For Quick Alerts
ALLOW NOTIFICATIONS  
For Daily Alerts

ಎದೆ ಹಾಲು ಹೆಚ್ಚಿಸಲು ಇಲ್ಲಿದೆ ನೋಡಿ ಆರು ನೈಸರ್ಗಿಕ ಮನೆಮದ್ದುಗಳು

|

ಸ್ತನಪಾನ , ಭೂಮಿಗೆ ಬಂದ ಮಗು " ಅಮ್ಮ " ಎಂದೊಡನೆ ಅದರ ಬಾಯಿಗೆ ಸಿಗುವ ಮೊದಲ ಆಹಾರ . ಗಟ್ಟಿ ಪದಾರ್ಥಗಳನ್ನು ಮತ್ತು ಘನಾಹಾರಗಳನ್ನು ಸೇವಿಸಲು ಸಾಧ್ಯವಾಗದಂತಹ ಪುಟ್ಟ ಕಂದನಿಗೆ ತಾಯಿಯ ಎದೆಹಾಲು ಶ್ರೇಷ್ಠವಾದ ಅಮೃತ ಇದ್ದಂತೆ . ಅನೇಕ ಪೋಷಕಾಂಶಗಳನ್ನು ಹೊತ್ತ ಎದೆಹಾಲು ಮಗುವಿಗೆ ರಕ್ಷಾಕವಚವೇ ಸರಿ . ಎದೆಹಾಲಿನಲ್ಲಿ ಪ್ರೊಟೀನ್ , ಕಾರ್ಬೊಹೈಡ್ರೇಡ್ , ವಿಟಮಿನ್ ಗಳಂತಹ ಮಹಾಪೂರವೇ ಇದೆ . ಮಗುವಿನ ಮಾನಸಿಕ , ದೈಹಿಕ ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಇದು ಬಹಳಷ್ಟು ಸಹಕಾರಿ . ಮಗುವಿನ ದೇಹದೊಳಗಿನ ಎಳೆಯ ಮೂಳೆಗಳಿಗೆ ಕೂಡ ಇದು ಬಹಳಷ್ಟು ಉಪಕಾರಿ . ಸಸ್ತನಿ ಗ್ರಂಥಿಗಳ ಮೂಲಕ ಉತ್ಪತ್ತಿಯಾಗುವ ಹಾಲನ್ನು ಮಗು ಹುಟ್ಟಿದ ಅರ್ಧ ಗಂಟೆಯ ಒಳಗೆ ಮಗುವಿಗೆ ಉಣಿಸಲೇಬೇಕು ಎಂಬ ನಿಯಮವಿದೆ .

ಸ್ವಲ್ಪವೂ ಅರಿವಿಲ್ಲದೆ , ಶಕ್ತಿಯಿಲ್ಲದೆ ಯಾರೂ ಪರಿಚಯವಿಲ್ಲದ ಈ ಭೂಮಿಗೆ ಬಂದ ಕಂದನನ್ನು ಮೊದಲು ಎತ್ತಿ ಮುದ್ದಾಡಿ ಅದರ ಹೊಟ್ಟೆ ಹಸಿವನ್ನು ನೀಗಿಸಿ ಅದನ್ನು ಲಾಲಿಸಿ ಪಾಲಿಸಿ ಪೋಷಿಸಿ ಬೆಳಸಿ ಅದನ್ನು ಸಮಾಜದಲ್ಲಿ ಒಂದು ವಿಶೇಷ ಗುರುತಾಗಿ ರೂಪಿಸಬಲ್ಲ ಶಕ್ತಿ ಇರುವುದು ತಾಯಿಗೆ ಮಾತ್ರ . ಮಗುವಿನ ಹೊಟ್ಟೆ ಹಸಿವನ್ನು ನೀಗಿಸಲು ಮಗುವಿಗೆ ಶಕ್ತಿ ಒದಗಿಸಲು ಅಗತ್ಯವಾದಷ್ಟು ಹಾಲನ್ನು ತಾಯಿ ತನ್ನಲ್ಲಿ ಉತ್ಪತ್ತಿ ಮಾಡಲೇಬೇಕು . ಇಲ್ಲವೆಂದರೆ ಮಗು ಶಕ್ತಿ ಹೀನವಾಗಿ ಅದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಂದು ಹೋಗಿ ಮಗು ನಾನಾ ರೋಗಗಳಿಗೆ ತುತ್ತಾಗುತ್ತದೆ . ಆದರೆ ಹಲವಾರು ತಾಯಂದಿರ ಪರಿಸ್ಥಿತಿ ಹಾಗಿರುವುದಿಲ್ಲ . ಏಕೆಂದರೆ ಕೆಲವರಿಗೆ ತನ್ನ ಮಗುವಿಗಷ್ಟೇ ಅಲ್ಲದೆ ಬೇರೆ ಮಗುವಿಗೂ ಕೊಡುವಷ್ಟು ಜಾಸ್ತಿ ಹಾಲು ಉತ್ಪತ್ತಿ ಆದರೆ ಇನ್ನೂ ಕೆಲವರಿಗೆ ತನ್ನದೇ ಆದ ಒಂದು ಮಗುವಿಗೂ ಕೊಡಲು ಹಾಲಿರುವುದಿಲ್ಲ . ತಾಯಂದಿರಿಗೆ ಹಾಲು ಉತ್ಪತ್ತಿ ಆಗಲು ' ಪ್ರೊಲಾಕ್ಟಿನ್ ' ಮತ್ತು ' ಒಕ್ಸಿಟೋಸಿನ್ ' ಎಂಬ ಎರಡು ಹಾರ್ಮೋನುಗಳ ಸರಿಯಾದ ಕಾರ್ಯ ನಿರ್ವಹಣೆ ಬಹಳ ಅವಶ್ಯಕ . ಹಾಲಿನ ಶೇಖರಣೆ ಮತ್ತು ನೀಡುವಿಕೆಯಲ್ಲಿ ವ್ಯತ್ಯಾಸವಾಗುವುದು ಈ ಎರಡು ಹಾರ್ಮೋನುಗಳಿಂದಲೇ . ಈ ಹಾರ್ಮೋನುಗಳ ಅಸಮತೋಲನದಿಂದ ಅನೇಕ ತಾಯಂದಿರು ತಮ್ಮ ಮಗುವಿನ ದಷ್ಟ ಪುಷ್ಟವಾದ ಬೆಳವಣಿಗೆಗೆ ಆಹಾರದ ರೂಪದಲ್ಲಿ ಇರುವ ಹಾಲನ್ನು ಕೊಡಲಾಗುತ್ತಿಲ್ಲ ಎಂದು ಹವಣಿಸುತ್ತಾರೆ . ಹಾಲಿಲ್ಲದೆ ಮಕ್ಕಳನ್ನು ಸುಧಾರಿಸುವುದು ಬಹಳ ಕಷ್ಟವಾದ ಕೆಲಸವೇ ಸರಿ . ಆದ್ದರಿಂದ ಮನೆಯಲ್ಲೇ ಮಗುವಿಗೆ ಬೇಕಾದ ಹಾಲನ್ನು ತನ್ನಲ್ಲಿ ಉತ್ಪತ್ತಿಗೊಳಿಸಲು ಕೆಲವೊಂದು ಟಿಪ್ಸ್ ಈ ಕೆಳಗಿನಂತಿವೆ :

ಮೆಂತೆಕಾಳು ಎದೆ ಹಾಲು ಉತ್ಪತ್ತಿಯಲ್ಲಿ ಬಹಳ ಉಪಯುಕ್ತ

ಮೆಂತೆಕಾಳು ಎದೆ ಹಾಲು ಉತ್ಪತ್ತಿಯಲ್ಲಿ ಬಹಳ ಉಪಯುಕ್ತ

ಮೆಂತೆ ಕಾಳಿನಲ್ಲಿ ' ಫೈಟೋ ಈಸ್ಟ್ರೋಜೆನ್ ' ಮತ್ತು ' ಗ್ಯಾಲಾಕ್ಟ್ಯಾಗೊಗ್ ' ಅಂಶಗಳು ಹೆಚ್ಚಾಗಿದ್ದು ನವಜಾತ ಶಿಶುವಿಗೆ ಮತ್ತು ತಾಯಂದಿರ ಲೋಕಕ್ಕೆ ಆಗ ತಾನೇ ಕಾಲಿಟ್ಟಿರುವ ತಾಯಿಯರಿಗೆ ಬಹಳ ಉಪಯುಕ್ತ . ಎದೆ ಹಾಲು ಕ್ರಮೇಣ ಹೆಚ್ಚು ಮಾಡುವ ಅನೇಕ ಪದಾರ್ಥಗಳಲ್ಲಿ ಮೆಂತ್ಯ ಕಾಳುಗಳೂ ಇವೆ .

ಮೆಂತೆಕಾಳು ಗಳಿಂದ ಹಾಲು ಉತ್ಪತ್ತಿ ಹೇಗೆ ಮಾಡಬಹುದು ಮತ್ತು ಅದಕ್ಕೆ ಬೇಕಾಗಿರುವ ಪದಾರ್ಥಗಳಾದರೂ ಯಾವುವು ?

* 1 ಟೀ ಸ್ಪೂನ್ ಮೆಂತ್ಯ ಕಾಳು

* 1 ಕಪ್ ನೀರು .

* ಸ್ವಲ್ಪ ಜೇನು ತುಪ್ಪ ರುಚಿಗೆ .

ತಯಾರು ಮಾಡುವುದಾದರೂ ಹೇಗೆ ?

ಮೊದಲು ನೀರು ಕುದಿ ಬರುವವರೆಗೆ ಕಾಯಿಸಿ . ಅದಕ್ಕೆ ಒಂದು ಟೀ ಸ್ಪೂನ್ ಮೆಂತ್ಯ ಕಾಳು ಸೇರಿಸಿ ಮತ್ತೆ ಚೆನ್ನಾಗಿ ಕುದಿಸಿ . ಸ್ಟವ್ ಆರಿಸಿ ಮೆಂತ್ಯ ಕಾಳುಗಳನ್ನು ನೀರಿನಿಂದ ಬೇರೆ ಮಾಡಿ . ಈ ನೀರನ್ನು ಸ್ವಲ್ಪ ಆರಲು ಬಿಟ್ಟು ಕುಡಿಯಲು ಯೋಗ್ಯವಾದಷ್ಟು ಬಿಸಿ ಇರುವಾಗ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಚೆನ್ನಾಗಿ ಕಲಸಿ . ದಿನಕ್ಕೆ 3 ಬಾರಿ ಈ ನೀರನ್ನು ಸೇವಿಸುತ್ತಾ ಬನ್ನಿ . ಎದೆ ಹಾಲು ನಿಧಾನವಾಗಿ ಹೆಚ್ಚಾಗುತ್ತಾ ಬರುತ್ತದೆ .

ನುಗ್ಗೆಕಾಯಿ

ನುಗ್ಗೆಕಾಯಿ

ನುಗ್ಗೆ ಕಾಯಿಯಲ್ಲಿ ಬೇಕಾದಷ್ಟು ಪೋಷಕಾಂಶಗಳಿವೆ ಎಂದು ನಮಗೆಲ್ಲಾ ತಿಳಿದೇ ಇದೆ . ಇದು ತಾಯಂದಿರಿಗೆ ಕೂಡ ಬಹಳ ಅನುಕೂಲ . ಅವರ ಸಸ್ತನಿ ಗ್ರಂಥಿಗಳನ್ನು ಉತ್ತೇಜಿಸಿ ಹಾಲು ಉತ್ಪತ್ತಿ ಮಾಡುವಂತೆ ಪ್ರೇರೇಪಿಸುತ್ತದೆ . ನುಗ್ಗೆ ಕಾಯಿ ಜ್ಯೂಸು ಕುಡಿದರೆ ದೇಹದಲ್ಲಿ ರಕ್ತ ಸಂಚಾರ ಮೊದಲಿಗಿಂತ ವೃದ್ಧಿಯಾಗುತ್ತದೆ .

ತಯಾರು ಮಾಡಲು ಏನೇನು ಬೇಕು ?

* 1 / 2 ಕಪ್ ಫ್ರೆಶ್ ಆದ ನುಗ್ಗೆ ಕಾಯಿ ಜ್ಯೂಸು .

ಪ್ರತಿ ದಿನ 1 / 2 ಕಪ್ ನುಗ್ಗೆ ಕಾಯಿ ಜ್ಯೂಸು ಅನ್ನು ಊಟ ಆದ ಮೇಲೆ ಸೇವಿಸುತ್ತಾ ಬನ್ನಿ .

ಸೋಂಫು ಕಾಳುಗಳು

ಸೋಂಫು ಕಾಳುಗಳು

ಕೇವಲ ಅಡುಗೆ ರುಚಿ ಹೆಚ್ಚು ಮಾಡಲು ಉಪಯೋಗಿಸುವ ಸೋಂಫು ಕಾಳುಗಳು ತಾಯಿಯ ಎದೆ ಹಾಲು ಉತ್ಪತ್ತಿಯಲ್ಲಿ ಕೂಡ ಸಹಕಾರಿ . ಸೋಂಫು ಕಾಳುಗಳನ್ನು ತೆಗೆದುಕೊಳ್ಳುವುದರಿಂದ ತಾಯಂದಿರಲ್ಲಿ ' ಗಲಕ್ಟಾಗೋಗ್ ' ಅಂಶ ಹೆಚ್ಚಾಗುತ್ತದೆ .

ತಯಾರು ಮಾಡಲು ಬೇಕಾದ ವಸ್ತುಗಳು :

* 1 ಟೀ ಸ್ಪೂನ್ ನಷ್ಟು ಸೋಂಫು ಕಾಳುಗಳು .

* 1 ಕಪ್ ಬಿಸಿ ನೀರು .

ತಯಾರು ಮಾಡುವುದು ಹೇಗೆ?

ಸೋಂಫು ಕಾಳುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು . ಕೆಲವು ಸಮಯದ ನಂತರ ನೀರನ್ನು ಶೋಧಿಸಿ ಆರಿದ ಮೇಲೆ ಈ ಟೀ ಅನ್ನು ಕುಡಿಯಬಹುದು . ಪ್ರತಿ ದಿನ ಈ ಟೀ ಅನ್ನು 2 ರಿಂದ 3 ಬಾರಿ ಕುಡಿಯಬೇಕು . ಈ ತರಹದ ಟೀ ಅನ್ನು ಕುಡಿಯಲು ಇಷ್ಟವಿಲ್ಲದವರು ಸೋಂಫು ಕಾಳುಗಳನ್ನು ಹಾಗೆ ಹಲ್ಲಿನಿಂದ ಜಿಗಿದು ತಿನ್ನಬಹುದು .

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಸೂಪರ್ ಫುಡ್ ಎಂದು ವೈದ್ಯಲೋಕ ಹೇಳುತ್ತದೆ . ಏಕೆಂದರೆ ಅದರಲ್ಲಿರುವ ಅನೇಕ ರೀತಿಯ ಔಷಧೀಯ ಅಂಶಗಳು ಮನುಷ್ಯನ ಹಲವಾರು ಖಾಯಿಲೆಗಳನ್ನು ಗುಣ ಪಡಿಸುತ್ತವೆ . ಇದರಲ್ಲಿ ' ಲ್ಯಾಕ್ಟೋಜೆನಿಕ್ ' ಗುಣ ಲಕ್ಷಣಗಳಿದ್ದು ತಾಯಿಯ ಎದೆ ಹಾಲು ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .

ತಯಾರು ಮಾಡಲು ಬೇಕಾದ ಸಾಮಗ್ರಿಗಳು :

* ಚೆನ್ನಾಗಿ ಸಿಪ್ಪೆ ತೆಗೆದ ಕೆಲವು ಬೆಳ್ಳುಳ್ಳಿ ಎಸಳುಗಳು .

ತಯಾರು ಮಾಡಿ ತೆಗೆದುಕೊಳ್ಳುವುದು ಹೇಗೆ ?

ಬೆಳ್ಳುಳ್ಳಿ ಮೊದಲೇ ಖಾರ . ಜೊತೆಗೆ ಒಂದು ರೀತಿಯ ವಾಸನೆ ಬೇರೆ . ಈ ವಾಸನೆ ಇಷ್ಟವಾಗುವವರು ಬೆಳ್ಳುಳ್ಳಿ ಎಸಳುಗಳನ್ನು ಹಾಗೆ ಹಲ್ಲಿನಿಂದ ಜಿಗಿದು ತಿನ್ನಬಹುದು . ಇಲ್ಲವೆಂದರೆ ನಿಮ್ಮ ಊಟದಲ್ಲಿ ಬೆಳ್ಳುಳ್ಳಿಯಿಂದ ತಯಾರಿಸಿದ ಪೇಸ್ಟ್ ಅನ್ನು ಸೇರಿಸಿ ಊಟ ಮಾಡಬಹುದು .

ದಾಲ್ಚಿನ್ನಿ ಅಥವಾ ಚೆಕ್ಕೆ

ದಾಲ್ಚಿನ್ನಿ ಅಥವಾ ಚೆಕ್ಕೆ

ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ದಾಲ್ಚಿನ್ನಿ ಅಡುಗೆಯ ರುಚಿ ಹೆಚ್ಚು ಮಾಡಲು ಇತರೆ ಮಸಾಲೆ ಪದಾರ್ಥಗಳ ಜೊತೆ ಕೈ ಜೋಡಿಸುತ್ತದೆ . ದಾಲ್ಚಿನ್ನಿ ಒಂದು ಗಿಡ ಮೂಲಿಕೆಯಾಗಿದ್ದು ತಾಯಿಯ ಎದೆ ಹಾಲು ಚೆನ್ನಾಗಿ ಉತ್ಪತ್ತಿಯಾಗಲಿ ಎಂದು ಬಳಸುತ್ತಾರೆ .

ತೆಗೆದುಕೊಳ್ಳುವ ರೀತಿ

ದಾಲ್ಚಿನ್ನಿ ಚೆಕ್ಕೆ ತಿನ್ನಲೂ ರುಚಿಯಾಗೆ ಇರುತ್ತದೆ . ಇಲ್ಲವೆಂದರೆ ನಿಮ್ಮ ಅಡುಗೆಯಲ್ಲಿ ಸೇರಿಸಿ ಬಳಸಬಹುದು ಅಥವಾ ದಾಲ್ಚಿನ್ನಿ ಟೀ ಕುಡಿಯಬಹುದು .

ಬಾದಾಮಿ ಹಾಲು

ಬಾದಾಮಿ ಹಾಲು

ಬಾದಾಮಿ ಹಾಲು ಹಾಲುಣಿಸುವ ತಾಯಿಗೆ ಅತ್ಯಂತ ಅವಶ್ಯವಾದ ಒಂದು ಪದಾರ್ಥ . ಬಾದಾಮಿ ಹಾಲಿನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಅಂಶ ಇದ್ದು , ನಿಯಮಿತ ಸೇವನೆಯನ್ನು ಪಾಲನೆ ಮಾಡಿದ್ದೆ ಆದರೆ ತಾಯಿಯ ಎದೆ ಹಾಲಿನ ಗುಣ ಮಟ್ಟ ಹೆಚ್ಚಾಗಿ ಹಾಲು ಉತ್ಪತ್ತಿಯೂ ಉತ್ತಮಗೊಂಡು ನಿಮ್ಮ ಎಳೆಯ ಮಗುವಿಗೆ ಕುಡಿಯಲು ಸಾಕಷ್ಟು ಹಾಲು ಸಿಕ್ಕಂತಾಗುತ್ತದೆ .

ತಾಯಿಯ ಎದೆ ಹಾಲನ್ನು ಕಡಿಮೆ ಮಾಡುವ ಕೆಲವು ಪದಾರ್ಥಗಳು :

ಮೇಲೆ ಹೇಳಿದ ಎಲ್ಲಾ ರೀತಿಯ ಆಹಾರಗಳು ತಾಯಿಯ ಎದೆ ಹಾಲು ಹೆಚ್ಚು ಮಾಡುತ್ತವೆ . ಆದರೆ ಕೆಲವೊಂದು ಆಹಾರ ಪದಾರ್ಥಗಳು ಎದೆ ಹಾಲನ್ನು ಗಣನೀಯವಾಗಿ ತಗ್ಗಿಸುತ್ತವೆ . ಹಾಲುಣಿಸುವ ತಾಯಂದಿರು ಇಂತಹ ಆಹಾರ ಗಳನ್ನು ತೆಗೆದುಕೊಳ್ಳದಿರುವುದೇ ಸೂಕ್ತ .

* ಪಾರ್ಸ್ಲಿ ಎಲೆಗಳು .

* ಪುದಿನ ಸೊಪ್ಪು .

* ಓರೆಗಾನೊ .

* ಆಲ್ಕೋಹಾಲ್ .

* ಸೆಜ್ .

* ಥಂಯ್ಮ್ ಎಲೆಗಳು .

ಕೆಲವು ವಿಶೇಷ ಟಿಪ್ಸ್ :

ಕೆಲವು ವಿಶೇಷ ಟಿಪ್ಸ್ :

* ಮೇಲೆ ಸೂಚಿಸಿದ ಪದಾರ್ಥಗಳ ಜೊತೆಗೆ ಕೆಲವೊಂದು ಆರೋಗ್ಯಕರ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ .

* ನಿಮ್ಮ ಸ್ತನಗಳನ್ನು ನಯವಾಗಿ ಮಸಾಜ್ ಮಾಡುತ್ತೀರಿ . ಇದರಿಂದ ಹಾಲಿನ ಪೂರೈಕೆ ಹೆಚ್ಚಾಗುತ್ತದೆ .

* ಬಿಗಿಯಾದ ಟಾಪ್ ಮತ್ತು ಬ್ರಾ ಗಳನ್ನು ಧರಿಸಬೇಡಿ . ಆದಷ್ಟು ಸಡಿಲವಾದ ಬಟ್ಟೆಗಳನ್ನೇ ಧರಿಸಿ .

* ಯಥೇಚ್ಛವಾಗಿ ದ್ರವಾಹಾರಗಳನ್ನು ಸೇವಿಸಿ .

English summary

Six Home remedies to increase your breast milk naturally

New mothers are often worrying about their breast milk production. They fear they are not producing enough milk, necessary for the development of her baby. A majority of women go through this problem. Nursing a child is surely not an easy task, especially when breast milk is their only source of nutrition. And in that duration, they need it to suffice their hunger and nutritional requirement.
X