ ಬರುವುದೇ?
ಹೌದು, ಕೆಲವರಲ್ಲಿ ಗರ್ಭಿಣಿಯಾಗಿದ್ದಾಗ ಮಧುಮೇಹದ ಸಮಸ್ಯೆ ಕಂಡು ಬರುತ್ತದೆ, ಇದನ್ನು Gestational diabetes ಅಂದ್ರೆ ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುವುದು.

ಗರ್ಭಾವಸ್ಥೆಯಲ್ಲಿರುವಾಗ ಮಧುಮೇಹ ಸಬಂದ್ರೆ ಅಪಾಯವೇನು?

ಯಾವುದೇ ಬಗೆಯ ಮಧುಮೇಹವಾದರೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಗರ್ಭಧಾರಣೆಗೆ ಮುನ್ನ ಮಧುಮೇಹವಿದ್ದರೆ ಅಪಾಯದ ಸಾಧ್ಯತೆ ಹೆಚ್ಚು, ಗರ್ಭಿಣಿಯಾದ ಮೇಲೆ ಮಧುಮೇಹ ಬಂದ್ರೆ ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು, ಇಲ್ಲದಿದ್ದರೆ ಅಪಾಯ.

ಮಧುಮೇಹವಿದ್ದರೆ ಅಪಾಯಗಳೇನು?

* ಹುಟ್ಟುವ ಮಗುವಿನಲ್ಲಿ ನ್ಯೂನ್ಯತೆ
* ಮಗು ಹುಟ್ಟುವಾಗಲೇ ಸತ್ತು ಜನಿಸಬಹುದು
* ಅವಧಿಪೂರ್ವ ಜನನವಾಗಬಹುದು
* ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ ಸಿ ಸೆಕ್ಷನ್‌ ಡೆಲಿವರಿ ಸಾಧ್ಯತೆ ಹೆಚ್ಚು.
* ಇನ್ನು ಜನಿಸುವ ಮಕ್ಕಳಲ್ಲಿ ಕೂಡ ಭವಿಷ್ಯದಲ್ಲಿ ಮಧುಮೇಹದ ಅಪಾಯ ಹೆಚ್ಚು.

ಗರ್ಭಧಾರಣೆಯ ಮುನ್ನವೇ ಮಧುಮೇಹವಿದ್ದರೆ

ನಿಮಗೆ ಗರ್ಭಧಾರಣೆಯ ಮುನ್ನವೇ ಮಧುಮೇಹವಿದ್ದು ಗರ್ಭಧರಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದರೆ ನೀವು ಮೊದಲು ಪ್ರಸೂತಿ ತಜ್ಜರ ಭೇಟಿಯಾಗಿ ಅವರ ಸಲಹೆ-ಸೂಚನೆ ಕಡ್ಡಾಯವಾಗಿ ಪಡೆಯಬೇಕು, ಇಲ್ಲದಿದ್ದರೆ ಗರ್ಭಿಣಿಯಾದ ಮೇಲೆ ರಿಸ್ಕ್ ಹೆಚ್ಚು. ವೈದ್ಯರು ನಿಮ್ಮ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವ ವಿಧಾನಗಳ ಬಗ್ಗೆ ಹೇಳುತ್ತಾರೆ, ಅಲ್ಲದೆ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡಬೇಕಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದ್ರೆ

ಗರ್ಭಿಣಿಯಾಗಿದ್ದಾಗ ಮಧುಮೇಹ ಬಂದ್ರೆ ಆತಂಕ ಬೇಡ, ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು ಅಷ್ಟೇ. ಆಹಾರ ಶೈಲಿ, ಲಘು ವ್ಯಾಯಾಮ, ನಡೆಯುವುದು ಇವೆಲ್ಲಾ ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿಯಾಗಿಎ.

ಅಗ್ಯತ ಬಿದ್ದರೆ ಮಾತ್ರೆ ಅಥವಾ ಇನ್ಸುಲಿನ್‌ ತೆಗೆದುಕೊಳ್ಳಬೇಕಾಗುತ್ತದೆ.

English summary

How diabetes can impact ovulation in women in kannada

Diabetes: How diabetes affects ovulation and during pregnancy, read on...
X
Desktop Bottom Promotion