For Quick Alerts
ALLOW NOTIFICATIONS  
For Daily Alerts

ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?

|

ಮಹಿಳೆಯ ವಯಸ್ಸು ನಡುವಯಸ್ಸು ದಾಟಿದಂತೆ ಅಂದರೆ ಮೂವತ್ತೈದರ ಬಳಿಕ ಗರ್ಭಧರಿಸುವ ಸಾಧ್ಯತೆಯೂ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೇಳಲಾಗುತ್ತದೆ. ಕೆಲವು ಮಹಿಳೆಯರು ವೃತ್ತಿ ಅಥವಾ ಬೇರಾವುದೋ ಕಾರಣದಿಂದ ಗರ್ಭಧಾರಣೆಯನ್ನು ಮುಂದೂಡಿ, ಕಡೆಗೆ ಇದು ಸಾಧ್ಯವಾಗದೇ ಪರಿತಪಿಸಬೇಕಾಗಬಹುದು. ಆದರೆ ಈಗ ವಿಜ್ಞಾನ ಈ ಮಹಿಳೆಯರಿಗೂ ಒಂದು ಅವಕಾಶವನ್ನು ನೀಡಿದೆ. ಅಂದರೆ ಫಲವತ್ತತೆಯ ದಿನಗಳಲ್ಲಿ ಪೂರ್ಣವಾಗಿ ಬೆಳೆದು ಬಿಡುಗಡೆಯಾದ ಅಂಡಾಣುವನ್ನು ಸಂಗ್ರಹಿಸಿ ಶೈತ್ಯೀಕರಿಸಿ ಸುರಕ್ಷಿತವಾಗಿ ಇರಿಸಲಾಗುತ್ತದೆ.

ಭವಿಷ್ಯದಲ್ಲಿ ಇದೇ ಮಹಿಳೆ ತನ್ನದೇ ಮಗು ಬೇಕೆಂದು ಬಯಸಿದರೆ ಈ ಅಂಡಾಣುವನ್ನು ಫಲಿತಗೊಳಿಸಿ ಗರ್ಭದಲ್ಲಿ ಸ್ಥಾಪಿಸಿ ಗರ್ಭಧಾರಣೆಯಾಗುವಂತೆ ಮಾಡಲಾಗುತ್ತದೆ. ಈ ಕ್ರಿಯೆಗೆ ಅಂಡಾಣು ಶೈತ್ಯೀಕರಣ ಅಥವಾ Egg freezing (ovarian cryopreservation) ಎಂದು ಕರೆಯಲಾಗುತ್ತದೆ.

ಅಂಡಾಣು ಶೈತ್ಯೀಕರಣ

ಅಂಡಾಣು ಶೈತ್ಯೀಕರಣ

ಮಹಿಳೆಯ ವಯಸ್ಸು ಸುಮಾರು ಮೂವತ್ತು ದಾಟಿ ಮುಂದುವರೆದಂತೆಲ್ಲಾ ಅಂಡಾಣುವಿನ ಡಿಎನ್ ಎ ರಚನೆಯೂ ಶಿಥಿಲವಾಗುತ್ತಾ ಕೆಲವೊಮ್ಮೆ ಘಾಸಿಗೊಳ್ಳಲೂಬಹುದು. ಪರಿಣಾಮವಾಗಿ ಮೂವತ್ತೈದರ ಬಳಿಕ ಧರಿಸುವ ಗರ್ಭಧಾರಣೆಯಿಂದ ಮಗುವಿನಲ್ಲಿ ನ್ಯೂನ್ಯತೆಗಳು ಹೆಚ್ಚುವ ಸಾಧ್ಯತೆಗಳೂ ಹೆಚ್ಚುತ್ತದೆ. ಈ ನ್ಯೂನ್ಯತೆಗಳನ್ನು ಪತ್ತೆಹಚ್ಚುವ ಪರೀಕ್ಷೆಗಳೂ ಈಗ ಲಭ್ಯವಿವೆ. ಒಂದು ವೇಳೆ ಈಗಿನ ಅಂಡಾಣುವಿನಲ್ಲಿ ಈ ನ್ಯೂನ್ಯತೆಗಳು ಪತ್ತೆಯಾದರೆ, ಈ ಗರ್ಭಧಾರಣೆಯನ್ನು ಮುಂದುವರೆಸುವ ಬದಲು ಹಿಂದೆ ಆರೋಗ್ಯ ಉತ್ತಮವಾಗಿದ್ದಾಗ ಸಂಗ್ರಹಿಸಿದ್ದ ಅಂಡಾಣುವನ್ನು ಫಲಿತಗೊಳಿಸಿ ಈಗ ಗರ್ಭಧಾರಣೆ ಮಾಡುವ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಬಹುದು. ಹೀಗೆ ಕಾಪಾಡಲ್ಪಟ್ಟ ಅಂಡಾಣುಗಳು ಬಹುತೇಕ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಳ್ಳುತ್ತವೆ ಹಾಗೂ ಮುಂದಿನ ದಿನಗಳಲ್ಲಿ ಈ ಮಹಿಳೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಬಲರಾದಾಗ ಗರ್ಭಧರಿಸಲು ಸಾಧ್ಯವಾಗುತ್ತದೆ.

ಯಾವಾಗ ಈ ಕ್ರಿಯೆಗೆ ಒಳಗಾಗಬೇಕು?

ಯಾವಾಗ ಈ ಕ್ರಿಯೆಗೆ ಒಳಗಾಗಬೇಕು?

ಮಹಿಳೆಯ ವಯಸ್ಸು ಇಪ್ಪತ್ತರಿಂದ ಮೂವತ್ತು ವರ್ಷದ ನಡುವೆ ಇದ್ದಾಗ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಅತಿ ಸೂಕ್ತವಾಗಿದೆ. ಹೀಗೆ ಅಂಡಾಣುವನ್ನು ಸಂಗ್ರಹಿಸಿಡಲು ಇಚ್ಛಿಸುವ ಮಹಿಳೆ ಮಾಸಿಕ ದಿನಗಳು ಪ್ರಾರಂಭವಾದ ಬಳಿಕ ಸರಿಯಾಗಿ ಹದಿನಾಲ್ಕನೆಯ ದಿನ ವೈದ್ಯರಲ್ಲಿ ಹೋಗಿ ಈ ಕ್ರಿಯೆಗೆ ಒಳಗಾಬೇಕಾಗುತ್ತದೆ. ಈ ಕ್ರಿಯೆಯನ್ನು ಅಧಿಕೃತ ಫಲವತ್ತತೆ ತಜ್ಞರು (fertility expert) ಮಾತ್ರವೇ ನಿರ್ವಹಿಸಬಹುದು ಹಾಗೂ ಅಂಡೋತ್ಪತ್ತಿಗೆ ನೆರವಾಗುವ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನೂ ತಜ್ಞರೇ ನೀಡುತ್ತಾರೆ. ಇದಕ್ಕೆ ಪೂರ್ವಾಭಾವಿಯಾಗಿ ರಕ್ತಪರೀಕ್ಷೆ, ಅಲ್ಟ್ರಾಸೌಂಡ್ ಮೊದಲಾದ ಪರೀಕ್ಷೆಗಳನ್ನು ನಡೆಸಿ ಅಂಡಾಣು ಬಿಡುಗಡೆಯಾಗುವ ಸರಿಯಾದ ಸಮಯವನ್ನು ಪರಿಗಣಿಸಲಾಗುತ್ತದೆ. ಅಗತ್ಯ ಎನಿಸಿದರೆ ಅಂಡಾಣುವಿನ ಬೆಳವಣಿಗೆ ಹಾಗೂ ಬಿಡುಗಡೆಯನ್ನು ಪ್ರಚೋದಿಸುವ ಕೃತಕ ರಸದೂತಗಳ ಚುಚ್ಚುಮದ್ದನ್ನೂ ನೀಡಲಾಗುತ್ತದೆ.

ಸಾಮಾನ್ಯವಾಗಿ ಹದಿನಾಲ್ಕನೆಯ ದಿನವನ್ನೇ ಅಂಡಾಣು ಸಂಗ್ರಹಣೆಗೆ (oocyte retrieval) ಅತಿ ಸೂಕ್ತ ಎಂದು ಪರಿಗಣಿಸಲಾಗುತ್ತದೆ ಹಾಗೂ ಹೀಗೆ ಸಂಗ್ರಹಿಸಲಾದ ಅಂಡಾಣುವನ್ನು ದ್ರವೀಕೃತ ನೈಟ್ರೋಜೆನ್ ಅನಿಲದಲ್ಲಿ ಅತಿ ಶೀಘ್ರವಾಗಿ ಶೈತ್ಯೀಕರಿಸಲಾಗುತ್ತದೆ. ಈಗ ಈ ಅಂಡಾಣುವನ್ನು ಸೂಕ್ತ ದಾಖಲೆಗಳ ಸಹಿತ ಶೈತ್ಯಾಗಾರದಲ್ಲಿ ಖಚಿತ ತಾಪಮಾನ ನಿಯಂತ್ರಣ ಸ್ಥಿತಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ, ಈ ಮಹಿಳೆ ಎಂದಾದರೂ ತನಗೆ ತನ್ನದೇ ಅಂಡಾಣುವಿನಿಂದ ಗರ್ಭಧಾರಣೆ ಆಗಬೇಕೆಂದು ಬಯಸಿದರೆ ಈ ಅಂಡಾಣುವನ್ನು ಮರುಪಡೆಯಬಹುದು.

ಅಂಡಾಣು ಶೈತ್ಯೀಕರಣದ ಅಡ್ಡಪರಿಣಾಮಗಳು:

ಅಂಡಾಣು ಶೈತ್ಯೀಕರಣದ ಅಡ್ಡಪರಿಣಾಮಗಳು:

ಯಾವುದೇ ವೈದ್ಯಕೀಯ ಸ್ಥಿತಿಗಳಂತೆಯೇ ಈ ವಿಧಾನದಲ್ಲಿಯೂ ಕೆಲವು ಅಡ್ಡ ಪರಿಣಾಮಗಳು ಎದುರಾಗಬಹುದು. ತಜ್ಞರ ಪ್ರಕಾರ, ಇದರಲ್ಲಿ ಅತಿ ಹೆಚ್ಚಿನ ತೊಂದರೆ ಎದುರಾಗುವುದು ರೋಗಿ ಅನುಭವಿಸಬೇಕಾದ ನೋವು, ರಕ್ತಸ್ರಾವ ಮತ್ತು ಹೊಟ್ಟೆಯ ಸೆಡೆತ. ಅಲ್ಲದೇ ರಸದೂತಗಳ ಪ್ರಭಾವದಿಂದ ಮನೋಭಾವನೆಯೂ ಏರುಪೇರಾಗುತ್ತದೆ. ಶೈತ್ಯಾಗಾರದಲ್ಲಿ ಸಂಗ್ರಹಿಸುವ ಅಂಡಾಣುವಿಕೆ ಮಾಸಿಕ ಅಥವಾ ವಾರ್ಷಿಕ ಬಾಡಿಗೆಯನ್ನೂ ಕೊಡಬೇಕಾಗುತ್ತದೆ. ಅಲ್ಲದೇ ಗರ್ಭಧರಿಸಲು ಬಯಸುವಾಗ ಈ ಅಂಡಾಣುವನ್ನು ಪಡೆದುಕೊಳ್ಳಲೂ ದೊಡ್ಡ ಮೊತ್ತದ ಹಣ ನೀಡಬೇಕಾಗಿ ಬರುತ್ತದೆ. ಕೆಲವು ಮಹಿಳೆಯರಿಗೆ ಈ ಮೊತ್ತ ಅತಿ ಭಾರಿಯಾಗಿ ಪರಿಣಮಿಸಬಹುದು.

ಅಂಡಾಣು ಶೈತ್ಯೀಕರಣದ ಬಗ್ಗೆ ಇರುವ ಮಿಥ್ಯೆಗಳು:

ಈ ವಿಧಾನದ ಕುರಿತೂ ಕೆಲವು ಮಿಥ್ಯೆಗಳು ಪ್ರಚಲಿತವಾಗಿವೆ. ಒಂದು ವೇಳೆ ಅಂಡಾಣು ಶೈತ್ಯೀಕರಣದ ಸೇವೆಯನ್ನು ಬಯಸುವಿರಾದರೆ ಈ ಕೆಳಗಿನ ಮಿಥ್ಯೆಗಳನ್ನು ನಿರ್ಲಕ್ಷಿಸುವುದೇ ಒಳ್ಳೆಯದು.

#ಮಿಥ್ಯೆ 1: ಅಂಡಾಣು ಶೈತ್ಯೀಕರಣದಿಂದ ಶೇಖಡಾ ನೂರರಷ್ಟು ಯಶಸ್ಸು ದೊರಕುತ್ತದೆ.

#ಮಿಥ್ಯೆ 1: ಅಂಡಾಣು ಶೈತ್ಯೀಕರಣದಿಂದ ಶೇಖಡಾ ನೂರರಷ್ಟು ಯಶಸ್ಸು ದೊರಕುತ್ತದೆ.

ಕೆಲವು ಅಧ್ಯಯನಗಳ ಪ್ರಕಾರ, ಈ ವಿಧಾನದಿಂದ ಮುಂದಿನ ದಿನಗಳಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಎಪ್ಪತ್ತು ಶೇಖಡಾದಷ್ಟು ಮಾತ್ರವೇ ಇರುತ್ತದೆ. ವೈದ್ಯರ ಪ್ರಕಾರ, ಶೈತ್ಯೀಕರಣಕ್ಕೆ ಒಳಗಾದ ಅಂಡಾಣುಗಳಲ್ಲಿ ಶೇಖಡಾ ಅರವತ್ತಷ್ಟು ಮಾತ್ರವೇ ವೀರ್ಯಾಣುವಿನೊಂದಿಗೆ ಮಿಲನ ಹೊಂದುತ್ತವೆ. ಕೆಲವೊಮ್ಮೆ ಮಾನವ ಅಂಡಾಣುಗಳು ಶೈತ್ಯೀಕರಣದ ಕ್ರಿಯೆಯಲ್ಲಿ ಬದುಕಿ ಉಳಿಯುವುದಿಲ್ಲ ಮತ್ತು ಇಪ್ಪತ್ತು ಶೇಖಡಾದಷ್ಟು ಅಂಡಾಣುಗಳು ಬದುಕಿ ಉಳಿದರೂ ಶೈತ್ಯದಿಂದ ಸಾಮಾನ್ಯ ತಾಪಮಾನಕ್ಕೆ ಬಂದ ಬಳಿಕ ಸಾವಿಗೀಡಾಗುತ್ತವೆ.

#ಮಿಥ್ಯೆ 2: ಮಗು ಸಾಮಾನ್ಯ ಹೆರಿಗೆಯಾವುಗ ಕಾರಣ ಇದರಿಂದ ಯಾವುದೇ ಕ್ಲಿಷ್ಟತೆ ಎದುರಾಗುವುದಿಲ್ಲ:

#ಮಿಥ್ಯೆ 2: ಮಗು ಸಾಮಾನ್ಯ ಹೆರಿಗೆಯಾವುಗ ಕಾರಣ ಇದರಿಂದ ಯಾವುದೇ ಕ್ಲಿಷ್ಟತೆ ಎದುರಾಗುವುದಿಲ್ಲ:

ಹತ್ತು ಶೇಖಡಾ ಸಂದರ್ಭಗಳಲ್ಲಿ ವಂಶವಾಹಿನಿಯ ರೂಪಾಂತರಗಳು (Genetic mutations) ಎದುರಾಗಬಹುದು. ಗರ್ಭ ಧರಿಸುವ ಮಹಿಳೆಯ ವಯಸ್ಸು, ದೇಹದ ಇತರ ತೊಂದರೆಗಳು (ಅಧಿಕ ರಕ್ತದ ಒತ್ತಡ, ಮಧುಮೇಹ ಇತ್ಯಾದಿ) ಹಾಗೂ ತೂಕ ಮೊದಲಾದ ಅಂಶಗಳನ್ನು ಆಧರಿಸಿ ಕ್ಲಿಷ್ಟತೆಯ ಸಾಧ್ಯತೆಗಳೂ ಹೆಚ್ಚುತ್ತಾ ಹೋಗುತ್ತವೆ.

#ಮಿಥ್ಯೆ 3: Ovarian Cryopreservation ಕ್ರಿಯೆ ಯಾವುದೇ ವಯಸ್ಸಿನಲ್ಲಿ ಸಾಧ್ಯವಾಗಿಸಬಹುದು

#ಮಿಥ್ಯೆ 3: Ovarian Cryopreservation ಕ್ರಿಯೆ ಯಾವುದೇ ವಯಸ್ಸಿನಲ್ಲಿ ಸಾಧ್ಯವಾಗಿಸಬಹುದು

ಈ ಕ್ರಿಯೆಯನ್ನು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅನ್ವಯಿಸಲು ಸಾಧ್ಯವಿಲ್ಲ. ಈ ಕ್ರಿಯೆ ಮಹಿಳೆ ಒಂದು ಹಂತದ ವಯಸ್ಸನ್ನು ಪಡೆಯುವವರೆಗೂ ಮಾತ್ರ ನಡೆಸಬಹುದು. ಹಲವು ಸಂಸ್ಥೆಗಳು ಈ ಮಿತಿಯನ್ನು ಮಹಿಳೆ 38 ವಯಸ್ಸು ತಲುಪುವವರೆಗೆ ಮಾತ್ರ ಎಂದು ಖಚಿತಪಡಿಸುತ್ತವೆ. ಒಂದು ವೇಳೆ ಮಹಿಳೆ ಕ್ಯಾನ್ಸರ್ ರೋಗಿಯಾಗಿದ್ದು ರೇಡಿಯೇಶನ್ ಅಥವಾ ವಿಕಿರಣ ಚಿಕಿತ್ಸೆ ಪಡೆಯುತ್ತಿದ್ದರೆ ಈ ಮಿತಿಯನ್ನು ಹೇರಲಾಗುವುದಿಲ್ಲ.

ಅಂಡಾಣು ಶೈತ್ಯೀಕರಣದ ತಡವಯಸ್ಸಿನಲ್ಲಿ ಗರ್ಭಿಣಿಯಾಗಲು ಬಯಸುವ ಮಹಿಳೆಯರಿಗೆ ಸಂತಾನ ಭಾಗ್ಯ ನೀಡುವ ಅದ್ಭುತ ಆಯ್ಕೆಯಾಗಿದೆ. ಆದ್ದರಿಂದ, ನಿಮ್ಮ ದೇಹ ಗರ್ಭಧರಿಸಲು ಬಯಸುತ್ತಿದೆ ಎಂಬ ಒಂದೇ ಕಾರಣಕ್ಕೆ ನೀವು ಮಾನಸಿಕ ಮತ್ತು ಆರ್ಥಿಕವಾಗಿ ಸಿದ್ಧರಾಗದೇ ಇದ್ದರೆ ಮಗುವನ್ನು ಪಡೆಯಲು ನೀವು ಧಾವಂತ ಅನುಸರಿಸಬೇಕಾಗಿಲ್ಲ. ಪ್ರಾಪ್ತ ವಯಸ್ಸಿನ ಅಂಡಾಣುಗಳನ್ನು ಕಾದಿರಿಸಿ ಮುಂದಿನ ದಿನಗಳಲ್ಲಿಯೂ ಗರ್ಭಧರಿಸಬಹುದು.

English summary

Egg Freezing: Is It safe for women to preserve their eggs? Things you should know in Kannada

Egg Freezing, is it safe for womento preserve their eggs, read on....
Story first published: Monday, January 18, 2021, 9:30 [IST]
X