For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19: ಫಲವತ್ತತೆ ತಿಳುವಳಿಕೆಯಿಂದ ಗರ್ಭಿಣಿಯಾಗುವುದು ತಡೆಗಟ್ಟಬಹುದು

|

ಕೋವಿಡ್-19 ಪಿಡುಗು ನಮ್ಮ ಜೀವನಶೈಲಿ, ಆರ್ಥಿಕತೆ ಮೇಲೆ ಹೇಗೆ ಹೊಡೆತ ನೀಡಿದೆ ಎಂಬುವುದು ಈಗಾಗಲೇ ಎಲ್ಲಿರಿಗೂ ಅರಿವಾಗಿದೆ. ಈ ಮಹಾಪಿಡುಗು ಕುಟುಂಬ ಯೋಜನೆ ಮೇಲೆ ತುಂಬಾ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳುತ್ತಿವೆ.

Condom Shortage Know this fertility Awareness To Avoid Pregnancy

ಕೋವಿಡ್‌-19ನಿಂದಾಗಿ ಇಡೀ ವಿಶ್ವವೇ ಸ್ತಬ್ಧವಾಗಿದೆ. ಕಾಂಡೋಮ್‌, ಮತ್ತಿತರ ಗರ್ಭನಿರೋಧಕ ಸಾಧನ ಹಾಗೂ ಮಾತ್ರೆಗಳು ಕೊರತೆ ಉಂಟಾಗಿರುವುದರಿಂದ ಸುಮಾರು 9.5 ಮಿಲಿಯನ್ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಬೇಡದ ಗರ್ಭಧಾರಣೆಯಾಗುವ ಸಾಧ್ಯತೆ ಇದೆ, ಇದರಿಂದಾಗಿ ಸಾವಿರಗಟ್ಟಲೆ ಸಾವುಗಳು ಕೂಡ ಸಂಭವಿಸಬಹುದು ಎಂದು ಮ್ಯಾರೆ ಸ್ಟಾಪ್ಸ್‌ ಇಂಟರ್‌ನ್ಯಾಷನಲ್ ಎಚ್ಚರಿಕೆ ನೀಡಿದೆ.

ಗರ್ಭನಿರೋಧಕ ವಸ್ತುಗಳು ಹಾಗೂ ಗರ್ಭನಿರೋಧಕ ಮಾತ್ರೆಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ ಸುಮಾರು 9.5 ಮಿಲಿಯನ್ ಮಹಿಳೆಯರು ಬಯಸಿದ್ದರೂ ಗರ್ಭಧಾರಣೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇದೀಗ ಸುರಕ್ಷಿತವಾಗಿ ಅಬಾರ್ಷನ್ ಮಾಡಿಸುವುದು ಕೂಡ ಈಗೀನ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ. ಒಂದು ವೇಳೆ ಮೂರು ತಿಂಗಳ ಒಳಗಾಗಿ ಕೊರೊನಾವೈರಸ್‌ ಪರಿಸ್ಥಿತಿ ಹತೋಟಿಗೆ ಬಂದರೆ ಈ ಸಂಖ್ಯೆ 4 ಮಿಲಿಯನ್‌ಗೆ ತಗ್ಗಬಹುದು.

ಸುಮಾರು 2.7 ಮಿಲಿಯನ್ ಸುರಕ್ಷಿತವಲ್ಲದ ಗರ್ಭಪಾತಗಳಾಗಲಿವೆ, 11,000ದಷ್ಟು ಗರ್ಭಧಾರಣೆಗೆ ಸಂಬಂಧಿಸಿದ ಸಾವುಗಳು ಸಂಭವಿಸಬಹುದು ಎಂದು MSI ಸಂಸ್ಥೆ ಹೇಳಿದೆ.

ಕಾಂಡೋಮ್‌, ಗರ್ಭನಿರೋಧಕ ಮಾತ್ರೆಗಳು ದೊರೆಯದಿದ್ದರೆ ಫಲವತ್ತತೆಯ ಬಗ್ಗೆ ತಿಳಿದುಕೊಮಡರೆ ಬೇಡದ ಗರ್ಭಧಾರಣೆ ತಡೆಯಬಹುದು. ಇದರಿಂದಾಗಿ ಮುಂದೆ ಗರ್ಭಪಾತ, ಸಾವು ಮುಂತಾದ ಅಪಾಯವನ್ನು ತಪ್ಪಿಸಬಹುದು. ಇಲ್ಲಿ ಫಲವತ್ತತೆಯ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಫಲವತ್ತತೆಯ ತಿಳುವಳಿಕೆ ಎಂದರೇನು?

ಫಲವತ್ತತೆಯ ತಿಳುವಳಿಕೆ ಎಂದರೇನು?

ಫಲವತ್ತತೆಯ ತಿಳುವಳಿಕೆ ಎಂದರೆ ಗರ್ಭಧಾರಣೆ ತಡೆಯಲು ಓವ್ಯೂಲೇಷನ್ ಅಂದರೆ ಅಂಡೋತ್ಪತ್ತಿ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸದಿರುವುದು. ಯಾರು ಮಗು ಬಯಸುತ್ತಾರೋ ಅವರು ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯಾಗುವುದು. ಅದೇ ಯಾರು ಸದ್ಯಕ್ಕೆ ಮಗು ಬೇಡ ಅಥವಾ ಈಗ ಗರ್ಭಧಾರಣೆ ಬೇಡ ಎಂದು ಬಯಸುತ್ತಾರೋ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು.

ಫಲವತ್ತತೆಯ ತಿಳುವಳಿಕೆ ಹೇಗೆ ಕೆಲಸ ಮಾಡುತ್ತದೆ?

ಫಲವತ್ತತೆಯ ತಿಳುವಳಿಕೆ ಹೇಗೆ ಕೆಲಸ ಮಾಡುತ್ತದೆ?

ಅಂಡೋತ್ಪತ್ತಿಯ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸದಿರಲು ಮೊದಲು ಆ ದಿನವನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ದಂಪತಿ ಕ್ಯಾಲೆಂಡರ್ ಹಾಗೂ ದೇಹದ ಉಷ್ಣತೆ ಅಳೆಯಲು ಥರ್ಮೋಮೀಟರ್, ಓವ್ಯೂಲೇಷನ್ ಪತ್ತೆಗೆ ಬಳಸುವ ಕಿಟ್ ಅಥವಾ

ಗರ್ಭಕಂಠದ ಲೋಳೆಯ ದಪ್ಪವನ್ನು ಪರಿಶೀಲಿಸುವುದು. ಇದು ಯಾರು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದಾರೋ ಅವರಿಗೂ ಒಳ್ಳೆಯದು. ಅಂಡೋತ್ಪತ್ತಿ ದಿನ ಅಂದರ ಫಲವತ್ತತೆಯ ಸಮಯ ಎಂದರೆ 6-8 ದಿನಗಳಿರುತ್ತದೆ. ಈ ಸಮಯದಲ್ಲಿ ಫವತ್ತತೆ ತಿಳುವಳಿಕೆ ಇದ್ದರೆ ಆ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸದಿದ್ದರೆ ಗರ್ಭಧಾರಣೆಯಾಗುವುದನ್ನು ತಡೆಯಬಹುದು.

 ಫಲವತ್ತತೆ ತಿಳುವಳಿಕೆ ಎಷ್ಟು ಸಹಾಯಕಾರಿ?

ಫಲವತ್ತತೆ ತಿಳುವಳಿಕೆ ಎಷ್ಟು ಸಹಾಯಕಾರಿ?

ತುಂಬಾ ದಂಪತಿ ಹಾಗೂ ಜೋಡಿಗಳಿಗೆ ಬೇಡದ ಗರ್ಭಧಾರಣೆ ತಡೆಗಟ್ಟುವಲ್ಲಿ ಫಲವತ್ತತೆ ತಿಳುವಳಿಕೆ ಸಹಾಯಕಾರಿ. ಸುಮಾರು 100 ದಂಪತಿಗಳಲ್ಲಿ 24ರಷ್ಟು ದಂಪತಿ ಈ ವಿಧಾನ ಅನುಸರಿಸುತ್ತಾರೆ.

ಯಾವಾಗ ಸ್ತ್ರೀಗೆ ಅಂಡೋತ್ಪತ್ತಿ ಸಮಯ ಎಂದು ಹೇಳಲು ಕಷ್ಟ. ಅವಳು ಅಂಡೋತ್ಪತ್ತಿಯ 5ರಿಂದ 6 ದಿನಗಳ ಮೊದಲು ಹಾಗೂ ಅಂಡೋತ್ಪತ್ತಿಯ 1-2 ದಿನಗಳಲ್ಲಿ ಗರ್ಭಧಾರಣೆ ಸಾಧ್ಯತೆ ಹೆಚ್ಚು.ಕೆಲವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಇರುತ್ತದೆ. ಕಾಯಿಲೆ ಹಾಗೂ ಮಾನಸಿಕ ಒತ್ತಡ ಅನಿಯಮಿತ ಮುಟ್ಟಿಗೆ ಕಾರಣ. ಫಲವತ್ತತೆ ತಿಳುವಳಿಕೆ ಎಂದರೆ ದೇಹದಲ್ಲಿ ಆಗುವ ಬದಲಾವಣೆ ಗಮನಿಸಿ ಫಲವತ್ತತೆ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸದಿರುವುದು.

ಫಲವತ್ತತೆ ತಿಳುವಳಿಕೆ STDs ತಡೆಗಟ್ಟುತ್ತದೆಯೇ?

ಫಲವತ್ತತೆ ತಿಳುವಳಿಕೆ STDs ತಡೆಗಟ್ಟುತ್ತದೆಯೇ?

STDs ಎಂದರೆ ಲೈಂಗಿಕಕ್ರಿಯೆ ಮೂಲಕ ಹರಡುವ ರೋಗ, ಫಲವತ್ತತೆ ತಿಳುವಳಿಕೆಯಿಂದ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. STDs ಕಾಯಿಲೆ ಇರುವವರ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ಕಾಂಡೋಮ್ ಬಳಸಲೇಬೇಕು.

ಯಾವಾಗ ವೈದ್ಯರಿಗೆ ಕರೆ ಮಾಡಬೇಕು?

ಯಾವಾಗ ವೈದ್ಯರಿಗೆ ಕರೆ ಮಾಡಬೇಕು?

  • ಫಲವತ್ತತೆ ತಿಳುವಳಿಕೆ ವಿಧಾನದಿಂದ ಗರ್ಭಧಾರಣೆ ತಡೆಗಟ್ಟುತ್ತಿರುವವರು ಈ ಸಂದರ್ಭದಲ್ಲಿ ವೈದ್ಯರಿಗೆ ಕರೆ ಮಾಡಬೇಕು
  • ಆಕಸ್ಮಿಕವಾಗಿ ಗರ್ಭಧಾರಣೆಯಾದಾಗ
  • ಬಿಳುಪು ಹೋಗುವಾಗ ವಿಪರೀತ ವಾಸನೆ ಅಥವಾ ಬಣ್ಣದಲ್ಲಿ ವ್ಯತ್ಯಾಸ ಉಂಟಾಗಿದ್ದರೆ
  • ಕೆಳಹೊಟ್ಟೆಯಲ್ಲಿ ನೋವು ಇದ್ದರೆ
  • ಲೈಂಗಿಕ ಕ್ರಿಯೆ ನಡೆಸುವಾಗ ನೋವು ಉಂಟಾಗಿದ್ದರೆ.
English summary

Condom Shortage Know this fertility Awareness To Avoid Pregnancy

Due To Covid 19 word is facing condom shortage, Here are fertility awareness method to avoid unwanted Pregnancy, Read on. Kniw this fertility awareness to avoid unwanted pregnancy.
Story first published: Saturday, May 2, 2020, 16:16 [IST]
X
Desktop Bottom Promotion