For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಕಹಿ ತಿಂದರೆ ಮಗು ಅಳುವಂತೆ ಮುಖ ಮಾಡುತ್ತಂತೆ, ಸಿಹಿ ತಿಂದರೆ ನಗುವುದಂತೆ

|

ಗರ್ಭವತಿಯಾದಾಗ ಒಳ್ಳೆಯದನ್ನು ಯೋಚಿಸು, ಗರ್ಭಿಣಿ ಅಳಬಾರದು, ಗರ್ಭಿಣಿ ಅತ್ತರೆ ಮಗು ಕೂಡ ಅಳುತ್ತದೆ, ಆದ್ದರಿಂದ ಖುಷಿಯಾಗಿರಬೇಕು ಎಂದೆಲ್ಲಾ ಹೇಳುವುದನ್ನು ಕೇಳಿರಬಹುದು. ತಾಯಿಯ ಹೊಟ್ಟೆಯಲ್ಲಿರುವಾಗಲೇ ಅಭಿಮನ್ಯು ಚಕ್ರವ್ಯೂಹ ಬೇಧಿಸುವುದನ್ನು ಕಲಿತ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಗರ್ಭಾವಸ್ಥೆಯಲ್ಲಿ ತಾಯಿಯ ಮನಸ್ಥಿತಿ ಹೇಗಿರುತ್ತದೋ ಅದೇ ರೀತಿ ಮಗುವಿನ ಆಲೋಚನೆ ಇರುತ್ತದೆ, ತುಂಬಾ ಬೇಸರದಿಂದ ಇದ್ದರೆ, ಕೆಟ್ಟದಾಗಿ ಯೋಚಿಸಿದರೆ ನಮ್ಮ ಆಲೋಚನೆಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದೆಲ್ಲಾ ಹೇಳುತ್ತಾರೆ.

babies can taste and smell in the womb

ತಾಯಿಯ ಮನಸ್ಥಿತಿ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬವುದು ಇದೀಗ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಗರ್ಭಿಣಿಯರು ಹೇಗೆ ಯೋಚಿಸುತ್ತಾರೆ, ಏನು ತಿನ್ನುತ್ತಾರೆ ಎಲ್ಲವೂ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ.

ಇನ್ನು ಹೊಟ್ಟೆಯಲ್ಲಿರುವ ಮಗು ವಾಸನೆ ಹಾಗೂ ರುಚಿಗೂ ಭಿನ್ನವಾಗಿ ವರ್ತಿಸುತ್ತದೆ ಎಂದು ಈ ಸಂಶೋಧನೆ ವರದಿ ಹೇಳಿದೆ. ಈ ಸಂಶೋಧನೆಯನ್ನು ಯುಕೆಯಲ್ಲಿ ನಡೆಸಲಾಗಿದ್ದು (Durham University's Fetal and Neonatal Research Lab, UK) ಈ ಅಧ್ಯಯನದಲ್ಲಿ ಹೊಟ್ಟೆಯಲ್ಲಿರುವ ಮಗು ತಾಯಿ ಕಹಿ ಆಹಾರ ತಿಂದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿದುಕೊಳ್ಳಲಾಯಿತು.

ಈ ಅಧ್ಯಯನ ವರದಿ ತುಂಬಾನೇ ಇಂಟೆರೆಸ್ಟಿಂಗ್‌ ಆಗಿದೆ

ಈ ಅಧ್ಯಯನ ವರದಿ ತುಂಬಾನೇ ಇಂಟೆರೆಸ್ಟಿಂಗ್‌ ಆಗಿದೆ

ವಿಜ್ಞಾನಿಗಳು 4D ಅಲ್ಟ್ರಾಸೌಂಡ್‌ ಸ್ಕ್ಯಾನ್‌ನಲ್ಲಿ 100 ಗರ್ಭಿಣಿಯರನ್ನು ಪರೀಕ್ಷೆ ಮಾಡಲಾಯಿತು. ಹೀಗೆ ಪರೀಕ್ಷೆ ಮಾಡಿಸುವ ಮುನ್ನ ಅವರಿಗೆ ಕ್ಯಾರೆಟ್ ಹಾಗೂ ಕಹಿ ರುಚಿಯ ಕ್ಯಾಪ್ಸುಲ್ ನೀಡಿ 20 ನಿಮಿಷದ ಬಳಿಕ ಪರೀಕ್ಷೆಗೆ ಒಳಪಡಿಸಲಾಯಿತು. ಕ್ಯಾರೆಟ್‌ ಫ್ಲೇವರ್‌ ಸೇವಿಸಿದಾಗ ಮಗು ನಗುವಂತೆ, ಖುಷಿಯಾದಂತೆ ಮುಖ ಮಾಡಿದರೆ, ಕಹಿ ಫ್ಲೇವರ್‌ ನೀಡಿದಾಗ ಅಳುವಂತೆ ಮುಖ ಮಾಡುತ್ತೆ ಎಂದು ಸ್ಕ್ಯಾನಿಂಗ್‌ನಲ್ಲಿ ತಿಳಿದು ಬಂತು.

ಗರ್ಭಿಣಿಯಾದಾಗ ತಿನ್ನುವ ಆಹಾರ ನಂತರ ಮಗುವಿನ ಆಹಾರಶೈಲಿ ಪ್ರಭಾವಿಸುತ್ತೆ

ಗರ್ಭಿಣಿಯಾದಾಗ ತಿನ್ನುವ ಆಹಾರ ನಂತರ ಮಗುವಿನ ಆಹಾರಶೈಲಿ ಪ್ರಭಾವಿಸುತ್ತೆ

ಗರ್ಭಿಣಿಯರು ಯಾವ ಆಹಾರ ಹೆಚ್ಚಾಗಿ ಸೇವಿಸುತ್ತಾರೋ ಹೆರಿಗೆಯ ಬಳಿಕ ಮಗು ಬೆಳೆಯುತ್ತಿದ್ದಂತೆ ಆ ಆಹಾರದ ಕಡೆ ಒಲವು ಹೆಚ್ಚು ತೋರಿಸುತ್ತಾರೆ ಎಂದು ಹೇಳಲಾಗುವುದು. ಕಹಿ ಆಹಾರ ಮಗುವಿಗೆ ಇಷ್ಟವಾಗದಿದ್ದರೂ ಗರ್ಭಿಣಿಯಾಗಿದ್ದಾಗ ಅದನ್ನು ತಿಂದರೆ ಆ ಮಗು ಭವಿಷ್ಯದಲ್ಲಿ ಅಂಥ ಆಹಾರಸೇವಿಸಲು ಹಿಂದೇಟು ಹಾಕಲ್ಲ.

ಗರ್ಭಿಣಿಯರು ಆರೋಗ್ಯಕರ ಆಹಾರ ಸೇವಿಸಿ

ಗರ್ಭಿಣಿಯರು ಆರೋಗ್ಯಕರ ಆಹಾರ ಸೇವಿಸಿ

ಗರ್ಭಾವಸ್ಥೆಯಲ್ಲಿ ನಿಮ್ಮ ಆಹಾರ ಶೈಲಿ ಮಗುವಿನ ಆರೋಗ್ಯದ ಮೇಲೆ ಫ್ರಭಾವ ಬೀರುವುದು ಮಾತ್ರವಲ್ಲ, ಭವಿಷ್ಯದಲ್ಲೂ ಮಗುವಿನ ಆಹಾರ ಶೈಲಿಯ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ಗರ್ಬಾವಸ್ಥೆಯಲ್ಲಿ ಆರೋಗ್ಯಕರ ಆಹಾರ ಸೇವಿಸಿ, ಡ್ರೈ ಫ್ರೂಟ್ಸ್ ಹಣ್ಣುಗಳನ್ನು ಸೇವಿಸಿ. ವಾಲ್ನಟ್‌ ಇಷ್ಟವಾಗದಿದ್ದರೂ ಸೇವಿಸಿ, ಮುಂದೆ ಮಗುವಿಗೆ ನೀಡಿದರೆ ಅದು ತಿನ್ನುತ್ತೆ.

ಖುಷಿಯಾಗಿರಿ, ಒಳ್ಳೆಯ ಚಿಂತನೆ ಮಾಡಿ

ಗರ್ಭಿಣಿಯರು ಖುಷಿಯಾಗಿರಬೇಕು, ಒಳ್ಳೆಯ ಪುಸ್ತಕ ಓದುವುದು, ಒಳ್ಳೆಯ ಚಿಂತನೆ ಇವೆಲ್ಲಾ ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ.

English summary

Babies Can Taste and Smell in the Womb Finds Study

Researcher says babies can taste and smell in the womb, read on...
Story first published: Tuesday, September 27, 2022, 9:11 [IST]
X
Desktop Bottom Promotion