For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನಿಯಮಿತ ವ್ಯಾಯಾಮ ಮಾಡಿದರೆ ಸಹಜ ಹೆರಿಗೆಗೆ ಪೂರಕವಂತೆ

|

ಗರ್ಭಧಾರಣೆ ಪ್ರತಿ ಹೆಣ್ಣಿನ ಜೀವನದ ಸುಂದರವಾದ ಒಂದು ಹಂತ. ಈ ಸಮಯದಲ್ಲಿ ನೀವು ಸಾಕಷ್ಟು ಹೊಸ ಅನುಭವಗಳಿಗೆ ಮತ್ತು ಕಲಿಕೆಗಳಿಗೆ ಒಳಗಾಗುತ್ತೀರಿ. ಪ್ರತಿ ಗರ್ಭಿಣಿಯೂ ಆದಷ್ಟು ಸಮಸ್ಯೆಗಳು ಎದುರಾಗದಂತೆ, ಸಹಜ ಹೆರಿಗೆಯ ಮೂಲಕ ತನ್ನ ಮಗು ಆರೋಗ್ಯವಾಗಿ ಈ ಭೂಮಿಗೆ ಬರಬೇಕು ಎಂದೇ ಅಪೇಕ್ಷಿಸುತ್ತಾರೆ.

Benefits of Exercise During Pregnancy in Kannada

ಇದಕ್ಕೆ ಅವಶ್ಯಕವಾದ ಸಲಹೆಗಳನ್ನು ವೈದ್ಯರು, ಹಿರಿಯರು, ನುರಿತವರಿಂದ ಪಡೆಯುತ್ತಾರೆ. ಆದರೆ, ಬಹುತೇಕರು ನೀಡುವ ಸಲಹೆಗಳಲ್ಲಿ ಮುಖ್ಯವಾದ ಸಲಹೆ ನಿತ್ಯ ನಿಯಮಿತ ವ್ಯಾಯಾಮ. ದೈಹಿಕ ವ್ಯಾಯಾಮವು ದೈಹಿಕ ಚಟುವಟಿಕೆಯಾಗಿದ್ದು ಅದು ದೈಹಿಕ ಸಾಮರ್ಥ್ಯ ಮತ್ತು ಒಟ್ಟಾರೆ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸುಧಾರಿಸುತ್ತದೆ ಅಥವಾ ನಿರ್ವಹಿಸುತ್ತದೆ.

ಈ ರೀತಿಯ ವ್ಯಾಯಾಮವು ಅತೀ ಮುಖ್ಯವಾಗಿದೆ ಮತ್ತು ಗರ್ಭಧಾರಣೆಯ ಕೆಲವು ಸಾಮಾನ್ಯ ಅಸ್ವಸ್ಥತೆಗಳನ್ನು ನಿವಾರಿಸಲು, ನಿಮ್ಮ ದೇಹವನ್ನು ಸಹಜ ಹೆರಿಗೆಗೆ ಸಿದ್ಧಪಡಿಸಲು ವ್ಯಾಯಾಮದ ಪಾತ್ರ ಅಪಾರ. ಏಕೆ, ಹೇಗೆ ಎಂದು ತಿಳಿಯಲು ಮುಂದಿನ ಲೇಖನ ಓದಿ:

ನಿಮ್ಮ ಶಕ್ತಿಯನ್ನು ಹೆಚ್ಚಿಸಿ

ನಿಮ್ಮ ಶಕ್ತಿಯನ್ನು ಹೆಚ್ಚಿಸಿ

ವ್ಯಾಯಾಮ ಗರ್ಭಧಾರಣೆಯ ವೇಳೆ ನಿಮ್ಮ ಶಕ್ತಿಯನ್ನು ವೃದ್ಧಿಸುತ್ತದೆ. ನಿಯಮಿತ ವ್ಯಾಯಾಮದಿಂದ ನೀವು ಎಂದಿನಂತೆ ನಿಮ್ಮ ದೈನಂದಿನ ಕಾರ್ಯಗಳನ್ನು ಪೂರೈಸಲು ಅಥವಾ ಕೆಲಸಗಳನ್ನು ಹೆಚ್ಚು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ವ್ಯಾಯಾಮವು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಆದ್ದರಿಂದ ನೀವು ಸುಲಭವಾಗಿ ಆಯಾಸಗೊಳ್ಳುವುದಿಲ್ಲ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ಅಲ್ಲದೇ, ವ್ಯಾಯಾಮದಿಂದ ಸ್ನಾಯುಗಳು ಸಡಿಲಗೊಂಡು ಏಳುವುದು, ಕೂರುವುದು, ಶಾಪಿಂಗ್ ಮಾಡುವುದು ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗಿಲ್ಲ.

ಉತ್ತಮ ನಿದ್ರೆಗೆ ವ್ಯಾಯಾಮ

ಉತ್ತಮ ನಿದ್ರೆಗೆ ವ್ಯಾಯಾಮ

ನಿಮ್ಮ ಗರ್ಭಧಾರಣೆಯು ಪ್ರತಿ ಮಾಸ ಕಳೆದಂತೆ ಆರಾಮದಾಯಕವಾಗಿ ಮಲಗುವ ಭಂಗಿಯನ್ನು ಕಂಡುಕೊಳ್ಳುವುದು ನಿಜಕ್ಕೂ ಸವಾಲಾಗಿರುತ್ತದೆ. ಯಾವ ಭಂಗಿಯೂ ನಿಮಗೆ ಹಿತ ಎನಿಸುವುದೇ ಇಲ್ಲ. ಆದರೆ ವ್ಯಾಯಾಮವು ನಿಮ್ಮನ್ನು ಆಯಾಸಗೊಳಿಸುವುದರಿಂದ ಶಾಂತ ನಿದ್ರೆಗೆ ಜಾರುವಂತೆ ಸಹಾಯ ಮಾಡುತ್ತದೆ.

ಗರ್ಭಧಾರಣೆಗೆ ಸಂಬಂಧಿಸಿದ ಕೆಲವು ಅಪಾಯವನ್ನು ತಪ್ಪಿಸುತ್ತದೆ

ಗರ್ಭಧಾರಣೆಗೆ ಸಂಬಂಧಿಸಿದ ಕೆಲವು ಅಪಾಯವನ್ನು ತಪ್ಪಿಸುತ್ತದೆ

ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವುದರಿಂದ ಗರ್ಭಾವಸ್ಥೆಯ ಮಧುಮೇಹ ಮತ್ತು ಪ್ರಿಕ್ಲಾಂಪ್ಸಿಯಾ ಬರುವ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಆರೋಗ್ಯಕರ ತೂಕವನ್ನು ಹೊಂದಲು ವ್ಯಾಯಾಮ ಬೇಕೆ ಬೇಕು.

ಗರ್ಭಧಾರಣೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ

ಗರ್ಭಧಾರಣೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ

ನಿಯಮಿತ ವ್ಯಾಯಾಮವು ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ, ಇದು ನಿಮ್ಮ ದೇಹವು ಗರ್ಭಧಾರಣೆಯ ನೋವುಗಳನ್ನು ಉತ್ತಮವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಯೋಗ ಮಾಡುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ, ವಾಕಿಂಗ್ ನಿಮ್ಮ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಈಜು ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಆದರೆ ಇದೆಲ್ಲದಕ್ಕೂ ವೈದ್ಯರ ಸಲಹೆ ಅತಿ ಮುಖ್ಯ.

ಹೆರಿಗೆಗೆ ತಯಾರಿ

ಹೆರಿಗೆಗೆ ತಯಾರಿ

ನಿಯಮಿತ ವ್ಯಾಯಾಮದಿಂದ ಸಹಜ, ಸುಲಭ ಹೆರಿಗೆಗೆ ಸಾಕಷ್ಟು ಸಹಾಯಕವಾಗುತ್ತದೆ, ಹೆರಿಗೆ ನೋವನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಗರ್ಭಧಾರಣೆಯ ಉದ್ದಕ್ಕೂ ವಾರಕ್ಕೆ ಮೂರು ಬಾರಿ ಯೋಗ, ವ್ಯಾಯಾಮ ಮಾಡುತ್ತಿದ್ದ ಮಹಿಳೆಯರು ಇತರೆ ಮಹಿಳೆಯರಿಗಿಂತ ಸಹಜ ಹೆರಿಗೆಯ ಮೂಲಕ ಮಗುವನ್ನು ಪಡೆದಿದ್ದಾರೆ ಎನ್ನಲಾಗಿದೆ.

ಒತ್ತಡವನ್ನು ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸುತ್ತದೆ

ಒತ್ತಡವನ್ನು ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸುತ್ತದೆ

ಗರ್ಭಿಣಿಯಾದಾಗ ಸಾಕಷ್ಟು ಒತ್ತಡಗಳು ನಿಮ್ಮನ್ನು ಆವರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಆದರೆ ವ್ಯಾಯಾಮವು ಮನಸ್ಥಿತಿಗೆ ಸಂಬಂಧಿಸಿರುವ ಮೆದುಳಿನ ರಾಸಾಯನಿಕವಾದ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ.

ಹೆರಿಗೆಯ ನಂತರ ನಿಮ್ಮ ದೇಹ ಮತ್ತೆ ಮೊದಲಿನಂತಾಗಲು

ಹೆರಿಗೆಯ ನಂತರ ನಿಮ್ಮ ದೇಹ ಮತ್ತೆ ಮೊದಲಿನಂತಾಗಲು

ಗರ್ಭಧಾರಣೆಯ ವೇಳೆ ನಿಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ, ಇದು ಸಹಜವೂ ಹೌದು. ಆದರೆ ಈ ವೇಳೆ ನೀವು ನಿಯಮಿತ ವ್ಯಾಯಾಮ ಮಾಡಿದ್ದೇ ಆದರೆ ಹೆರಿಗೆಯ ನಂತರ ನಿಮ್ಮ ದೇಹವು ಸುಲಭವಾಗಿ ಮೊದಲಿನಂತೆ ಮರುಕಳಿಸಲು ಹೆಚ್ಚು ಸಮಯ ಬೇಕಿಲ್ಲ. ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ವ್ಯಾಯಾಮ ಮಾಡಿದರೆ ನೀವು ಹೆಚ್ಚಿನ ತೂಕವನ್ನು ಹೊಂದುವ ಸಾಧ್ಯತೆಯೂ ಕಡಿಮೆ.

ಸೂಚನೆ: ನಿಮ್ಮ ಆರೋಗ್ಯ, ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವೈದ್ಯರ ಸಲಹೆ ಮೇರೆಗೆ ನೀವು ವ್ಯಾಯಾಮ ಮಾಡುವುದು ಉತ್ತಮ.

English summary

Benefits of Exercise During Pregnancy in Kannada

Here we are discussing about Health Benefits Of Exercise During Pregnancy Or Exercise During Pregnancy: How It Helps For Normal Labor. Read more.
Story first published: Tuesday, October 6, 2020, 13:51 [IST]
X
Desktop Bottom Promotion