For Quick Alerts
ALLOW NOTIFICATIONS  
For Daily Alerts

ಅಬಾರ್ಷನ್ ಆದ ನಂತರ ಮಗುವಿನ ಆಲೋಚನೆಯಲ್ಲಿದ್ದೀರಾ? ಇಂತಹ ಸಂಗತಿಗಳೆಲ್ಲಾ ನಿಮಗೆ ತಿಳಿದಿರಲಿ

|

ಗಂಡ ಹೆಂಡತಿಯ ಸಂಸಾರಕ್ಕೆ ಸಾಕ್ಷಿ ಒಂದು ಮುದ್ದಾದ ಮಗು . ಮನೆಯಲ್ಲಿ ಮಗುವಿದ್ದರೆ ಮನೆ ತುಂಬಾ ನಗು ಎಂಬ ಮಾತಿದೆ . ಆದರೆ ಅಂತಹ ಮಗು ಭೂಮಿಗೆ ಬರುವ ಮುಂಚೆ ತಾಯಿಯ ಗರ್ಭದಲ್ಲಿ ದುರಾದೃಷ್ಟದಿಂದ ಸಾವನ್ನಪಿದರೆ ಅದನ್ನು " ಅಬಾರ್ಷನ್ " ಅಥವಾ ಗರ್ಭಪಾತ ಎಂದು ಎಂತಹ ಕಲ್ಲು ಮನಸ್ಸಿನವರೂ ಕೂಡ ಬಹಳ ನೋವಿನಿಂದ ಹೇಳಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ . ಅಬಾರ್ಷನ್ ಆಯಿತೆಂದು ಸುಮ್ಮನೆ ಕೂರುವ ಹಾಗಿಲ್ಲ. ಅದೊಂದು ಕಹಿ ಘಟನೆ ಎಂದು ಮಗು ತೀರಿಹೋದ ನೋವನ್ನು ಮರೆಯಲೇಬೇಕು . ಮುಂದಿನ ಜೀವನಕ್ಕೆ ನಾಂದಿ ಹಾಡಲೇಬೇಕು. ಇದು ಪ್ರಕೃತಿಯ ನಿಯಮ. ಹಾಗಾಗಿ ಅಂತಹ ತಾಯಂದಿರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲೆಂದು ಅವನನ್ನು ಪ್ರಾರ್ಥಿಸುತ್ತಾ, ಅಬಾರ್ಷನ್ ನಂತರ ಮತ್ತೊಂದು ಮಗುವಿಗಾಗಿ ಕಣ್ಣಂಚಿನಲ್ಲಿ ಹವಣಿಸುತ್ತಿರುವ ತಾಯಿಗೆ ಕೆಲವೊಂದು ಮಾರ್ಗದರ್ಶನಗಳು ಇಲ್ಲಿವೆ. ಇವುಗಳನ್ನು ನೀವು ಕಡ್ಡಾಯವಾಗಿರುವ ನಿಯಮಗಳೆಂದುಕೊಂಡರೂ ಸರಿ . ಆದರೆ ನಿರ್ಲಕ್ಷ್ಯವಿಲ್ಲದೆ ದಯವಿಟ್ಟು ಪಾಲಿಸಿ .

ಅಬಾರ್ಷನ್ ನಂತರದ ಗರ್ಭಧಾರಣೆ ಒಂದು ರೀತಿಯ ಕಷ್ಟವೇ ಸರಿ . ಏಕೆಂದರೆ ಮೊದಲನೇ ಗರ್ಭಧಾರಣೆ ಸುಸೂತ್ರವಾಗಿರದೆ ಇರುವುದು . ಇದಕ್ಕೆ ಕಾರಣ ಹಲವಾರಿರಬಹುದು . ಕೆಲವರಿಗೆ ಗರ್ಭಪಾತ ಎನ್ನುವುದು ಆಯ್ಕೆಯ ವಿಷಯವಾದರೆ ಇನ್ನೂ ಕೆಲವರಿಗೆ ಕಡ್ಡಾಯವಾದ ಸಂಧರ್ಭವಾಗಿರುತ್ತದೆ . ಕೆಲವರು ಪೋಷಕರಾಗಲು ಬಯಸುತ್ತಾರೆ . ಮತ್ತೆ ಕೆಲವರು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಾರೆ . ನೀವು ಗರ್ಭಪಾತದ ನಂತರ ತಾಯಿಯಾಗಲು ಈಗಾಗಲೇ ನಿರ್ಧಾರ ಕೈಗೊಂಡಿದ್ದರೆ , ಸತ್ಯ ಮತ್ತು ಮಾಹಿತಿಯ ಆಧಾರದ ಮೇಲೆ ನಾವು ಕೊಡುವ ಸಲಹೆಗಳನ್ನು ಕಡ್ಡಾಯವಾಗಿ ಗಮನಿಸಿ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

ಗರ್ಭಪಾತದ ನಂತರದ 6 ತಿಂಗಳೊಳಗೆ ಗರ್ಭಧಾರಣೆ ಬೇಡವೇ ಬೇಡ!!!

ಗರ್ಭಪಾತದ ನಂತರದ 6 ತಿಂಗಳೊಳಗೆ ಗರ್ಭಧಾರಣೆ ಬೇಡವೇ ಬೇಡ!!!

ಅಬಾರ್ಷನ್ ಆದ ತಕ್ಷಣವೇ ಇನ್ನೊಂದು ಮಗು ಬೇಕು ಎಂದು ನೀವು ಆಲೋಚನೆ ಮಾಡುತ್ತಿದ್ದರೆ , ಖಂಡಿತ ಅದು ತಪ್ಪು . ಏಕೆಂದರೆ ಸ್ತ್ರೀ ರೋಗ ತಜ್ಞರು ಹ್ರಳುವ ಪ್ರಕಾರ ಅಬಾರ್ಷನ್ ಆದ 6 ತಿಂಗಳು ಕಳೆಯುವವರೆಗೂ ಗರ್ಭ ಧರಿಸುವಂತಿಲ್ಲ . ಇದು ನಿಮ್ಮ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಬೀರುತ್ತದೆ . ಕೆಲವೊಮ್ಮೆ ಸಾವನ್ನೂ ತರಬಹುದು . ಕಾರಣಗಳೇನೆಂದರೆ ಅಬಾರ್ಷನ್ ಆದವರ ಗರ್ಭಾಶಯ ತೀರಾ ಮೃದುವಾರಿರುತ್ತದೆ . ಏಕೆಂದರೆ ಅವರು ಗರ್ಭಪಾತದ ನಂತರ ವೈದ್ಯರು ಸೂಚಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ . ಆ ಔಷಧಿಗಳು ಗರ್ಭಾಶಯವನ್ನು ಮೃದುವಾಗಿಸಿರುತ್ತವೆ . ಕೆಲವರಿಗೆ ಗರ್ಭಪಾತದ ನಂತರ ವಿಪರೀತ ರಕ್ತ ಸ್ರಾವ ಆಗುತ್ತಿರುತ್ತದೆ . ಅಪ್ಪಿ ತಪ್ಪಿ ಅಬಾರ್ಷನ್ ಮಾಡುವಾಗ ವೈದ್ಯರು ಆಪರೇಷನ್ ಮಾಡಿದ್ದರಂತೂ ಅದು ತಾಯಿಯ ಇಡೀ ದೇಹದ ಮೇಲೆ ಪ್ರತೀಕೂಲ ಪರಿಣಾಮ ಬೀರುವುದಂತೂ ಸತ್ಯ . ಆದ್ದರಿಂದ ಗರ್ಭಪಾತ ಆದ ಮೇಲೆ ಈ ಎಲ್ಲಾ ಸಮಸ್ಯೆಗಳಿಂದ ಹೊರಬರಬೇಕಾದರೆ 6 ತಿಂಗಳು ಸಮಯ ಬೇಕೇ ಬೇಕು ಎಂದು ಸ್ತ್ರೀ ರೋಗ ತಜ್ಞರು ಸೂಚಿಸುವುದು .

Most Read: ಗರ್ಭಪಾತದ ನಂತರ ಆರೋಗ್ಯದ ರಕ್ಷಣೆ

ಗರ್ಭಪಾತದ ನಂತರ ಗರ್ಭನಿರೋಧಕ ಅತ್ಯಂತ ಅವಶ್ಯ

ಗರ್ಭಪಾತದ ನಂತರ ಗರ್ಭನಿರೋಧಕ ಅತ್ಯಂತ ಅವಶ್ಯ

ಅಬಾರ್ಷನ್ ಆದ ಮೇಲೆ ಖಂಡಿತ ನಿಮ್ಮಲ್ಲಿ ಪಿರಿಯಡ್ ಮಿಸ್ ಆದರೂ ಅಂಡಾಶಯ ಉತ್ಪತ್ತಿಗೇನೂ ಕೊರತೆ ಇರುವುದಿಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯ ಜೊತೆ ಸೇರಿದರೆ ಯಾವ ಸಮಯದಲ್ಲಿ ಬೇಕಾದರೂ ಮತ್ತೆ ಗರ್ಭವತಿಯಾಗಬಹುದು .ಆದ್ದರಿಂದ ಬಹಳ ಎಚ್ಚರಿಕೆಯಿಂದ ಗರ್ಭನಿರೋಧಕ ಔಷಧಿಗಳನ್ನು ಅಥವಾ ವಸ್ತುಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು .

ಅಬಾರ್ಷನ್ ನಂತರ ಮತ್ತೆ ತಾಯಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ

ಅಬಾರ್ಷನ್ ನಂತರ ಮತ್ತೆ ತಾಯಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ

ಖಂಡಿತಾ ಇದು ಸರಿಯಲ್ಲ ಈ ರೀತಿ ಯೋಚಿಸುವುದರಿಂದ ಮಾನಸಿಕ ಖಿನ್ನತೆಗೆ ಗುರುಯಾಗಬೇಕೇ ವಿನಃ ಇದರಿಂದ ಯಾವ ಉಪಯೋಗವೂ ಇಲ್ಲ ಗರ್ಭಪಾತದ ನಂತರ ತಾಯಿಯಾಗುವುದಿಲ್ಲ ಎಂಬ ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಡಲೇಬೇಡಿ . ನೀವು ಗರ್ಭಪಾತದ ಸಮಯದಲ್ಲಿ ಒಳ್ಳೆಯ ನುರಿತ , ತರಬೇತಿಯುಳ್ಳ ವೈದ್ಯರಿಂದ ಅಬಾರ್ಷನ್ ಮಾಡಿಸಿಕೊಂಡಿದ್ದೇ ಆದರೆ ನಿಮ್ಮ ಜನನಾಂಗ ಗಳಿಗೆ ಯಾವುದೇ ತೊಂದರೆ ಅಥವಾ ಗಾಯ ಆಗದಂತೆ ಅವರು ಅತ್ಯಂತ ಜಾಗರೂಕರಾಗಿ ಅಬಾರ್ಷನ್ ಮಾಡಿರುತ್ತಾರೆ ಕೇವಲ ಅವರು ಕೊಡುವ ಸಲಹೆಗಳನ್ನು ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಸಾಕು . ನಿಮಗೆ ಖಂಡಿತ ಮತ್ತೆ ತಾಯಿಯಾಗುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ .

ತುಂಬಾ ಸಲದ ಗರ್ಭಪಾತದಿಂದ ನಿಮ್ಮ ಆರೋಗ್ಯಕ್ಕೆ ಬಹಳ ತೊಂದರೆ

ತುಂಬಾ ಸಲದ ಗರ್ಭಪಾತದಿಂದ ನಿಮ್ಮ ಆರೋಗ್ಯಕ್ಕೆ ಬಹಳ ತೊಂದರೆ

ಒಂದು ಬಾರಿ ಗರ್ಭಪಾತ ಆದರೆ ಅದರಿಂದ ಹೊರಬರಲು ಸಾಕಷ್ಟು ಸಮಯ ಬೇಕು ಮತ್ತು ಮೇಲೆ ನೋಡಿದ ಹಾಗೆ ಆ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕು . ಅದೇ ರೀತಿ ಬಹಳ ಸಲ ಗರ್ಭಪಾತ ಆದರೆ , ಏನೆಲ್ಲಾ ಅನುಭವಿಸಬೇಕು ಒಮ್ಮೆ ಊಹಿಸಿಕೊಳ್ಳಿ . ಖಂಡಿತ ಕೆಲವೊಮ್ಮೆ ಇದರಿಂದ ಹೊರಬರಲಾರದೆ ತುಂಬಾ ಕಷ್ಟ ಅನುಭವಿಸಬೇಕಾಗಿ ಬರಬಹುದು . ಏಕೆಂದರೆ ಈ ರೀತಿ ಆದಾಗ ಗರ್ಭ ಕೋಶದ ಚೀಲ ಹರಿಯುತ್ತಿರುತ್ತದೆ . ಇದು ಮತ್ತೆ ಕೂಡಿಕೊಳ್ಳುವ ಯಾವ ಸಂಧರ್ಭವೂ ಇರುವುದಿಲ್ಲ. ಇದರಿಂದ ಗರ್ಭ ನಿಲ್ಲುವುದಿಲ್ಲ ಮತ್ತು ಗರ್ಭ ಕೋಶವನ್ನು ದುರ್ಬಲಗೊಳಿಸುತ್ತದೆ . ಈ ಕಾರಣಕ್ಕೆ ಗರ್ಭ ಧರಿಸಲು ಕಾರಣವಾದ ಅಂಗ ಪೂರ್ತಿ ಕುಗ್ಗುತ್ತಾ ಹೋಗಬಹುದು ಮತ್ತು ಮುಂದೆ ಯಾವುದೇ ಕಾರಣಕ್ಕೂ ಮಕ್ಕಳಾಗದೇ ಹೋಗಬಹುದು . ಆದ್ದರಿಂದ ಈ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Most Read: ಗರ್ಭಪಾತಕ್ಕೆ ಯಾವ ಆಹಾರ ಕಾರಣವಾಗಬಹುದು?

ಗರ್ಭಪಾತದ ನಂತರ ಗರ್ಭಧಾರಣೆಗೆ ಆಲೋಚಿಸುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ

ಗರ್ಭಪಾತದ ನಂತರ ಗರ್ಭಧಾರಣೆಗೆ ಆಲೋಚಿಸುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ

ಗರ್ಭಪಾತದ ನಂತರ ಮತ್ತೆ ನಿಮ್ಮ ಗರ್ಭ ಕೋಶ ಮೊದಲಿನಂತಾಗಲು ಸ್ತ್ರೀರೋಗ ವೈದ್ಯರು ಔಷಧಿಗಳನ್ನು ಕೊಟ್ಟು ಕನಿಷ್ಠ 6 ತಿಂಗಳು ಕಾಯಲು ಹೇಳಿರುತ್ತಾರೆ . ಅಷ್ಟು ಸಮಯ ತಾಳ್ಮೆಯಿಂದಿದ್ದು ನಂತರ ನೀವು ಗರ್ಭ ಧರಿಸಲು ಯೋಚನೆ ಮಾಡುತ್ತಿದ್ದರೆ , ಮೊದಲು ನಿಮ್ಮ ವೈದ್ಯರನ್ನು ಭೇಟಿಯಾಗುವುದು ಉತ್ತಮ . ಏಕೆಂದರೆ ಅವರು ನೀಡಿದ ಕಾಲಾವಕಾಶದಲ್ಲಿ ನಿಮ್ಮ ಗರ್ಭ ಕೋಶ ಮತ್ತೆ ಗರ್ಭಧಾರಣೆಗೆ ಸಿದ್ಧವಾಗಿದೆಯೇ ಎಂದು ಸ್ಕ್ಯಾನ್ ಮಾಡಿ ಪರೀಕ್ಷಿಸಿ ಹೇಳುತ್ತಾರೆ . ಇದರಿಂದ ಯಾವುದೇ ಅಂಜಿಕೆ ಮತ್ತು ಅನುಮಾನವಿಲ್ಲದೆ ಮತ್ತೆ ನೀವು ಗರ್ಭ ಧರಿಸಬಹುದು ಮತ್ತು ತಾಯ್ತನದ ಸುಖ ಅನುಭವಿಸಬಹುದು .

English summary

Planning a baby after an abortion? This is all you need to know

Abortion,for some is a choice, while for others it’s a compulsion. Some opt for it as they are not yet ready for the responsibilities that parenthood comes with and other are driven towards it owing to medical conditions. If you want to prep yourself up for a baby after an abortion, you need to take a few precautions and quite a bit of planning. We help you make an informed decision with facts and information.
X