For Quick Alerts
ALLOW NOTIFICATIONS  
For Daily Alerts

ಅಧ್ಯಾಯನದ ಪ್ರಕಾರ ವಾಯುಮಾಲಿನ್ಯವು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದಂತೆ

|
ಅತಿಯಾದ ವಾಯುಮಾಲಿನ್ಯದಿಂದ ಗರ್ಭಿಣಿಯರ ಮೇಲಾಗುವ ದುಷ್ಪರಿಣಾಮಗಳು | Oneindia kannada

ಗರ್ಭಿಣಿಯಾಗಿದ್ದಾಗ ಒಳ್ಳೆಯದ ದೃಶ್ಯಗಳನ್ನೇ ನೋಡಬೇಕು, ಒಳ್ಳೆಯದನ್ನೇ ಕೇಳಬೇಕು, ಮನಸ್ಸನ್ನು ಸದಾ ಧನಾತ್ಮಕವಾಗಿ ಇಟ್ಟುಕೊಳ್ಳಬೇಕು ಎಂದು ಹೇಳುವುದನ್ನು ಕೇಳಿರಬಹುದು. ಗರ್ಭಿಣಿ ವಾಸಿಸುವ ಮನೆಯ ವಾತಾವರಣ, ಸುತ್ತ ಮುತ್ತಲಿನ ಪರಿಸರ ಭ್ರೂಣದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಶುದ್ಧವಾದ ಗಾಳಿ, ನೀರು, ಆಹಾರ ಸೇವಿಸಿದಷ್ಟೂ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಕಲುಷಿತ ಪರಿಸರ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗರ್ಭಪಾತವಾಗುವ ಸಾಧ್ಯತೆ ಕೂಡ ಇರುತ್ತದೆ.

ಇತ್ತೀಚೆಗೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ನಗರಗಳು ಕಡಿಮೆಯಾಗುತ್ತಿರುವ ಕಾಡುಗಳು ವಾಯು ಮಾಲಿನ್ಯ ಹೆಚ್ಚಲು ಕಾರಣವಾಗಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದಂತೆ ಗರ್ಭಪಾತ ಕೂಡ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ವಿಷಯ ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಯಾರು ಅತಿ ಹೆಚ್ಚು ವಾಯು ಮಾಲಿನ್ಯ ಇರುವ ಪ್ರದೇಶದಲ್ಲಿ ಇರುತ್ತಾರೋ ಅವರಲ್ಲಿ ಗರ್ಭಾಪಾತವಾಗುವ ಸಾಧ್ಯತೆ ಶೇ.50ರಷ್ಟಿದೆ ಎಂದು ಈ ಅಧ್ಯಯನ ಹೇಳಿದೆ.

ಅಧ್ಯಯನ ಏನು ಹೇಳಿದೆ?

ಅಧ್ಯಯನ ಏನು ಹೇಳಿದೆ?

ಬೀಜಿಂಗ್‌ನ ಒಂದು ಅಧ್ಯಯನ ತಂಡ ಚೀನಾದ ವಾಯು ಮಾಲಿನ್ಯ ಇರುವ ನಗರದಲ್ಲಿ ವಾಸಿಸುತ್ತಿರುವ 10 ಲಕ್ಷ ಗರ್ಭಾವತಿಯರನ್ನು 2009ರಿಂದ 2017ರವರೆಗೆ ಅಧ್ಯಯನ ಮಾಡಿದೆ. ಈ ಅಧ್ಯಯನದಲ್ಲಿ ಶೇ.50 ಗರ್ಭಪಾತಕ್ಕೆ ವಾಯುಮಾಲಿನ್ಯ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತ ವರದಿ ನೇಚರ್‌ ಸಸ್ಟೈನಬಿಲಿಟಿ ಜರ್ನಲ್‌ನಲ್ಲಿ ವರದಿ ಆಗಿದೆ.

ಗರ್ಭಪಾತಕ್ಕೆ ಪ್ರಮುಖ ಕಾರಣಗಳು

ಗರ್ಭಪಾತಕ್ಕೆ ಪ್ರಮುಖ ಕಾರಣಗಳು

ಗರ್ಭಪಾತಕ್ಕೆ ಪ್ರಮುಖ ಕಾರಣ ಗಾಳಿಯಲ್ಲಿರುವ ರಂಜಕದ ಡೈಯಾಕ್ಸೈಡ್ ಆಗಿದೆ. ಸಲ್ಫರ್ ಅಥವಾ ರಂಜಕದ ಡಯಾಕ್ಸೈಡ್ ಕಾರ್ಖಾನೆಗಳು ಹಾಗೂ ವಾಹನಗಳಿಂದ ವಾತಾವರಣವನ್ನು ಸೇರುತ್ತದೆ, ಈ ರಂಜಕದ ಡಯಾಕ್ಸೈಡ್‌ ಅಧಿಕವಿರುವ ಗಾಳಿಯನ್ನು ಸೇವಿಸಿದಾಗ ಗರ್ಭಪಾತ ಉಂಟಾಗುವುದು. ಸೇ. 41ರಷ್ಟು ಗರ್ಭಪಾತ ಈ ರೀತಿ ಉಂಟಾಗುತ್ತದೆ, ಉಳಿದಂತೆ ಗಾಳಿಯಲ್ಲಿ ಕಾರ್ಬನ್ ಮಾನಾಕ್ಸೈಡ್‌ ಹೆಚ್ಚಿದ್ದರೆ, ಓಝೋನ್ ಪದರಗಳು ತೆಳುವಾದರೆ ಗರ್ಭಪಾತವಾಗುವ ಸಾಧ್ಯತೆ ಇದೆ.

ಈ ಸಂಶೋಧನೆ ಮಾಡಿದ ಪ್ರೊ. ಲಿಕ್ವಾನಿಂಗ್ ಜಾಂಗ್‌ ಹೇಳುವ ಪ್ರಕಾರ 'ಗರ್ಭಿಣಿ ಆಗಲು ಬಯಸುವ ಹಾಗೂ ಗರ್ಭಿಣಿ ಮಹಿಳೆಯರು ವಾಯು ಮಾಲಿನ್ಯ ಇರುವ ಪ್ರದೇಶದಿಂದ ದೂರವಿದ್ದರೆ ಮುಂದೆ ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು' ಎಂದಿದ್ದಾರೆ.

ಮಗುವಿನ ಮೇಲೆ ವಾಯು ಮಾಲಿನ್ಯದ ದುಷ್ಪರಿಣಾಮಗಳು

ಮಗುವಿನ ಮೇಲೆ ವಾಯು ಮಾಲಿನ್ಯದ ದುಷ್ಪರಿಣಾಮಗಳು

ವಾಯು ಮಾಲಿನ್ಯದಿಂದ ಗರ್ಭಪಾತವಾಗುವ ಅಪಾಯ ಒಂದೆಡೆಯಾದರೆ, ಗರ್ಭಪಾತವಾಗದೆ ಮಗು ಜನಿಸಿದರೂ ಅಂತಹ ಮಕ್ಕಳಲ್ಲಿ ಅನೇಕ ಅರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ವಾಯು ಮಾಲಿನ್ಯದಿಂದಾಗಿ ಕಡಿಮೆ ತೂಕದ ಮಗು ಹುಟ್ಟಬಹುದು, ಅವಧಿ ಪೂರ್ವವಾಗಿ ಮಗು ಹುಟ್ಟಬಹುದು ಡಿಎನ್‌ಎಗೆ ಹಾನಿ ಉಂಟಾಗಬಹುದು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂದುವುದು, ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆ ಉಂಟಾಗುವುದು.

ಭಾರತದ ಯಾವ ನಗರಗಳು ಗರ್ಭಿಣಿಯರಿಗೆ ಸುರಕ್ಷಿತವಲ್ಲ

ಭಾರತದ ಯಾವ ನಗರಗಳು ಗರ್ಭಿಣಿಯರಿಗೆ ಸುರಕ್ಷಿತವಲ್ಲ

ಭಾರತದ ನಗರಗಳಾದ ದೆಹಲಿ, ಫರಿದಾಬಾದ್, ಕಾನ್ಪುರ, ವಾರಾಣಸಿ, ಪಾಟ್ನಾಗಳಲ್ಲಿ ವಾಯು ಮಾಲಿನ್ಯ ಅಧಿಕವಾಗುತ್ತಿದ್ದು, ಗರ್ಭಪಾತವಾಗುತ್ತಿರುವ ಸಾಧ್ಯತೆಯೂ ಹೆಚ್ಚಾಗುತ್ತಿದೆ, ಇನ್ನು ಗರ್ಭಿಣಿಯರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ಪರಿಹಾರ ಏನು?

ಪರಿಹಾರ ಏನು?

ವಾಯು ಮಾಲಿನ್ಯದಿಂದ ಗರ್ಭಿಣಿ ಹಾಗೂ ಭ್ರೂಣದಲ್ಲಿರುವ ಮಗುವಿನ ಮೇಲೆ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಇನ್ನು ವಾಯು ಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ, ಕೆಮ್ಮು, ತಲೆಸುತ್ತು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಮುಂದಿನ ಪೀಳಿಗೆ ಆರೋಗ್ಯಕರವಾಗಿರಲು ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು. ವಾಯು ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ತುರ್ತು ನಿರ್ಮಾಣವಾಗಿದೆ.

English summary

Air Pollution Can Increase The Risk Of Miscarriage

According to a recent study, air pollution can cause the risk of miscarriage for pregnant women. The study says if pregnant women exposed to polluted air there is high chance for miscarriage or will give birth to under weight baby.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X