For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ಹಾಗೂ ಅಂಡೋತ್ಪತ್ತಿಯ ಫಲವತ್ತತೆಯ ಲೆಕ್ಕಾಚಾರ ಹೀಗಿರಲಿ

|

ಗರ್ಭಧಾರಣೆ ಎನ್ನುವುದು ಮಹಿಳೆಯರಿಗೊಂದು ವಿಶೇಷ ಸಂಗತಿ. ವಿವಾಹ ಆಗಿ ಒಂದು ವರ್ಷದೊಳಗೆ ಮಗುವನ್ನು ಹೊಂದುವ ಯೋಜನೆ ಇದ್ದರೆ ಬಹುಬೇಗ ಗರ್ಭಧಾರಣೆ ಆಗುವುದು. ಅದೇ ವಿವಾಹವಾಗಿ ದೀರ್ಘ ಸಮಯದ ಬಳಿಕ ಮಗುವನ್ನು ಪಡೆಯಬೇಕು ಅಥವಾ ಮಹಿಳೆಯರಿಗೆ ಸೂಕ್ತ ವಯಸ್ಸು ಮೀರಿದೆ ಎಂದಾದಾಗ ಗರ್ಭಧಾರಣೆಯು ಸ್ವಲ್ಪ ಕಠಿಣವಾಗುವುದು. ಕೆಲವೊಮ್ಮೆ ಸೂಕ್ತ ಸಮಯದಲ್ಲಿ ಮಕ್ಕಳನ್ನು ಹೊಂದುವ ಯೋಜನೆಯಿಲ್ಲದೆ ಮುಂದೆ ದೂಡುತ್ತಾ ಹೋಗುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಮಹಿಳೆಯರಿಗೆ ಸಾಮಾನ್ಯವಾಗಿ ವರ್ಷ ಹೆಚ್ಚಾದಂತೆ ಗರ್ಭ ಧಾರಣೆಯ ಸಮಸ್ಯೆ ಸಾಮಾನ್ಯವಾಗಿರುತ್ತದೆ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಸಂತಾನವನ್ನು ಪಡೆಯಲು ಉತ್ತಮ ಸಮಯ ಎಂದರೆ 23 ವರ್ಷದಿಂದ 29 ವರ್ಷದೊಳಗೆ ಆಗಬೇಕು ಎನ್ನಲಾಗುವುದು. ಈ ಅವಧಿಯಲ್ಲಿ ಗುಣಮಟ್ಟದ ಅಂಡೋತ್ಪತ್ತಿ ಉಂಟಾಗುವುದು. ಹುಟ್ಟುವ ಮಕ್ಕಳು ಸಹ ಆರೋಗ್ಯ ಯವಂತರಾಗಿರುತ್ತಾರೆ. ಮಹಿಳೆಯರಿಗೂ ಪ್ರಸವವು ನೈಸರ್ಗಿಕವಾಗಿಯೇ ಆಗುವುದು. 'ಸಿ'ವಿಭಾಗದ ಪ್ರಸವದ ಸಾಧ್ಯತೆಗಳು ಅತ್ಯಂತ ಕಡಿಮೆಯಾಗಿರುತ್ತದೆ. ಹಾಗೊಮ್ಮೆ ನೀವು 30 ವರ್ಷದ ಗಡಿಯನ್ನು ದಾಟಿದ್ದೀರಿ, ಮಗುವನ್ನು ಹೊಂದುವ ಪ್ರಯತ್ನದಲ್ಲಿದ್ದೀರಿ ಎಂದಾದರೆ ಕೆಲವು ಪ್ರಮುಖ ಕಾಳಜಿ ಹಾಗೂ ಪೂರ್ವತಯಾರಿಗಳನ್ನು ಮಾಡಿಕೊಳ್ಳಬೇಕಾಗುವುದು.

ಗರ್ಭಕೋಶದಲ್ಲಿ ಫಲವತ್ತತೆ ಅಥವಾ ಉತ್ತಮ ಅಂಡೋತ್ಪತ್ತಿ

ಗರ್ಭಕೋಶದಲ್ಲಿ ಫಲವತ್ತತೆ ಅಥವಾ ಉತ್ತಮ ಅಂಡೋತ್ಪತ್ತಿ

ಗರ್ಭಧಾರಣೆ ಹೊಂದಲು ಗರ್ಭಕೋಶದಲ್ಲಿ ಫಲವತ್ತತೆ ಅಥವಾ ಉತ್ತಮ ಅಂಡೋತ್ಪತ್ತಿಯ ಬಿಡುಗಡೆಯಾಗಬೇಕು. ಫಲವತ್ತಾದ ಅಂಡೋತ್ಪತ್ತಿಯ ಬಗ್ಗೆ ಕ್ಯಾಲೆಂಡರ್ ಅನ್ವಯದಲ್ಲಿ ಕೆಲವು ಲೆಕ್ಕಾಚಾರವನ್ನು ಪಡೆಯಬೇಕಾಗುವುದು. ಉತ್ತಮ ಅಂಡಾಣು ಬಿಡುಗಡೆಯ ಸಮಯದಲ್ಲಿ ಸಂಭೋಗ ನಡೆಸುವುದರಿಂದ ಸುಲಭವಾಗಿ ಗರ್ಭಧಾರಣೆ ಹೊಂದಬಹುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಕೆಲವರಿಗೆ ಮಕ್ಕಳನ್ನು ಹೊಂದುವ ಆಸೆ ಇರುತ್ತದೆಯಾದರೆ ಕೆಲವು ಉಪಯುಕ್ತ ತಿಳುವಳಿಕೆ ಅಥವಾ ಮಾಹಿತಿ ಇರುವುದಿಲ್ಲ. ಹಾಗಾಗಿ ಮೊದಲು ಗರ್ಭಧಾರಣೆ ಹಾಗೂ ಅಂಡೋತ್ಪತ್ತಿಯ ಫಲವತ್ತೆಯ ಬಗ್ಗೆ ಸಾಕಷ್ಟು ಅರಿವನ್ನು ಹೊಂದಬೇಕಾಗುವುದು.

ಸೂಕ್ತ ತಪಾಸಣೆ ಹಾಗೂ ನಿಮ್ಮ ಆರೋಗ್ಯ ಹಾಗೂ ಬದಲಾವಣೆ

ಸೂಕ್ತ ತಪಾಸಣೆ ಹಾಗೂ ನಿಮ್ಮ ಆರೋಗ್ಯ ಹಾಗೂ ಬದಲಾವಣೆ

ನೀವು ಗರ್ಭಧಾರಣೆಗೆ ಸಾಕಷ್ಟು ಪ್ರಯತ್ನಗಳನ್ನು ಹಾಗೂ ಚಿಕಿತ್ಸೆಯನ್ನು ಪಡದುಕೊಳ್ಳುತ್ತಿದ್ದೀರಿ, ಆದರೂ ನಿಮ್ಮ ಪ್ರಯತ್ನಗಳಿಗೆ ಯಾವುದೇ ಉತ್ತಮ ಫಲಿತಾಂಶ ದೊರೆಯುತ್ತಿಲ್ಲ ಎಂದಾದರೆ ಸೂಕ್ತ ತಪಾಸಣೆ ಹಾಗೂ ನಿಮ್ಮ ಆರೋಗ್ಯ ಹಾಗೂ ಬದಲಾವಣೆಯ ಬಗ್ಗೆ ಒಂದಿಷ್ಟು ವಿಷಯವನ್ನು ತಿಳಿದುಕೊಳ್ಳಿ. ಅಂತಹ ಒಂದು ವಿಶೇಷ ಮಾಹಿತಿಗಳನ್ನು ನಿಮಗಾಗಿ ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

ಗರ್ಭಧಾರಣೆಯ ಉತ್ತಮ ಚಿಹ್ನೆಗಳು ಮತ್ತು ಗುಣಲಕ್ಷಣಗಳು

ಗರ್ಭಧಾರಣೆಯ ಉತ್ತಮ ಚಿಹ್ನೆಗಳು ಮತ್ತು ಗುಣಲಕ್ಷಣಗಳು

ಮಹಿಳೆಯು ಋತುಚಕ್ರದ ಅವಧಿಯನ್ನು ಸೂಕ್ತ ರೀತಿಯಲ್ಲಿ ಎದುರಿಸುತ್ತಿದ್ದಾಳೆ ಎಂದ ಮಾತ್ರಕ್ಕೆ ಗರ್ಭಧಾರಣೆಗೆ ಯಾವುದೇ ಸಮಸ್ಯೆಯಿಲ್ಲ ಎನ್ನುವ ಅರ್ಥವಲ್ಲ. ಪ್ರತಿ ತಿಂಗಳಲ್ಲಿಯೂ ಫಲವತ್ತಾದ ಅಂಡಾಣು ಅಥವಾ ಆರೋಗ್ಯ ಪೂರ್ಣ ಅಂಡಾಣು ಬಿಡುಗಡೆಯಾಗದೆ ಇದ್ದರೂ ಗರ್ಭಧರಿಸಲು ಸಾಧ್ಯವಿಲ್ಲ. ಮಹಿಳೆ ಒಮ್ಮೆ ಋತುಚಕ್ರದ ಅವಧಿ ಮುಗಿಸಿ, ನಂತರದ ಋತುಚಕ್ರದ ಅವಧಿಯ ವೇಳೆಗೆ ಸಾಗುವ ಅವಧಿಯಲ್ಲಿ ಆರೋಗ್ಯವಾದ ಅಥವಾ ಫಲಭರಿತವಾದ ಅಂಡಾಣುಗಳ ಬಿಡುಗಡೆಯಾಗಬೇಕು. ಆರೋಗ್ಯವಂತ ಅಂಡಾಣು ಹೊಂದಿರುವಾಗ ಸಂಭೋಗ ನಡೆಸಿದರೆ ಗರ್ಭಧಾರಣೆ ನಿಖರವಾಗುವುದು. ಪ್ರೌಢ ಅಂಡಾಣು ಹೊಂದಿರದೆ ಹೋದರೆ ಮೊಟ್ಟೆಯು ವೀರ್ಯದಿಂದ ಫಲವತ್ತತೆಯನ್ನು ಪಡೆದುಕೊಳ್ಳಲು ಸಾಧ್ಯವಾಗದು. ಹಾಗಾಗಿ ಮೊದಲು ಫಲವತ್ತಾದ ಅಂಡಾಣು ಹೊಂದುವ ಸಮಯ ಯಾವುದು? ಎನ್ನುವುದನ್ನು ತಿಳಿದುಕೊಳ್ಳಬೇಕು. ನಂತರ ಆ ಅವಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯಾಗುವುದು.

Most Read: ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ಫಲವತ್ತತೆಯ ದಿನವನ್ನು ಹೇಗೆ ಗುರುತಿಸುವುದು?

ಫಲವತ್ತತೆಯ ದಿನವನ್ನು ಹೇಗೆ ಗುರುತಿಸುವುದು?

ಗರ್ಭಾಶಯದಿಂದ ಹೊರಹಾಕಲ್ಪಡುವ ಬಿಳಿ ಸ್ರಾವವನ್ನು ಗಮನಿಸಬೇಕು. 3-7 ದಿನಗಳ ಕಾಲ ರಕ್ತಸ್ರಾವ ಉಂಟಾಗುವ ಯೋನಿಯ ಮೂಲಕ ದಪ್ಪದಾದ ಬಿಳಿಸ್ರಾವ ಹೊರ ಚಲ್ಲುವುದು. ದಪ್ಪದಾದ ಬಿಳಿಸ್ರಾವ ಅಥವಾ ತಿಕ್ ಲೈನಿಂಗ್ ಹೊಂದುವ ಈ ಸಮಯದಲ್ಲಿ ಫಲವತ್ತಾದ ಅಂಡಾಣು ಬಿಡುಗಡೆಯಾಗಿರುತ್ತದೆ ಅಥವಾ ಆರೋಗ್ಯಯುತವಾದ ಅಂಡಾಣು ಹೊಂದಿದ್ದೇವೆ ಎನ್ನುವುದು ಅರ್ಥೈಸಿಕೊಳ್ಳಬೇಕು. ಈ ಫಲವತ್ತಾದ ಅಂಡಾಣು ಹೊಂದಿದ ಸಮಯದಿಂದ 13-14 ದಿನಗಳಕಾಲ ದೊಳಗೆ ಲೈಂಗಿಕ ಕ್ರಿಯೆ ನಡೆದರೆ ಅಂಡಾಣು ವೀರ್ಯದಿಂದ ಫಲವತ್ತತೆ ಪಡೆದುಕೊಳ್ಳುವುದು. ಅದರ ಆರೋಗ್ಯದ ಅವಧಿಯ ನಂತರ ನಡೆಸುವ ಸಂಭೋಗದಿಂದ ಯಾವುದೇ ರೀತಿಯಲ್ಲೂ ಗರ್ಭಧಾರಣೆ ಉಂಟಾಗಲು ಸಾಧ್ಯವಿಲ್ಲ.

ಲ್ಯೂಟೈನೈಸಿಂಗ್ ಹಾರ್ಮೋನ್

ಲ್ಯೂಟೈನೈಸಿಂಗ್ ಹಾರ್ಮೋನ್

ಲ್ಯೂಟೈನೈಸಿಂಗ್ ಹಾರ್ಮೋನ್ ಮಟ್ಟ ಹೆಚ್ಚಾಗುವುದರಿಂದ ಅಂಡೋತ್ಪತ್ತಿ ಸಂಭವಿಸುತ್ತದೆ. ಇದು ಅತ್ಯಂತ ಚಿಕ್ಕ ಅವಧಿಯನ್ನು ಹೊಂದಿರುತ್ತದೆ. ಇದರ ಹಂತವು 16-32 ಗಂಟೆಗಗಳ ಕಾಲ ಮಾತ್ರ ಇರುತ್ತವೆ. ಈ ಸಮಯದಲ್ಲಿಯೇ ಮೊಟ್ಟೆಯನ್ನು ಬಿಡುಗಡೆಮಾಡುವುದು ಎಂದು ಹೇಳಲಾಗುವುದು.

ಲೂಟಿಯಲ್ ಪರಿಸ್ಥಿತಿ

ಲೂಟಿಯಲ್ ಪರಿಸ್ಥಿತಿ

ಲೂಟಿಯಲ್ ಸ್ಥಿತಿಯು ಫಲವತ್ತಾದ ದಿನಗಳಿಮದ ದೀರ್ಘವಾದ ಸಮಯಗಳ ಕಾಲ ಇರುತ್ತದೆ. ಏಕೆಂದರೆ ಇದು ಅಂಡೋತ್ಪತ್ತಿಯ ನಂತರ ಪ್ರಾರಂಭವಾಗುವುದು. ನಂತರ ಮುಂದಿನ ಅವಧಿಯವರೆಗೆ ಉಳಿದಿರುತ್ತದೆ. ಮೊಟ್ಟೆ ಫಲವತ್ತಾಗಿದೆ ಎಂದಾಗ ಗರ್ಭಾಶಯದ ಗೋಡೆಯಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವಂತೆ ಗರ್ಭಕೋಶವು ಸಹಾಯ ಮಾಡುವುದು.

ಸಂಭೋಗ ನಡೆಸಲು ಅತ್ಯುತ್ತಮ ಸಮಯವನ್ನು ತಿಳಿದುಕೊಳ್ಳಿ

ಸಂಭೋಗ ನಡೆಸಲು ಅತ್ಯುತ್ತಮ ಸಮಯವನ್ನು ತಿಳಿದುಕೊಳ್ಳಿ

ಪಾಲುದಾರರೊಂದಿಗೆ ಸಂಭೋಗ ನಡೆಸುವ ಮುನ್ನ ಸಂಭೋಗ ನಡೆಸಲು ಇದು ಸೂಕ್ತ ಸಮಯವೇ? ಎನ್ನುವುದರ ಬಗ್ಗೆ ಸೂಕ್ತ ಚಿಂತನೆ ಹಾಗೂ ಯೋಜನೆಯನ್ನು ಹೊಂದಿರಬೇಕು. ನಿಮ್ಮ ಪಾಲುದಾರರೊಂದಿಗೆ ಸಂಭೋಗ ನಡೆಸುವಾಗ ಫಲವತ್ತತೆಯ ದಿನ ಆಗಿರಬೇಕು ಎನ್ನುವುದನ್ನು ಮೊದಲು ತಿಳಿದಿರಬೇಕು. ಮಹಿಳೆ ಋತುಚಕ್ರದಿಂದ ರಕ್ತಸ್ರಾವ ಅನುಭವಿಸಿ, ಮುಗಿದ ನಂತರದ 6-7 ದಿನದ ಬಳಿಕ ಹಾಗೂ ನಂತರದ ಋತು ಚಕ್ರ ಆರಂಭ ಆಗುವ ಮೊದಲ 6-7 ದಿನದ ಅವಧಿಯನ್ನು ಬಿಟ್ಟು, ಉಳಿದ ಮಧ್ಯದ ದಿನವು ಗರ್ಭಧಾರಣೆಗೆ ಸೂಕ್ತವಾದ ಸಮಯವಾಗಿರುತ್ತದೆ. ಆ ಮಧ್ಯದ ಅವಧಿಯಲ್ಲಿ ಫಲವತ್ತಾದ ಅಂಡಾಣು ಇರುತ್ತದೆ. ಜೊತೆಗೆ ವೀರ್ಯದಿಂದ ಫಲವತ್ತತೆ ಹೊಂದಲು ಸಿದ್ಧವಾಗಿರುತ್ತದೆ ಎಂದು ಹೇಳಲಾಗುವುದು. ಎಲ್ಲರಿಗೂ ಈ ಸಂದರ್ಭದಲ್ಲಿ ನಡೆಸಿದ ಸಂಭೋಗದಿಂದ ಗರ್ಭಧಾರಣೆ ಆಗುವುದು ಎನ್ನಲು ಆಗುವುದಿಲ್ಲ. ಕೆಲವರು ವಿಫಲರಾಗುವ ಸಾಧ್ಯತೆಗಳಿರುತ್ತವೆ. ಬಹುತೇಕ ಮಂದಿ ಉತ್ತಮ ರೀತಿಯಲ್ಲಿ ಗರ್ಭಧಾರಣೆ ಹೊಂದುವರು. ಅಂಡೋತ್ಪತ್ತಿಯ 24 ಗಂಟೆಗಳ ನಂತರ ಹಾಗೂ ಮುಂಚಿತವಾಗಿ ಹೊಂದಿರುವ ಸಂಭೋಗದಿಂದ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುವುದು.

Most Read: ಗರ್ಭಿಣಿಯರು ಆಲೂಗಡ್ಡೆ ಸೇವಿಸಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?

ಋತುಚಕ್ರದ ಅವಧಿ

ಋತುಚಕ್ರದ ಅವಧಿ

ನಿಮ್ಮ ಋತುಚಕ್ರದ ಅವಧಿಯನ್ನು ಖಚಿತಪಡಿಸಿಕೊಳ್ಳಿ. ಪ್ರತಿಯೊಬ್ಬರು ವಿಭಿನ್ನ ಮುಟ್ಟಿನ ಚಕ್ರದ ಅವಧಿಯನ್ನು ಹೊಂದಿರುತ್ತಾರೆ. ಒತ್ತಡ ಅಥವಾ ಬೇರೆ ಆರೋಗ್ಯದ ಸಮಸ್ಯೆಯಿಂದ ಕೆಲವೊಮ್ಮೆ ಬದಲಾದ ಸಮಯವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ನೀವು ಪ್ರತಿತಿಂಗಳು ಸೂಕ್ತ ಅವಧಿಯಂತೆ ಋತುಸ್ರಾವ ಆಗುವುದೇ? ಎನ್ನುವುದನ್ನು ಮೊದಲು ತಿಳಿಯಬೇಕು. 3-4 ತಿಂಗಳುಗಳ ಕಾಲ ನಿಯಮಿತವಾಗಿದೆಯೇ ಎನ್ನುವುದನ್ನು ಮೊದಲು ಗಮನಿಸಬೇಕು. ಒಂದು ಋತುಚಕ್ರದ ಅವಧಿಯಿಂದ ಇನ್ನೊಂದು ಋತುಚಕ್ರದ ಅವಧಿಯು 28 ದಿನಗಳು, 21 ದಿನಗಳು ಅಥವಾ 35 ದಿನಗಳ ವರೆಗೆ ಇರಬಹುದು. ಎನ್ನುವುದನ್ನು ಮರೆಯಬಾರದು. ನಿಮ್ಮ ಋತುಚಕ್ರವು ಇವುಗಳಂತೆಯೇ ನಡೆಯುತ್ತದೆ ಎಂದಾದರೆ ಅದನ್ನು ಮೂರರಿಂದ ನಾಲ್ಕು ತಿಂಗಳಗಳ ಕಾಲಗಮನಿಸಬೇಕು.

ಋತುಚಕ್ರದ ಅವಧಿಯು ಅನಿಯಮಿತವಾಗಿದೆಯೇ?

ಋತುಚಕ್ರದ ಅವಧಿಯು ಅನಿಯಮಿತವಾಗಿದೆಯೇ?

ನಿಮ್ಮ ಋತುಚಕ್ರದ ಅವಧಿಯನ್ನು ಟ್ರ್ಯಾಕ್ ಮಾಡಬೇಕಾಗುವುದು. ನೀವು ಹೊಂದಿಕೆಯಾಗದ ಮಾದರಿಯನ್ನು ಕಂಡುಕೊಂಡರೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎನ್ನುವುದು ತಿಳಿಯುವುದು. ಅನಿಯಮಿತವಾದ ಋತುಸ್ರಾವಕ್ಕೆ ಸಾಕಷ್ಟು ಕಾರಣಗಳಿರುತ್ತವೆ. ಉದಾಹರಣೆಗೆ ಹೆಚ್ಚುವರಿ ಭೌತಿಕ ಚಟುವಟಿಕೆಗಳು, ವೈದ್ಯಕೀಯ ಸಮಸ್ಯೆಗಳು, ಒತ್ತಡ ಮತ್ತು ತೂಕ ನಷ್ಟ ಸೇರಿದಂತೆ ಅನೇಕ ಸಮಸ್ಯೆಗಳು ಕಾರಣವಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಆರೋಗ್ಯಕರವಾದ ಹವ್ಯಾಸಗಳು ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಮರೆಯಬಾರದು. ಅನಿಯಮಿತ ಅವಧಿಯೊಂದಿಗೆ ಗರ್ಬಧಾರಣೆ ಕಲ್ಪಿಸಬಹುದು. ಆದರೆ ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು. ಕೆಲವರಿಗೆ ಮೂರುತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಋತುಸ್ರಾವ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ವೈದ್ಯರಲ್ಲಿ ತಪ್ಪದೆ ತಪಾಸಣೆಗೆ ಒಳಗಾಗಬೇಕು. ನಿಮ್ಮ ಋತುಚಕ್ರದ ಅವಧಿಯನ್ನು ಸೂಕ್ತ ಸಮಯಕ್ಕೆ ಉಂಟಾಗುವಂತೆ ಮಾಡಬೇಕು. ಅನಿಯಮಿತ ಅವಧಿಯು ಗರ್ಭಧಾರಣೆಗೆ ತೊಂದರೆಯನ್ನುಂಟುಮಾಡುವುದು. ಸಂತಾನೋತ್ಪತ್ತಿಯ ಅಂಗಗಳಲ್ಲಿ ಅಥವಾ ಆರೋಗ್ಯದಲ್ಲಿ ಸೋಂಕಿನಂತಹ ಸಮಸ್ಯೆ ಇದೆಯೇ? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

ನಿಮ್ಮ ಫಲವತ್ತತೆಯ ದ್ವಾರದ ಬಗ್ಗೆ ತಿಳಿಯಿರಿ

ನಿಮ್ಮ ಫಲವತ್ತತೆಯ ದ್ವಾರದ ಬಗ್ಗೆ ತಿಳಿಯಿರಿ

ನೀವು ನಿಯಮಿತವಾದ ಅವಧಿಯನ್ನು ಪಡೆದುಕೊಂಡರೆ ಗರ್ಭಿಣಿಯಾಗುವುದು ಸುಲಭ. ನಿಮ್ಮ ಫಲವತ್ತತೆಯ ಆಧಾರದ ಮೇಲೆ ನೀವು ಯೋಜನೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಅಂಡೋತ್ಪತ್ತಿಯ ದಿನದಿಂದ ಒಟ್ಟು ಐದು ದಿನಗಳ ಒಳಗೆ ಸಂಭೋಗ ನಡೆಸಬೇಕಾಗುವುದು. ಧುತುಚಕ್ರದ ಅವಧಿ ಸೂಕ್ತ ದಿನಗಳಲ್ಲಿ ನಡೆಯುತ್ತಿದೆ ಎಂದಾದರೆ ಫಲವತ್ತತೆಯ ದಿನವನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು ಅಥವಾ ತಿಳಿಯಬಹುದು.

Most Read: ಗರ್ಭಿಣಿಯಾಗಿರುವಾಗ ಕಾಡುವ ಬೆನ್ನುನೋವು ನಿವಾರಣೆಗೆ ಟಿಪ್ಸ್

ಫಲವತ್ತತೆಯ ದಿನಗಳು

ಫಲವತ್ತತೆಯ ದಿನಗಳು

ನಿಮ್ಮ ಅವಧಿಯು 28 ದಿನಗಳವರೆಗೆ ಇದ್ದರೆ, ನಿಮ್ಮ ಋತುಚಕ್ರದ 14 ನೇ ದಿನದಂದು ಅಂಡೋತ್ಪತ್ತಿ ಸಂಭವಿಸುತ್ತದೆ. ದಿನ 14 ನೀವು ಹೆಚ್ಚು ಫಲವತ್ತಾದ ಮತ್ತು 12 ಮತ್ತು 13 ದಿನಗಳ ಸಹ ಫಲವತ್ತಾದ ದಿನಗಳಾಗಿರುತ್ತವೆ.

•ನಿಮ್ಮ ಅವಧಿಯ ಉದ್ದವು 21 ದಿನಗಳಿದ್ದರೆ ನಿಮ್ಮ ಋತುಚಕ್ರದ 7 ನೇ ದಿನದಂದು ಅಂಡೋತ್ಪತ್ತಿ ಸಂಭವಿಸುತ್ತದೆ. ದಿನ 7 ದಿನಗಳು 5 ಮತ್ತು 6 ಜೊತೆಗೆ ಹೆಚ್ಚು ಫಲವತ್ತಾದ ದಿನಗಳಾಗಿರುತ್ತವೆ.

ನಿಮ್ಮ ಅವಧಿಯು 35 ದಿನಗಳವರೆಗೆ ಇದ್ದರೆ ನಿಮ್ಮ ಋತುಚಕ್ರದ 21 ದಿನ ಅಂಡೋತ್ಪತ್ತಿ ಸಂಭವಿಸುತ್ತದೆ. ದಿನ 21 ನೀವು ಹೆಚ್ಚು ಫಲವತ್ತಾದ ಮತ್ತು ದಿನಗಳ 19 ಮತ್ತು 20 ಸಹ ಫಲವತ್ತಾದ ದಿನಗಳಾಗಿರುತ್ತವೆ.

English summary

Ways to calculate the most fertile days in women

Are you trying to get pregnant? Do you attempt to open the window of fertility? You need to work out when is the best fertility time for getting pregnant. You need to calculate the ovulation calendar and the better timing to have sexual intercourse to increase the chances of conceiving. All you need to track your menstrual cycle and understand properly. You should use the ovulation calendar by marking the last date of the period then you can get to know how long your menstrual cycle is to calculate the time when you are the best fertile.
X
Desktop Bottom Promotion