For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಎದುರಾಗುವ ಶಿಲೀಂಧ್ರದ ಸೋಂಕನ್ನು ಗುಣಪಡಿಸಲು ಸುಲಭ ಮನೆಮದ್ದುಗಳು

|

ಶಿಲೀಂಧ್ರದ ಸೋಂಕು ಹೆಚ್ಚಾಗಿ ಮಹಿಳೆಯರನ್ನೇ ಬಾಧಿಸುತ್ತದೆ, ಅದರಲ್ಲೂ ಗರ್ಭವತಿಯರಿಗೆ ಇನ್ನೂ ಹೆಚ್ಚಾಗಿ ಆವರಿಸುತ್ತದೆ. ಗರ್ಭಾವಸ್ಥೆ ಪ್ರಾರಂಭವಾದ ಬಳಿಕ ಮಾಸಿಕ ಸ್ರಾವ ಹೆರಿಗೆಯವರೆಗೂ ನಿಂತು ಹೋಗುವ ಕಾರಣ ಈ ಮೂಲಕ ಹೊರದಬ್ಬಲ್ಪಡುವ ಶಿಲೀಂಧ್ರಗಳು ಉಳಿದುಬಿಡುವುದು ಇದಕ್ಕೆ ಪ್ರಮುಖ ಕಾರಣ. ಈ ಸ್ಥಿತಿಗೆ vulvovaginal candidiasis ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕ್ಯಾಂಡಿಡಾ ಎಂಬ ಪ್ರಬೇಧಕ್ಕೆ ಸೇರಿದ ಶಿಲೀಂಧ್ರವೇ ಹೆಚ್ಚಾಗಿ ಆವರಿಸುತ್ತದೆ, ಇದರಲ್ಲಿ ಕ್ಯಾಂಡಿಡಾ ಆಲ್ಬಿಕಾನ್ಸ್ ಎಂಬ ಶಿಲೀಂಧ್ರ ಅತಿ ಸಾಮಾನ್ಯವಾಗಿ ಹೆಚ್ಚಿನ ಗರ್ಭವತಿಯರಲ್ಲಿ ಕಂಡುಬರುತ್ತದೆ.

ಪ್ರತಿ ನಾಲ್ವರಲ್ಲಿ ಮೂವರು ಮಹಿಳೆಯರಿಗಾದರೂ ಅವರ ಜೀವಮಾನದಲ್ಲಿ ಕನಿಷ್ಟ ಒಮ್ಮೆಯಾದರೂ ಈ ಸೋಂಕು ಆವರಿಸಿಯೇ ಇರುತ್ತದೆ ಹಾಗೂ 45%ದಷ್ಟು ಮಹಿಳೆಯರಿಗೆ ಎರಡು ಅಥವಾ ಮೂರು ಬಾರಿಯಾದರೂ ಆವರಿಸಿರುತ್ತದೆ. 2011ರಲ್ಲಿ ಅಮೇರಿಕಾದ American Family Physician ಎಂಬ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. 2009 ರಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಕೆನಡಾದ ಕುಟುಂಬ ವೈದ್ಯರೊಬ್ಬರು ತಮ್ಮ ಅನುಭವದ ಪ್ರಕಾರ ಹೀಗೆ ವಿವರಿಸಿದ್ದಾರೆ: ಪ್ರತಿ ನಾಲ್ವರಲ್ಲಿ ಮೂವರು ಮಹಿಳೆಯರಿಗೆ ಜೀವಮಾನದಲ್ಲೊಂದು ಬಾರಿಯಾದರೂ ಈ ಸೋಂಕು ಎದುರಾಗಿಯೇ ಇರುತ್ತದೆ ಹಾಗೂ ಈ ಸೋಂಕು ಗರ್ಭಾವಸ್ಥೆಯಲ್ಲಿಯೇ ಅತಿ ಸಾಮಾನ್ಯವಾಗಿ ಕಾಣಬರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಏರುವ ಈಸ್ಟ್ರೋಜೆನ್ ರಸದೂತದ ಮಟ್ಟ ಹಾಗೂ ಜನನಾಂಗದ ಸ್ರಾವದಲ್ಲಿ ಅಧಿಕ ಗ್ಲೈಕೋಜೆನ್ ಪ್ರಮಾಣ ಗರ್ಭವತಿಯನ್ನು ಈ ಸೋಂಕು ಆವರಿಸಲು ಕಾರಣವಾಗುತ್ತದೆ.

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು ಎದುರಾಗಿರುವ ಸೂಚನೆಗಳೆಂದರೆ ತುರಿಕೆ, ಉರಿ, ಬಾವು, ಬೆಂಕಿ ಬಿದ್ದಂತೆ ಭಾಸವಾಗುವುದು, ಚರ್ಮ ಕೆಂಪಗಾಗುವುದು ಹಾಗೂ ಕೆಲವೊಮ್ಮೆ ಜನನಾಂಗದ ಭಾಗಗಳು ಮತ್ತು ಹೊರತುಟಿಗಳು ಊದಿಕೊಳ್ಳುವುದು, ಮಿಲನಕ್ರಿಯೆ ಅಸುಖಕರವೆನುಸುವುದು ಅಥವಾ ನೋವು ಬರಿಸುವುದು, ಮೂತ್ರ ವಿಸರ್ಜನೆಯ ವೇಳೆ ಉರಿಯುವುದು ಹಾಗೂ ಸ್ರಾವ ಹೆಚ್ಚುವುದು ಮತ್ತು ಈ ಸ್ರಾವ ವಾಸನೆಯುಕ್ತವಾಗಿರುವುದು. ಆದರೆ ಈ ಸೂಚನೆಗಳಲ್ಲಿ ಒಂದು ಅಥವಾ ಹೆಚ್ಚಿನವು ಕಂಡುಬಂದರೆ ಇದಕ್ಕೆ ಸದಾ ಶಿಲೀಂಧ್ರದ ಸೋಂಕು ಮಾತ್ರವೇ ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಲೈಂಗಿಕವಾಗಿ ಹರಡುವ ರೋಗಗಳು (Sexually transmitted diseases (STDs) ಸಹಾ ಹೆಚ್ಚೂ ಕಡಿಮೆ ಇದೇ ಸೂಚನೆಗಳನ್ನು ಪ್ರಕಟಿಸುತ್ತವೆ. ಹಾಗಾಗಿ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ಸೂಕ್ತ ತಪಾಸಣೆ ಮತ್ತು ಪರೀಕ್ಷೆಗಳ ಮೂಲಕ ಖಚಿತಪಡಿಸಿ ಕೊಳ್ಳುವುದು ಅಗತ್ಯವಾಗಿದೆ. ಶಿಲೀಂಧ್ರದ ಸೋಂಕು ಎದುರಾದ ಬಳಿಕ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಚಿಕಿತ್ಸೆ ಪ್ರಾರಂಭಿಸಬೇಕು. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಈ ಸೋಂಕು ಉಲ್ಬಣಗೊಳ್ಳದಂತೆ ತಡೆಯಲು ಚಿಕಿತ್ಸೆ ಆರಂಭಿಸಬೇಕು, ಇಲ್ಲದಿದ್ದರೆ ಈ ಸೋಂಕು ಇತರ ತೊಂದರೆಗಳಿಗೂ ಕಾರಣವಾಗಬಹುದು. ಬನ್ನಿ, ಈ ಸೋಂಕನ್ನು ನಿವಾರಿಸುವ ಕೆಲವು ಸುಲಭ ಮನೆಮದ್ದುಗಳನ್ನು ನೋಡೋಣ:

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಈ ಶಿರ್ಕಾ ಆಮ್ಲೀಯವಾಗಿದ್ದು ಈ ಆಮ್ಲೀಯ ವಾತಾವರಣದಲ್ಲಿ ಶಿಲೀಂಧ್ರಗಳು ಸತ್ತುಹೋಗುತ್ತವೆ. ಅಲ್ಲದೇ ಇದರಲ್ಲಿರುವ ಕಿಣ್ವಗಳು ಶಿಲೀಂಧ್ರವನ್ನು ಬೆಳೆಯಗೊಡದೇ ಸೋಂಕು ಹರಡುವುದನ್ನು ತಪ್ಪಿಸುತ್ತದೆ.

ಅಲ್ಲದೇ ದೇಹದ ಆಮ್ಲೀಯ-ಕ್ಷಾರೀಯ ಮಟ್ಟವಾದ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

ಬಳಕೆಯ ವಿಧಾನ:

ಹೊರಬಳಕೆಗಾಗಿ: ಒಂದು ಕಪ್ ನೀರು ಬೆರೆಸದ, ಶೋಧಿಸದ ತಾಜಾ ಸೇಬಿನ ಶಿರ್ಕಾವನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿ. ಈ ನೀರಿನಲ್ಲಿ ಸುಮಾರು ಅರ್ಧ ಘಂಟೆ ದೇಹವನ್ನು ತೋಯಿಸಿ. ಬಳಿಕ ಜನನಾಂಗದ ಭಾಗವನ್ನು ಸ್ವಚ್ಛ ನೀರಿನಲ್ಲಿ ತೊಳೆದುಕೊಂಡು ಗಾಳಿಗೆ ಒಣಗಲು ಬಿಡಿ. ದಿನಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ.

ಸೇವನೆಗಾಗಿ: ಎರಡು ದೊಡ್ಡ ಚಮಚ ನೀರು ಬೆರೆಸದ, ಶೋಧಿಸದ ತಾಜಾ ಸೇಬಿನ ಶಿರ್ಕಾವನ್ನು ಒಂದು ಲೋಟ ನೀರಿಗೆ ಬೆರೆಸಿ. ರುಚಿ ಹೆಚ್ಚಿಸಲು ಕೊಂಚ ಲಿಂಬೆರಸ ಮತ್ತು ಜೇನನ್ನು ಸಹಾ ಬೆರೆಸಬಹುದು. ದಿನಕ್ಕೆರಡು ಬಾರಿ ಒಂದೊಂದು ಲೋಟದಂತೆ ಸೇವಿಸಿ. ಕೆಲದಿನಗಳ ಕಾಲ ಈ ಸೇವನೆಯನ್ನು ಮುಂದುವರೆಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶಿಲೀಂಧ್ರದ ಸೋಂಕು ನಿವಾರಿಸಲು ಬೆಳ್ಳುಳ್ಳಿ ನಿಸರ್ಗ ನೀಡಿದ ಒಂದು ಅದ್ಭುತ ಕೊಡುಗೆಯಾಗಿದೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಕಾಡುವ ಕ್ಯಾಂಡಿಡಾ ಶಿಲೀಂಧ್ರಕ್ಕೆ ಬೆಳ್ಳುಳ್ಳಿ ಅತ್ಯುತ್ತಮ ಪರಿಹಾರವಾಗಿದೆ. ಬೆಳ್ಳುಳ್ಳಿಯ ಘಾಟಿನಲ್ಲಿ ಈ ಶಿಲೀಂಧ್ರದ ಬೆಳವಣಿಗೆ ಕುಗ್ಗುತ್ತದೆ ಹಾಗೂ ಮೂಲದಿಂದಲೇ ಈ ಸೋಂಕು ನಿವಾರಣೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಜೋವೀನ್ ಎಂಬ ಗಂಧಕಯುಕ್ತ ಸಂಯುಕ್ತ ಪೋಷಕಾಂಶ ಕೆಲವಾರು ಕ್ಯಾಂಡಿಡಾ ಶಿಲೀಂಧ್ರದ ಪ್ರಬೇಧಗಳನ್ನು ನಿಗ್ರಹಿಸುವ ಗುಣ ಹೊಂದಿದೆ.

ಕೇವಲ ಸೋಂಕು ನಿವಾರಿಸುವುದು ಮಾತ್ರವಲ್ಲದೇ ಬೆಳ್ಳುಳ್ಳಿಯ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಬಳಕೆಯ ವಿಧಾನ:

• ಸುಮಾರು ಎರಡು ಅಥವಾ ಮೂರು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿಯೇ ಜಗಿದು ನುಂಗಿ. ಒಂದು ವೇಳೆ ಇದರ ರುಚಿ ಇಷ್ಟವಾಗದೇ ಇದ್ದಲ್ಲಿ ಒಂದು ಲವಂಗದೊಂದಿಗೆ ನುಣ್ಣಗೆ ಅರೆದು ಮೊಸರಿನೊಂದಿಗೆ ಬೆರೆಸಿ ಸೇವಿಸಿ.

* ಇನ್ನೊಂದು ವಿಧಾನವೆಂದರೆ ಬೆಳ್ಳುಳ್ಳಿಯ ಪುಡಿ ಹೊಂದಿರುವ ಔಷಧಿಗಳನ್ನು ಸೇವಿಸುವುದು. ಆದರೆ ಈ ವಿಧಾನವನ್ನು ಕೇವಲ ವೈದ್ಯರ ಸಲಹೆಯ ಮೇರೆಗೆ ಮಾತ್ರವೇ ಅನುಸರಿಸಬಹುದು.

Most Read: ಬೇಸಿಗೆಯ ಉರಿ ಬಿಸಿಲಿನ ಸಂದರ್ಭದಲ್ಲಿ ಆರೋಗ್ಯವಾಗಿರಲು, ಗರ್ಭಿಣಿಯರಿಗೆ ಉಪಯುಕ್ತ ಸಲಹೆಗಳು

ಮೊಸರು

ಮೊಸರು

ಗರ್ಭಾವಸ್ಥೆಯಲ್ಲಿ ಕಾಡುವ ಶಿಲೀಂಧ್ರದ ಸೋಂಕು ನಿವಾರಿಸಲು ಮೊಸರು ಸಹಾ ಉತ್ತಮವಾದ ಆಯ್ಕೆಯಾಗಿದೆ. ಮೊಸರಿನಲ್ಲಿ ಅಸಿಡೋಫೈಲಸ್ ಎಂಬ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿವೆ ಹಾಗೂ ಇವು ದೇಹದಲ್ಲಿರುವ ಇತರ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ದಿಸಲು ನೆರವಾಗುತ್ತದೆ. ತನ್ಮೂಲಕ ಶಿಲೀಂಧ್ರದ ಹಾಗೂ ಇತರ ಕ್ರಿಮಿಗಳಿಂದ ಎದುರಾಗಿರುವ ಸೋಂಕಿನ ವಿರುದ್ದ ಹೋರಾಡಲು ನೆರವಾಗುತ್ತದೆ. ಅಲ್ಲದೇ ಮೊಸರನ್ನು ನಿಯಮಿತವಾಗಿ ಸೇವಿಸುವ ಮೂಲಕ ಜೀರ್ಣಾಂಗಗಳ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಬಲಿಷ್ಟವಾಗಿರುತ್ತದೆ.

ಬಳಕೆಯ ವಿಧಾನ:

ನಿತ್ಯವೂ ಸಕ್ಕರೆ ಬೆರೆಸದ ತಾಜಾ ಮೊಸರನ್ನು ಎರಡರಿಂದ ಮೂರು ಕಪ್ ಗಳಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಮೊಸರು ಸಿಹಿ ಅಥವಾ ರುಚಿಕಾರಕ ಹೊಂದಿದ್ದರೆ ಇದು ದೇಹದಲ್ಲಿ ಹೆಚ್ಚಿನ ಸಕ್ಕರೆಯನ್ನು ಒದಗಿಸುತ್ತದೆ ಹಾಗೂ ತನ್ಮೂಲಕ ಜನನಾಂಗಗಳಲ್ಲಿಯೂ ಸಕ್ಕರೆ ಆಗಮಿಸುವಂತೆ ಮಾಡುತ್ತದೆ. ಈ ಸಕ್ಕರೆ ಶಿಲೀಂಧ್ರಗಳ ಪಾಲಿಗೆ ಹಬ್ಬದೂಟವಾಗಿದ್ದು ಸೋಂಕು ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ತಾಜಾ ಮೊಸರನ್ನು ಮಾತ್ರವೇ ಸೇವಿಸಬೇಕು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಶಿಲೀಂಧ್ರದ ಸೋಂಕು ನಿವಾರಿಸಲು ಕೊಬ್ಬರಿ ಎಣ್ಣೆ ಇನ್ನೊಂದು ನೈಸರ್ಗಿಕ ಪರಿಹಾರವಾಗಿದೆ. ಇದರ ಶಿಲೀಂಧ್ರ ನಿವಾರಕ ಗುಣ ಈಗ ಕೆಲಸಕ್ಕೆ ಬರಲಿದೆ.

ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲಗಳಿಗೆ ಅತಿ ಸೂಕ್ಷ್ಮ ಕ್ರಿಮಿನಿವಾರಕ ಗುಣಗಳಿವೆ. ಈ ಗುಣಗಳು ಶಿಲೀಂಧ್ರಗಳನ್ನೂ ಕೊಲ್ಲುತ್ತದೆ ಹಾಗೂ ಇದಕ್ಕಾಗಿ ಕೊಂಚ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆಯನ್ನು ಜನನಾಂಗದ ಭಾಗಗಳಿಗೆ ಸವರಿಕೊಂಡರೆ ಸಾಕಾಗುತ್ತದೆ.

ಬಳಕೆಯ ವಿಧಾನ:

ಹೊರಬಳಕೆಗೆ: ಇದಕ್ಕಾಗಿ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ದಿನಕ್ಕೆರಡರಿಂದ ಮೂರು ಬಾರಿ ಸೋಂಕಿಗೊಳಗಾದ ಭಾಗವಷ್ಟೂ ಆವರಿಸುವಂತೆ ಹಚ್ಚಿಕೊಳ್ಳಬೇಕು. ಸುಮಾರು ಅರ್ಧ ಘಂಟೆಯ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ ಒರೆಸಿ ಒಣಗುವಂತೆ ಮಾಡಬೇಕು.

ಸೇವನೆಗಾಗಿ: ಒಂದು ಲೋಟ ಬಿಸಿ ಹಾಲು ಅಥವಾ ಸೂಪ್ ನಲ್ಲಿ ಒಂದು ದೊಡ್ಡ ಚಮಚದಷ್ಟು ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕುಡಿಯಬೇಕು. ಗರಿಷ್ಟ ಪ್ರಯೋಜನ ಪಡೆಯಲು ದಿನಕ್ಕೆರಡು ದೊಡ್ಡ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ದಿನದಲ್ಲಿ ಎರಡು ಬಾರಿ ಕುಡಿಯಬೇಕು.

ಕಹಿಬೇವು (Indian Lilac)

ಕಹಿಬೇವು (Indian Lilac)

ಕಹಿಬೇವಿನಲ್ಲಿಯೂ ಶಿಲೀಂಧ್ರ ನಿವಾರಕ ಗುಣವಿದ್ದು ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಎದುರಾಗುವ ಸೋಂಕಿಗೆ ಉತ್ತಮ ಪರಿಹಾರವಾಗಿದೆ.

ಇದರಲ್ಲಿರುವ ನಿಂಬಿಡಾಲ್ ಮತ್ತು ಎಡ್ಯುನಿನ್ ಎಂಬ ಪೋಷಕಾಂಶಗಳಿಗೆ ಶಿಲೀಂಧ್ರ ನಿವಾರಕ ಗುಣಗಳಿವೆ. ಅಲ್ಲದೇ ಬೇವು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಈ ಮೂಲಕ ಕ್ಯಾಂಡಿಡಾ ಶಿಲೀಂಧ್ರದ ಧಾಳಿಯನ್ನು ಎದುರಿಸಲು ದೇಹ ಸಕ್ಷಮವಾಗುತ್ತದೆ.

ಅಲ್ಲದೇ ಬೇವು ತುರಿಕೆ ಮತ್ತು ಇತರ ಕಿರಿಕಿರಿಗಳನ್ನೂ ಶೀಘ್ರವೇ ಇಲ್ಲವಾಗಿಸುತ್ತದೆ.

ಬಳಕೆಯ ವಿಧಾನ:

* ಒಂದು ಕಪ್ ನಷ್ಟು ಕಹಿಬೇವಿನ ಎಲೆಗಳನ್ನು ಮೂರು ಕಪ್ ಫಿಲ್ಟರ್ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ನೀರು ಉಗುರುಬೆಚ್ಚಗಾದಷ್ಟು ತಣಿದ ಬಳಿಕ ಜನನಾಂಗವನ್ನು ತೊಳೆದುಕೊಳ್ಳಿ. ನಿತ್ಯವೂ ಈ ನೀರನ್ನು ಸ್ವಚ್ಛತೆಗಾಗಿ ಬಳಸಿ.

* ಪರ್ಯಾಯವಾಗಿ ಕೆಲವು ತೊಟ್ಟು ಬೇವಿನ ಎಣ್ಣೆಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಜನನಾಂಗವನ್ನು ಸ್ವಚ್ಛಗೊಳಿಸಿ. ಈ ವಿಧಾನವನ್ನು ದಿನಕ್ಕೆ ಎರಡರಿಂದ ಮೂರು ಬಾರಿಯಾದರೂ ನಿರ್ವಹಿಸಿ.

ಕ್ರ್ಯಾನ್ಬೆರಿ ಹಣ್ಣುಗಳು

ಕ್ರ್ಯಾನ್ಬೆರಿ ಹಣ್ಣುಗಳು

ಶಿಲೀಂಧ್ರದ ಸೋಂಕನ್ನು ನಿವಾರಿಸಲು ಈ ಹಣ್ಣುಗಳು ಸಹಾ ಉತ್ತಮ ಆಯ್ಕೆಯಾಗಿವೆ. ಈ ಪುಟ್ಟ ಹಣ್ಣಿನಲ್ಲಿರುವ ಆರ್ಬುಟಿನ್ ಎಂಬ ಪೋಷಕಾಂಶ ಕ್ಯಾಂಡಿಡಾ ಆಲ್ಬಿಕಾನ್ಸ್ ಶಿಲೀಂಧ್ರವನ್ನು ಕೊಲ್ಲುವಷ್ಟು ಪ್ರಬಲವಾಗಿದೆ.

ಬಳಕೆಯ ವಿಧಾನ:

ನಿತ್ಯವೂ ಸಕ್ಕರೆ ಬೆರೆಸದ ಒಂದು ಚಿಕ್ಕ ಲೋಟ ಈ ಹಣ್ಣಿನ ರಸವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಕ್ಯಾಂಡಿಡಾ ಆಲ್ಬಿಕಾನ್ಸ್ ಶಿಲೀಂಧ್ರವನ್ನು ಪೂರ್ಣವಾಗಿ ಇಲ್ಲವಾಗಿಸಲು ಈ ವಿಧಾನವನ್ನು ಕೆಲವು ವಾರಗಳಾದರೂ ಮುಂದುವರೆಸಬೇಕು.

* ಪರ್ಯಾಯವಾಗಿ, ಕ್ರ್ಯಾನ್ಬೆರಿ ರಸ ಮತ್ತು ಸೇಬಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ದಿನಕ್ಕೊಂದು ಅಥವಾ ಎರಡು ಬಾರಿ ಸೇವಿಸಬಹುದು.

* ಒಂದು ವೇಳೆ ಈ ಹಣ್ಣಿನ ಸಾರ ಗುಳಿಗೆ ಅಥವಾ ಕ್ಯಾಪ್ಸೂಲುಗಳ ರೂಪದಲ್ಲಿ ಲಭ್ಯವಿದ್ದರೆ ಇವುಗಳನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

Most Read: ಗರ್ಭಿಣಿಯರಿಗೆ ಅನುಕೂಲವಾಗುವ ನಾಲ್ಕು ಉಸಿರಾಟದ ವ್ಯಾಯಾಮಗಳು.

ಹುಳಿಬರಿಸಿದ ಆಹಾರಗಳು

ಹುಳಿಬರಿಸಿದ ಆಹಾರಗಳು

ನಿಮ್ಮ ಅಹಾರದಲ್ಲಿ ಆದಷ್ಟೂ ಹೆಚ್ಚು ಹುಳಿಬರಿಸಿದ ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕವೂ ಗರ್ಭಾವಸ್ಥೆಯಲ್ಲಿ ಎದುರಾಗುವ ಶಿಲೀಂಧ್ರದ ಸೋಂಕನ್ನು ಗುಣಪಡಿಸಬಹುದು. ಈ ಆಹಾರಗಳಲ್ಲಿ ಪ್ರಮುಖವಾದವು ಎಂದರೆ ಹುಳಿಮೊಸರು, ಕೊಂಬುಚಾ, ಕೆಫಿರ್, ಸಾವುರ್ ಕ್ರಾವ್ಟ್ ಇತ್ಯಾದಿ. ಇವುಗಳಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು (ಉದಾಹರಣೆಗೆ ಲ್ಯಾಕ್ಟೋಬ್ಯಾಸಿಲೈ) ಶಿಲೀಂಧ್ರವನ್ನು ಕೊಲ್ಲುವ ಕ್ಷಮತೆ ಹೊಂದಿದ್ದು ಸೋಂಕು ಹರಡುವುದರಿಂದ ರಕ್ಷಿಸುತ್ತದೆ.ಈ ಆಹಾರಗಳು ದೇಹದಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಪ್ರಮಾಣವನ್ನೂ ಹೆಚ್ಚಿಸುತ್ತವೆ ಹಾಗೂ ದೇಹಕ್ಕೆ ಹೆಚ್ಚು ಹೆಚ್ಚು ಪೋಷಕಾಂಶಗಳು ಲಭಿಸುವಲ್ಲಿ ನೆರವು ನೀಡುತ್ತವೆ.

ಲೋಳೆಸರ

ಲೋಳೆಸರ

ಲೋಳೆಸರದಲ್ಲಿರುವ ವಿಟಮಿನ್ನುಗಳು, ಕಿಣ್ವಗಳು ಹಾಗೂ ಅಮೈನೋ ಆಮ್ಲಗಳು ಕ್ಯಾಂಡಿಡಾ ಶಿಲೀಂಧ್ರಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ ಹಾಗೂ ತನ್ಮೂಲಕ ಸೋಂಕನ್ನೂ ಗುಣಪಡಿಸಲು ನೆರವಾಗುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ, ಉರಿ ನಿವಾರಕ ಮತ್ತು ಶಿಲೀಂಧ್ರ ನಿವಾರಕ ಗುಣಗಳು ಶಿಲೀಂಧ್ರದ ಸೋಂಕನ್ನು ನಿವಾರಿಸಲು ನೆರವಾಗುತ್ತವೆ.

ಬಳಕೆಯ ವಿಧಾನ:

ಹೊರಬಳಕೆಗಾಗಿ: ಈಗ ತಾನೇ ಕೊಯ್ದ ಲೋಳೆಸರದ ಕೋಡೊಂದರಿಂದ ತಾಜಾ ತಿರುಳನ್ನು ಸಂಗ್ರಹಿಸಿ ನೇರವಾಗಿ ಜನನಾಂಗದ ಸೋಂಕಿಗೊಳಗಾದ ಭಾಗದ ಮೇಲೆ ತೆಳುವಾಗಿ ಸವರಿ. ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಂಡು ಗಾಳಿಗೆ ಹಾಗೇ ಒಣಗಲು ಬಿಡಿ. ಈ ವಿಧಾನವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಿ.

ಸೇವನೆಗಾಗಿ: ಎರಡು ದೊಡ್ಡಚಮಚ ಲೋಳೆಸರದ ತಾಜಾ ತಿರುಗಳನ್ನು ಒಂದು ಕಪ್ ಈಗತಾನೇ ಹಿಂಡಿದ ಕಿತ್ತಳೆಯ ರಸದೊಂದಿಗೆ ಬೆರೆಸಿ. ಕಿತ್ತಳೆ ರಸ ಇಲ್ಲದಿದ್ದರೆ ತಾಜಾ ನೀರು ಸಹಾ ಆಗುತ್ತದೆ. ಈ ಪ್ರಮಾಣವನ್ನು ದಿನದ ಯಾವುದಾದರೊಂದು ಹೊತ್ತಿನಲ್ಲಿ ಮಾತ್ರವೇ ಕುಡಿಯಿರಿ, ಈ ಪ್ರಮಾಣಕ್ಕೂ ಹೆಚ್ಚು ಲೋಳೆಸರವನ್ನು ಸೇವಿಸಬಾರದು, ಏಕೆಂದರೆ ಹೆಚ್ಚಾದರೆ ಇದು ಜೀರ್ಣಾಂಗಗಳಲ್ಲಿ ತೊಂದರೆಯನ್ನುಂಟುಮಾಡಬಹುದು.

ಸಕ್ಕರೆಯ ಸೇವನೆಯನ್ನು ಕನಿಷ್ಟಕ್ಕಿಳಿಸಿ

ಸಕ್ಕರೆಯ ಸೇವನೆಯನ್ನು ಕನಿಷ್ಟಕ್ಕಿಳಿಸಿ

ಶಿಲೀಂಧ್ರದ ಸೋಂಕಿನ ವಿಷಯದಲ್ಲಿ ಸಕ್ಕರೆ ಇದರ ಅತ್ಯಂತ ಪ್ರೀತಿಪಾತ್ರನಾಗಿದೆ. ಹಾಗೂ ಹೆಚ್ಚು ಹೆಚ್ಚು ಸಕ್ಕರೆ ಸೇವಿಸಿದಷ್ಟೂ ಇದರ ಪ್ರಕೋಪ ಉಗ್ರವಾಗುತ್ತದೆ. ಏಕೆಂದರೆ ಜನನಾಂಗದಲ್ಲಿ ಶಿಲೀಂಧ್ರದ ಬೆಳವಣಿಗೆಗೆ ಸಕ್ಕರೆ ಅತಿ ಹೆಚ್ಚಿನ ಸಹಕಾರ ನೀಡುತ್ತದೆ. ಹಾಗಾಗಿ ಸೋಂಕು ಇರುವ ಬಗ್ಗೆ ಮಾಹಿತಿ ಖಚಿತವಾದ ಬಳಿಕ ನಿಮ್ಮ ಸಕ್ಕರೆಯ ಸೇವನೆಯನ್ನು ಕನಿಷ್ಟ ಪ್ರಮಾಣಕ್ಕಿಳಿಸುವುದು ಅನಿವಾರ್ಯವಾಗಿದೆ.ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರಿಗೆ ವಿವಿಧ ಬಗೆಯ ತಿನಿಸುಗಳನ್ನು ತಿನ್ನುವ ಬಯಕೆಯಾಗುತ್ತದೆ ಹಾಗೂ ವಿಶೇಷವಾಗಿ ಸಿಹಿತಿನಿಸುಗಳತ್ತ ಮನ ವಾಲುತ್ತದೆ. ಹಾಗಾಗಿ ಸಿಹಿ ತಿನ್ನದಿರುವುದು ಮಾನಸಿಕ ಕ್ಷೋಭೆಗೂ ಕಾರಣವಾಗಬಹುದು. ಆದರೂ, ಮನಸ್ಸು ಗಟ್ಟಿ ಮಾಡಿ ಸಿಹಿತಿನಿಸುಗಳನ್ನು ಸೋಂಕು ಇಲ್ಲವಾಗುವವರೆಗಾದರೂ ಸರಿ ಕನಿಷ್ಟಪ್ರಮಾಣಕ್ಕಿಳಿಸಲೇಬೇಕು.

ಇತರ ಸೂಚನೆಗಳು

ಇತರ ಸೂಚನೆಗಳು

ಈ ಸೋಂಕು ಇರುವಷ್ಟೂ ಸಮಯ ಸೋಡಾ, ಕ್ಯಾಂಡಿಗಳು, ಚಾಕಲೇಟು, ಐಸ್ ಕ್ರೀಂ, ಪೇಸ್ಟ್ರಿ, ಕುಕ್ಕೀಸ್ ಮೊದಲಾದವುಗಳನ್ನು ಸೇವಿಸದಿರಿ. ಅಷ್ಟೇ ಅಲ್ಲ, ಆಹಾರಗಳ ರುಚಿಯನ್ನು ಹೆಚ್ಚಿಸಲು ಬಳಸುವ ಸಾಸ್, ಸಾಲಾಡ್ ಡ್ರೆಸ್ಸಿಂಗ್, ಬಾರ್ಬೆಕ್ಯೂ ಸಾಸ್ ಮೊದಲಾದವುಗಳಲ್ಲಿಯೂ ಸಕ್ಕರೆ ಇರುವ ಕಾರಣ ಇವುಗಳನ್ನೂ ಮಿತಗೊಳಿಸಿ.

ಒಂದು ವೇಳೆ ಸಿಹಿತಿನ್ನುವ ಬಯಕೆ ಅದಮ್ಯವಾಗಿದ್ದರೆ ಸಿಹಿಯ ಬದಲಿಗೆ ತಾಜಾ ಹಣ್ಣುಗಳನ್ನು ಅಥವಾ ಟೀ ಅಥವಾ ತಾಜಾ ಹಣ್ಣಿನ ರಸಗಳನ್ನು ಸೇವಿಸಬಹುದು.

ಇದೇ ಸಯಮದಲ್ಲಿ, ದಿನದ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಹಾಗೂ ಈ ಮೂಲಕ ಹೆಚ್ಚು ಹೆಚ್ಚಾಗಿ ಮೂತ್ರ ವಿಸರ್ಜಿಸಬೇಕು. ಸತತ ಮೂತ್ರ ವಿಸರ್ಜನೆಯಿಂದಲೂ ದೇಹದಿಂದ ಹೆಚ್ಚುವರಿ ಸಕ್ಕರೆಯ್ ಹೊರಹೋಗುತ್ತದೆ ಹಾಗೂ ಸೋಂಕು ಸಹಾ ಇಲ್ಲವಾಗಲು ನೆರವಾಗುತ್ತದೆ.

ಸ್ವಚ್ಛತೆಗೆ ಹೆಚ್ಚಿನ ಕಾಳಜಿ ನೀಡಿ

ಸ್ವಚ್ಛತೆಗೆ ಹೆಚ್ಚಿನ ಕಾಳಜಿ ನೀಡಿ

ಗರ್ಭಾವಸ್ಥೆಯಲ್ಲಿ ವಿಶೇಷವಾಗಿ ಜನನಾಂಗದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವ ಮೂಲಕ ಸೋಂಕು ಬರದಂತೆ ತಡೆಯಲು ಹಾಗೂ ಎದುರಾದ ಸೋಂಕು ಶೀಘ್ರವಾಗಿ ಗುಣವಾಗಲು ಸಾಧ್ಯವಾಗುತ್ತದೆ.

ನಿತ್ಯವೂ ಜನನಾಂಗದ ಭಾಗವನ್ನು ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸುತ್ತಿರಬೇಕು.

* ಶೌಚಾಲಯದ ಬಳಕೆಯ ಬಳಿಕ ಸದಾ ಮುಂದಿನಿಂದ ಹಿಂದಕ್ಕೆ ಬರುವಂತೆ ಮಾತ್ರವೇ ಒರೆಸಿಕೊಳ್ಳಬೇಕು.

* ಜನನಾಂಗದ ಒಳಭಾಗವನ್ನು ಸ್ವಚ್ಛಗೊಳಿಸಲು (douche)ಯತ್ನಿಸದಿರಿ, ಇದು ಸೋಂಕನ್ನು ಉಲ್ಬಣಗೊಳಿಸಬಹುದು.

* ಬುರುಗು ಸ್ನಾನ (bubble baths),ಸುಗಂಧಭರಿತ ಸೋಪು, ಸುಗಂಧ ಸೂಸುವ ಮಹಿಳಾ ಸ್ವಚ್ಛತಾ ಪರಿಕಗಳು ಅಥವಾ ಸುಗಂಧದ್ರವ್ಯಗಳನ್ನು ಬಳಸದಿರಿ. ಅಲ್ಲದೇ ಒರೆಸಿಕೊಳ್ಳಲು ಬಳಸುವ ಟಾಯ್ಲೆಟ್ ಪೇಪರ್ ಸಹಾ ಯಾವುದೇ ಸುಗಂಧ ಅಥವಾ ಬಣ್ಣದಲ್ಲಿರದೇ ಕೇವಲ ಬಿಳಿಯಾದ ಮತ್ತು ಸ್ವಚ್ಛವಾದ ಕಾಗದವನ್ನೇ ಬಳಸಿ.

* ಒಂದು ವೇಳೆ ಈಜುಕೊಳದಲ್ಲಿ ಸಮಯ ಕಳೆದಿದ್ದರೆ ನೀರಿನಿಂದ ಹೊರಬದಂತ ತಕ್ಷಣವೇ ಈಜುಡುಗೆಯನ್ನು ಬದಲಿಸಿ ಸ್ನಾನ ಮಾಡಬೇಕು.

* ಒಂದು ವೇಳೆ ವ್ಯಾಯಾಮ ಮಾಡಿ ಬೆವರಿದ್ದರೆ ತಕ್ಷಣವೇ ಉಳ ಉಡುಪುಗಳನ್ನು ಬದಲಿಸಿ.

English summary

Home Remedies for Yeast Infections during Pregnancy

During pregnancy, infections caused by Candida are even more common. A 2009 study published in Canadian Family Physician found that yeast infections affect three out of four women in their lifetimes, and the infection occurs more frequently in pregnant women. Higher estrogen levels and higher glycogen content in vaginal secretions during pregnancy increase a woman’s risk of developing a yeast infection
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X